For Quick Alerts
ALLOW NOTIFICATIONS  
For Daily Alerts

ಕಿಸ್ಸಿಂಗ್ ಬಗ್ಗೆ ಇರುವ ಕೆಲ ಇಂಟರೆಸ್ಟಿಂಗ್ ಅಂಶಗಳು

|

ನಿಮ್ಮ ಸುಂದರ ಬಾಂಧವ್ಯದಲ್ಲಿ, ಮೊದಲ ಚುಂಬನದ ಅನುಭವವನ್ನು ನೀವು ಹೊಂದಿದಾಗ, ಸುತ್ತಲೆಲ್ಲಾ ಸುಂದರ ಚಿಟ್ಟೆಗಳು ಹಾರಿದ ಅನುಭವ ನಿಮಗುಂಟಾಗುತ್ತದೆ. ಏನೋ ಒಂದು ರೋಮಾಂಚನ ಮೈ ಮನಸ್ಸನ್ನು ತುಂಬುತ್ತದೆ. ಈ ಕ್ಷಣ ಹೀಗೆಯೇ ಇರಲಿ ಎಂದು ಮನ ಅರೆಕ್ಷಣ ಆಲೋಚಿಸುತ್ತದೆ. ತುಟಿಗೆ ತುಟಿ ಬೆರೆತಾಗ ನೀವು ಈ ಲೋಕದಲ್ಲೇ ಇಲ್ಲದವರಂತಹ ಅನುಭವವನ್ನು ಹೊಂದುತ್ತೀರಿ.

ಸಂಬಂಧಗಳಲ್ಲಿ ಹಲವಾರು ಘಟ್ಟಗಳಿರುತ್ತವೆ. ಅದರಲ್ಲೂ ಗಂಡ- ಹೆಂಡತಿ, ಪ್ರೇಮಿಗಳ ನಡುವೆ ಬೆಸೆಯುವ ಸಂಬಂಧ ತುಂಬಾ ವಿಶೇಷವಾದದ್ದು ಮತ್ತು ಅನನ್ಯವಾದದ್ದು. ಮಾನಸಿಕ ಸಂಬಂಧದಿಂದ ಹಿಡಿದು ಪರಸ್ಪರ ದೈಹಿಕ ಒಪ್ಪಿಗೆಯವರೆಗೆ ಸಾಕಷ್ಟು ಹೊಂದಾಣಿಕೆಯನ್ನು ಹೊಂದಿರಬೇಕಾಗುತ್ತದೆ.

ಈ ಹೊಂದಾಣಿಕೆಯಿಂದಾಗಿ ಉಂಟಾಗುವ ಪ್ರಥಮ ಚುಂಬನ, ಪ್ರಥಮ ಮಿಲನ, ಇವೆಲ್ಲವೂ ಅತ್ಯಂತ ರೋಮಾಂಚನವಾದದ್ದು! ನಿಮ್ಮ ಸಂಗಾತಿಗೆ ನೀವು ಕಿಸ್ ಮಾಡುವಾಗ ಅಲ್ಲೇನೋ ವಿಶೇಷವಾದ ಆಕರ್ಷಣೆ ಉಂಟಾಗುವುದು ಸಹಜ ತಾನೆ? ಪರಸ್ಪರ 'ಚುಂಬನ' ಎನ್ನುವುದು ಸಂಬಂಧದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.

ನಿಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುವ ಒಂದು ಸುಂದರ ಭಾವನಾತ್ಮಕ ಮಾಧ್ಯಮವಾಗಿದೆ ಚುಂಬನ ಎಂಬುದನ್ನು ನೀವು ಅಂಗೀಕರಿಸುತ್ತೀರಾ? ನಿಮ್ಮ ದೇಹದ ಯಾವುದೇ ಭಾಗಕ್ಕೂ ಚುಂಬನವನ್ನು ನೀಡಬಹುದು ಅದೊಂದು ಜೋಡಿಗಳ ನಡುವಿನ ಸುಂದರ ಕ್ಷಣವಾಗಿದೆ.

ಕೆಲವರ ಪ್ರಕಾರ, ನೀವು ಡೇಡಿಂಗ್‌ನಲ್ಲಿರುವವರಾಗಿದ್ದರೆ ಚುಂಬನಕ್ಕೆ ಅಡಿ ಇಡುವ ಮುನ್ನ ಅದರ ಮಹತ್ವವನ್ನು ಅರಿತಿರುವುದು ಒಳ್ಳೆಯದು. ಕೆಲವೊಮ್ಮೆ ಚುಂಬನದ ಮೂಲಕ ವ್ಯಕ್ತಿ ಏನನ್ನು ಹೇಳಹೊರಟಿದ್ದಾನೆ ಎಂಬುದು ಜಟಿಲವಾಗಿ ಬಿಡುತ್ತದೆ. ಆದರೆ ಈ ಲೇಖನ ನಿಮ್ಮ ಈ ಜಟಿಲತೆಯನ್ನು ನಿವಾರಿಸುವ ಸುಲಭ ಉಪಾಯವಾಗಿದೆ. ಹೇಗೆಂದು ಕಾತರಗೊಂಡಿರುವಿರಾ ಮುಂದೆ ಓದಿ.

