For Quick Alerts
ALLOW NOTIFICATIONS  
For Daily Alerts

ವಯಸ್ಸಾದರೂ ಲವಲವಿಕೆ ಕಳೆದುಕೊಳ್ಳದ ಸೆಲೆಬ್ರಿಟಿಗಳು

By Super
|

ವಯಸ್ಸಾದಂತೆ ದೇಹ ಹಲವು ಲಕ್ಷಣಗಳನ್ನು ಕಳೆದುದೊಂಡು ವೃದ್ಧಾಪ್ಯದ ಸಂಕೇತಗಳನ್ನು ಪ್ರಕಟಿಸತೊಡಗುತ್ತದೆ. ಕೂದಲು ನೆರೆಯುವುದು, ಬೆನ್ನು ಬಾಗುವುದು, ಚರ್ಮದಲ್ಲಿ ನೆರಿಗೆಗಳು ಇತ್ಯಾದಿ. ಈ ಲಕ್ಷಣಗಳು ಕೆಲವರಲ್ಲಿ ಚಿಕ್ಕ ವಯಸ್ಸಿಗೇ ಕಂಡುಬಂದರೆ ಕೆಲವರಂತೂ ಅರವತ್ತಾದರೂ ಮೂವತ್ತರಂತೆಯೇ ಕಾಣುತ್ತಾರೆ.

ಅದರಲ್ಲೂ ಹಲವು ಬಾಲಿವುಡ್ ತಾರೆಯರು ಇಂದು ವೃದ್ಧಾಪ್ಯದ ಹೊಸ್ತಿಲು ದಾಟಿ ಬಲುಮುಂದೆ ಹೋಗಿದ್ದರೂ ಇನ್ನೂ ಹರೆಯದಲ್ಲಿದ್ದವರಂತೆ ಚಟುವಟಿಕೆಯಿಂದಿರುತ್ತಾರೆ. ಇದಕ್ಕೆ ಅವರ ಆರೋಗ್ಯಕರ ಜೀವನಶೈಲಿಯೇ ಪ್ರಮಥ ಕಾರಣವಾಗಿದೆ. ಬನ್ನಿ, ಕೆಳಗಿನ ಸ್ಲೈಡ್ ಶೋ ಮೂಲಕ ಕೆಲವು ಖ್ಯಾತ ತಾರೆಯರ ವೃದ್ಧಾಪ್ಯದಲ್ಲಿಯೂ ಉಳಿಸಿರುವ ಚೆಲುವಿನ ಬಗ್ಗೆ ಅರಿಯೋಣ..

ಅಮಿತಾಬ್ ಬಚ್ಚನ್

ಅಮಿತಾಬ್ ಬಚ್ಚನ್

ಬಿಗ್ ಬಿ ಎಂದೇ ಜನಜನಿತರಾದ ಅಮಿತಾಬ್ ರನ್ನು ಅರಿಯದ ಭಾರತೀಯನೇ ಇಲ್ಲ. ಈಗ ಎಪ್ಪತ್ತಮೂರರ ಹರೆಯದಲ್ಲಿರುವ (ಜನನ 11 ಅಕ್ಟೋಬರ್ 1942) ಅಮಿತಾಬ್ ಸದಾ ಒಂದಲ್ಲಾ ಒಂದು ಕಾರ್ಯದಲ್ಲಿ ಮಗ್ನರಾಗಿಯೇ ಇರುತ್ತಾರೆ. ಇವರಿಗೆ ನಿವೃತ್ತಿ ಎಂಬುದೇ ಇಲ್ಲ. ಆರಡಿಗೂ ಎತ್ತರದ ಆಜಾನುಬಾಹು ವ್ಯಕ್ತಿ ಇಂದಿಗೂ ಆರೋಗ್ಯದಲ್ಲಿಯೂ ಎತ್ತರದಲ್ಲಿಯೇ ನಿಂತಿದ್ದಾರೆ.

