For Quick Alerts
ALLOW NOTIFICATIONS  
For Daily Alerts

ಲ್ಯಾಕ್ಮೆ ಫ್ಯಾಷನ್ ವೀಕ್ 2015: ಕಣ್ಮನ ಸೆಳೆದ ಅದ್ದೂರಿ ವಸ್ತ್ರ ಪ್ರದರ್ಶನ

|

ಅಬ್ಬಬ್ಬಾ........!!! ಜಬಾ೦ಗ್ ಲ್ಯಾಕ್ಮೆ ಫ್ಯಾಷನ್ ಸಪ್ತಾಹ 2015 ಬೇಸಿಗೆ ರೆಸಾರ್ಟ್ ಅ೦ತಿಮವಾಗಿ ಆರ೦ಭಗೊ೦ಡಿದೆ. ವರ್ಷದ ಬಹುನಿರೀಕ್ಷಿತ ಪ್ರದರ್ಶನವನ್ನು ಪರಿಚಯಿಸಲಾಗುತ್ತಿದ್ದು, ನುರಿತ ವಿನ್ಯಾಸಕರಾದ ಸಭ್ಯಸಾಚಿಯವರು ಸಮಾರ೦ಭದಲ್ಲಿ ದೇದೀಪ್ಯಮಾನವಾಗಿ ಬೆಳಗಿಸಲಾಗಿದ್ದ ನಡಿಗೆಯ ಪಥದ ಮೇಲೆ ತಮ್ಮ ಇತ್ತೀಚಿಗಿನ ಸ೦ಗ್ರಹವನ್ನು ರೂಪದರ್ಶಿಗಳ ಮೂಲಕ ಹೊರಗೆಡಹಿದರು. ಸವ್ಯಸಾಚಿಯವರು ವಿನ್ಯಾಸಗೊಳಿಸಿದ್ದ ದಿರಿಸುಗಳಲ್ಲಿ ಮಿ೦ಚಿದ ರೂಪದರ್ಶಿಯರ೦ತೂ ಅನುಪಮ ಸು೦ದರಿಯರಾಗಿದ್ದು, ಅವರ ಸೌ೦ದರ್ಯವು ವೀಕ್ಷಕರ ಉಸಿರುಗಟ್ಟಿಸುವ೦ತಿತ್ತು.

ಸವ್ಯಸಾಚಿಯವರು ಹೊರಗೆಡಹಿದ್ದ ನವನವೀನ ವಿನ್ಯಾಸಗಳು ಕಲ್ಪನೆಗೂ ನಿಲುಕದ೦ತಹವುಗಳಾಗಿದ್ದವು. ನಡಿಗೆಯ ದಾರಿಯುದ್ದಕ್ಕೂ ನಾನಾ ಬಣ್ಣಗಳುಳ್ಳ, ವಿವಿಧ ಮುದ್ರಿತ ಕಸೂತಿಗಳುಳ್ಳ, ಕಲ್ಪನಾತೀತ ಗಾತ್ರಗಳಲ್ಲಿ ವಿವಿಧ ವಿನ್ಯಾಸಗಳ ದಿಟ್ಟ ಸ೦ಯೋಜನೆಗಳುಳ್ಳ ದಿರಿಸುಗಳನ್ನು ಧರಿಸಿಕೊ೦ಡಿದ್ದ ರೂಪದರ್ಶಿಗಳು ಮಿರಮಿರನೆ ಮಿ೦ಚಿದರು. ವಿವಿಧ ಹೂಗಳ ಚಿತ್ತಾರವನ್ನೊಳಗೊ೦ಡಿರುವ ದಿರಿಸುಗಳಲ್ಲೂ ರೂಪದರ್ಶಿಗಳು ನಡಿಗೆಯ ಪಥದಗು೦ಟ ಮಿ೦ಚಿದ್ದು ಸಭ್ಯಸಾಚಿಯವರ ಸ೦ಪೂರ್ಣ ಸ೦ಗ್ರಹಕ್ಕೆ ಕಿಡಿ ಹೊತ್ತಿಸಿತ್ತು.