ಚುಂಬನ ಒಂದು ಸುಂದರ ಮಾಧ್ಯಮಾಗಿದೆ

ಚುಂಬನ ಒಂದು ಸುಂದರ ಮಾಧ್ಯಮಾಗಿದೆ

ಇನ್ನೊಬ್ಬ ವ್ಯಕ್ತಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಚುಂಬನ ಒಂದು ಸುಂದರ ಮಾಧ್ಯಮಾಗಿದೆ. ಚುಂಬನದಲ್ಲಿ ಹಲವಾರು ವಿಧಗಳಿದ್ದು ಅದರದ್ದೇ ಆದ ಮಹತ್ವ ಈ ಚುಂಬನಕ್ಕಿದೆ. ನಿಮ್ಮ ಸಂಬಂಧದ ಮಧುರತೆಯನ್ನು ಮೇಲ್ಮಟ್ಟಕ್ಕೆ ಒಯ್ಯುವ ಶಕ್ತಿ ಚುಂಬನಕ್ಕಿದೆ. ಬನ್ನಿ ಚುಂಬನದ ಮಹತ್ವವೇನು ಎಂಬುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಣೆಯನ್ನು ಚುಂಬಿಸುವುದು

ಹಣೆಯನ್ನು ಚುಂಬಿಸುವುದು

ಹಣೆಯನ್ನು ಚುಂಬಿಸುವುದು ನೀವು ಕೇವಲ ಸ್ನೇಹಿತರು ಎಂಬುದನ್ನು ತೋರಿಸುತ್ತದೆ. ನೀವು ಸಂಬಂಧವನ್ನು ಹೇಗೆ ಬೆಳೆಸಿದ್ದೀರಿ ಎಂಬುದನ್ನು ಈ ಚುಂಬನ ಅವಲಂಬಿಸಿರುತ್ತದೆ. ಸಂಗಾತಿಯ ಮೇಲಿನ ಆಳವಾದ ಪ್ರೀತಿಯನ್ನು ಈ ಚುಂಬನ ಸೂಚಿಸುತ್ತದೆ.

ಹಸ್ತ ಚುಂಬನ

ಹಸ್ತ ಚುಂಬನ

ಸಂಬಂಧದಲ್ಲಿ ಕಂಡುಬರುವ ಸೌಮ್ಯ ರೂಪದ ಚುಂಬನವಾಗಿದೆ ಹಸ್ತ ಚುಂಬನ. ಗೌರವ, ಅರ್ಹತೆ ಮತ್ತು ದಯೆಯನ್ನು ಈ ಚುಂಬನ ಪ್ರಕಟಪಡಿಸುತ್ತದೆ.

ಕಿವಿಯನ್ನು ಕಚ್ಚಿ ಚುಂಬಿಸುವುದು

ಕಿವಿಯನ್ನು ಕಚ್ಚಿ ಚುಂಬಿಸುವುದು

ಸಂಗಾತಿಯ ಕಿವಿಯ ಮೇಲ್ಭಾಗ ಮತ್ತು ಕೆಳಭಾಗವನ್ನು ಹಲ್ಲಿನಿಂದ ಸ್ವಲ್ಪ ಸ್ವಲ್ಪವೇ ಅಗಿಯುತ್ತಾ ಬರುವುದನ್ನು ಈ ಚುಂಬನ ಒಳಗೊಂಡಿದೆ. ಸಂಗಾತಿಯೊಂದಿಗೆ ನಿಕಟವಾಗಿ ಬೆರೆಯಲು ಸಿದ್ಧ ಎಂಬುದನ್ನು ಈ ಚುಂಬನ ತೋರಿಸಿಕೊಡುತ್ತದೆ.

ಗಾಳಿಯಲ್ಲಿ ಚುಂಬನ

ಗಾಳಿಯಲ್ಲಿ ಚುಂಬನ

ಗಾಳಿಯಲ್ಲಿ ಚುಂಬನ ವಿಭಿನ್ನ ಪ್ರಕಾರದ ಚುಂಬನವಾಗಿದೆ. ನಿಮ್ಮ ಕೆನ್ನೆಯ ಬಳಿ ನಿಮ್ಮ ಸಂಗಾತಿಯು ತಮ್ಮ ಕೆನ್ನೆಯನ್ನು ತಂದು ಚುಂಬನದ ಧ್ವನಿಯನ್ನು ಹೊರಡಿಸುವುದಾಗಿದೆ. ಸಂಗಾತಿಯ ಕ್ರಿಯೆಯನ್ನು ಇದು ಒಳಗೊಂಡಿರುವುದಿಲ್ಲ.

ಕುತ್ತಿಗೆ ಚುಂಬನ

ಕುತ್ತಿಗೆ ಚುಂಬನ

ಕುತ್ತಿಗೆಯ ಚುಂಬನವನ್ನು ಹೆಚ್ಚಾಗಿ ಎಲ್ಲಾ ಸಂಗಾತಿಗಳೂ ಇಷ್ಟಪಡುತ್ತಾರೆ. ನಿಮ್ಮ ಸಂಗಾತಿ ನಿಮ್ಮ ದೇಹದ ಇತರ ಭಾಗವನ್ನೂ ಇಷ್ಟಪಡುತ್ತಾನೆ ಕೇವಲ ತುಟಿಯನ್ನು ಮಾತ್ರವಲ್ಲ ಎಂಬುದು ಈ ಚುಂಬನದ ಹಿಂದಿರುವ ಮರ್ಮವಾಗಿದೆ.