ಅಮಿತಾಬ್

ಅಮಿತಾಬ್

ಇವರ ಆರೋಗ್ಯದ ಗುಟ್ಟು: ತಮ್ಮ ನಿತ್ಯದ ಜೀವನಕ್ರಮವನ್ನೇ ಇವರು ತಮ್ಮ ಆರೋಗ್ಯದ ಗುಟ್ಟು ಎಂದು ತಿಳಿಸುತ್ತಾರೆ. ಸರಿಯಾದ ಸಮಯಕ್ಕೆ ಊಟ, ನಿದ್ದೆ, ಮದ್ಯಪಾನದಿಂದ ದೂರವಿರುವುದು, ನಿತ್ಯ ನಿಗದಿತವಾದ ವ್ಯಾಯಮಗಳನ್ನು ಮಾಡುವುದು ಇತ್ಯಾದಿ. ತಮ್ಮನ್ನು ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಅದರಲ್ಲಿ ಪೂರ್ಣವಾಗಿ ಮುಳುಗುವುದು ಇವರ ಆರೋಗ್ಯದ ಇನ್ನೊಂದು ಗುಟ್ಟು.

ಮಾಧುರಿ ದೀಕ್ಷಿತ್

ಮಾಧುರಿ ದೀಕ್ಷಿತ್

ತಮ್ಮ ಧಕ್ ಧಕ್ ಹಾಡಿನಿಂದ ಭಾರತೀಯರ ಹೃದಯಕ್ಕೇ ಲಗ್ಗೆಯಿಟ್ಟ ಮಾಧುರಿಯವರ ಸೌಂದರ್ಯ ಅವರ ನಗುವಿನಲ್ಲಿ ಅಡಗಿದೆ. ಈ ನಗುವಿನಿಂದ ವಿಮುಖರಾಗಲು ಸಾಧ್ಯವೇ ಇಲ್ಲ. ಈಗ ಅವರು ಗೃಹಿಣಿಯಾಗಿ ಇಬ್ಬರು ಮಕ್ಕಳ ತಾಯಿಯಾಗಿ ಐವತ್ತರ ಹೊಸ್ತಿಲಲ್ಲಿದ್ದರೂ (ಜನನ 15 ಮೇ 1967) ಇಂದಿಗೂ ಮೂವತ್ತು ದಾಟದ ಚೆಲುವೆಯಂತೆ ಕಾಣುತ್ತಾರೆ.

ಮಾಧುರಿ ದೀಕ್ಷಿತ್

ಮಾಧುರಿ ದೀಕ್ಷಿತ್

ಇವರ ಆರೋಗ್ಯದ ಗುಟ್ಟು: ಅವರ ನೃತ್ಯ. ತಮ್ಮ ನೃತ್ಯ ಮತ್ತು ನಟನಾ ಕೌಶಲ್ಯದಿಂದ ಬಾಲಿವುಡ್‌ಗೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಮಾಧುರಿಯವರಿಗೆ ನೃತ್ಯವೆಂದರೆ ನಿತ್ಯದ ವ್ಯಾಯಮ. ಇಂದಿಗೂ ನೃತ್ಯದ ಅವರ ಹಲವು ಪಟ್ಟುಗಳು ನವಯುವಕರನ್ನು ನಾಚಿಸುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಾಧುರಿ ದೀಕ್ಷಿತ್

ಮಾಧುರಿ ದೀಕ್ಷಿತ್

ಅಲ್ಲದೇ ಇವರು ತಮ್ಮ ಆಹಾರಪದ್ಧತಿಯಲ್ಲಿ ಬಹಳ ಕಟ್ಟುನಿಟ್ಟಾಗಿದ್ದು ಸದಾ ಸಂತುಲಿತ ಆಹಾರವನ್ನೇ ಸೇವಿಸುತ್ತಾರೆ. ಅಲ್ಲದೇ ತಮ್ಮ ಧರ್ಮದ ವಿಧಿಗಳನ್ನು ದಿನಕ್ಕೆ ಎರಡು ಬಾರಿ ತಪ್ಪದೇ ಆಚರಿಸಿಕೊಂಡು ಬರುತ್ತಿರುವುದೂ ಅವರ ಆರೋಗ್ಯದ ಗುಟ್ಟಾಗಿದೆ.

