For Quick Alerts
ALLOW NOTIFICATIONS  
For Daily Alerts

ರಾಜಕೀಯದಲ್ಲೂ ತಮ್ಮ ಕರಾಮತ್ತು ತೋರಿದ ಸಿನಿತಾರೆಯರು!

By Arshad
|

ಭಾರತದಲ್ಲಿ ಶೀಘ್ರವಾಗಿ ಹಣ ಮಾಡಬೇಕೆಂದರೆ ಒಂದೇ ರಾಜಕೀಯದಲ್ಲಿರಬೇಕು, ಇಲ್ಲದಿದ್ದರೆ ಸಿನಿಮಾ ತಾರೆಯಾಗಬೇಕು ಎಂಬ ನಂಬಿಕೆಯಿದೆ. ಪರೋಕ್ಷವಾಗಿ ಜನರೂ ರಾಜಕೀಯ ಮತ್ತು ಸಿನಿಮಾ ವ್ಯಕ್ತಿಗಳ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಾರೆ. ನಮ್ಮ ಸುದ್ದಿವಾಹಿನಿಗಳೂ ಈ ವ್ಯಕ್ತಿಗಳಿಗೆ ಹೆಚ್ಚಿನ ಪ್ರಚಾರ ನೀಡುತ್ತವೆ.

ಸಿನಿಮಾ ವ್ಯಕ್ತಿಗಳ ವ್ಯಕ್ತಿಗತ ವಿಷಯಗಳನ್ನೇ ಕೆದಕಿ ಪ್ರಚಾರ ಮಾಡುವ ಪತ್ರಿಕೆಗಳೇ ಇವೆ. ಅದರಲ್ಲೂ ಹಲವರು ಎರಡೂ ಕ್ಷೇತ್ರಗಳಲ್ಲಿ ಸಮಾನವಾಗಿ ಫಲ ಕಂಡಿದ್ದಾರೆ. ಉದಾಹರಣೆಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ರಾಜಕೀಯ ಪ್ರವೇಶಿಸುವ ಮುನ್ನ ಸಿನಿಮಾ ತಾರೆಯಾಗಿದ್ದರು. ಹಲವು ಕ್ರಿಕೆಟ್ ಆಟಗಾರರೂ ರಾಜಕೀಯ ಪ್ರವೇಶಿಸಿದ್ದಾರೆ. ಕ್ರಿಕೆಟ್ ಜಗತ್ತಿನ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹಾ ನಮ್ಮ ಪಾರ್ಲಿಮೆಂಟ್ ನ ಓರ್ವ ಸದಸ್ಯರಾಗಿದ್ದಾರೆ, ಅಂತೆಯೇ ನಟಿ ರೇಖಾ ಸಹಾ. ಮುಪ್ಪನ್ನೂ ಮರೆಸಿ ಹದಿಹರೆಯದವರಂತೆ ಕಾಣುವ ಸಿನಿತಾರೆಯರು

ಸಿನಿಮಾ ಮತ್ತು ಕ್ರಿಕೆಟ್ ಜಗತ್ತಿನಲ್ಲಿ ಒಂದು ಹಂತದ ನಿವೃತ್ತಿ ಇದೆ. ಆದರೆ ರಾಜಕೀಯದಲ್ಲಿ ನಿವೃತ್ತಿ ಎಂಬುದೇ ಇಲ್ಲ. ಎಂಭತ್ತರ ಹರೆಯರಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರೂ ಇಂದಿಗೂ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಆದ್ದರಿಂದ ಜನಪ್ರಿಯತೆಯನ್ನು ಕಳೆದುಕೊಳ್ಳಲಿಚ್ಛಿಸದ ಸಿನಿಮಾ ಮತ್ತು ಕ್ರಿಕೆಟ್ ತಾರೆಯರು ವಯಸ್ಸಾಗುತ್ತಿದ್ದಂತೆಯೇ ರಾಜಕೀಯದತ್ತ ತಮ್ಮ ಒಲವು ತೋರುತ್ತಾರೆ. ಅಂತೆಯೇ ರಾಜಕೀಯವನ್ನು ಪ್ರವೇಶಿಸಿದ ಹಲವು ಖ್ಯಾತನಾಮರ ವಿವರಗಳನ್ನು ಇಲ್ಲಿ ನೀಡಲಾಗಿದೆ.

