For Quick Alerts
ALLOW NOTIFICATIONS  
For Daily Alerts

ಯಶಸ್ಸು ಸಾಧಿಸಲು ಶಾರೂಕ್ ಜೀವನ ಪ್ರೇರಣೆಯಾಗಲಿ

By Hemanth P
|

ಬಾಲಿವುಡ್ ನಟ ಶಾರೂಕ್ ಖಾನ್ ಹೆಸರನ್ನು ಯಾರು ಕೇಳಿಲ್ಲ ಹೇಳಿ? ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೂ ಶಾರೂಕ್ ಜನಪ್ರಿಯ ಸೆಲೆಬ್ರಿಟಿ. ಅವರು ಬಾಲಿವುಡ್ ನ ಅನಭಿಷಿಕ್ತ ದೊರೆ. 1965ರ ನವಂಬರ್ 2ರಂದು ಜನಿಸಿರುವ ಶಾರೂಕ್ ತುಂಬಾ ಜನಪ್ರಿಯ ವ್ಯಕ್ತಿ.

ಆದರೆ ಶಾರೂಕ್ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ತುಂಬಾ ಕಷ್ಟಪಟ್ಟಿದ್ದಾರೆ. ಮಧ್ಯಮ ವರ್ಗದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದ ಶಾರೂಕ್ ತಂದೆ ಮೇಜರ್ ಜನರಲ್ ಆಗಿದ್ದರು ಮತ್ತು ತಾಯಿ ಮನೆಯಲ್ಲೇ ಇದ್ದರು.

Life lessons to learn from Shah Rukh Khan

ದೆಹಲಿಯ ರಂಗಮಂದಿರಗಳಲ್ಲಿ ಕಲಿತ ಶಾರೂಕ್ ಗೆ ಬ್ರೇಕ್ ನೀಡಿದ ಮೊದಲ ಧಾರಾವಾಹಿ ಸರ್ಕಸ್'. ಇದರ ಬಳಿಕ ದಿ ಈಡಿಯಟ್' ಮತ್ತು ರಾಮ್ ಜಾನೆ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟರು.

ಬಾಲಿವುಡ್ ನಲ್ಲಿ ಅತೀ ಕಡಿಮೆ ಸಮಯದಲ್ಲೇ ಆವರು ಕೋಟ್ಯಂತರ ಮಂದಿಯ ಹೃದಯ ಗೆದ್ದರು. ಆದರೆ ಇದು ಹೇಳುವಷ್ಟು ಸುಲಭವಾಗಿರಲಿಲ್ಲ. ಯಾವುದೇ ಸಿನೆಮಾ ಹಿನ್ನೆಲೆಯಿಲ್ಲದೆ ಶಾರೂಕ್ ಈ ಸ್ಥಿತಿಗೆ ಬರಲು ತುಂಬಾ ಕಠಿಣಶ್ರಮ ವಹಿಸಿದ್ದಾರೆ. ಶಾರೂಕ್ ಖಾನ್ ಜೀವನದಿಂದ ಹಲವಾರು ವಿಷಯಗಳನ್ನು ಕಲಿಯಬಹುದು. ಶಾರೂಕ್ ಖಾನ್ ಜೀವನದಿಂದ ಕಲಿಯಬಹುದಾದ ಕೆಲವು ಸ್ಪೂರ್ತಿಯ ಮತ್ತು ಪ್ರೇರಣೆಯ ವಿಷಯಗಳು.

ಹೊಸ ಹೇರ್ ಸ್ಟೈಲ್‌ನಿಂದ ತಮ್ಮ ಲಕ್ ಚೆಕ್ ಮಾಡುವ ಧೋನಿ!

1. ದೊಡ್ಡದನ್ನು ಯೋಚಿಸಿ

ಶಾರೂಕ್ ಖಾನ್ ಜೀವನ ಈ ಸಂದೇಶ ನಮಗೆ ನೀಡುತ್ತದೆ. ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ಆ ಮಟ್ಟದಲ್ಲೇ ಚಿಂತಿಸಬೇಕು. ನೀವು ಬಯಸಿದನ್ನು ಸಾಧಿಸಲು ಮತ್ತು ದೊಡ್ಡ ಸಾಧನೆ ಮಾಡಲು ನಿಮ್ಮಲ್ಲಿ ಆತ್ಮವಿಶ್ವಾಸ ತುಂಬಾ ಮುಖ್ಯ. ಶಾರೂಕ್ ಜೀವನ ಈ ಪಾಠ ಕಲಿಸುತ್ತದೆ.

2. ಕನಸು

ಮುಂಬಯಿಯ ಶ್ರೀಮಂತ ಪ್ರದೇಶದಲ್ಲಿ ಅರೇಬಿಯನ್ ಸಮುದ್ರಕ್ಕೆ ಮುಖಮಾಡಿರುವಂತಹ ದೊಡ್ಡ ಬಂಗಲೆಯೊಂದನ್ನು ಖರೀದಿಸಬೇಕೆಂದು ಶಾರೂಕ್ ಕನಸು ಕಂಡಿದ್ದರು. ಈಗ ಅವರು ಇಂತಹ ಬಂಗಲೆಯ ಮಾಲಕ.ಇದು ಶಾರೂಕ್ ಜೀವನದಿಂದ ಕಲಿಯಬೇಕಾದ ಪ್ರಮುಖ ಅಂಶ. ದೊಡ್ಡ ಕನಸು ಕಟ್ಟಿ ಮತ್ತು ಅದನ್ನು ವಾಸ್ತವದಲ್ಲಿ ಈಡೇರಿಸಿ.