ಅನಿಲ್ ಕಪೂರ್

ಅನಿಲ್ ಕಪೂರ್

ಪಲ್ಲವಿ ಅನುಪಲ್ಲವಿ ಎಂಬ ಕನ್ನಡ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅನಿಲ್ ಕಪೂರ್ ಬಳಿಕ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಈಗ ಐವತ್ತೆಂಟರ ಹರೆಯದ (ಜನನ 24 ಡಿಸೆಂಬರ್ 1956) ಅನಿಲ್ ಕಪೂರ್ ತಮ್ಮ ಮೂವತ್ತರ ಹರೆಯದಲ್ಲಿದ್ದಂತೆಯೇ ಇಂದಿಗೂ ಕಾಣುತ್ತಾರೆ. ಇವರ ಮೂವರು ಮಕ್ಕಳೊಂದಿಗೆ ಇವರನ್ನು ಕಂಡವರು ಸಹೋದರ-ಸಹೋದರಿಯರಿರಬಹುದೆಂದೇ ಅಂದುಕೊಳ್ಳುತ್ತಾರೆ.

ಅನಿಲ್ ಕಪೂರ್

ಅನಿಲ್ ಕಪೂರ್

ಇವರ ಆರೋಗ್ಯದ ಗುಟ್ಟು: ಇವರು ದೈಹಿಕ ಕಸರತ್ತಿಗೆ ಅತಿ ಹೆಚ್ಚು ಮಹತ್ವ ನೀಡುವವರಾಗಿದ್ದು ಮನೆಯಲ್ಲಿಯೇ ಜಿಮ್ ಒಂದನ್ನು ಇಟ್ಟುಕೊಂಡಿದ್ದಾರೆ. ಇದರಲ್ಲಿ ಪ್ರತಿದಿನ ಸೈಕಲ್ ತುಳಿಯುವುದೂ ಒಂದು ಚಟುವಟಿಕೆಯಾಗಿದೆ. ಸೈಕ್ಲಿಂಗ್ ಎಂದರೆ ತುಂಬಾ ಇಷ್ಟವಾದ ಅನಿಲ್ ಕಪೂರ್ ಎಷ್ಟೋ ಬಾರಿ ತಮ್ಮ ಸಿನಿಮಾ ಚಿತ್ರೀಕರಣದ ಸ್ಥಳಕ್ಕೂ ಸೈಕಲ್ ತುಳಿದುಕೊಂಡೇ ಆಗಮಿಸುತ್ತಾರೆ.

ಅನಿಲ್ ಕಪೂರ್

ಅನಿಲ್ ಕಪೂರ್

ಅಂದರೆ ಅವರ ಹತ್ತಿರ ಕಾರುಗಳಿಲ್ಲವೆಂದಲ್ಲ, ಒಂದು ಬಿಟ್ಟು ನಾಲ್ಕಾರು ಐಷಾರಾಮಿ ಕಾರುಗಳಿದ್ದರೂ ತಮ್ಮ ದೇಹದ ಶಕ್ತಿಯನ್ನು ವ್ಯಯಿಸಲು ಸೈಕಲ್ ತುಳಿಯುವುದನ್ನು ಅವರು ಇಷ್ಟದಿಂದಲೇ ಆಯ್ದುಕೊಂಡಿದ್ದಾರೆ. ತಾವು ತಿನ್ನುವ ಆಹಾರದ ಮೇಲೆ ಅತೀವ ಕಟ್ಟುನಿಟ್ಟು ಪಾಲಿಸುವ ಅನಿಲ್ ಕಪೂರ್ ಮದ್ಯಪಾನವನ್ನೂ ಮಾಡುವುದಿಲ್ಲ.