ವಾಂಪೈರ್ ಚುಂಬನ

ವಾಂಪೈರ್ ಚುಂಬನ

ನಿಮ್ಮ ಸಂಗಾತಿಯ ಕುತ್ತಿಗೆಯ ಸಮೀಪ ನೀಡುವಂತಹ ಚುಂಬನವಾಗಿದೆ ವಾಂಪೈರ್ ಚುಂಬನ. ಸಣ್ಣ ಮಟ್ಟಿಗಿನ ಕಚ್ಚುವಿಕೆ ಮತ್ತು ಹೀರುವಿಕೆ ಇಲ್ಲಿ ಸಾಧ್ಯ. ನಿಮ್ಮ ಸಂಗಾತಿಯ ಪೂರ್ಣ ಪ್ರೇಮದರಿವು ನಿಮಗಿಲ್ಲಿ ಉಂಟಾಗುತ್ತದೆ. ನಿಮ್ಮ ಸಂಗಾತಿ ಚುಂಬನಕ್ಕಿಂತ ಬೇರೆ ಯಾವುದನ್ನೋ ನಿಮ್ಮಿಂದ ಹೆಚ್ಚು ಬಯಸುತ್ತಿದ್ದಾರೆ ಎಂಬುದು ಇದರರ್ಥವಾಗಿದೆ.

ಫ್ರೆಂಚ್ ಚುಂಬನ

ಫ್ರೆಂಚ್ ಚುಂಬನ

ಸಂಬಂಧದಲ್ಲಿ ವಿನಿಮಯ ಮಾಡಿಕೊಳ್ಳುವ ಹೆಚ್ಚು ಪ್ರೀತಿಯ ಚುಂಬನವಾಗಿದೆ ಫ್ರೆಂಚ್ ಚುಂಬನ. ಈ ಚುಂಬನದಲ್ಲಿ ನಾಲಿಗೆಯು ಪೂರ್ಣವಾಗಿ ಒಳಗೊಳ್ಳುತ್ತದೆ ಇದರರ್ಥ ವ್ಯಕ್ತಿ ಭಾವೋದ್ರಿಕ್ತನಾಗಿದ್ದಾರೆ ಮತ್ತು ನಿಮ್ಮೊಂದಿಗಿನ ಭೌತಿಕ ಸಂಬಂಧ ತಡೆಯಿಲ್ಲದ್ದು ಎಂಬುದು ವ್ಯಕ್ತವಾಗುತ್ತದೆ.

ಪೂರ್ಣ ತುಟಿ ಚುಂಬನ

ಪೂರ್ಣ ತುಟಿ ಚುಂಬನ

ಕಣ್ಣುಗಳನ್ನು ಮುಚ್ಚಿ ತುಟಿಗಳು ಬೆಸೆದವೆಂದರೆ, ನೀವಿಬ್ಬರೂ ಈ ಕ್ಷಣವನ್ನು ಆಸ್ವಾದಿಸುತ್ತಿರುವಿರಿ ಎಂದರ್ಥವಾಗಿದೆ.

ತೆರೆದ ಕಣ್ಣುಗಳ ಚುಂಬನ

ತೆರೆದ ಕಣ್ಣುಗಳ ಚುಂಬನ

ನೀವು ಚುಂಬಿಸುವಾಗ ನಿಮ್ಮ ಸಂಗಾತಿ ಆಕೆ/ ಆತ ಕಣ್ಣುಗಳನ್ನು ಮುಚ್ಚಿಕೊಳ್ಳದಿದ್ದರೆ, ನಿಮ್ಮ ಸಂಗಾತಿ ಒಬ್ಬ ಭಾಗವಹಿಸುವವರಲ್ಲ ಕೇವಲ ವೀಕ್ಷಕ ಎಂಬುದು ಸಾಬೀತಾಗುತ್ತದೆ. ಇದೊಂದು ವಿಭಿನ್ನ ರೀತಿಯ ಚುಂಬನವಾಗಿದ್ದು ಎರಡು ಹೊಸ ಜೋಡಿಗಳ ಮಧ್ಯೆ ಹಂಚಿಕೊಳ್ಳಲಾಗುತ್ತದೆ.

ಕೆನ್ನಯ ಮೇಲಿನ ಚುಂಬನ

ಕೆನ್ನಯ ಮೇಲಿನ ಚುಂಬನ

ಇದೊಂದು ಪ್ರಾಮಾಣಿಕ ಚುಂಬನವಾಗಿದೆ. ವ್ಯಕ್ತಿಯನ್ನು ಮತ್ತು ನೀವು ಎಷ್ಟು ಸಮಯದವರರೆಗೆ ಡೇಟಿಂಗ್‌ ಮಾಡಲಾಗಿದೆ ಎಂಬುದನ್ನು ಇದು ಆಧರಿಸಿದೆ. ಮೊದಲ ಡೇಟಿಂಗ್‌ನಲ್ಲೇ ಈ ಪ್ರಕಾರದ ಚುಂಬನವನ್ನು ನೀವು ಸ್ವೀಕರಿಸಿದರೆಂದರೆ, ಆಕ್ರಮಣಕಾರಿಯಾಗಿ ತೋರ್ಪಡಿಸದೆ ಪರೀಕ್ಷಿಸುವುದು ಎಂದಾಗಿದೆ.

ಆಕೆಯನ್ನು ನಿಮ್ಮ ಬಾಹುಗಳಲ್ಲಿ ಹೇಗೆ ಬಂಧಿಸುವಿರಿ?

ಆಕೆಯನ್ನು ನಿಮ್ಮ ಬಾಹುಗಳಲ್ಲಿ ಹೇಗೆ ಬಂಧಿಸುವಿರಿ?

