For Quick Alerts
ALLOW NOTIFICATIONS  
For Daily Alerts

ಪ್ರಬಲ ನಾಯಕರಾಗಲು ಇರುವ 10 ಪ್ರಮುಖ ವಿಧಾನಗಳು

|

ನಾಯಕತ್ವ ಗುಣ ಹುಟ್ಟಿನಿಂದ ಬರುವಂಥದ್ದಲ್ಲ. ತಂಡವನ್ನು ನಿಭಾಯಿಸಿಕೊಂಡು ಹೋಗುವ ಮತ್ತು ಅವರಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡುವ ಛಾತಿ ನಿಮ್ಮಲ್ಲಿದೆ ಎಂದಾದಲ್ಲಿ ನಾಯಕತ್ವ ಗುಣ ಎದ್ದುಕಾಣುತ್ತದೆ. ಉನ್ನತ ಹುದ್ದೆಯಲ್ಲಿ ನೀವಿರಬಹುದು ಅಥವಾ ತಂಡದ ನಾಯಕನಾಗಿ ಕಚೇರಿಯಲ್ಲಿ ನೀವು ಕಾರ್ಯನಿರ್ವಹಿಸುತ್ತಿರಬಹುದು ನಿಮ್ಮ ತಂಡವನ್ನು ನೀವು ಯಾವ ರೀತಿಯಲ್ಲಿ ಕೊಂಡೊಯ್ಯುತ್ತೀರಿ ಎಂಬುದನ್ನು ಆಧರಿಸಿ ನಿಮ್ಮಲ್ಲಿ ಉತ್ತಮ ನಾಯಕತ್ವ ಗುಣ ಹುಟ್ಟಿಕೊಳ್ಳುತ್ತದೆ. ಸಂದರ್ಶನದಲ್ಲಿ ಯಶಸ್ಸನ್ನು ಕಾಣಲು ಏಕೆ ವಿಫಲರಾಗುತ್ತಾರೆ?

ಈ ಲೇಖನದಲ್ಲಿ, ಓರ್ವ ಒಳ್ಳೆಯ ನಾಯಕನಾಗುವ ದಿಶೆಯಲ್ಲಿ ಕೊ೦ಡೊಯ್ಯುವ ನಿರ್ದಿಷ್ಟವಾದ ಮಾರ್ಗಗಳತ್ತ ಗಮನ ಹರಿಸುವುದರ ಮೂಲಕ, ಈ ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ಕ೦ಡುಕೊಳ್ಳಲಿದ್ದೇವೆ. ಓರ್ವ ಒಳ್ಳೆಯ ನಾಯಕನಾಗುವ ದಿಕ್ಕಿನಲ್ಲಿ ಕೊ೦ಡೊಯ್ಯುವ ಈ ಮಾರ್ಗಗಳು ಕಠಿಣವಾಗಿದ್ದು, ಇ೦ತಹ ಪ್ರಯತ್ನದಲ್ಲಿರುವ ವ್ಯಕ್ತಿಯೋರ್ವನು ತನ್ನೊಳಗೆ ತಾನೇ ಒಳಹೊಕ್ಕು ಉತ್ತಮ ನಾಯಕತ್ವಕ್ಕಿರಬೇಕಾದ ಗುಣವಿಶೇಷಗಳನ್ನು ಹೋರಾಟದ ಮೂಲಕ ಕ೦ಡುಕೊಳ್ಳಬೇಕಾಗುತ್ತದೆ.

ಕಾರ್ಯಕ್ಷೇತ್ರದಲ್ಲಿ ಆದೇಶವನ್ನು ಅಥವಾ ಆಜ್ಞೆಯನ್ನು ನೀಡುವ ಅಧಿಕಾರಸ್ಥಾನವಾಗಲೀ, ಅಥವಾ ಸರಕಾರದಲ್ಲಿ ಅತ್ಯುನ್ನತ ಹುದ್ದೆಯನ್ನು ಹೊ೦ದಿರುವುದರಿ೦ದಾಗಲೀ ವ್ಯಕ್ತಿಯೋರ್ವನು ಉತ್ತಮ ನಾಯಕನೆ೦ದೆಸಿಕೊಳ್ಳುವುದಕ್ಕೆ ಖ೦ಡಿತವಾಗಿಯೂ ಪರಿಪೂರ್ಣವಾದ ಮಾನದ೦ಡಗಳಲ್ಲ. ನಿಮ್ಮ ಸ್ವಸಾಮರ್ಥ್ಯದಿ೦ದಲೇ ಅ೦ತಹ ಉನ್ನತ ಸ್ಥಾನಮಾನಗಳಿಗೆ ನೀವು ಏರಿರಬಹುದಾಗಿದ್ದರೂ ಸಹ, ಓರ್ವ ಒಳ್ಳೆಯ ನಾಯಕನೆ೦ದು ಪರಿಗಣಿಸಲ್ಪಡುವುದಕ್ಕೆ ಇನ್ನೂ ಕೆಲವು ನಿರ್ಧಿಷ್ಟವಾದ ಅರ್ಹತೆಗಳಿರಬೇಕಾಗಿದ್ದು, ಅವುಗಳನ್ನು ವ್ಯಕ್ತಿಯೋರ್ವನು ಪಡೆದಿರಬೇಕಾಗುತ್ತದೆ.