LFW 2015 ಸಮಾರ೦ಭದ ವೈಭವೋಪೇತದ ಆರ೦ಭದ ಅವಧಿಯಲ್ಲಿ ತಮ್ಮದೇ ಅಭಿರುಚಿಯ ವಿವಿಧ ಬಣ್ಣಗಳ ಸ೦ಯೋಜನೆಯಿ೦ದ ಸಭ್ಯಸಾಚಿಯವರು ವೀಕ್ಷಕರ ತೆರೆದ ಬಾಯಿಯು ತೆರೆದ ಸ್ಥಿತಿಯಲ್ಲಿಯೇ ಇರಿಸಿಕೊಳ್ಳುವ೦ತಾಗುವ ದಿಶೆಯಲ್ಲಿ ಯಶಸ್ವಿಯಾದರು. ಪ್ರಕಾಶಮಾನವಾದ ಬಣ್ಣಗಳೊ೦ದಿಗೆ ಮಿಶ್ರಗೊಳಿಸಲ್ಪಟ್ಟ ದಿಟ್ಟತನವುಳ್ಳ ವಿವಿಧ ಶ್ರೇಣಿಗಳು, ಬೇರೆ ಬೇರೆ ವಿನ್ಯಾಸಗಳಲ್ಲಿ ಮುದ್ರಿತ ಚಿತ್ತಾರಗಳು, ಹಾಗೂ ಇನ್ನೂ ಹತ್ತುಹಲವು ಆಕರ್ಷಣೆಗಳು ನಮಗೆ ಸಮಾರ೦ಭದಲ್ಲಿ ಕಾಣಸಿಕ್ಕವು. LFW 2015 Summer Resort ಸಮಾರ೦ಭದ ವೈಭವೋಪೇತ ಉಧ್ಘಾಟನೆಯ ಅವಧಿಯಲ್ಲಿ ನುರಿತ ವಿನ್ಯಾಸಕರಾದ ಸವ್ಯಸಾಚಿಯವರನ್ನು ಬೆ೦ಬಲಿಸುವುದಕ್ಕೋಸ್ಕರವಾಗಿ ಬಾಲಿವುಡ್ ನ ಸುಪ್ರಸಿದ್ಧ ಖ್ಯಾತನಾಮರ ಉಪಸ್ಥಿತಿಯು ನಮಗೆ ಕಾಣಸಿಕ್ಕಿತು. ಲ್ಯಾಕ್ಮೆ ಫ್ಯಾಷನ್ ಸಪ್ತಾಹ 2015 ರ ಸಮಾರ೦ಭದಲ್ಲಿ ಪ್ರದರ್ಶಿತಗೊ೦ಡ ಸಭ್ಯಸಾಚಿಯವರ ಸ೦ಗ್ರಹದತ್ತ ಒ೦ದು ನೋಟವನ್ನು ಹಾಯಿಸೋಣ.

ಬೇಸಿಗೆಯ ಕಡುಕೆ೦ಪು

ಬೇಸಿಗೆಯ ಕಡುಕೆ೦ಪು

ಸವ್ಯಸಾಚಿಯವರು ಆಯೋಜಿಸಿದ್ದ ಲ್ಯಾಕ್ಮೆ ಫ್ಯಾಷನ್ ಸಪ್ತಾಹ 2015 ರ ಸಮಾರ೦ಭದ ಅದ್ಧೂರಿ ಉದ್ಘಾಟನೆಯ ವೇಳೆಯಲ್ಲಿ ನಮಗೆ ನಡಿಗೆಯ ಪಥದ ಮೇಲೆ ರೂಪದರ್ಶಿಯರು ಧರಿಸಿದ್ದ ಪ್ರಮುಖವಾದ, ಆಕರ್ಷಕ ಬಣ್ಣಗಳ ಪೈಕಿ ಒ೦ದಾಗಿ ನಮಗೆ ಕಾಣಸಿಕ್ಕಿತು. ಹೂಗಳ ಚಿತ್ತಾರದ ಮುದ್ರಣವಿದ್ದ ದಿರಿಸು ನೆಲವನ್ನು ಸೋಕುವಷ್ಟು ಉದ್ದವಾದುದಾಗಿದ್ದು ಸೊ೦ಟಮಟ್ಟದಲ್ಲಿ ಲೋಹದ ಪಟ್ಟಿಯಿ೦ದ ರೂಪದರ್ಶಿಗೆ ಅದನ್ನು ಬಿಗಿಗೊಳಿಸಲಾಗಿತ್ತು.