ರಮ್ಯ

ರಮ್ಯ

ಅಮೃತಧಾರೆ ಮೊದಲಾದ ಅತ್ಯಂತ ಯಶಸ್ವಿ ಕನ್ನಡ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ರಮ್ಯ 2011ರಲ್ಲಿ ರಾಜಕೀಯ ಪ್ರವೇಶಿಸಿದರು. 2013ರಲ್ಲಿ ಕಾಂಗ್ರೆಸ್ ಟಿಕೆಟ್ ಮೂಲಕ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಎಂಪಿ ಸ್ಥಾನವನ್ನು ಅಲಂಕರಿಸಿದರು.

ಚಿರಂಜೀವಿ

ಚಿರಂಜೀವಿ

ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಚಿರಂಜೀವಿಯವರು ಪ್ರಸ್ತುತ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿದ್ದಾರೆ. 2008ರಲ್ಲಿ ಅವರು ಚಿತ್ರರಂಗದಿಂದ ನಿವೃತ್ತಿ ಪಡೆದು ಪ್ರಜಾರಾಜ್ಯಂ ಎಂಬ ಪಕ್ಷವನ್ನು ಸ್ಥಾಪಿಸಿದರು. 2009ರ ಚುನಾವಣೆಯಲ್ಲಿ ಆಂಧ್ರಪ್ರದೇಶದ 295 ಸ್ಥಾನಗಳಲ್ಲಿ ಅವರ ಪಕ್ಷ ಕೇವಲ 18 ಸ್ಥಾನಗಳಲ್ಲಿ ಜಯಗಳಿಸಿತು. ಬಳಿಕ ವರು ತಿರುಪತಿಯಲ್ಲಿ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡರು. 2009ರ ಚುನಾವಣೆಯಲ್ಲಿ ತಿರುಪತಿಯಲ್ಲಿ ಗೆದ್ದಿದರು. 2011ರಲ್ಲಿ ಅವರ ಪಕ್ಷ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿತು. 2012ರಲ್ಲಿ ಪ್ರವಾಸೋದ್ಯಮ ಸಚಿವರಾಗಿ ನೇಮಕಗೊಂಡರು

ಪವನ್ ಕಲ್ಯಾಣ್

ಪವನ್ ಕಲ್ಯಾಣ್

ಖ್ಯಾತ ನಟ ಚಿರಂಜೀವಿಯವರ ಸಹೋದರರಾದ ಇವರು ನಟರಾಗಿದ್ದರೂ ಚಿತ್ರಗಳ ಸಾಹಸ ಸನ್ನಿವೇಶ (ಸ್ಟಂಟ್) ಗಳಿಗೆ ಹೆಸರುವಾಸಿಯಾಗಿದ್ದರು. ತೀರಾ ಇತ್ತೀಚೆಗೆ ಅಂದರೆ 2014ರ ಮಾರ್ಚ್ ನಲ್ಲಿ ಜನಸೇನಾ ಎಂಬ ಪಕ್ಷವನ್ನು ಸ್ಥಾಪಿಸಿ ಈಗ ಸಕ್ರಿಯ ರಾಜಕಾರಣದಲ್ಲಿದ್ದಾರೆ.

