For Quick Alerts
ALLOW NOTIFICATIONS  
For Daily Alerts

ಐಸಿಡಬ್ಲ್ಯೂ 2014: ಕಣ್ಮನ ಸೆಳೆದ ವರುಣ್ ಬಾಲ್ ಅವರ ಫ್ಯಾಶನ್ ಝಲಕ್

|

ಐಸಿಡಬ್ಲ್ಯೂ 2014 ರ ಮೂರನೇ ದಿನದಂದು, ನಾವು ಮೂರು ವಿನ್ಯಾಸದ ಸಂಗ್ರಹಗಳನ್ನು ನೋಡಿದೆವು. ವರುಣ್ ಬಾಲ್ ದಿನದ ಎರಡನೇ ಸಂಗ್ರಹವನ್ನು ಪ್ರಸ್ತುತಪಡಿಸಿದರು. ತಮ್ಮ ಈ ಸಂಗ್ರಹಕ್ಕೆ 'ಇಂಡಿಯಾ ಮಾಡರ್ನ್' ಎಂಬ ಹೆಸರನ್ನಿಟ್ಟಿದ್ದರು. ಆಧುನಿಕ ಮಹಿಳೆಯ ವಾರ್ಡ್‌ರೋಬ್‌ನಲ್ಲಿರಲೇಬೇಕಾದ ಉಡುಗೆಗಳನ್ನೇ ವರುಣ್ ಬಾಲ್ ಅವರು ಪ್ರಸ್ತುತಪಡಿಸಿದ್ದಾರೆ.

ಐಸಿಡಬ್ಲ್ಯೂ 2014 ರ ಸಂಗ್ರಹ ಪ್ರತಿಯೊಬ್ಬ ಆಧುನಿಕ ಮಹಿಳೆಗೂ ತೀರಾ ಅಗತ್ಯವಾದುದು. ಇದು ಇಂಡೋ ವೆಸ್ಟರ್ನ್ ಮಿಶ್ರಿತವಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ್ದಾಗಿದೆ. ಸಿಗರೇಟ್ ಪ್ಯಾಂಟ್‌ಗಳು, ಸೀರೆ, ಅನಾರ್ಕಲಿ ಗೌನ್ ಹೀಗೆ ಭಾರತೀಯ ಆಧುನಿಕ ಮಹಿಳೆಗೆ ಒಪ್ಪುವಂತಹ ಉಡುಗೆಗಳನ್ನೇ ಅವರು ಕೆಲಸ ಮಾಡಿದ್ದಾರೆ.

ICW 2014: Varun Bahl’s Modern Indian Woman

ಐಸಿಡಬ್ಲ್ಯೂ 2014: ಮೋನಿಶಾ ಜೈಸಿಂಗ್ಸ್ ಫ್ಯಾಶನ್ ಝಲಕ್

ಕಪ್ಪು ಬಣ್ಣದ ಪ್ಯಾಲೇಟ್‌ನಲ್ಲಿ ವರುಣ್ ಬಾಲಾರ ಸಂಗ್ರಹ ವಿಭಿನ್ನ ಭಾರೀ ರಂಜನೀಯವಾಗಿತ್ತು. ಇದರಲ್ಲೂ ಬಿಳಿ ಬಣ್ಣದ ಅನಾರ್ಕಲಿ ಮನಸ್ಸನ್ನು ಕದಿಯುವ ರೀತಿಯಲ್ಲಿ ಮನಮೋಹಕವಾಗಿತ್ತು. ಈ ಸಂಗ್ರಹದಲ್ಲಿ ಅತಿ ಸಣ್ಣ ಅಂಶಕ್ಕೂ ಪ್ರಧಾನ ಗಮನ ಹರಿಸಿ ವಿಭಿನ್ನವಾಗಿ ರೂಪಿಸಲಾಗಿದೆ.

ದೆಹಲಿ ಅಥವಾ ನ್ಯೂಯಾರ್ಕ್‌ನಲ್ಲಿ ವಾಸವಾಗಿರುವ ಪ್ರತಿಯೊಬ್ಬ ಮಹಿಳೆಯೂ ಮೆಚ್ಚಿಕೊಳ್ಳುವ ಮತ್ತು ಅಗತ್ಯವಿರುವ ಉಡುಪುಗಳ ಪ್ರದರ್ಶನ ವರುಣ್ ಬಾಲ್‌ರ ವಿನ್ಯಾಸಿತ ಉಡುಪುಗಳು ಹೊಂದಿದ್ದವು. ಭಾರತೀಯ ವಸ್ತ್ರ ಮೇಳ 2014 ಕ್ಕೆ ವರುಣ್ ಬಾಲ್ ಹೊಸದೊಂದು ಮುನ್ನಡಿಯನ್ನೇ ಬರೆದಿದ್ದಾರೆ.

ಐಸಿಡಬ್ಲ್ಯೂ 2014 ಅಂಜು ಮೋದಿಯ ಕಣ್ಸೆಳೆಯುವ ವಿನ್ಯಾಸ

ಸೂಕ್ಷ್ಮವಾದ ಹೆಣಿಗೆಯನ್ನು ಹೊಂದಿರುವ ವರುಣ್ ಬಾಲ್ ಉಡುಗೆಗಳು ಎರಡು ಬಣ್ಣಗಳನ್ನು ಹೊಂದಿದ್ದವು ಎಂಬುದು ಇಲ್ಲಿ ವಿಶೇಷವಾಗಿದೆ. ಬಿಳಿ ಬಣ್ಣದ ಸೀರೆ ಮತ್ತು ಲೆಹಂಗಾದಲ್ಲಿ ಬಳಸಿದ ಗಾಢವಾದ ಗುಲಾಬಿ ಶೇಡ್ ಪ್ರತ್ಯೇಕವಾಗಿ ಗಮನಿಸುವಂಥದ್ದಾಗಿದೆ. ಮಸ್ಟರ್ಡ್ ಬಣ್ಣದ ಔಟ್‌ಫಿಟ್‌ಗಳು ಭಾರತೀಯ ಜಾನಪದ ಕಲೆಯಿಂದ ಆಕರ್ಷಿತವಾಗಿ ವಿನ್ಯಾಸಗೊಳಿಸಿದಂತಿದ್ದವು. ಎಂಬ್ರಾಯ್ಡಿರಿ ಮತ್ತು ಹೆಮ್‌ಲೈನ್‌ಗಳು ಈ ಸಂಗ್ರಹದಲ್ಲಿ ಗಮನಾರ್ಹ ಅಂಶಗಳಾಗಿವೆ.

English summary

ICW 2014: Varun Bahl’s Modern Indian Woman

On Day 3 of ICW 2014, we have 3 interesting designer collections scheduled. There was Varun Bahl presenting the second collection for the day. He titled his collection ‘India Modern'. This is also the basic gist of this collection.
Story first published: Friday, July 18, 2014, 10:44 [IST]
X
Desktop Bottom Promotion