ಒಳ್ಳೆಯ ನಾಯಕನಾಗಲು ನೆರವಾಗಬಲ್ಲ ಈ ಮಾರ್ಗಗಳತ್ತ ಈಗ ನಾವು ನೋಡೋಣ. ಓರ್ವ ಒಳ್ಳೆಯ ನಾಯಕನೆ೦ದೆನಿಸಿಕೊಳ್ಳಲು ಸಹಕರಿಸುವ ಹತ್ತು ಮಾರ್ಗಗಳ ಕುರಿತು ಇಲ್ಲಿ ಉಲ್ಲೇಖಿಸಲಾಗಿದೆ. ಒ೦ದು ವೇಳೆ, ನೀವೀಗಾಗಲೇ ನಾಯಕನ ಸ್ಥಾನವನ್ನು ಅಲ೦ಕರಿಸಿರುವುದೇ ಆಗಿದ್ದರೆ, ಮತ್ತಷ್ಟು ಉತ್ತಮ ನಾಯಕನಾಗಿ ಹೊರಹೊಮ್ಮಲು ಪೂರಕವಾಗಿರುವ ಮಾರ್ಗಗಳೆ೦ಬುದಾಗಿ ಇಲ್ಲಿ ನೀಡಲಾಗಿರುವ ಸಲಹೆಗಳನ್ನು ನೀವು ಪರಿಗಣಿಸಬಹುದು. ಏಕೆ೦ದರೆ, ನಾಯಕತ್ವದ ವಿಚಾರದಲ್ಲಿ ಮತ್ತಷ್ಟು ಉತ್ತಮಗೊಳ್ಳಲು ಯಾವಾಗಲೂ ಅವಕಾಶವಿರುತ್ತದೆ ಅರ್ಥಾತ್ ಸುಧಾರಣೆ ಎ೦ಬುದು ನಾಯಕತ್ವದ ವಿಚಾರದಲ್ಲ೦ತೂ ಒ೦ದು ನಿಲ್ಲದ ಪಯಣವಾಗಿದೆ.

ವಿಫಲತೆಯು ಕಲಿಸುವ 10 ಮಹತ್ತರ ಜೀವನ ಪಾಠಗಳು

ಅನುಪಮವಾದ ನಾಯಕತ್ವ ಶೈಲಿಯನ್ನು ಬೆಳೆಸಿಕೊಳ್ಳಿರಿ

ಅನುಪಮವಾದ ನಾಯಕತ್ವ ಶೈಲಿಯನ್ನು ಬೆಳೆಸಿಕೊಳ್ಳಿರಿ

ಒಳ್ಳೆಯ ನಾಯಕನೆ೦ದೆಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗಗಳಲ್ಲೊ೦ದು ಯಾವುದೆ೦ದರೆ, ನೀವು ನಿಮ್ಮದೇ ಆದ ಅದ್ವಿತೀಯವಾದ ನಾಯಕತ್ವ ಗುಣ ಅಥವಾ ಶೈಲಿಯನ್ನು ಬೆಳೆಸಿಕೊಳ್ಳುವುದು. ನಿಮ್ಮ ಶೈಲಿಯನ್ನು ಸ೦ಕೇತಿಸುವ, ಅದರದ್ದೇ ಆದ೦ತಹ ವಿಶಿಷ್ಟವಾದ ಲಕ್ಷಣಗಳ ಕುರಿತು ಯೋಚಿಸಿರಿ ಹಾಗೂ ಅ೦ತಹವುಗಳನ್ನು ಅಳವಡಿಸಿಕೊಳ್ಳಿರಿ. ನಾಯಕತ್ವದ ಸಾಮ್ರಾಜ್ಯದಲ್ಲಿ ಮತ್ತೋರ್ವನ ಶೈಲಿಯನ್ನು ಯಥಾವತ್ತಾಗಿ ನಕಲು ಮಾಡುವುದೇ ಆಗಲೀ ಅಥವಾ ಅನುಸರಿಸುವುದೇ ಆಗಲೀ ಎ೦ದಿಗೂ ಸಲ್ಲದು.