 ಚಂದ್ರಬಾಬು ನಾಯ್ಡು

ಚಂದ್ರಬಾಬು ನಾಯ್ಡು

ಇಪ್ಪತ್ತೆಂಟರ ಹರೆಯದಲ್ಲಿಯೇ ಅತಿ ಕಿರಿಯ ರಾಜ್ಯಸಭಾ ಸದಸ್ಯನೆಂಬ ಖ್ಯಾತಿಯನ್ನು ಪಡೆದ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶ ರಾಜ್ಯದ ಅತಿಹೆಚ್ಚು ಕಾಲ ಅಡಳಿತ ನಡೆಸಿದ ಮುಖ್ಯಮಂತ್ರಿಯೂ ಹೌದು. ಅಲ್ಲದೇ ಆಂಧ್ರ ಪ್ರದೇಶ ರಾಜ್ಯಸಭೆಯ ಅತಿ ಹೆಚ್ಚು ಕಾಲ ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹೈದರಾಬಾದ್ ನಗರವನ್ನು ಐಟಿ ಕೇಂದ್ರವನ್ನಾಗಿಸಲು ಅವರು ಹಮ್ಮಿಕೊಂಡ ಕಾರಣ ಐಟಿ ಇಂಡಿಯನ್ ಆಫ್ ದ ಮಿಲೆನಿಯಂ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಅಮಿತಾಭ್ ಬಚ್ಚನ್ (ಪೂರ್ವ ಪಾರ್ಲಿಯಮೆಂಟ್ ಸದಸ್ಯ)

ಅಮಿತಾಭ್ ಬಚ್ಚನ್ (ಪೂರ್ವ ಪಾರ್ಲಿಯಮೆಂಟ್ ಸದಸ್ಯ)

ಈ ವರ್ಷದ ಪದ್ಮ ವಿಭೂಷಣ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್ ನ ಮೇರುನಟ ಅಮಿತಾಭ್ ಬಚ್ಚನ್ ಸಹಾ 1984ರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ್ದರು. ಇದಕ್ಕೆ ಆಗ ಅವರ ಸ್ನೇಹಿತರಾಗಿದ್ದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಪ್ರೇರಣೆಯೇ ಕಾರಣ. ಆದರೆ ರಾಜಕೀಯ ಪ್ರವೇಶಿಸುತ್ತಿದ್ದಂತೆಯೇ ಬೋಫೋರ್ಸ್ ಹಗರಣ ಅವರ ಜನಪ್ರಿಯತೆಯನ್ನು ಸಾಕಷ್ಟು ಕುಗ್ಗಿಸಿತು. ಬೋಫೋರ್ಸ್ ನಲ್ಲಿ ಕಳಂಕಿತನಲ್ಲ ಎಂದು ಸಾಬೀತಾದ ಬಳಿಕ ತಮ್ಮದೇ ಎಬಿಸಿಎಲ್ ಸಂಸ್ಥೆಯನ್ನು ಸ್ಥಾಪಿಸಿದರೂ ಯಶಸ್ಸು ಕಾಣದೇ ಮುಳುಗಡೆಯಾದಾಗ ನೆರವಿಗೆ ಬಂದ ಇನ್ನೋರ್ವ ಸ್ನೇಹಿತ ಅಮರ್ ಸಿಂಗ್ ರ ಸಮಾಜವಾಗಿ ಪಾರ್ಟಿಗೂ ಅವರು ತಮ್ಮ ಬೆಂಬಲ ಸೂಚಿಸಿದರು. ನಾಲ್ಕು ವರ್ಷಗಳ ಬಳಿಕ 1988ರಲ್ಲಿ ರಾಜಕೀಯದಿಂದ ಹೊರಬಂದು ಶೆಹೆನ್ ಶಾ ಎಂಬ ಚಿತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಪುನಃ ಭದ್ರಪಡಿಸಿಕೊಂಡರು.

ಧರ್ಮೇಂದ್ರ

ಧರ್ಮೇಂದ್ರ

ಶೋಲೆ ಚಿತ್ರದ ನಟ ಧರ್ಮೇಂದ್ರ 2004ರ ಲೋಕಸಭಾ ಚುನಾವಣೆಯಲ್ಲಿ ರಾಜಸ್ತಾನದ ಬಿಕಾನೇರ್ ಕ್ಷೇತ್ರದಿಂದ ಬಿಜೆಪಿ ಅಬ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆದರೆ ತಮ್ಮ ಅಧಿಕಾರಾವಧಿಯಲ್ಲಿ ಪಾರ್ಲಿಯಮೆಂಟಿನ ಕಲಾಪಗಳಿಗೆ ಹಾಜರಾಗದೇ ಅವರು ಟೀಕೆಗಳನ್ನು ಎದುರಿಸಬೇಕಾಯಿತು.