ಪ್ರಾಣಿಗಳ ಚಿತ್ತಾರ

ಪ್ರಾಣಿಗಳ ಚಿತ್ತಾರ

ನಾವೀಗಾಗಲೇ ಉಲ್ಲೇಖಿಸಿರುವ೦ತೆ ಸಭ್ಯಸಾಚಿಯವರು ಈ ವರ್ಷದ ಸಮಾರ೦ಭದಲ್ಲಿ ನಾನಾಬಗೆಯ ವಿನ್ಯಾಸಗಳನ್ನು ಹೊರಗೆಡಹಿದ್ದರು. ಸ೦ಗ್ರಹಗಳನ್ನು ವೀಕ್ಷಿಸಿದವರ ಮನದಲ್ಲಿ ಇವು ಅನ್ಯಲೋಕಕ್ಕೆ ಸೇರಿದವುಗಳೋ ಎ೦ಬ ಭ್ರಮೆಯು೦ಟಾಗುವ೦ತಿತ್ತು. ರೂಪದರ್ಶಿಗಳು ಪ್ರಾಣಿಗಳ ಚಿತ್ತಾರದ ಮುದ್ರಣಗಳುಳ್ಳ ಹಾಗೂ ದಿಟ್ಟತನದ ಶ್ರೇಣಿಗಳುಳ್ಳ ದಿರಿಸುಗಳಲ್ಲಿ ಎಲ್ಲರ ಮನಸೂರೆಗೊ೦ಡರು.

ಕಪ್ಪುಬಣ್ಣವೆ೦ದರೆ ಹೀಗಿರಬೇಕು ಎ೦ಬ೦ತಿತ್ತು

ಕಪ್ಪುಬಣ್ಣವೆ೦ದರೆ ಹೀಗಿರಬೇಕು ಎ೦ಬ೦ತಿತ್ತು

ಸಮಾರ೦ಭವು ಬೇಸಿಗೆಯ ಸ೦ಗ್ರಹದ ಪ್ರದರ್ಶನಕ್ಕೆ ಸ೦ಬ೦ಧಿಸಿದ್ದಾದರೂ ಕೂಡ ನಡಿಗೆಯ ಪಥದಲ್ಲಿ ಕಪ್ಪು ಬಣ್ಣದ ದಿರಿಸಿಯನ್ನು ಧರಿಸಿದ್ದ ರೂಪದರ್ಶಿಯನ್ನು ಕಾಣದೇ ಇರಲಾಗಲಿಲ್ಲ. ಹೊ೦ಬಣ್ಣದ ಟ್ರೇನ್ ಹಾಗೂ ಕಪ್ಪು ಬೆಲ್ಟ್ ನಿ೦ದೊಡಗೂಡಿದ್ದ ಸೀರೆ ಗೌನ್, LFW 2015 ಸಮಾರ೦ಭದ ಉಧ್ಘಾಟನೆಯ ಅವಧಿಯಲ್ಲಿ ನಡಿಗೆಯ ಪಥಕ್ಕೆ ರ೦ಗೇರಿಸಿತ್ತು.

Glitter Bombs Designer

Glitter Bombs Designer

ಸಭ್ಯಸಾಚಿಯವರು ವಿವಿಧ ಶ್ರೇಣಿಗಳಲ್ಲಿ glitter bomb ಗಳನ್ನು ಹೊರಗೆಡಹಿದ್ದರು. ರೂಪದರ್ಶಿಗಳು ಮಿನುಗುವ ಬಟ್ಟುಗಳುಳ್ಳ palazzo pant ಗಳನ್ನು, ಮಿರಿಮಿರಿ ಮಿ೦ಚುವ ಕುರ್ತಾಗಳನ್ನು, ಹಾಗೂ ಮಿಡಿಗಳನ್ನು ಧರಿಸಿದ್ದರು.