ಸೃಜನಶೀಲತೆಯನ್ನು ಪ್ರೋತ್ಸಾಹಿಸಿರಿ

ಸೃಜನಶೀಲತೆಯನ್ನು ಪ್ರೋತ್ಸಾಹಿಸಿರಿ

ನಿಮ್ಮ ಅನುಯಾಯಿಗಳಲ್ಲಿ ಅಥವಾ ನಿಮ್ಮ ಕೈಕೆಳಗೆ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಸೃಜನಶೀಲತೆಯನ್ನು ಹುಟ್ಟುಹಾಕಿರುವುದನ್ನು ಖಚಿತಪಡಿಸಿಕೊಳ್ಳಿರಿ. ಓರ್ವ ನಿಜವಾದ ನಾಯಕನು ಯಾವಾಗಲೂ ಹೊಸ ಯೋಜನೆಗಳನ್ನು ಅಥವಾ ವಿಚಾರಗಳನ್ನು, ಒ೦ದೊಮ್ಮೆ ಅವು ತನ್ನ ಅನುಯಾಯಿಗಳಿ೦ದಲೇ ಅಥವಾ ತನ್ನ ಕೈಕೆಳಗಿನ ಉದ್ಯೋಗಿಗಳಿ೦ದಲೇ ಸೂಚಿಸಲ್ಪಟ್ಟಿದ್ದರೂ ಸರಿಯೇ, ಪ್ರೋತ್ಸಾಹಿಸಲು ಹಿ೦ಜರಿಯುವುದಿಲ್ಲ ಬದಲಿಗೆ ಅವುಗಳನ್ನು ಅಳವಡಿಸಿಕೊಳ್ಳಲು ಬೆ೦ಬಲಿಸುತ್ತಾನೆ.

ಅನುಯಾಯಿಗಳ ಸದ್ಗುಣಗಳನ್ನು ನೋಡಿ ಕಲಿಯುವುದು

ಅನುಯಾಯಿಗಳ ಸದ್ಗುಣಗಳನ್ನು ನೋಡಿ ಕಲಿಯುವುದು

ಓರ್ವ ಉತ್ತಮ ನಾಯಕನೆ೦ದೆಸಿಕೊಳ್ಳುವವನು ಎ೦ದಿಗೂ ಕೂಡ ಕಲಿತುಕೊಳ್ಳಲು ಹಿ೦ದೇಟು ಹಾಕಲಾರನು. ಆತನ ಅಥವಾ ಆಕೆಯ ಜೀವನದಲ್ಲಿ ಒ೦ದು ಒಳ್ಳೆಯ ಬದಲಾವಣೆಯನ್ನು೦ಟು ಮಾಡಬಲ್ಲ ವಿಚಾರವು ಎಷ್ಟೇ ಸಣ್ಣದಾಗಿರಲಿ, ಅದನ್ನು ಅಳವಡಿಸಿಕೊಳ್ಳಲು ಆತನು ಅಥವಾ ಆಕೆಯು ಹಿ೦ಜರಿಯುವುದಿಲ್ಲ.

ಉದ್ಯೋಗಿಗಳನ್ನು ಅವರಷ್ಟಕ್ಕೆ ಕೆಲಸ ಮಾಡಲು ಅವಕಾಶ ನೀಡಿ

ಉದ್ಯೋಗಿಗಳನ್ನು ಅವರಷ್ಟಕ್ಕೆ ಕೆಲಸ ಮಾಡಲು ಅವಕಾಶ ನೀಡಿ

ತನ್ನ ಕೈ ಕೆಳಗೆ ಕೆಲಸ ಮಾಡುವ ಉದ್ಯೋಗಿಗಳ ಕೆಲಸಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪವನ್ನು ಮಾಡುವುದು ಅಥವಾ ಮೂಗುತೂರಿಸುವುದು ಓರ್ವ ಒಳ್ಳೆಯ ನಾಯಕನ ಲಕ್ಷಣವಲ್ಲ.

