For Quick Alerts
ALLOW NOTIFICATIONS  
For Daily Alerts

ಸುಳ್ಳು ಹೇಳುವುದರಲ್ಲಿ ಮಹಿಳೆಯರು ಸಿಕ್ಕಾಪಟ್ಟೆ ಫೇಮಸ್!

By manu
|

ಒಳ್ಳೆಯ ಕೆಲಸಕ್ಕೆ ಸುಳ್ಳು ಹೇಳಿದರೆ ಅದರಿಂದ ಏನೂ ತೊಂದರೆಯಿಲ್ಲ ಎನ್ನುವ ಮಾತಿದೆ. ನಾವು ಕೆಲವು ಸಲ ಒಳ್ಳೆಯದನ್ನು ಮಾಡಲು ಸುಳ್ಳು ಹೇಳಬೇಕಾಗಿ ಬಂದರೆ ಅದು ಸುಳ್ಳು ಎಂದನಿಸದು. ಕೆಲವೊಂದು ಸಲ ಸುಳ್ಳು ಹೇಳುವುದರಿಂದ ಸಂಬಂಧಗಳು ಹಾಳಾಗುವುದು ಅಥವಾ ಇತರ ಭಾವನೆಗಳಿಗೆ ನೋವುಂಟಾಗುವುದು.

ಆದರೆ ನೀವು ಹೇಳಿರುವ ಸುಳ್ಳಿನಿಂದ ಪತಿ ಅಥವಾ ಪ್ರಿಯತಮನಿಗೆ ಯಾವುದೇ ರೀತಿಯ ಸಮಸ್ಯೆಯಾಗದಿದ್ದರೆ ಆಗ ಅದು ಆರೋಗ್ಯಕರ ಸಂಬಂಧಕ್ಕೆ ನಾಂದಿಯಾಗುತ್ತದೆ. ಪ್ರಿಯತಮನ ಮುಂದೆ ಸಣ್ಣದಾಗಬಾರದೆಂಬ ಭಾವನೆಯಿಂದ ಕೆಲವೊಮ್ಮೆ ಸುಳ್ಳು ಹೇಳಬೇಕಾಗುತ್ತದೆ. ಮಹಿಳೆಯರು ಯಾಕಪ್ಪಾ ಈ ರೀತಿಯಾಗಿ ವರ್ತಿಸುತ್ತಾರೆ?

ಜಗಳವನ್ನು ಕೊನೆಗೊಳಿಸಲು ಅಥವಾ ಜತೆಗಾರ ಸಂತೋಷವಾಗಿರಬೇಕೆಂಬ ಭಾವನೆಯಿಂದ ಮಹಿಳೆಯರು ಸುಳ್ಳು ಹೇಳುತ್ತಾರೆ. ನಿಮ್ಮ ಸಂಬಂಧವನ್ನು ಕಾಪಾಡಲು ಅಥವಾ ವಾತಾವರಣ ತಿಳಿಗೊಳಿಸಲು ನೀವು ಸುಳ್ಳು ಹೇಳಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ.

ಆದರೆ ಇದು ಅಭ್ಯಾಸವಾಗಬಾರದು. ದೀರ್ಘಸಮಯದ ತನಕ ಸುಳ್ಳು ಹೇಳುವುದರಿಂದ ಅದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಜೀವನದಲ್ಲಿ ಪ್ರತಿಯೊಂದಕ್ಕೂ ಒಂದು ಮಿತಿ ಮತ್ತು ಸಮತೋಲನವಿರಬೇಕು.

ಪುರುಷರು ಸುಳ್ಳು ಹೇಳುವುದಿಲ್ಲವೆಂದಲ್ಲ, ಆದರೆ ಸುಳ್ಳು ಹೇಳುವ ಸರದಿ ಬಂದಾಗ ಮಹಿಳೆಯರು ತಮ್ಮ ಜತೆಗಾರರೊಂದಿಗೆ ಕೆಲವೊಂದು ಸಾಮಾನ್ಯ ಸುಳ್ಳುಗಳನ್ನು ಹೇಳುತ್ತಾ ಇರುತ್ತಾರೆ. ಪುರುಷರಿಗೆ ಹೇಳುವಂತಹ ಕೆಲವೊಂದು ಸಾಮಾನ್ಯ ಸುಳ್ಳುಗಳ ಬಗ್ಗೆ ನಾವಿಲ್ಲಿ ಗಮನಹರಿಸುವ. ರಹಸ್ಯದ ವಿಷಯವನ್ನು ಮಹಿಳೆಯರ ಬಳಿ ಮಾತ್ರ ಹೇಳಬೇಡಿ!