ಮೊದಲ ಪ್ರಭಾವ ಕೊನೆಯ ಪ್ರಭಾವ ಎಂಬಂತೆ ನಿಮ್ಮ ಮೊದಲ ಚುಂಬನ ಆಕೆಗೆ ಆತನಿಗೆ ಮುದವನ್ನೀಯಬೇಕು. ನಿಮ್ಮ ಸಂಗಾತಿಗೆ ಹೇಗೆ ಚುಂಬಿಸಬೇಕು ಆಕೆಯನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕು ಎಂಬ ಕಲೆಯೂ ನಿಮಗೆ ತಿಳಿದಿರಬೇಕು. ಹೀಗಿದ್ದರೆ ಮಾತ್ರ ಚುಂಬನದ ಸುಖ ಶಾಶ್ವತವಾಗಿರುತ್ತದೆ ಆ ಕ್ಷಣ ಮಧುರವಾಗಿರುತ್ತದೆ. ಆದ್ದರಿಂದ ಹುಡುಗರೇ! ನಿಮ್ಮ ಸಂಗಾತಿಯನ್ನು ಚುಂಬಿಸುವಾಗ ಆಕೆಯನ್ನು ನಿಮ್ಮ ಬಾಹುಗಳಲ್ಲಿ ಹೇಗೆ ಬಂಧಿಸಬೇಕು ಎಂಬುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆಕೆಯ ಬೆನ್ನು ಮೂಳೆಯ ಜುಮ್ಮೆನ್ನಿಸುವಿಕೆ

ಆಕೆಯ ಬೆನ್ನು ಮೂಳೆಯ ಜುಮ್ಮೆನ್ನಿಸುವಿಕೆ

ನೀವು ಆಕೆಯನ್ನು ಚುಂಬಿಸುತ್ತಿರುವಾಗ ಆಕೆಯ ಬೆನ್ನು ಮೂಳೆ ಜುಮ್ಮೆನ್ನಲಿ. ತೀರಾ ಸನಿಹಕ್ಕೆ ಬಂದಂತೆ ಆಕೆಯ ಬೆನ್ನುಮೂಳೆ ಸುಖದಿಂದ ನಡುಗುವುದನ್ನು ನೀವು ಗಮನಿಸಬಹುದು.

ಪೃಷ್ಠ ಭಾಗವನ್ನು ಹಿಡಿಯುತ್ತಾ

ಪೃಷ್ಠ ಭಾಗವನ್ನು ಹಿಡಿಯುತ್ತಾ

ನಿಮ್ಮ ಸಂಗಾತಿ ದೊಡ್ಡ ಪೃಷ್ಠವನ್ನು ಹೊಂದಿದ್ದರೆ, ಹುಡುಗರೇ ಅದರ ಬಳಕೆಯನ್ನು ಮಾಡಿ! ನಿಮ್ಮಾಕೆಯನ್ನು ಚುಂಬಿಸುವಾಗ ಆಕೆಯ ಪೃಷ್ಠವನ್ನು ಹಿಡಿದುಕೊಳ್ಳಿ. ಆಕೆ ಖಂಡಿತ ಇದನ್ನು ಇಷ್ಟಪಡುತ್ತಾಳೆ.

ಕೆನ್ನೆಯನ್ನು ಹಿಡಿಯುತ್ತಾ

ಕೆನ್ನೆಯನ್ನು ಹಿಡಿಯುತ್ತಾ

ಚುಂಬಿಸುವಾಗ ನಿಮ್ಮ ಸಂಗಾತಿಯನ್ನು ಉದ್ರೇಕಿಸುವಂತೆ ಮಾಡಲು ಎಲ್ಲಿ ಹಿಡಿದುಕೊಳ್ಳಬೇಕೆಂದು ಇನ್ನೂ ಆಲೋಚಿಸುತ್ತಿರುವಿರಾ? ಆಕೆಯ ಹೊಳೆಯುವ ಕೆನ್ನೆಗಳನ್ನು ನಿಮ್ಮ ಕರಗಳಲ್ಲಿ ಬಂಧಿಸಿ. ಆಕೆಯ ಕಣ್ಣುಗಳನ್ನು ದಿಟ್ಟಿಸುತ್ತಾ ಅಧರ ಸುಖವನ್ನು ಸವಿಯಿರಿ. ಆಕೆಯ ಕೆನ್ನೆಯನ್ನು ನೀವು ಹಿಡಿದುಕೊಂಡಿರುವಾಗ, ಫೋರ್ಸ್‌ನಲ್ಲಿ ನೀವು ಆಕೆಯನ್ನು ಚುಂಬಿಸಬಹುದು. ಕೆನ್ನೆ ನಿಮಗೆ ಬೇಕಾದ ಭಂಗಿಯಲ್ಲಿದ್ದರೆ ಮಾತ್ರ ಇದು ಸಾಧ್ಯ.

ಕೈಗಳಲ್ಲಿ ಬಂಧಿಸಿ

ಕೈಗಳಲ್ಲಿ ಬಂಧಿಸಿ

ಆಕೆಯ ಕೈಗಳನ್ನು ನಿಮ್ಮ ಕೈಗಳಲ್ಲಿ ಬಂಧಿಸುತ್ತಾ ಅಧರ ಸವಿಯನ್ನು ಸವಿಯಬಹುದು. ಆಕೆಯ ಕೈಯನ್ನು ನಿಮ್ಮ ಕೈಗಳೊಳಗೆ ಬೆಸೆಯುತ್ತಾ ಚುಂಬನದ ಸ್ವರ್ಗ ಸುಖವನ್ನು ಆಕೆಗೆ ಉಣಿಸಿ.

