For Quick Alerts
ALLOW NOTIFICATIONS  
For Daily Alerts

ಭಾರತೀಯರು ಆಲೂಗಡ್ಡೆ ಪ್ರಿಯರು ಹೇಗೆ ಗೊತ್ತೇ?

|

ನಿಮ್ಮ ಮೆಚ್ಚಿನ ತರಕಾರಿ ಯಾವುದು? ಎಂದು ಯಾರಲ್ಲಾದರೂ ಕೇಳಿದರೆ ಅವರ ಪಟ್ಟಿಯಲ್ಲಿ ಸಾಮಾನ್ಯವಾಗಿ ಇರುವ ತರಕಾರಿ ಆಲೂಗಡ್ಡೆಯಾಗಿದೆ. ಹೌದು ಎಲ್ಲರೂ ಇಷ್ಟಪಡುವ ಮೆಚ್ಚಿನ ತರಕಾರಿ ಆಲೂಗಡ್ಡೆಯಾಗಿದೆ. ನಿಮ್ಮ ಯಾವುದೇ ಖಾದ್ಯದಲ್ಲಿ ಆಲೂವನ್ನು ಸೇರಿಸುವುದು ಅದರ ರುಚಿಯನ್ನು ಹೆಚ್ಚಿಸುತ್ತದೆ. ನಿಮಗೂ ಸ್ವಾದದ ಅನುಭೂತಿಯನ್ನು ದುಪ್ಪಟ್ಟುಗೊಳಿಸುತ್ತದೆ.

ಭಾರತೀಯರಿಗಂತೂ ಆಲೂಗಡ್ಡೆ ಇಲ್ಲದೆ ಯಾವುದೇ ಖಾದ್ಯವನ್ನು ತಯಾರಿಸಲಾಗುವುದಿಲ್ಲ ಎಂದೇ ಹೇಳಬಹುದು ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಆಲೂಗಡ್ಡೆ ಮಾಡುವ ಮೋಡಿ ಮಾತ್ರ ಅಸದಳವಾದುದು. ಆಲೂಗಡ್ಡೆ ಉತ್ತರ ಮತ್ತು ದಕ್ಷಿಣ ಭಾರತೀಯರಿಗೂ ಇಷ್ಟವಾಗುವಂತಹ ತರಕಾರಿಯಾಗಿದೆ. ಆಲೂಪೂರಿಯಿಂದ ಹಿಡಿದು ಆಲೂಚಾಟ್ ಹೀಗೆ ಪ್ರತಿಯೊಂದಕ್ಕೂ ಆಲೂಗಡ್ಡೆಯನ್ನು ಬಳಸುವುದು ಸಾಮಾನ್ಯವಾಗಿದೆ.

ಆಲೂವನ್ನು ನೀವು ಬೇಯಿಸಿಕೊಳ್ಳುವ ರೀತಿ ಹೇಗೆ ಇರಲಿ ಆದರೆ ಅದು ಪ್ರತಿಯೊಂದು ವಿಧದಲ್ಲೂ ನಿಮಗೆ ಸೂಕ್ತವಾಗಿರುತ್ತದೆ. ಅದನ್ನು ಬೇಯಿಸಿ ಇಲ್ಲವೇ ಹುರಿಯಿರಿ ಪ್ರತಿಯೊಂದು ವಿಧದಲ್ಲೂ ಇದು ಕೊಡುವ ರುಚಿ ಮಾತ್ರ ಬೇರೆ ಯಾವುದೇ ತರಕಾರಿಯಲ್ಲಿ ಇರುವುದಿಲ್ಲ. ಇಂದಿನ ಲೇಖನದಲ್ಲಿ ಆಲೂವನ್ನೇ ಹೊಗಳಿ ಹಾಡಿ ನಾವು ಭಾರತೀಯರಿಗೆ ಈ ತರಕಾರಿ ಏಕೆ ಪ್ರಿಯವಾದುದು ಎಂಬುದನ್ನು ತಿಳಿಸುತ್ತಿದ್ದೇವೆ. ಹಾಗಿದ್ದರೆ ಈ ತರಕಾರಿಯನ್ನು ಇಷ್ಟಪಡಲು ಇರುವ ಕಾರಣಗಳನ್ನು ತಿಳಿದುಕೊಳ್ಳಿ.