ಹಣ ಮುಖ್ಯವಲ್ಲ

ಹಣ ಮುಖ್ಯವಲ್ಲ

ನಿಮ್ಮ ಜತೆಗಾರ ತುಂಬಾ ಪ್ರೀತಿಸುತ್ತಿರಬಹುದು ಮತ್ತು ಆರೈಕೆ ಮಾಡುತ್ತಿರಬಹುದು. ಆದರೆ ಇದೇ ವೇಳೆ ಹಣ ಕೂಡ ತುಂಬಾ ಮುಖ್ಯ. ಹಣ ಮುಖ್ಯವಲ್ಲವೆಂದು ಮಹಿಳೆಯೊಬ್ಬಳು ಹೇಳುತ್ತಿದ್ದರೆ ಆಕೆ ಒಂದಾ ಅರ್ಧ ಸತ್ಯ ಅಥವಾ ಹೀಗೆ ಸುಳ್ಳು ಹೇಳುತ್ತಿದ್ದಾಳೆ ಎಂದರ್ಥ. ಹಣ ಕೂಡ ಮುಖ್ಯ ಮತ್ತು ಅದು ಇಲ್ಲದೆ ಜೀವನ ದುಸ್ತರವಾಗಬಹುದು.

ನಾನು ನಿಮ್ಮ ಕುಟುಂಬವನ್ನು ಇಷ್ಟಪಡುತ್ತೇನೆ

ನಾನು ನಿಮ್ಮ ಕುಟುಂಬವನ್ನು ಇಷ್ಟಪಡುತ್ತೇನೆ

ಕೆಲವು ಮಹಿಳೆಯರು ತಮ್ಮ ಅತ್ತೆ-ಮಾವನ ಜತೆ ಬೇಗನೆ ಹೊಂದಿಕೊಳ್ಳಬಹುದು. ಅದಾಗ್ಯೂ ತಮ್ಮ ಅತ್ತೆ-ಮಾವನ ಜತೆ ಉತ್ತಮ ಸಂಬಂಧವನ್ನು ಹೊಂದಿರುವ ಮಹಿಳೆಯರು ತಾವು ಅತ್ತೆ ಮಾವನನ್ನು ಇಷ್ಟಪಡುತ್ತೇವೆ ಎಂದು ಹೇಳುತ್ತಾರೆ. ನಿಮ್ಮ ತಂದೆ-ತಾಯಿಯನ್ನು ಇಷ್ಟಪಡುವುದಿಲ್ಲವೆಂದು ಯಾವುದೇ ಮಹಿಳೆ ಹೇಳಿದರೆ ಅದು ಆಕೆಯ ಪತಿಗೆ ಕೋಪವನ್ನು ಉಂಟು ಮಾಡುತ್ತದೆ.

ಮನೆಕೆಲಸ ಮಾಡಲು ಅಡ್ಡಿಯಿಲ್ಲ

ಮನೆಕೆಲಸ ಮಾಡಲು ಅಡ್ಡಿಯಿಲ್ಲ

ಮದುವೆಯಾದ ಆರಂಭದಲ್ಲಿ ಕೆಲವು ಮಹಿಳೆಯರು ಅಡುಗೆ, ಕೊಳೆಯಾದ ಬಟ್ಟೆ, ಸಾಕ್ಸ್, ಒಳ ಉಡುಪುಗಳನ್ನು ಹೊಗೆಯಲು ಹಿಂಜರಿಯುವುದಿಲ್ಲ. ಆದರೆ ಕೆಲವೇ ವರ್ಷಗಳಲ್ಲಿ ಈ ತಾಳ್ಮೆ ಕಡಿಮೆಯಾಗುತ್ತದೆ ಮತ್ತು ಪುರುಷರು ತಮ್ಮ ಸಾಕ್ಸ್ ಹೊಗೆಯುವುದನ್ನು ನೋಡಬಹುದು. ಮನೆಕೆಲಸ ಮಾಡಲು ಅಡ್ಡಿಯಿಲ್ಲ ಎಂದು ಪತ್ನಿ ಹೇಳಿದರೆ ಎಚ್ಚರಿಕೆ ಅಗತ್ಯ.

ನಾನು ತಪ್ಪು ಮಾಡಿದೆ

ನಾನು ತಪ್ಪು ಮಾಡಿದೆ

ತಮ್ಮದಲ್ಲದ ತಪ್ಪಿಗೆ ಮಹಿಳೆಯೊಬ್ಬಳು ಕ್ಷಮೆ ಕೇಳುತ್ತಿದ್ದರೆ ಆಗ ಅವಳು ಜಗಳ ಮತ್ತು ವಾದ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾಳೆ ಎಂದರ್ಥ.

English summary

Common Lies That Women Tell Men

Lying does not always mean that you are spoiling a relationship or hurting other's feeling. Sometimes for a healthy relation you have to tell a few lies that will not make your husband or boyfriend feel bad about a particular situation. Sometimes, you lie to your partner just not to be uncool in front of him.
Story first published: Tuesday, July 21, 2015, 15:23 [IST]
X
Desktop Bottom Promotion