ಗಲ್ಲವನ್ನು ಹಿಡಿಯುವುದು

ಗಲ್ಲವನ್ನು ಹಿಡಿಯುವುದು

ನಾಚಿಕೆ ಮಾಡುವ ಹುಡುಗರಿಗೆ ಇದೊಂದು ಲಾಭಕರವಾದ ಅಂಶವಾಗಿದೆ. ಚುಂಬಿಸುವಾಗ ಆಕೆಯ ಗಲ್ಲವನ್ನು ಹಿಡಿಯುವುದು ಆಕೆಯನ್ನು ಬಂಧಿಸಲು ಸುಲಭ ಮತ್ತು ಪ್ರಶಸ್ತ ಸ್ಥಳವಾಗಿದೆ.

ಅದ್ಭುತ ಸೊಂಟ

ಅದ್ಭುತ ಸೊಂಟ

ಹೆಚ್ಚಿನವರು ಸೊಂಟವನ್ನು ಹಿಡಿದುಕೊಳ್ಳಲು ಬಯಸುತ್ತಾರೆ. ಚುಂಬಿಸುವಾಗ ಆಕೆಯ ಸೊಂಟ ಬಳುಕುವುದನ್ನು ಗಮನಿಸಲು ಮರೆಯದಿರಿ. ಆಕೆ ಚುಂಬನದ ರಸ ನಿಮಿಷವನ್ನು ಅನುಭವಿಸುತ್ತಿದ್ದಾಳೆ ಎಂಬುದನ್ನು ತೋರ್ಪಡಿಸಲು ಇದೊಂದೇ ಸಾಕ್ಷಿಯಾಗಿದೆ.

ಆಕೆಯ ಕೂದಲಲ್ಲಿ ಬೆರಳಾಡಿಸುವುದು

ಆಕೆಯ ಕೂದಲಲ್ಲಿ ಬೆರಳಾಡಿಸುವುದು

ನಿಮ್ಮ ಬೆರಳುಗಳ ಭದ್ರತೆಯನ್ನು ಆಕೆಗೆ ತಿಳಿಸಲು ಮತ್ತು ಚುಂಬಿಸುವಾಗ ಆಕೆಯನ್ನು ಹಿಡಿದುಕೊಳ್ಳಲು ಸೂಕ್ತ ಸ್ಥಳವೆಂದರೆ ಆಕೆಯ ಕೂದಲಲ್ಲಿ ಬೆರಳಾಡಿಸುವುದಾಗಿದೆ.

ಆಕೆಯ ಕುತ್ತಿಗೆ ಸುತ್ತ

ಆಕೆಯ ಕುತ್ತಿಗೆ ಸುತ್ತ

ನಿಮ್ಮ ಸಂಗಾತಿಯನ್ನು ಚುಂಬಿಸುವಾಗ ಆಕೆಯ ಕುತ್ತಿಗೆಯ ಸುತ್ತ ಕೈಗಳನ್ನು ಬಳಸಿ ಹಿಡಿದುಕೊಳ್ಳುವುದು ಸರಿಯಾದ ಚುಂಬನದ ಭಂಗಿಯಾಗಿದೆ. ಆಕೆಯ ಕುತ್ತಿಗೆಯ ಸುತ್ತ ನಿಮ್ಮ ಕೈಗಳಿಂದ ಆಕೆಯನ್ನು ಬಂಧಿಸುವುದು ಇನ್ನಷ್ಟು ನಿಮ್ಮ ಸಂಗಾತಿಯನ್ನು ಪ್ರಚೋದಿಸುತ್ತದೆ.

ಕಿಸ್ ಮಾಡುವುದರಿಂದ ಉಂಟಾಗುವ ಲಾಭಗಳು

ಕಿಸ್ ಮಾಡುವುದರಿಂದ ಉಂಟಾಗುವ ಲಾಭಗಳು

ನಮ್ಮ ಪ್ರೀತಿಪಾತ್ರರೊಂದಿಗೆ ಚುಂಬನ ಕ್ರಿಯೆ ನಡೆಸುವುದರಿಂದ ಅಜೀರ್ಣದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು! ಇಷ್ಟೇ ಅಲ್ಲ ಚುಂಬನ ಇನ್ನೂ ಹತ್ತಾರು ಆರೋಗ್ಯಕರ ಗುಣಗಳನ್ನು ಹೊಂದಿದೆ! ಕಿಸ್‌ನಿಂದ ಉಂಟಾಗುವ ಲಾಭಗಳಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ:

ಹಾರ್ಮೋನ್‌ಗಳ ಭದ್ರತೆ

ಹಾರ್ಮೋನ್‌ಗಳ ಭದ್ರತೆ

ತೆರೆದ ಬಾಯಿ ಚುಂಬನದಿಂದಾಗಿ ಪುರುಷನಿಂದ ಮಹಿಳೆಯರಿಗೆ ಹಾರ್ಮೋನ್ ಗಳು ವರ್ಗಾವಣೆಯಾಗುತ್ತದೆ ಎಂದು ಊಹಿಸಿದ್ದೀರೆ? ಚುಂಬಿಸಿದಾಗ ಮಹಿಳೆಯರಲ್ಲಿ ಪುರುಷರ ಟೆಸ್ಟೋಸ್ಟಿರೋನ್ (testosterone) ಎಂಬ ಹಾರ್ಮೋನ್ ಸೇರುತ್ತದೆ. ಇದು ಮಹಿಳೆಯರಲ್ಲಿ ಲೈಂಗಿಕತೆಯ ಬಗ್ಗೆ ಆಸಕ್ತಿಯನ್ನು ಮೂಡಿಸುತ್ತದೆ. ಚುಂಬನದ ಬಗ್ಗೆ ಹೇಳುವುದಕ್ಕೆ ಸ್ವಲ್ಪ ಮುಜುಗರವಾಗಬಹುದು. ಆದರೆ ಆ ಬಿಸಿಯಪ್ಪುಗೆಯ ಚುಂಬನದಿಂದ ಇಷ್ಟೊಂದು ಪ್ರಯೋಜನಗಳೂ ಇವೆಯೆಂದಾದರೆ ನಿಮ್ಮ ಸಂಗಾತಿಯೊಂದಿಗೆ ಈಗಲೇ ಯಾಕೆ ಚುಂಬಿಸಬಾರದು!?