ಆದೇಶವನ್ನು ನೀಡುವವರಾಗಬೇಡಿರಿ (Team Player)

ಆದೇಶವನ್ನು ನೀಡುವವರಾಗಬೇಡಿರಿ (Team Player)

ನಾಯಕನಾದವನು ಅನೇಕ ಬಾರಿ ಆದೇಶಿಸಬೇಕಾಗುವ೦ತಹ ಸ೦ದರ್ಭಗಳು ಒದಗಿ ಬ೦ದರೂ ಸಹ, ಓರ್ವ ನಿಜವಾದ ನಾಯಕನು ಆದೇಶವನ್ನು ನೀಡುವುದರ ಬದಲು, ತನ್ನ ಕೈಕೆಳಗಿರುವ ಉದ್ಯೋಗಿಗಳಿಗೆ ಕೆಲಸ ಮಾಡಲು ಅಗತ್ಯವಾಗಿರುವ ಸ್ಫೂರ್ತಿಯನ್ನು ತು೦ಬುತ್ತಾನೆ. ಅ೦ತಹ ನಾಯಕನು ತನ್ನ ಕೈಕೆಳಗೆ ಕೆಲಸಮಾಡುವ ಉದ್ಯೋಗಿಗಳಿಗೆ ಆದೇಶ ನೀಡುವ ಪ್ರವೃತ್ತಿಯಿ೦ದ ದೂರವುಳಿದು, ಅದಕ್ಕೆ ಬದಲಾಗಿ ಅವರವರಿಗೆ ಸ೦ಬ೦ಧಿಸಿದ ಕೆಲಸಗಳಲ್ಲಿ ಅವರು ನಿಷ್ಣಾತರಾಗುವ೦ತೆ ಪ್ರೋತ್ಸಾಹಿಸುತ್ತಾನೆ.

ಸಹೋದ್ಯೋಗಿಗಳ ವೈಯುಕ್ತಿಕ ಸಮಸ್ಯೆಗಳ ಕುರಿತು ಕಾಳಜಿವಹಿಸುವುದು

ಸಹೋದ್ಯೋಗಿಗಳ ವೈಯುಕ್ತಿಕ ಸಮಸ್ಯೆಗಳ ಕುರಿತು ಕಾಳಜಿವಹಿಸುವುದು

ಓರ್ವ ಉತ್ತಮ ನಾಯಕನ ಅತ್ಯುತ್ತಮ ಗುಣಲಕ್ಷಣಗಳಲ್ಲೊ೦ದು ಯಾವುದೆ೦ದರೆ, ಆತನು ಅಥವಾ ಆಕೆಯು ಮತ್ತಷ್ಟು ಮು೦ದೆ ಸಾಗಿ ತನ್ನ ಕೈ ಕೆಳಗೆ ಕೆಲಸ ಮಾಡುವ ಸಹೋದ್ಯೋಗಿಯ ವೈಯುಕ್ತಿಕ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ತನ್ನ ಕೈಲಾದಷ್ಟೂ ಸಹಕರಿಸುವುದು. ಹಾಗ೦ತ, ಸಹೋದ್ಯೋಗಿಯ ವೈಯುಕ್ತಿಕ ವಿಚಾರದಲ್ಲಿ ಅತಿಯಾಗಿ ಪ್ರವೇಶಿಸದೇ, ಅವರಿಗೆ ಸಾಧ್ಯವಾದಷ್ಟು ಸಹಕರಿಸಲು ಪ್ರಯತ್ನಿಸುವುದು.

ಸಹೋದ್ಯೋಗಿಗಳ ಹಿತಾಸಕ್ತಿಗಳನ್ನು ಕಾಪಾಡುವುದು

ಸಹೋದ್ಯೋಗಿಗಳ ಹಿತಾಸಕ್ತಿಗಳನ್ನು ಕಾಪಾಡುವುದು

ಯಾವಾಗಲೂ ನಿಮ್ಮ ಕೈಕೆಳಗೆ ಕೆಲಸ ಮಾಡುವ ಉದ್ಯೋಗಿಗಳ ಹಿತಾಸಕ್ತಿಯನ್ನು ಕಾಪಾಡುವ ಕುರಿತು ಗಮನವಿರಲಿ. ಅವರ ಹಿತಾಸಕ್ತಿಗಳ ವಿಚಾರದಲ್ಲ೦ತೂ ಎ೦ದಿಗೂ ರಾಜಿಮಾಡಿಕೊಳ್ಳಬೇಡಿರಿ. ಅ೦ತಹ ಮನೋಭಾವವನ್ನು ನೀವು ಹೊ೦ದಿದಾಗ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ಮತ್ತಷ್ಟು ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮನಸ್ಸು ಮಾಡುತ್ತಾರೆ.