ಹೇಮಾ ಮಾಲಿನಿ

ಹೇಮಾ ಮಾಲಿನಿ

ಎಪ್ಪತ್ತರ ದಶಕದಲ್ಲಿ ಭಾರತೀಯ ಸಿನಿಮಾಗಳಲ್ಲಿ ನಂ 1 ಸ್ಥಾನದಲ್ಲಿದ್ದ ಹೇಮಾ ಮಾಲಿನಿ ಡ್ರೀಂ ಗರ್ಲ್ ಎಂದೇ ಹೆಚ್ಚು ಪ್ರಖ್ಯಾತರು. ಇಂದು ಅರವತ್ತೇಳರ ಹೊಸ್ತಿಲಲ್ಲಿರುವ ಅವರು (ಜನನ 16 ಅಕ್ಟೋಬರ್ 1948) ಭರತನಾಟ್ಯದ ಉಡುಗೆ ಧರಿಸಿ ರಂಗದಲ್ಲಿಳಿದರೆ ಇಪ್ಪತ್ತೈದರ ತರುಣಿಯಾಗಿಬಿಡುತ್ತಾರೆ. ಇವರ ಎದುರು ಅವರ ಇಬ್ಬರು ಹೆಣ್ಣುಮಕ್ಕಳೂ ಹಿರಿಯರಾಗಿ ಕಾಣುತ್ತಾರೆ.

ಹೇಮಾ ಮಾಲಿನಿ

ಹೇಮಾ ಮಾಲಿನಿ

ಇವರ ಸೌಂದರ್ಯದ ಗುಟ್ಟು: ತಮ್ಮ ತ್ವಚೆಯನ್ನು ಹಾನಿಕಾರಕ ಮೇಕಪ್‌ನಿಂದ ದೂರವಿಡುವುದು ಮತ್ತು ನೈಸರ್ಗಿಕ ಪ್ರಸಾಧನಗಳಿಗೆ ಒಲವು ತೋರುವುದು. ಇದರಲ್ಲಿ ತುಳಸಿ, ನೆಲ್ಲಿಕಾಯಿ, ಬೇವು ಮೊದಲಾದವು ಪ್ರಮುಖವಾಗಿವೆ. ಇವರಿಗೆ ನೃತ್ಯವೆಂದರೆ ನಿತ್ಯದ ವ್ಯಾಯಮವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೇಮಾ ಮಾಲಿನಿ

ಹೇಮಾ ಮಾಲಿನಿ

ಅಲ್ಲದೇ ತಮ್ಮ ಆಹಾರ ಮತ್ತು ಜೀವನಕ್ರಮಗಳಲ್ಲಿ ಕಟ್ಟುನಿಟ್ಟನ್ನು ಆಚರಿಸುವ ಮೂಲಕ ತಮ್ಮ ತಾರುಣ್ಯ ಉಳಿಸಿಕೊಂಡಿರುವುದು ಅವರ ಆರೋಗ್ಯದ ಗುಟ್ಟಾಗಿದೆ.