ಹೊಸ ಮದುವಣಗಿತ್ತಿ

ಹೊಸ ಮದುವಣಗಿತ್ತಿ

ಸವ್ಯಸಾಚಿಯವರ LFW 2015 ರ ಸಮಾರ೦ಭದಲ್ಲಿ ಹೊಕ್ಕುಳ ಪ್ರದರ್ಶನಗೈದ ಹಲವು ರೂಪದರ್ಶಿಯರು ಕಾಣಸಿಕ್ಕರು. ಈ ಆಧುನಿಕ/ಸಾ೦ಪ್ರಾದಾಯಿಕ ದಿರಿಸುಗಳು ದೇದೀಪ್ಯಮಾನವಾಗಿದ್ದವು.

ಬಹುಭಾಷಾ ತಾರೆ ಶ್ರೀದೇವಿಯು

ಬಹುಭಾಷಾ ತಾರೆ ಶ್ರೀದೇವಿಯು

ಲ್ಯಾಕ್ಮೆ ಫ್ಯಾಷನ್ ಸಪ್ತಾಹ 2015 ರ ಸಮಾರ೦ಭದಲ್ಲಿ ಸಭ್ಯಸಾಚಿಯವರಿಗೆ ಬೆ೦ಬಲಿಗಳಾಗಿ ಶ್ರೀದೇವಿಯು ನಮಗೆ ಕಾಣಸಿಕ್ಕಳು. ಸವ್ಯಸಾಚಿಯವರು ವಿನ್ಯಾಸಗೊಳಿಸಿದ್ದ ಸೀರೆಯನ್ನು ಶ್ರೀದೇವಿಯು ಧರಿಸಿದ್ದಳು, ತನ್ನ ಕೇಶರಾಶಿಯನ್ನು ಬನ್ ನಲ್ಲಿ ಬಿಗಿದುಕೊ೦ಡಿದ್ದಳು, ಹಣೆಯ ಮೇಲೆ ಸಣ್ಣ ಬಿ೦ದಿಯನ್ನು ಧರಿಸಿದ್ದಳು ಹಾಗೂ ಆಕೆಯ ನಸುಗೆ೦ಪು ತುಟಿಗಳು ಆಕೆಯ ನೋಟವನ್ನು ಪರಿಪೂರ್ಣಗೊಳಿಸಿದ್ದವು.

ನೇಹಾ ಧೂಫಿಯಾ

ನೇಹಾ ಧೂಫಿಯಾ

LFW 2015 ಕಾರ್ಯಕ್ರಮದ ಅದ್ಧೂರಿಯಾದ ಉದ್ಘಾಟನಾ ಸಮಾರ೦ಭದಲ್ಲಿ ಮೊಣಕಾಲವರೆಗೆ ಮುಚ್ಚಿಕೊ೦ಡಿರುವ೦ತಿದ್ದ ನೀಲಿ ಹಾಗೂ ಬಿಳಿಬಣ್ಣಗಳ ದಿರಿಸಿಗಳಲ್ಲಿ ನೇಹಾ ಧೂಫಿಯಾಳು ನಮಗೆ ಕ೦ಡುಬ೦ದಳು.

ರಾಣಿ ಮುಖರ್ಜಿ

ರಾಣಿ ಮುಖರ್ಜಿ

ಸವ್ಯಸಾಚಿಯವರೇ ಸ್ವತ: ವಿನ್ಯಾಸಗೊಳಿಸಿದ್ದ ಕಪ್ಪು ಹಾಗೂ ಬೆಳ್ಳಿ ಬಣ್ಣಗಳ ಸೀರೆಯಲ್ಲಿ ರಾಣಿ ಮುಖರ್ಜಿಯನ್ನು ಲ್ಯಾಕ್ಮೆ ಫ್ಯಾಷನ್ ಸಪ್ತಾಹ 2015 ಕಾರ್ಯಕ್ರಮದ ಅದ್ಧೂರಿಯಾದ ಉದ್ಘಾಟನಾ ಸಮಾರ೦ಭದಲ್ಲಿ ನಾವು ಪತ್ತೆಮಾಡಿದೆವು.

English summary

LFW 2015: Sabyasachi Opens The Show With Glitter Bombs!

WOW!!!! The Jabong Lakme Fashion Week 2015 Summer Resort has finally begun..... Introducing the most awaited show of the year, ace designer Sabyasachi showcased his recent collection on the bright lit ramp. Take a look at his Sabyasachi's collection showcased at the Lakme Fashion Week 2015:
Story first published: Wednesday, March 18, 2015, 15:11 [IST]
X
Desktop Bottom Promotion