For Quick Alerts
ALLOW NOTIFICATIONS  
For Daily Alerts

ಮೋಡಿ ಮಾಡಿದ ರಾಹುಲ್ ಮಿಶ್ರಾರವರ ಟ್ರೀ ಆಫ್ ಲೈಫ್

By Super
|

ಅಮೆಜಾನ್ ಇಂಡಿಯಾ ಕೌಚರ್ ವೀಕ್ 2015 ಎರಡನೇಯ ದಿನವಾದ ಇಂದು ರಾಹುಲ್ ಮಿಶ್ರಾರವರು ಮೊಟ್ಟ ಮೊದಲ ಬಾರಿಗೆ ಇಂಡಿಯನ್ ರ‍್ಯಾಂಪ್ ಮೇಲೆ ತಮ್ಮ "ಟ್ರೀ ಆಫ್ ಲೈಫ್" ಎಂಬ ಹೆಮ್ಮೆಯ ಶೋವನ್ನು ಪ್ರಾಯೋಜಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಷ್ಟೇ ಅಲ್ಲದೆ ಇವರು ಪ್ರಸ್ತುತ ಪಡಿಸಿದ ಬಣ್ಣಗಳು ವರ್ಣಾತೀತ. ಹೊಂಬಣ್ಣ ಮತ್ತು ಕಪ್ಪು, ಬಿಳಿ ಮತ್ತು ಹೊಂಬಣ್ಣ, ಎಂಬ ವಿಭಿನ್ನ ಬಣ್ಣ ಮತ್ತು ಇನ್ನಿತರ ರಂಗುಗಳನ್ನು ತಮ್ಮ ಟ್ರೀ ಆಫ್ ಲೈಫ್‌ನಲ್ಲಿ ಬಳಸಿಕೊಂಡಿದ್ದರು.

ಈ ಟ್ರೀ ಆಫ್ ಲೈಫ್ ಎಂಬ ಸಂಗ್ರಹವು ತನ್ನದೇ ಆದ ಒಂದು ಅದ್ಭುತ ಸಂಗ್ರಹ. ವಿವಿಧ ಕೆಲಸಗಳನ್ನು ಮಾಡುವ ಆಧುನಿಕ ಹೆಣ್ಣು ಮಕ್ಕಳಿಂದ ಇದು ಸ್ಫೂರ್ತಿಯನ್ನು ಪಡೆದು ತಯಾರಾಗಿದ್ದು, ದೃಢತೆ ಮತ್ತು ಸೂಕ್ಷತೆಯನ್ನು ಒಳಗೊಂಡಿತ್ತು. ಗೌರವ್ ಗುಪ್ತಾರವರ ಕೈಚಳಕಕ್ಕೆ ನೋಡುಗರು ಕ್ಲೀನ್ ಬೋಲ್ಡ್!

ಝಗಮಗ ಎಂದು ಹೊಳೆಯುವ ಎಐಸಿಡಬ್ಲ್ಯೂ 2015 ರ‍್ಯಾಂಪ್ ಮೇಲೆ ರಾಹುಲ್ ಮಿಶ್ರಾರವರು ನವ ವಧುಗಳಿಗಾಗಿ ತಮ್ಮ ಆರ್ನೆಟ್ ಜಾಕೆಟ್‌ಗಳು, ಲೆಹೆಂಗಾ ವಿನ್ಯಾಸಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಸೂಕ್ಷ್ಮವಾದ ಕೇಪ್‌ಗಳು ಮತ್ತು ಹೊಸ "ಐಟಿ" ಸೀರೆಗಳು ಸಹ ಈ ಸಂಗ್ರಹದಲ್ಲಿ ಇದ್ದದ್ದು ವಿಶೇಷ. ಬನ್ನಿ ಅಮೆಜಾನ್ ಇಂಡಿಯಾ ಕೌಚರ್ ವೀಕ್ 2015ನ ಎರಡನೆ ದಿನದ ವಿಶೇಷಗಳು ಏನಿದ್ದವು ಎಂದು ತಿಳಿದುಕೊಳ್ಳೋಣ...

ಚಾಕೋಲೇಟ್ ಬ್ರೌನ್ ಮತ್ತು ಗೋಲ್ಡ್

ಚಾಕೋಲೇಟ್ ಬ್ರೌನ್ ಮತ್ತು ಗೋಲ್ಡ್

ಎಐಸಿಡಬ್ಲ್ಯೂ 2015 ರ‍್ಯಾಂಪ್ ಮೇಲೆ ಎರಡನೆ ದಿನ ರೇಷ್ಮೇಯ ಅದ್ಭುತ ಲೋಕ ಅನಾವರಣಗೊಂಡಿತ್ತು. ಬನಾರಸಿ ಗೋಲ್ಡ್ ಮತ್ತು ಚಾಕೋಲೆಟ್ ಬ್ರೌನ್‌ನ ಅತ್ಯುತಮ ಮಿಶ್ರಣವು ನೋಡುಗರನ್ನು ಮಂತ್ರ ಮುಗ್ಧಗೊಳಿಸಿತ್ತು.