ಒಳ್ಳೆಯ ಕೆಲಸವನ್ನು ಮುಕ್ತಕ೦ಠದಿ೦ದ ಶ್ಲಾಘಿಸಿರಿ

ಒಳ್ಳೆಯ ಕೆಲಸವನ್ನು ಮುಕ್ತಕ೦ಠದಿ೦ದ ಶ್ಲಾಘಿಸಿರಿ

ನಾಯಕತ್ವದ ಅತ್ಯ೦ತ ಅಗತ್ಯವಾದ ಹಾಗೂ ಮಹತ್ತರವಾದ ಗುಣವಿಶೇಷಗಳ ಪೈಕಿ ಇದೊ೦ದಾಗಿದ್ದು, ನಿಜಕ್ಕೂ ಸಹ ಈ ಗುಣಲಕ್ಷಣವು ಆಧುನಿಕ ಪ್ರಪ೦ಚದಲ್ಲಿ ದುರ್ಲಭವಾಗಿದೆ. ನಿಜಕ್ಕೂ ನೀವು ಓರ್ವ ಒಳ್ಳೆಯ ನಾಯಕನಾಗಬಯಸುವಿರಾದರೆ, ನಿಮ್ಮ ಕೈ ಕೆಳಗಿನ ಉದ್ಯೋಗಿಯು ಮಾಡಿರಬಹುದಾದ ಸುತ್ಯರ್ಹ ಕೆಲಸವನ್ನು ನೀವು ಮುಕ್ತಕ೦ಠದಿ೦ದ ಶ್ಲಾಘಿಸಬೇಕು. ಏಕೆ೦ದರೆ, ಉದ್ಯೋಗಿಗಳ ಕಾರ್ಯನಿರ್ವಹಣೆಯಲ್ಲಿನ ಸುಧಾರಣೆಯು ಸ್ವೀಕೃತವಾಗದಿದ್ದರೆ, ಅವರು ತಮ್ಮ ಕೆಲಸಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಹಾಗೂ ಅದರ ಪರಿಣಾಮವು ಉದ್ಯೋಗಿಗಳ ದೋಷಪೂರಿತ ಕಾರ್ಯವೈಖರಿಯಲ್ಲಿ ಪ್ರತಿಫಲಿತಗೊಳ್ಳುತ್ತದೆ.

ಸಕಾರಾತ್ಮಕವಾದ ಚಿ೦ತನೆ

ಸಕಾರಾತ್ಮಕವಾದ ಚಿ೦ತನೆ

ನೀವು ಸಕಾರಾತ್ಮಕವಾದ ಧಾಟಿಯಲ್ಲಿ ಯೋಚಿಸುವವರಲ್ಲವಾದರೆ, ನೀವು ನಾಯಕರಾಗಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಆದ್ದರಿ೦ದ, ನೀವು ಉತ್ತಮ ನಾಯಕನೆ೦ದೆನಿಸಿಕೊಳ್ಳಬೇಕಾದರೆ, ಯಾವಾಗಲೂ ಧನಾತ್ಮಕವಾದ ಚಿ೦ತನೆಗಳನ್ನು ಬೆಳೆಸಿಕೊಳ್ಳಿರಿ ಹಾಗೂ ನಿಮ್ಮ ಕೈಕೆಳಗೆ ಕಾರ್ಯಾಚರಿಸುತ್ತಿರುವ ಉದ್ಯೋಗಿಗಳ ಸಾಮರ್ಥ್ಯದ ಕುರಿತು ನಿಮಗೆ ಯಾವಾಗಲೂ ನ೦ಬಿಕೆ ಇರಲಿ

ತ೦ಡದಲ್ಲೊಬ್ಬರಾಗಿ ಆಡುವ ಕ್ರೀಡಾಳುವಾಗಿರಿ

ತ೦ಡದಲ್ಲೊಬ್ಬರಾಗಿ ಆಡುವ ಕ್ರೀಡಾಳುವಾಗಿರಿ

ಇದು ನಾಯಕತ್ವ ಗುಣದ ಅತ್ಯ೦ತ ಮಹತ್ವದ ಲಕ್ಷಣ. ನಿಮ್ಮ ಕೈಕೆಳಗೆ ಕೆಲಸ ಮಾಡುವ ಉದ್ಯೋಗಿಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಓರ್ವ ಅದ್ವಿತೀಯ ನಾಯಕನ ಪ್ರಮುಖ ಆಯಾಮವಾಗಿದೆ.

English summary

Top 10 Ways To Become A Powerful Leader

Leadership- a word that sends ripples across people. Being a leader is definitely no joke- Let us now look at these ways to become a good leader. Here are 10 ways to become a good leader. If you are in a position of leadership, these points can be viewed as ways to become a better leader.
X
Desktop Bottom Promotion