ತೂಕ ಹೆಚ್ಚಿಸಿಕೊಳ್ಳಬಹುದು

ತೂಕ ಹೆಚ್ಚಿಸಿಕೊಳ್ಳಬಹುದು

ತೂಕ ಹೆಚ್ಚಿಸಿಕೊಳ್ಳಬಹುದು ಆಲೂಗಡ್ಡೆಯಲ್ಲಿ ಹೆಚ್ಚಾಗಿ ಕಾರ್ಬೋಹೈಡ್ರೇಡ್ ಹಾಗೂ ಪ್ರೋಟೀನ್ ಅಂಶ ಹೆಚ್ಚಾಗಿ ಇರುತ್ತದೆ. ಸಣ್ಣಗಿರುವವರು ದಪ್ಪ ಆಗಬೇಕೆಂದು ಯೋಚಿಸುತ್ತಿದ್ದರೆ ಆಲೂಗಡ್ಡೆಯನ್ನು ಹೆಚ್ಚಾಗಿ ಸೇವಿಸಿ ದೇಹದ ತೂಕ ಹೆಚ್ಚಿಸಿಕೊಳ್ಳಿ.

ಗಾಯ ಹಾಗೂ ಸುಟ್ಟ ಗಾಯಗಳಿಗೆ ಉತ್ತಮ

ಗಾಯ ಹಾಗೂ ಸುಟ್ಟ ಗಾಯಗಳಿಗೆ ಉತ್ತಮ

ಸುಟ್ಟ ಗಾಯಗಳಿಗೆ ಆಲೂಗಡ್ಡೆಯ ರಸ ಒಳ್ಳೆ ಔಷಧಿ. ಚರ್ಮದ ಸಮಸ್ಯೆ, ತುರಿಕೆ, ಕಜ್ಜಿ ಮುಂತಾದ ಚರ್ಮ ರೋಗಕ್ಕೆ ಹೆಚ್ಚು ಸಹಾಯವಾಗಿದೆ. ಅಲ್ಸರ್,ಪ್ರೋಸ್ಟ್ರೇಟ್ ಕ್ಯಾನರ್, ಗರ್ಭಕೋಶ ಹಾಗೂ ಹೊಟ್ಟೆಯಲ್ಲಿನ ಗಡ್ಡೆಗಳಿಗೆ ಇದು ಉತ್ತಮ ಔಷಧಿಯಾಗಿದೆ.

ಹೃದಯದ ಸಮಸ್ಯೆ

ಹೃದಯದ ಸಮಸ್ಯೆ

ವಿಟಮಿನ್ಸ್, ಮಿನರಲ್ಸ್, ಕ್ಯಾಲ್ಸಿಯಂ ಅಲ್ಲದೆ ಆಲೂಗಡ್ಡೆಯಲ್ಲಿ ಕ್ಯಾರೋಟಿನಾಯಿಡ್ ಎಂಬ ಗುಣವನ್ನೂ ಹೊಂದಿದೆ. ಶರೀರದ ಒಳಭಾಗದಲ್ಲಿರುವ ಹೃದಯ ಹಾಗೂ ಇತರ ಅಂಗಗಳಿಗೆ ಇದು ಉಪಯೋಗಿಯಾಗಿದೆ.ಆದರೆ ಮತ್ತೆ ಆಲೂಗಡ್ಡೆ ಸೇವನೆಯಿಂದ ರಕ್ಯದಲ್ಲಿ ಗ್ಲೂಕೋಸ್ ಅಂಶ ಹೆಚ್ಚಳವಾಗುವುದರಿಂದ ಶರೀರದ ತೂಕ ಹೆಚ್ಚಾಗ ಬಹುದು ಹಾಗೂ ಸಕ್ಕರೆ ಕಾಯಿಲೆ ಹಾಗೂ ದಡೂತಿ ಶರೀರ ಇರುವವರಿಗೆ ಆಲೂಗಡ್ಡೆ ಸೇವನೆ ಒಳ್ಳೆಯದಲ್ಲ.

ಮೆದುಳಿನ ಕ್ರಿಯೆಯಲ್ಲಿ

ಮೆದುಳಿನ ಕ್ರಿಯೆಯಲ್ಲಿ

ಮೆದುಳು ಸರಿಯಾಗಿ ಕೆಲಸ ಮಾಡಲು ಅದು ಹೆಚ್ಚಾಗಿ ಗ್ಲೂಕೋಸ್ ಪ್ರಮಾಣ, ಆಮ್ಲಜನಕದ ಸರಬರಾಜು, ವಿಟಮಿನ್ ಬಿ ಕಾಂಪ್ಲೆಕ್ಸ್ ಹಾಗೂ ಹಾರ್ಮೋನ್ಸ್, ಅಮಿನೋ ಆಸಿಡ್, ಒಮೇಗಾ 3 ಪ್ಯಾಟಿ ಆಸಿಡ್ ಮುಂತಾದುವನ್ನು ಅವಲಂಬಿಸಿರುತ್ತದೆ. ಈ ಎಲ್ಲಾ ಅಂಶಗಳನ್ನು ಆಲೂಗಡ್ಡೆ ಹೊಂದಿದ್ದು ಅದನ್ನು ಮೆದುಳಿಗೆ ಅಗತ್ಯವಿದ್ದರೆ ಸರಬರಾಜು ಮಾಡುತ್ತದೆ.