ರೇಖಾ

ರೇಖಾ

ಜಿಮಿನಿ ಗಣೇಶನ್ ರವರ ಪುತ್ರಿಯಾಗಿರುವ ಭಾನು ರೇಖಾ ಗಣೇಶನ್ (ಜನನ 10 ಅಕ್ಟೋಬರ್ 1954) ರೇಖಾ ಎಂದೇ ಜನಪ್ರಿಯರು. ಇವರ ಅರವತ್ತೊಂದರ ರೂಪವನ್ನು ಕಂಡವರು ಇವರು ಎಂಭತ್ತರಲ್ಲಿ ಹುಟ್ಟಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಾರೆ. ಏಕೆಂದರೆ ಜನಸಂಪರ್ಕದ ಸಮಯದಲ್ಲಿ ಅವರು ಎಂದಿಗೂ ತಮ್ಮ ರೂಪ ಮತ್ತು ಉಡುಗೆತೊಡುಗೆಗೆ ಅತಿ ಹೆಚ್ಚಿನ ಮಹತ್ವವನ್ನು ನೀಡುವ ಕಾರಣ ಅವರು ಹೆಚ್ಚಾಗಿ ರೇಷ್ಮೆ ಸೀರೆ ಮತ್ತು ಕೆಂಪು ತುಟಿಗಳಲ್ಲಿಯೇ ಕಾಣಸಿಗುತ್ತಾರೆ. ಇಂದಿಗೂ ಒಂದಿನಿತೂ ಬೆನ್ನು ಬಾಗದ, ಒಂದು ಕೂದಲೂ ನೆರೆಯದಿರುವ ಗುಟ್ಟನ್ನು ಅವರಲ್ಲಿ ಕೇಳಿದರೆ ಅವರು ನಕ್ಕು ವಿಷಯವನ್ನು ತೇಲಿಬಿಡುತ್ತಾರೆ.

ರೇಖಾ

ರೇಖಾ

ಅವರ ಆರೋಗ್ಯದ ರಹಸ್ಯ: ಸಾಮಾನ್ಯವಾಗಿ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಹೇಳದೇ ಇದ್ದರೂ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಕೂದಲ್ ಆರೈಕೆಯ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ತಮ್ಮ ತಾಯಿಯಿಂ ಕಲಿತುಕೊಂಡು ಬಂದಂತೆ ಕೂದಲಿಗೆ ಸೀಗೇಕಾಯಿ ಮತ್ತು ಮನೆಯಲ್ಲಿಯೇ ಸಿದ್ಧಪಡಿಸಿದ ಮೊಸರು, ಜೇನು, ಮೊಟ್ಟೆಯ ಬಿಳಿಭಾಗದ ಮಿಶ್ರಣವನ್ನು ಹಚ್ಚಿಕೊಳ್ಳುವುದೇ ಕೂದಲು ನೆರೆಯದಿರಲು ಕಾರಣ. ಇದಕ್ಕೂ ಹೆಚ್ಚಾಗಿ ಅವರ ಆರೋಗ್ಯದ ಗುಟ್ಟು, ಅವರೇ ಹೇಳಿಕೊಂಡಂತೆ ಧನಾತ್ಮಕ ಚಿಂತನೆಯ ವ್ಯಕ್ತಿಯಾಗಿರುವುದು.

ರೇಖಾ

ರೇಖಾ

ಅಷ್ಟೇ ಅಲ್ಲದೆ ಸೌಂದರ್ಯ ಕಾಪಾಡಿಕೊಳ್ಳಲು ಹೆಚ್ಚಿನ ಪ್ರಸಾಧನಗಳನ್ನು ಬಳಸದಿರುವುದು, ಕೇವಲ ಲಿಪ್ ಸ್ಟಿಕ್, ತ್ವಚೆ ಸ್ವಚ್ಛಗೊಳಿಸುವ ಕ್ಲೀನ್ಸರ್ ಮತ್ತು ಆರ್ದ್ರತೆ ನೀಡುವ ಮಾಯಿಶ್ಚರೈಸರ್ ಇವಿಷ್ಟೇ ಅವರ ಅಲಂಕಾರ ಪೆಟ್ಟಿಗೆಯ ಸಾಮಾಗ್ರಿಗಳು. ಉಳಿದಂತೆ ಧ್ಯಾನ ಆಚರಿಸುವುದು ಅವರ ಆರೋಗ್ಯದ ಇನ್ನೊಂದು ಗುಟ್ಟಾಗಿದೆ.

English summary

Bollywood celebs who are ageing gracefully

While the rest of us are looking at ways to hide that wrinkle and conceal that fine line, there are some who do not really need to worry about these things as they are ageing gracefully. Not just that, even now they look much younger than their age all thanks to their healthy lifestyle. We reveal how these stars age so well.
X
Desktop Bottom Promotion