For Quick Alerts
ALLOW NOTIFICATIONS  
For Daily Alerts

ಇನ್ನೂ ನಿಗೂಢವಾಗಿ ಉಳಿದ ಸೆಲೆಬ್ರಿಟಿಗಳ ಸಾವಿನ ರಹಸ್ಯ!

By Deepak
|

ಕೆಲವೊಂದು ಸೆಲೆಬ್ರಿಟಿಗಳು ತಮ್ಮ ಗ್ಲಾಮರಿನಿಂದ ಮಾತ್ರವಲ್ಲದೆ, ತಮ್ಮ ಸಂಬಂಧಗಳು, ಒಂಟಿತನ ಮತ್ತು ಜೀವನ ಶೈಲಿಯಿಂದ ಸಹ ಗಮನ ಸೆಳೆಯುತ್ತಿರುತ್ತಾರೆ. ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಈ ಸೆಲೆಬ್ರಿಟಿಗಳ ಜೀವನದಲ್ಲಿ ಎಲ್ಲವು ಇರುತ್ತದೆ. ಆದರೆ ಇವರು ಸಹ ಸಾಮಾನ್ಯ ಮನುಷ್ಯರಂತೆ ಬದುಕಲು ಬಯಸುತ್ತಾರೆ! ಇದೇ ಅವರ ಕೈಗೆಟುಕದ ಗಗನ ಕುಸುಮವಾಗಿರುತ್ತದೆ ಎಂಬುದು ವಿಪರ್ಯಾಸ.

ಸೆಲೆಬ್ರಿಟಿಗಳು ಮತ್ತು ಅವರ ಜೀವನವು ಒಂದು ಬಿಡಿಸಲಾಗದ ಕಗ್ಗಂಟು. ಅವರು ಹೊರಗೆ ಕಾಣಿಸುವುದೇ ಒಂದು ರೀತಿ, ಅವರ ಒಳಗಿನ ತುಮುಲಗಳೆ ಒಂದು ರೀತಿ ಇರುತ್ತವೆ. ಕೆಲವರು ಸಮಾಜದ ಪಾಲಿಗೆ ಅರ್ಥವಾಗದೆ ಬದುಕಿರುತ್ತಾರೆ. ಇನ್ನು ಕೆಲವರು ಹಾಗೆಯೇ ಬದುಕಿ ನಿಗೂಢವಾಗಿಯೇ ಸಾವನ್ನಪ್ಪಿರುತ್ತಾರೆ. ಅವರ ಸಾವಿನಲ್ಲು ನಿಗೂಢತೆ ಅವರನ್ನು ಹಿಂಬಾಲಿಸಿದ್ದು ಸೋಜಿಗವೆ ಸರಿ.

ಇಲ್ಲಿ ಕೆಲವೊಂದು ಸೆಲೆಬ್ರಿಟಿಗಳ ಸಾವುಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ. ಈ ಸಾವುಗಳು ಯಾರಿಗು ಅರ್ಥವಾಗಲ್ಲ, ಈ ಸಾವುಗಳ ರಹಸ್ಯವನ್ನು ಹಿಂದಿಗು ಸಮಾಜಕ್ಕೆ ಅರ್ಥವಾಗದಂತೆ ರಹಸ್ಯವನ್ನು ಕಾಪಾಡಲಾಗಿದೆ ಅಥವಾ ಮುಚ್ಚಿಡಲಾಗಿದೆ.

ಜಿಯಾ ಖಾನ್

ಜಿಯಾ ಖಾನ್

ಮೊದಲು ಮಾಡೆಲ್ ಆಗಿದ್ದು ನಂತರ ನಟಿಯಾದ ಈ ತಾರೆಯು ತನ್ನ ಮೊದಲ ಸಿನಿಮಾದಲ್ಲಿಯೇ ಅಮಿತಾಬ್ ಬಚ್ಚನ್ ಜೊತೆಗೆ ನಾಯಕಿಯಾದ ಅದೃಷ್ಟವಂತೆ. ಆದರೆ ಈಕೆ ಇದೇ ವರ್ಷ ಜೂನ್ 3 ರಂದು ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಳು. ಮೊದಲು ಈಕೆಯ ಸಾವನ್ನು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ ಇಂದು ಆಕೆಯ ಸಾವಿನ ಮೊಕದ್ದಮ್ಮೆಯನ್ನು ರೀ ಓಪನ್ ಮಾಡಲಾಗಿದೆ. ಇದರ ಸಂಬಂಧವಾಗಿ ಸೂರಜ್ ಪಾಂಚೋಲಿ ಎಂಬ ಈಕೆಯ ಗೆಳೆಯನನ್ನು ಬಂಧಿಸಲಾಗಿದೆ. ಕೊಲೆಯೋ ಅಥವಾ ಆತ್ಮ ಹತ್ಯೆಯೊ ಈಕೆಯ ಸಾವು ಇಂದಿಗು ನಿಗೂಢವಾಗಿಯೇ ಇದೆ.