ಇಬ್ಬರ ನಡುವಿನ ಹೊಂದಾಣಿಕೆ

ಇಬ್ಬರ ನಡುವಿನ ಹೊಂದಾಣಿಕೆ

ಚುಂಬನ ಎನ್ನುವುದು 'ಸಂಬಂಧ ಬೆಸುಗೆಯನ್ನು ಅಳೆಯುವ' ಉತ್ತಮವಾದ ಸಾಧನ. ನಾವಿಬ್ಬರೂ ಕೂಡಿ ಬಾಳಬಹುದು ಎನ್ನುವಂತಹ ಸಂಗಾತಿಯನ್ನು ಚುಂಬನವೇ ಆಯ್ಕೆ ಮಾಡಿಕೊಡಬಲ್ಲದು. ಆದ್ದರಿಂದಲೇ ಮೊದಲ ಚುಂಬನವೇ ಸಂಬಂಧಗಳು ಮುಂದೆ ಬೆಸೆಯಬಲ್ಲದೋ ಇಲ್ಲವೂ ಎನ್ನುವುದನ್ನು ತೀರ್ಮಾನಿಸಿಬಿಡುತ್ತದೆ. ಇಬ್ಬರ ನಡುವಿನ ಹೊಂದಾಣಿಕೆಯ ಸಾಧ್ಯ-ಅಸಾಧ್ಯತೆಗಳು ತಿಳಿದುಬಿಡುತ್ತವೆ.

ಬರ್ನಿಂಗ್ ಫ್ಯಾಟ್!

ಬರ್ನಿಂಗ್ ಫ್ಯಾಟ್!

ಹಲವಾರು ದೈಹಿಕ ಚಟುವಟಿಕೆಗಳಂತೆ, ಚುಂಬನ ಕೂಡ ಕ್ಯಾಲರಿ ಕರಗಿಸಬಲ್ಲ ಕ್ರಿಯೆ. ಒಂದು ತ್ವರಿತ ರೊಮ್ಯಾಟಿಂಕ್ 2-3 ಕ್ಯಾಲರಿಯನ್ನು ಕರಗಿಸಿದರೆ, ಭಾವೋದ್ರೇಕದ ಚುಂಬನ 5 ಕ್ಯಾಲರಿಗಳಷ್ಟು ಕರಗಿಸಬಲ್ಲದು. ಅಂದರೆ ದೀರ್ಘವಾದ ಹಾಗೂ ಉದ್ರೇಕಕಾರಿಯಾದ ಚುಂಬನ ಹೆಚ್ಚು ಹೆಚ್ಚು ಕ್ಯಾಲೋರಿಯನ್ನು ಕರಗಿಸಬಲ್ಲದು!

ಆರೋಗ್ಯಕರವಾದ ಚುಂಬನ

ಆರೋಗ್ಯಕರವಾದ ಚುಂಬನ

ಒಬ್ಬ ವ್ಯಕ್ತಿಯ ಬಾಯಿಯ ವಾಸನೆ ಮತ್ತು ರುಚಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗಬಹುದು. ಮಹಿಳೆಯೊಬ್ಬಳು ಒಬ್ಬ ಆರೋಗ್ಯಕರ ಸಂಗತಿಯನ್ನು ಕಂಡುಕೊಂಡರೆ ಆಕೆಯ ಮುಂದಿನ ಮಕ್ಕಳ/ಸಂತತಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಹಾಗೆಯೇ ಪುರುಷನೂ ಕೂಡ ಆರೋಗ್ಯಪೂರ್ಣ ಮಹಿಳೆಯ ಜೊತೆ ಸಂಬಂಧ ಬೆಳೆಸುವುದರಿಂದ ತನ್ನ ಸಂತತಿಯನ್ನು ಆರೋಗ್ಯಕರವಾಗಿ ಬೆಳೆಸಬಲ್ಲ.

ಭಾವನಾತ್ಮಕತೆಯನ್ನು ಹುಟ್ಟುಹಾಕಬಲ್ಲದು

ಭಾವನಾತ್ಮಕತೆಯನ್ನು ಹುಟ್ಟುಹಾಕಬಲ್ಲದು

ಚುಂಬನ ಎನ್ನುವುದು ವ್ಯಕ್ತಿಗಳಲ್ಲಿ ಪರಸ್ಪರ ಭಾವನಾತ್ಮಕ ಸಂಬಂಧವನ್ನು ಏರ್ಪಡಿಸುವುದರಲ್ಲಿ ಸಂಶಯವಿಲ್ಲ. ಕಡಿಮೆ ಅವಧಿಯ ಸಂಬಂಧವನ್ನು ಹೊಂದಿರುವ ಲೈಂಗಿಕತೆಯ ಸಂತರ ಸಂಬಂಧವನ್ನು ಬಿಡಬೇಕೆಂದಿರುವ ಪುರುಷರಲ್ಲಿಯೂ ಸಹ ಭಾವನಾತ್ಮಕತೆಯನ್ನು ಹುಟ್ಟುಹಾಕಬಲ್ಲದು ನಿಮ್ಮಿಬ್ಬರ ಪ್ರೀತಿಯ ಚುಂಬನ.