ಗೋವಿಂದ

ಗೋವಿಂದ

ವಿರಾರ್ ಕಾ ಛೋರಾ ಎಂದೇ ಮುಂಬೈ ಜನರಲ್ಲಿ ಜನಪ್ರಿಯನಾದ ನಟ ಗೋವಿಂದ 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಂಬೈ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ಪ್ರಾರಂಭಿಕ ದಿನಗಳಲ್ಲಿ ಹಲವು ಆಶ್ವಾಸನೆಗಳನ್ನು ನೀಡಿದ ಗೋವಿಂದ ಬಳಿಕ ತಮ್ಮ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನವನ್ನೂ ಉಪಯೋಗಿಸದೇ ಟೀಕೆಗೆ ಗುರಿಯಾದರು.

ಹೇಮಾ ಮಾಲಿನಿ

ಹೇಮಾ ಮಾಲಿನಿ

ಎಪ್ಪತ್ತರ ದಶಕದಲ್ಲಿ ಕನಸಿನ ಕನ್ಯೆ ಎಂದೇ ಗುರುತಿಸಲ್ಪಟ್ಟ ಬಾಲಿವುಡ್ ನಟಿ ಹೇಮಾಮಾಲಿನಿಯವರು ಪೂರ್ವ ರಾಷ್ಟ್ರಾಧ್ಯಕ್ಷ ಡಾ. ಅಬ್ದುಲ್ ಕಲಾಮ್ ರ ಸಲಹೆಯ ಮೇರೆಗೆ 2003-2009ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯೆಯಾಗಿ ನೇಮಕಗೊಂಡಿದ್ದರು. 2004ರಲ್ಲಿ ಬಿಜೆಪಿ ಪಕ್ಷ ಸೇರಿ 2010ರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 2014ರ ಲೋಕಸಭಾ ಚುನಾವಣೆಯಲ್ಲಿ ಮಥುರಾ ಕ್ಷೇತ್ರದಿಂದ ಸ್ಪರ್ಧಿಸಿ RLD ಪಕ್ಷದ ಜಯಂತ್ ಚೌಧುರಿಯವರನ್ನು ಸೋಲಿಸಿದರು.

ಜಯಾ ಬಚ್ಚನ್

ಜಯಾ ಬಚ್ಚನ್

ಬಾಲಿವುಡ್ ನಟಿ ಹಾಗೂ ಅಮಿತಾಭ್ ಬಚ್ಚನ್ ರವರ ದರ್ಮಪತ್ನಿ ಜಯಾಬಚ್ಚನ್ 2004ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಗೊಂಡರು. 2010ರಲ್ಲಿ ಅವರು ರಾಜಕೀಯದಿಂದ ನಿವೃತ್ತಿ ಪ್ರಕಟಿಸಿದರೂ ಬಳಿಕ 2012ರಲ್ಲಿ ಮತ್ತೊಮ್ಮೆ ಸ್ಪರ್ಧಿಸಿ ಮರುಆಯ್ಕೆಗೊಂಡರು.

ಮಿಥುನ್ ಚಕ್ರವರ್ತಿ

ಮಿಥುನ್ ಚಕ್ರವರ್ತಿ

ತಮ್ಮ ಡಿಸ್ಕೋ ನೃತ್ಯದಿಂದ ಯುವಜನತೆಯನ್ನು ಹುಚ್ಚೆಬ್ಬಿಸಿದ ನಟ ಮಿಥುನ್ ಚಕ್ರವರ್ತಿ 2014ರ ರಾಜ್ಯ ಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