ದಿವ್ಯಾ ಭಾರತಿ

ದಿವ್ಯಾ ಭಾರತಿ

19 ವರ್ಷ ವಯಸ್ಸಿನ ತಾರಾ ಪಟ್ಟದ ಉತ್ತುಂಗದಲ್ಲಿದ್ದ ಈ ಬಹುಭಾಷಾ ತಾರೆಯು ಏಪ್ರಿಲ್ 5,1995 ರಂದು ಮುಂಬಯಿಯ ವರ್ಸೊವಾದ ತನ್ನ ಐದಂತಸ್ತಿನ ಕಟ್ಟಡದ ಮೇಲಿನಿಂದ ಬಿದ್ದು ಅಸುನೀಗಿದಳು. ಈಕೆಯ ಸಾವನ್ನು ಆತ್ಮ ಹತ್ಯಾ ಪ್ರಯತ್ನ್ ಅಥವಾ ಆಕಸ್ಮಿಕ ಅಥವಾ ಕೊಲೆ ಅಥವಾ ಸಂಚು ಎಂದು ನಾನಾ ಬಗೆಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಈಕೆಯ ಸಾವು ಸೆಲೆಬ್ರಿಟಿಗಳ ವಲಯದಲ್ಲಿ ಅತ್ಯಂತ ನಿಗೂಢವಾಗಿ ಉಳಿದು ಹೋಗಿರುವ ಸಾವಾಗಿ ಗುರುತಿಸಲ್ಪಟ್ಟಿದೆ.

ಪರ್ವೀನ್ ಬಾಬಿ

ಪರ್ವೀನ್ ಬಾಬಿ

ಹಿಂದಿನ ತಲೆಮಾರಿನ ಈ ನಟಿಯು 20 ಜನವರಿ, 2005ರಲ್ಲಿ ಮುಂಬಯಿಯ ತನ್ನ ಫ್ಲಾಟಿನಲ್ಲಿ ಶವವಾಗಿ ಪತ್ತೆಯಾದಳು. ಈಕೆಯು ಮೂರು ದಿನ ಸತತವಾಗಿ ಮನೆಯ ಮುಂದೆ ಇದ್ದ ಹಾಲನ್ನು ತೆಗೆದುಕೊಳ್ಳಲು ಬಾರದಿದ್ದಾಗ ಸಂಶಯಗೊಂಡ ನೆರೆಮನೆಯಲ್ಲಿದ್ದಾತನು ಪೋಲಿಸರಿಗೆ ತಿಳಿಸಿದಾಗ ಈಕೆಯ ಸಾವು ಬಯಲಿಗೆ ಬಂತು. ಈಕೆಯ ಸಾವಿನ ರಹಸ್ಯ ಇಂದಿಗು ರಹಸ್ಯವಾಗಿಯೇ ಉಳಿದಿದೆ.

ಸಿಲ್ಕ್ ಸ್ಮಿತಾ

ಸಿಲ್ಕ್ ಸ್ಮಿತಾ

ಮಾಧಕ ತಾರೆ ಸಿಲ್ಕ್ ಸ್ಮಿತಾ ತನ್ನ ಮಾಧಕತೆಯಿಂದಲೆ ಜನಪ್ರಿಯತೆಯನ್ನು ಗಳಿಸಿದ್ದಾಕೆ. ಈಕೆಯು 1996 ಡಿಸೆಂಬರ್ 23ನೇ ತಾರೀಖಿನಂದು ಶವವಾಗಿ ಪತ್ತೆಯಾದಳು. ಈಕೆ ತನ್ನ ವೃತ್ತಿ ಮತ್ತು ವೈಯುಕ್ತಿಕ ಸಮಸ್ಯೆಗಳ ಕಾರಣದಿಂದಾಗಿ ಆತ್ಮಹತ್ಯೆಗೆ ಶರಣಾದಳು.

ನಫಿಸಾ ಜೋಸೆಫ್

ನಫಿಸಾ ಜೋಸೆಫ್

ಮಾಡೆಲ್ ಹಾಗು ಎಂ.ಟಿ,ವಿ ವಿಜೆ ಆಗಿದ್ದ ನಫಿಸಾ ಜೋಸೆಫ್ ಮುಂಬಯಿಯ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾದಳು. ಈ ಆತ್ಮಹತ್ಯೆ ಹಿಂದಿನ ರಹಸ್ಯ ಮಾತ್ರ ಇಂದಿಗು ಸ್ಪಷ್ಟವಾಗಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಈಕೆಯು ತನ್ನ ಭಾವಿ ಗಂಡನ ಕಾರಣದಿಂದಾಗಿ ಈ ಅನಾಹುತವನ್ನು ಮಾಡಿಕೊಂಡಳು ಎಂದು ಹೇಳಲಾಗುತ್ತದೆ. ಈಕೆಯ ಸಾವು ಸಹ ಇಂದಿಗು ನಿಗೂಢವಾಗಿದೆ.