ಮುಖದ ಕೆಲಸ

ಮುಖದ ಕೆಲಸ

ನಾವು ನಮ್ಮ ದೇಹದ ದೃಢತೆಗಾಗಿ ಸಾಕಷ್ಟು ವ್ಯಾಯಾಮವನ್ನು ಮಾಡುತ್ತೇವೆ. ಆದರೆ ಮುಖದ ಸ್ನಾಯುಗಳಿಗೆ ಸಂಬಂಧಪಟ್ಟ ವ್ಯಾಯಾಮಗಳಲ್ಲಿ ನಮಗಿರುವ ಆಸಕ್ತಿ ಅಷ್ಟಕ್ಕಷ್ಟೇ! ನಿರಂತರ ಚುಂಬನ ಮುಖದ ಸ್ನಾಯುಗಳ ವ್ಯಾಯಾಮಕ್ಕೆ ಸಹಕಾರಿ. ನಮ್ಮ ಗಲ್ಲ ಸ್ಥಿರವಾಗಿರುತ್ತವೆ. ಆದರೆ ಚುಂಬನದಿಂದಾಗಿ ಸುಮಾರು 30 ವಿಧದ ಮುಖದ ಸ್ನಾಯು ವ್ಯಾಯಾಮವನ್ನು ಮಾಡಿದಂತಾಗುತ್ತದೆ!

ದ್ರವ- ವಿನಿಮಯ

ದ್ರವ- ವಿನಿಮಯ

ಚುಂಬನ ಮಾಡಿದಾಗ ಇಬ್ಬರ ನಡುವೆ ಪರಸ್ಪರ ಲಾಲಾರಸದ ವಿನಿಮಯವಾಗುವುದಂತೂ ನಿಸ್ಸಂಶಯ. ನಿಮ್ಮ ಉಸಿರಾಟಕ್ಕೆ ಕಾರಣವಾದ ಲಾಲಾರಸದಲ್ಲಿರುವ ಖನಿಜಗಳು, ಲವಣ ಹಾಗೂ ಇತರ ವಸ್ತುಗಳು ಮಹಿಳೆಯರಲ್ಲಿ ಲೈಂಗಿಕತೆಯತ್ತ ಸೆಳೆಯುವಂತೆ ಮಾಡುತ್ತದೆ ಎಂಬುದು ನಿಮಗೆ ಗೊತ್ತೆ?

ಮಹಿಳೆ ಮತ್ತು ಚುಂಬನ

ಮಹಿಳೆ ಮತ್ತು ಚುಂಬನ

ಚುಂಬನ: ಇತರ ವ್ಯಕ್ತಿಯೊಂದಿಗೆ ತಮ್ಮ ಹೊಂದಾಣಿಕೆಯ ಬಗ್ಗೆ ಬಹಳಷ್ಟು ತಿಳಿಸುತ್ತದೆ. ಮಹಿಳೆಯರ ಮುತ್ತಿಡುವ ತೀವ್ರತೆ ಮತ್ತು ಆವರ್ತನದ ಮೂಲಕ ಒಬ್ಬ ವ್ಯಕ್ತಿಯ ಅಲ್ಪಾವಧಿಯ ಸಂಬಂಧ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಚುಂಬನವನ್ನು ಬಳಸುತ್ತಾರೆ. ಮಹಿಳೆಯರು ಅಲ್ಪಾವಧಿಯ ಸಂಬಂಧ ಸುಳಿವು ಇದ್ದರೂ ಕೂಡ ಆ ಸಂಬಂಧವನ್ನು ಬೆಳೆಯಲು ಕೂಡ ಚುಂಬನಕ್ಕೆ ಸಹಕಾರ ನೀಡುತ್ತಾರೆ.

ಪುರುಷರು ಮತ್ತು ಚುಂಬನ

ಪುರುಷರು ಮತ್ತು ಚುಂಬನ

ಮಹಿಳೆಯರು ಸಂಬಂಧಗಳ ಪಾಲುದಾರಿಕೆಯ ಮೌಲ್ಯಮಾಪನವನ್ನು ಹೆಚ್ಚಿಸುವುದಕ್ಕಾಗಿ ಚುಂಬನವನ್ನು ಬಳಸಿದರೆ ಪುರುಷರು ಸರಳ ಉದ್ದೇಶಕ್ಕಾಗಿ ಮಾತ್ರ ಬಳಸುತ್ತಾರೆ. ಪುರುಷರು, ಲೈಂಗಿಕತೆಯ ಸಾಧ್ಯತೆಯನ್ನು ಹೆಚ್ಚಿಸುವುದಕ್ಕಾಗಿ ಚುಂಬನವನ್ನು ಬಳಸುತ್ತಾರೆ. ಆದರೆ ಎಲ್ಲಾ ಪುರುಷರೂ ಚುಂಬನವನ್ನು ಮಾಡುವುದು ಲೈಂಗಿಕತೆಗಾಗಿ ಎಂದೇ ಹೇಳಲಾಗುವುದಿಲ್ಲ.