ಲಾಂಗ್ ಜಾಕೆಟ್‌ಗಳು ಮತ್ತು ಇತ್ಯಾದಿ

ಲಾಂಗ್ ಜಾಕೆಟ್‌ಗಳು ಮತ್ತು ಇತ್ಯಾದಿ

ಈ ಬಗೆಯ ಉಡುಪು ಸರಳವಾಗಿದ್ದಷ್ಟು ಅತ್ಯಂತ ಸುಂದರವಾಗಿ ಕಾಣುತ್ತಿತ್ತು. ಮುಕ್ತವಾಗಿ ಹಾರಾಡುತ್ತಿದ್ದ ಕ್ರಿಮ್ಸನ್ ಜಾಕೆಟ್ ರೇಷ್ಮೆಯ ಉಡುಗೆಗೆ ತನ್ನದೇ ಆದ ಮೆರಗನ್ನು ನೀಡಿತ್ತು.

ಬ್ರೋಕೆಡ್ ಸ್ಕರ್ಟ್‌ಗಳು ಮತ್ತು ಇತ್ಯಾದಿ

ಬ್ರೋಕೆಡ್ ಸ್ಕರ್ಟ್‌ಗಳು ಮತ್ತು ಇತ್ಯಾದಿ

ಬೀಗೆ ಎಂಬ ವಿಶಿಷ್ಟ ಬಣ್ಣ ಮತ್ತು ಬಿಳಿಯ ಅಪರೂಪದ ಮಿಶ್ರಣವು ನೋಡಲು ಅತ್ಯಂತ ಸುಂದರವಾಗಿತ್ತು. ಸರಳತೆಯಲ್ಲೂ ಇದರ ಸೌಂದರ್ಯ ಎದ್ದು ಕಾಣುತ್ತಿತ್ತು. ಮೊಣಕಾಲಷ್ಟು ಉದ್ದಕ್ಕಿದ್ದ ಇದರ ಸ್ಕರ್ಟ್ ತನ್ನ ಅಧಿಕ ಎಂಬ್ರಾಯಿಡರಿಯಿಂದ ಲಾಂಗ್ ಸ್ಲೀವ್ ಇದ್ದ ಐವರಿ ಬ್ರೋಕೆಡ್ ಜಾಕೆಟ್‌ನೊಂದಿಗೆ ಚೆನ್ನಾಗಿ ಹೊಂದಾಣಿಕೆಯಾಗಿತ್ತು.

ಪ್ರಿನ್ಸೆಸ್ ಗೌನ್‌ಗಳು

ಪ್ರಿನ್ಸೆಸ್ ಗೌನ್‌ಗಳು

ಈ ಪ್ರಿನ್ಸೆಸ್ ಗೌನ್ ನೋಡಲು ಉದ್ದವಾಗಿ ಮತ್ತು ಸುಂದರವಾಗಿ ಇದ್ದವು. ಇದು ನಿಜಕ್ಕೂ ಸೆಲೆಬ್ರಿಟಿಗಳ ಮೊದಲ ಆಯ್ಕೆಯಾಗಿರುತ್ತದೆ. ಇದನ್ನು ಅತಿ ಶೀಘ್ರದಲ್ಲಿ ರೆಡ್ ಕಾರ್ಪೆಟ್ ಮೇಲೆ ನೋಡುತ್ತೇವೆ ಎಂದು ಭಾವಿಸಿದ್ದೇವೆ.

ಹೊಂಬಣ್ಣದಲ್ಲಿ ಬೂದು ಬಣ್ಣ

ಹೊಂಬಣ್ಣದಲ್ಲಿ ಬೂದು ಬಣ್ಣ

ಎಐಸಿಡಬ್ಲ್ಯೂ 2015 ರ‍್ಯಾಂಪ್ ಮೇಲೆ ಈ ಮಣ್ಣಿನ ಬಣ್ಣಗಳು ನೋಡುಗರನ್ನು ರೋಮಾಂಚನಗೊಳಿಸಿದವು. ಈ ಮಾಡೆಲ್ ಬಟನ್‌ಗಳಿರುವ ಹೊಂಬಣ್ಣದ ಅತ್ಯಧಿಕ ಡಿಟೇಲಿಂಗ್ ಇರುವ ಉಡುಗೆಯನ್ನು ಧರಿಸಿದ್ದಳು. ನೋಡುಗರಿಗೆ ಈಕೆ ಚಿನ್ನದ ರೇಷ್ಮೆಯ ಉಡುಗೆಯನ್ನು ಧರಿಸಿದ್ದಳೋ ಎಂಬಂತೆ ಭಾಸವಾಗುತ್ತಿತ್ತು.

English summary

Amazon India Couture Week 2015: Rahul Mishra's Tree Of Life

The stunning colours presented by Rahul Mishra at AICW 2015 are impeccable as it has the taste of gold and black, white and gold, beige and a few other pastels. Rahul Mishra's Tree Of Life collection is one of a kind and it's only because it draws inspiration from the multitasking modern woman. It absorbs the strength and fragility.
X
Desktop Bottom Promotion