ಗುರುದತ್ತ್

ಗುರುದತ್ತ್

ಈ ಪ್ರಬುದ್ಧ ನಟನು ಆಲ್ಕೋಹಾಲಿನಲ್ಲಿ ಬೆರೆಸಿದ ಓವರ್ ಡೋಸ್ ನಿದ್ದೆ ಮಾತ್ರೆಗಳನ್ನು ಸೇವಿಸಿದ ಪರಿಣಾಮವಾಗಿ ಡಿಸೆಂಬರ್ 10,1964ರಲ್ಲಿ ಅಸುನೀಗಿದನು. ಆದರೂ ಸಹ ಇಂದಿಗು ಈತನ ಸಾವನ್ನು ಆಕಸ್ಮಿಕ ಸಾವೇ? ಅಥವಾ ಆತ್ಮಹತ್ಯೆಯೇ? ಎಂಬ ಸಂಶಯ ಕಾಡುತ್ತಿದೆ.

ಪ್ರಿಯಾ ರಾಜ್‍ವಂಶ್

ಪ್ರಿಯಾ ರಾಜ್‍ವಂಶ್

27 ಮಾರ್ಚ್ 2000 ರಂದು ನಿಧನ ಹೊಂದಿದ ಈಕೆಯ ಸಾವಿನ ಕಾರಣ ಅಂದು ನಿಖರವಾಗಿ ತಿಳಿದು ಬಂದಿರಲಿಲ್ಲ. ಆದರೆ ನಂತರ ತಿಳಿದು ಬಂದ ವಿಚಾರವೆಂದರೆ, ಈಕೆಯು ತನ್ನ ಗಂಡ ಚೇತನ್ ಆನಂದನ ಸಹೋದರ ಮತ್ತು ಆತನ ನೌಕರನಿಂದ ಹತ್ಯೆಗೀಡಾಗಿದ್ದಳು.

ಕುಲ್‍ಜೀತ್ ರಾಂಧ್ವ

ಕುಲ್‍ಜೀತ್ ರಾಂಧ್ವ

ಈ ನಟಿಯು ತನ್ನ ಜೀವನದಲ್ಲಿ ಎದುರಾದ ಒತ್ತಡಗಳಿಂದ ಪಾರಾಗಲು ಸಾಧ್ಯವಾಗದೆ ಆತ್ಮ ಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿಟ್ಟು ಆತ್ಮ ಹತ್ಯೆ ಮಾಡಿಕೊಂಡಳು.

ರಾಜಕುಮಾರಿ ಡಯಾನ

ರಾಜಕುಮಾರಿ ಡಯಾನ

ಈ ವಿಶ್ವ ವಿಖ್ಯಾತ ಸೆಲೆಬ್ರಿಟಿಯು ತನ್ನ ಮಾಧಕ ನೋಟ ಮತ್ತು ಮುಗ್ಧ ನಡತೆಯಿಂದ ವಿಶ್ವದ ಹಲವರ ಹೃದಯವನ್ನು ಗೆದ್ದಿದ್ದಳು. ಈಕೆಯು ಆಗಸ್ಟ್ 31,1997ರಂದು ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಳು. ಪ್ಯಾಪಿರಾಜಿಗಳು ಈಕೆಯನ್ನು ಹಿಂಬಾಲಿಸಿ ಫೋಟೊ ತೆಗೆಯಲು ಪ್ರಯತ್ನ ಪಟ್ಟಾಗ, ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಈ ಕಾರು ಅಪಘಾತ ಸಂಭವಿಸಿತು. ಇನ್ನು ಕೆಲವರ ವಾದದ ಪ್ರಕಾರ ಈಕೆಯ ಕೊಲೆಯನ್ನು ಮುಚ್ಚಿಹಾಕುವ ಸಲುವಾಗಿ ಈ ಅಪಘಾತದ ಪ್ರಸಂಗವನ್ನು ಸೃಷ್ಟಿಸಲಾಯಿತು ಎಂದು ಹೇಳಲಾಗುತ್ತದೆ.

ಮರ್ಲಿನ್ ಮನ್ರೋ

ಮರ್ಲಿನ್ ಮನ್ರೋ

ನೋಡುಗರ ಹೃದಯಕ್ಕೆ ಕನ್ನ ಹಾಕುವಂತಹ ಸೌಂದರ್ಯವನ್ನು ಹೊಂದಿದ್ದ ಈ ಚೆಲುವೆಯು 1962ರಲ್ಲಿ ನಿಧನ ಹೊಂದಿದಳು. ಈಕೆಯ ಸಾವಿನ ಕಾರಣ ಇಂದಿಗು ತಿಳಿದು ಬಂದಿಲ್ಲ. ಮೊದಲು ಈಕೆಯ ಸಾವನ್ನು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು, ಆದರೆ ನಂತರ ಈಕೆಯನ್ನು ಕೊಲೆ ಮಾಡಲಾಯಿತು ಎಂದು ತಿಳಿದು ಬಂದಿತು.

English summary

Mysterious deaths of celebrities

Some such mysterious deaths of celebrities are enlisted below. These deaths were never understood, or maybe they were hidden and kept a secret in the glamor and colors of the lush society.
X
Desktop Bottom Promotion