ಮೊದಲು ಮತ್ತು ನಂತರ

ಮೊದಲು ಮತ್ತು ನಂತರ

ಮಹಿಳೆಯರು ಸಂಗಾತಿಯ ಜೊತೆಗೆ ಲೈಂಗಿಕ ಸಂಬಂಧವನ್ನು ಆರಂಭಿಸಿದ ನಂತರವಷ್ಟೇ ಸಂಗಾತಿಯನ್ನು ಮುದ್ದಾಡಲು ಬಯಸುತ್ತಾರೆ. ಅದರಲ್ಲೂ ವಿಶೇಷವಾಗಿ ಲೈಂಗಿಕ ಕ್ರಿಯೆಯ ನಂತರ ಚುಂಬನವನ್ನು ನೀಡಲು ಹೆಂಗಸರು ಹೆಚ್ಚು ಇಷ್ಟಪಡುತ್ತಾರೆ. ಆದರೆ ಬಹಳಷ್ಟು ಪುರುಷರು ಹೆಂಡತಿಯ ಈ ಆಸೆಯನ್ನು ಗಮನಿಸುವುದೇ ಇಲ್ಲ.

ಜಗಳ ಮತ್ತು ಚುಂಬನ

ಜಗಳ ಮತ್ತು ಚುಂಬನ

ಸಾಮಾನ್ಯವಾಗಿ ಹಾಲಿವುಡ್ ಸಿನಿಮಾಗಳಲ್ಲಿ ನೋಡಿರುತ್ತೇವೆ ಸಂಗಾತಿಗಳು ಪರಸ್ಪರ ಮುನಿಸಿಕೊಂಡಿದ್ದರೂ ಅದರ ಕೊನೆಯಲ್ಲಿ ಒಬ್ಬರನ್ನೊಬ್ಬರು ದೀರ್ಘವಾಗಿ ಚುಂಬಿಸುತ್ತಾರೆ. ಹಾಗೆಯೇ ಪ್ರತಿಯೊಬ್ಬ ಹುಡುಗ-ಹುಡುಗಿ ಅವರ ಜಗಳಕ್ಕೆ ಪರಸ್ಪರ ಚುಂಬಿಸುವಿದರ ಮೂಲಕ ಪರದೆಯನ್ನೆಳೆಯಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಧುರ ಚುಂಬನ!

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಧುರ ಚುಂಬನ!

ದೇಹದಲ್ಲಿ ವೈರಸ್ ಆಕ್ರಮಣ ಮಾಡಿದರೆ ನಿಮ್ಮ ರೋಗ ನಿರೋಧಕ ಶಕ್ತಿಯಿಂದ ಅದರಿಂದ ಸಮಸ್ಯೆಗಳಾಗದಂತೆ ತಡೆಯಬಹುದು. ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಆ ಚುಂಬನದಲ್ಲಿದೆ! ಶೀತ ಅಥವಾ ಜ್ವರದಂತಹ ಖಾಯಿಲೆಗಳಿಂದ ನೀವು ದೂರವಿರುವಂತೆ ನಿಮ್ಮನ್ನು ನೀವು ಪ್ರತಿರಕ್ಷಣೆ ಮಾಡಿಕೊಳ್ಳುವುದಕ್ಕೆ ಸಹಾಯ ನಿಮ್ಮ ರೋಮಾಂಚನಕಾರಿ ಚುಂಬನದ ವಿನಿಮಯ !

ಕಿಸ್ ಆಫ್ ಎ ಲೈಫ್ ಟೈಮ್

ಕಿಸ್ ಆಫ್ ಎ ಲೈಫ್ ಟೈಮ್

ಬೆಳಗಿನ ಹೊತ್ತು ಮನೆಯಿಂದ ಹೊರಡುವಾಗ ಅಥವಾ ಯಾವುದಾದರೂ ವಿಶೇಷ ದಿನದಂದು ಕೆನ್ನೆಯ ಮೇಲೆ ಅಥವಾ ಹಣೆಯ ಮೇಲೆ ಕೊಡುವ ಚುಂಬನಗಳು ಸಾಮಾನ್ಯ ಆದರೆ ಸಾಮಾನ್ಯವಾಗಿ 20-160 ನಿಮಿಷಗಳ ಕಾಲ ನಿರಂತರವಾಗಿ ಚುಂಬನ ವಿನಿಮಯ ಮಾಡಿಕೊಳ್ಳುವವರಿದ್ದಾರೆ!

ವಿಶ್ರಾಂತಿ ಮತ್ತು ಆರಾಮ

ವಿಶ್ರಾಂತಿ ಮತ್ತು ಆರಾಮ

ನೀವು ಮುತ್ತಿಡುವುದರಿಂದ ನಿಮ್ಮ ದೇಹದಲ್ಲಿ ಹಿತಾನುಭವದ ರಾಸಾಯನಿಕಗಳು ಸೃಷ್ಟಿಯಾಗಿ ನಿಮ್ಮ ದೇಹಕ್ಕೆ ವಿಶ್ರಾಂತಿಯ ಅನುಭವ ಸಿಗುವುದು ಎಂಬ ಅಂಶ ನಿಮಗೆ ಗೊತ್ತೇ? ಸಂಶೋಧನೆಯ ಪ್ರಕಾರ. ಚುಂಬನ, ನಮ್ಮ ದೇಹದಲ್ಲಿ ಸಂತೋಷವನ್ನು ಉಂಟು ಮಾಡುವ ನೈಸರ್ಗಿಕ ರಾಸಾಯನಿಕ endorphinsನ ಮಟ್ಟವನ್ನು ಹೆಚ್ಚಿಸುತ್ತದೆ. ಪ್ರಣಯ ಬಾಂಧವ್ಯದ ಭಾವನೆಗಳನ್ನು ಹೆಚ್ಚಿಸುವ ಡೊಪಾಮೈನ್ ಮಟ್ಟವನ್ನೂ ಅಧಿಕಗೊಳಿಸುತ್ತದೆ.

X
Desktop Bottom Promotion