3. ಪ್ರೀತಿಗೆ ಧರ್ಮವಿಲ್ಲ

ಶಾರೂಕ್ ಹಿಂದೂ ಧರ್ಮಕ್ಕೆ ಸೇರಿದ ಗೌರಿಯನ್ನು ಮದುವೆಯಾಗಿ ಸಂತೋಷದಿಂದ ಇದ್ದಾರೆ. ಹದಿಹರೆಯದಲ್ಲೇ ಅವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಅವರ ಪ್ರೇಮ ವಿವಾಹವು ಅಂತರ್ ಧರ್ಮೀಯ ಪ್ರೇಮಿಗಳಿಗೆ ಪ್ರೇರಣೆ. ಧರ್ಮದ ಹೊರತಾಗಿಯೂ ಗೌರಿ ಮೇಲೆ ಶಾರೂಕ್ ಗಿರುವ ಪ್ರೀತಿ ಅವರ ಜೀವನದಿಂದ ಕಲಿಯಬೇಕಾದ ಮತ್ತೊಂದು ಅಂಶ.

4. ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ

ಬಾಲಿವುಡ್ ನಲ್ಲಿ ತುಂಬಾ ಕಠಿಣ ಪರಿಶ್ರಮ ಪಡುವ ನಟರಲ್ಲಿ ಶಾರೂಕ್ ಒಬ್ಬ. ಬಾಲಿವುಡ್ ಗೆ ಪ್ರವೇಶಿಸಿದಾಗ ಅವರಿಗೆ ಯಾವುದೇ ರೀತಿಯ ಬೆಂಬಲವಿರಲಿಲ್ಲ. ಬಾಲಿವುಡ್ ಸಿನೆಮಾದ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ, ಆದರೂ ಬಾಲಿವುಡ್ ನಲ್ಲಿ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲಸದ ಬಗ್ಗೆ ಅವರಿಗಿರುವ ಶ್ರದ್ಧೆ ಮತ್ತು ಬದ್ಧತೆಯ ಫಲಿತಾಂಶ ಇದಾಗಿದೆ. ಈ ಪಾಠ ಅವರಿಂದ ಕಲಿಯಬೇಕು. ಯಾವುದೇ ಕೆಲಸವಾದರೂ ಕಠಿಣಪರಿಶ್ರಮ, ಬದ್ಧತೆ ಮತ್ತು ಶ್ರದ್ಧೆ ತುಂಬಾ ಮುಖ್ಯ.

5. ಎಲ್ಲರನ್ನೂ ಗೌರವಿಸಿ

ಶಾರೂಕ್ ಖಾನ್ ಜನ್ನತ್ ಬಂಗಲೆಯ ಒಳಗಡೆ ಒಂದು ಅನನ್ಯ ವೈಶಿಷ್ಟ್ಯ ಕಾಣಸಿಗುತ್ತದೆ. ಮನೆಯ ಒಳಗಡೆ ಹಿಂದೂ ಮತ್ತು ಮುಸ್ಲಿಂ ಎರಡು ಧರ್ಮದ ಪ್ರಾರ್ಥನಾ ಸ್ಥಳವಿದೆ. ಮದುವೆಯ ಬಳಿಕ ತನ್ನ ಪತ್ನಿ ಇಸ್ಲಾಂಗೆ ಮತಾಂತರವಾಗಬೇಕೆಂದು ಶಾರೂಕ್ ಒತ್ತಾಯಿಸಲಿಲ್ಲ. ಎರಡೂ ಧರ್ಮದ ಹಬ್ಬಗಳನ್ನು ಅವರು ಆಚರಿಸುತ್ತಾರೆ. ಮಕ್ಕಳಿಗೆ ಎರಡೂ ಧರ್ಮದ ಪಾಠ ಹೇಳಿಕೊಡಲಾಗುತ್ತಿದೆ. ಈ ಪಾಠವನ್ನು ಪ್ರತಿಯೊಬ್ಬರು ಶಾರೂಕ್ ನಿಂದ ಕಲಿಯಬೇಕು. ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯ ಮತ್ತು ತಾರತಮ್ಯ ಸ್ವೀಕಾರಾರ್ಹವಲ್ಲ ಮತ್ತು ಇದನ್ನು ಕಡೆಗಣಿಸಬೇಕು.

ಕಿಸ್ಸಿಂಗ್ ಬಗ್ಗೆ ಇರುವ ಕೆಲ ಇಂಟರೆಸ್ಟಿಂಗ್ ಅಂಶಗಳು

ಶಾರೂಕ್ ಖಾನ್ ಜೀವನದಿಂದ ಈ ಕೆಲವು ಜೀವನ ಪಾಠ ಕಲಿಯಬಹುದು. ಶಾರೂಕ್ ಮತ್ತು ಅವರ ಜೀವನದ ಬಗ್ಗೆ ಮತ್ತಷ್ಟು ಕಲಿಯಬೇಕಾದರೆ ತುಂಬಾ ದೀರ್ಘವಾಗಿ ಅಧ್ಯಯನ ಮಾಡಿ. ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯಬೇಕಾದರೆ ಶಾರೂಕ್ ಜೀವನದ ಪ್ರತಿಯೊಂದು ವಿಷಯವು ಮೌಲ್ಯಯುತವಾಗಿದೆ.

English summary

Life lessons to learn from Shah Rukh Khan

Shah Rukh Khan - who doesn't know this name. Not only in India but throughout the world, Shah Rukh Khan is a very famous and popular celebrity. He is the reigning king of Bollywood. Born on November 2, 1965 Shah Rukh Khan is now a very famous man.
Story first published: Saturday, May 31, 2014, 16:38 [IST]
X
Desktop Bottom Promotion