ರಾಜೇಶ್ ಖನ್ನಾ

ರಾಜೇಶ್ ಖನ್ನಾ

ಎಪ್ಪತ್ತರ ದಶಕದಲ್ಲಿ ಇಡಿಯ ದೇಶದಲ್ಲಿಯೇ ತನ್ನ ನಟನಾ ಮೋಡಿಯಿಂದ ಜನತೆಯನ್ನು ಹೆಚ್ಚೆಬ್ಬಿಸಿದ್ದ ರಾಜೇಶ್ ಖನ್ನಾ 1992 ರಿಂದ 1996ರ ಅವಧಿಯಲ್ಲಿ ಲೋಕಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದರು. 1984ರಿಂದಲೇ ರಾಜೀವ್ ಗಾಂಧಿಯವರ ಸಲಹೆಯಂತೆ ರಾಜಕೀಯದಲ್ಲಿ ಸಕ್ರಿಯರಾಗಿದ್ದರೂ 1991ರ ಚುನಾವಣೆಯಲ್ಲಿ ಎಲ್.ಕೆ ಅಡ್ವಾಣಿಯವರ ಎದುರು ಸೋತರು. ಮುಂದಿನ 1992ರ ಚುನಾವಣೆಯಲ್ಲಿ ಶತ್ರುಘ್ನ ಸಿನ್ಹಾರವರ ಎದುರು ಗೆಲುವು ಸಾಧಿಸಿದರು.

ರಾಖಿ ಸಾವಂತ್

ರಾಖಿ ಸಾವಂತ್

ನಟಿ, ದೂರದರ್ಶನ ನಿರೂಪಕಿ ಹಾಗೂ ನರ್ತಕಿಯಾಗಿ ತಮ್ಮ ಜೀವನವನ್ನು ಪ್ರಾರಂಭಿಸಿದ ರಾಖಿ ಸಾವಂತ್ 2014ರ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಧುಮುಕಲೆಂದೇ ರಾಷ್ಟ್ರೀಯ ಆಮ್ ಪಾರ್ಟಿ ಎಂಬ ಪಕ್ಷವನ್ನು ಸ್ಥಾಪಿಸಿದರು. ಆದರೆ ಇದರಲ್ಲಿ ಹೀನಾಯ ಸೋಲುಂಡು ಠೇವಣಿಯನ್ನು ಕಳೆದುಕೊಂಡರು. ಬಳಿಕ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಲ್ಲಿ ಸಕ್ರಿಯ ರಾಜಕಾರಣದಲ್ಲಿದ್ದಾರೆ.

ರೇಖಾ

ರೇಖಾ

ಜೆಮಿನಿ ಗಣೇಶನ್ ರವರ ಪುತ್ರಿ ರೇಖಾ ನಲವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಹಿಂದಿ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. 2012ರಲ್ಲಿ ಪಾರ್ಲಿಯಮಂಟಿನಲ್ಲಿ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾದರು. ಆದರೆ ಸದನದಲ್ಲಿ ಭಾಗವಹಿಸದೇ ಇರುವ ಕಳಂಕ ಅವರ ವ್ಯಕ್ತಿತ್ವಕ್ಕೊಂದು ಕಪ್ಪು ಚುಕ್ಕೆಯಾಗಿ ಅಂಟಿಕೊಂಡಿತು.

ಸಂಜಯ್ ದತ್ತ್

ಸಂಜಯ್ ದತ್ತ್

ಸುನಿಲ್ ದತ್ತ್ ಮತ್ತು ನರ್ಗಿಸ್ ದತ್ತ್ ರ ಪುತ್ರ ಸಂಜಯ್ ದತ್ತ್ 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ನ್ಯಾಯಾಲಯದ ಆದೇಶದಂತೆ ಕಣದಿಂದ ಹಿಂದೆ ಸರಿಯಬೇಕಾಯಿತು. ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಆದರೆ ರಾಜಕೀಯ ಒಲ್ಲದ ಅವರು 2010ರ ಡಿಸೆಂಬರ್ ನಂದು ಸ್ಥಾನಕ್ಕೆ ರಾಜೀನಾಮೆ ನೀಡಿ ಚಿತ್ರರಂಗಕ್ಕೆ ಹಿಂದಿರುಗಿದರು.

English summary

List of top Actress Who enter in politicians

The Indian general elections are all about the heat, noise and crowds, but with the first phase of polling set for today, there’s a considerable glamour quotient to proceedings this year – more than a dozen Bollywood celebrities have thrown themselves into the fray.
X
Desktop Bottom Promotion