ಆಲೂ ಚಾಟ್

ಆಲೂ ಚಾಟ್

ಆಲೂ ಚಾಟ್ ತಿನ್ನುವಾಗ ನಮಗುಂಟಾಗುವ ಆನಂದವನ್ನು ವರ್ಣಿಸಲೂ ಸಾಧ್ಯವಾಗದು. ಅದಕ್ಕೆ ಹಾಕುವ ಹದವಾದ ಮಸಾಲೆ, ಮಿಳಿತವಾಗಿರುವ ಉಪ್ಪು ಹುಳಿ ಖಾರ ಸ್ವರ್ಗಕ್ಕೆ ಮೂರೇ ಗೇಣು ಎಂಬ ಅನುಭೂತಿಯನ್ನು ನಮ್ಮಲ್ಲಿ ಉತ್ಪಾದಿಸುತ್ತದೆ.

ಬೇಯಿಸಲು ಸರಳ ಮತ್ತು ಸುಲಭ

ಬೇಯಿಸಲು ಸರಳ ಮತ್ತು ಸುಲಭ

ಆಲೂಗಡ್ಡೆ ರೆಸಿಪಿಯನ್ನು ಸರಳ ಮತ್ತು ಸುಲಭವಾಗಿ ತಯಾರಿಸಬಹುದಾಗಿದ್ದು ನಿಮ್ಮ ಬಾಯಿ ರುಚಿಯನ್ನು ಹೆಚ್ಚಿಸುತ್ತದೆ. ಬೇರೆ ತರಕಾರಿಗಳಿಗಿಂತೂ ಸುಲಭವಾಗಿ ಬೇಯುವ ಮತ್ತು ತಣಿದಿದ್ದರೂ ತನ್ನ ರುಚಿಯನ್ನು ನಷ್ಟಗೊಳಪಡಿಸದ ತರಕಾರಿಯಾಗಿದೆ ಆಲೂಗಡ್ಡೆ.

ವಯಸ್ಸಿನ ಹಂಗಿಲ್ಲ

ವಯಸ್ಸಿನ ಹಂಗಿಲ್ಲ

ನೀವು 5 ವರ್ಷದವರೇ ಆಗಿರಿ 50 ವರ್ಷದವರೇ ಆಗಿರಿ ಆಲೂಗಡ್ಡೆಯ ತಿಂಡಿಯೆಂದರೆ ಎಲ್ಲರಿಗೂ ಇಷ್ಡವೇ. ಬಾಯಿ ಚಪಲವನ್ನು ಹೆಚ್ಚಿಸುವ ಈ ತರಕಾರಿಯನ್ನು ಬಹುಬೇಗನೇ ಎಲ್ಲರೂ ಇಷ್ಟಪಡುತ್ತಾರೆ.

ಆಲೂ ಪರಾಟ

ಆಲೂ ಪರಾಟ

ಉತ್ತರ ಭಾರತೀಯರ ಮನೆಗಳಲ್ಲಿ ಆಲೂವಿನಿಂದ ತಯಾರಿಸಿದ ಪರೋಟಾ ಬೆಳಗ್ಗಿನ ಉಪಹಾರವಾಗಿರುತ್ತದೆ. ಹೆಚ್ಚಾಗಿ ಹೋಟೆಲ್‌ಗಳಲ್ಲಿ ಆಲೂ ಪರೋಟಾ ಎಲ್ಲರೂ ಇಷ್ಟಪಡುವಂತಹ ಖಾದ್ಯವಾಗಿದೆ. ಈ ಪರೋಟಾಗಳು ತಮ್ಮದೇ ವಿಶಿಷ್ಟ ರುಚಿಯನ್ನು ಹೊಂದಿದ್ದು ನಿಮ್ಮ ಬಾಯಿಯ ಚಪಲವನ್ನು ನಿವಾರಿಸಲು ಹೇಳಿ ಮಾಡಿಸಿದ್ದು.

English summary

Reasons Why Indians Are Obsessed With Potatoes

Which is your favourite vegetable? We are sure you wouldn't say, leafy greens! If you happen to take a walk through a veggie market in India, you will see it overflowing with people trying to find their favourite veggie - the potato! Here are some reasons why Indians are obsessed with potatoes. Take a look:
X
Desktop Bottom Promotion