For Quick Alerts
ALLOW NOTIFICATIONS  
For Daily Alerts

ವಾರಾಂತ್ಯದಲ್ಲಿ ಕೆಲಸದಿಂದ ಜಾರಿಕೊಳ್ಳುವುದು ಹೇಗೆ?

|

ವಾರಾಂತ್ಯದಲ್ಲಿ ಕೆಲಸ ಮಾಡುವುದು ದೊಡ್ಡ ತಲೆನೋವಿನ ಸಂಗತಿ. ಶುಕ್ರವಾರ ಬಂತೆಂದರೆ ಕೆಲವರಿಗೆ ಫುಲ್ ಖುಷಿ ವಾರಾಂತ್ಯದ ಎರಡು ರಜೆಗಳು ಅವರಿಗೆ ಅಮೂಲ್ಯ ನಿಧಿಯಂತೆ. ಆದರೆ ಇನ್ನು ಕೆಲವರಿಗೆ ಶನಿವಾರ ಆದಿತ್ಯವಾರ ಕೂಡ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ.

ಹಾಗಿದ್ದರೆ ಈ ದಿನಗಳಲ್ಲಿ ನಮಗೆ ವಿಶ್ರಾಂತಿ ತೆಗೆದುಕೊಳ್ಳಲು ಏನಾದರೂ ವಿಧಾನಗಳಿವೆಯೇ? ಖಂಡಿತ ಇದೆ. ದುಡಿಯುವವರಿಗೆ ರಜೆ ವಿಶ್ರಾಂತಿ ತೀರಾ ಅಗತ್ಯ ಹಾಗಿದ್ದರೆ ಈ ದಿನಗಳಲ್ಲಿ ತಪ್ಪಿಸಿಕೊಳ್ಳುವುದು ಹೇಗೆಂಬುದು ಇಂದಿನ ಲೇಖನದ ಮುಖ್ಯ ವಿಷಯವಾಗಿದೆ.

ನಿಮ್ಮ ಮಾನಸಿಕ ಆರೋಗ್ಯವನ್ನು ಹೀಗೆ ಸುಧಾರಿಸಿ

Cool Excuses For Not Working On Weekends

ಫೋನ್ ಕಳೆದುಕೊಳ್ಳುವುದು:
ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಅದು ಕಳೆದು ಹೋಯಿತೆಂದು ನಾಟಕವಾಡಿ. ಸೋಮವಾರ ನಿಮ್ಮ ಪತಿ ಅಥವಾ ಗೆಳೆಯರ ಫೋನ್ ಅನ್ನು ತೆಗೆದುಕೊಂಡು ಹೋಗಿ. ಈ ವಿಧಾನ ನಿಮಗೆ ಖಂಡಿತ ಸಹಾಯ ಮಾಡುತ್ತದೆ.

ಆರೋಗ್ಯ ಸಮಸ್ಯೆ:
ವಾರಾಂತ್ಯಗಳಲ್ಲಿ ನಿಮಗೆ ಆರೋಗ್ಯ ಸಮಸ್ಯೆಗಳಾದರೆ ರಜೆ ಹಾಕುವ ಅವಶ್ಯಕತೆ ಇರುವುದಿಲ್ಲ. ಹಾಗಿದ್ದರೆ ಆರೋಗ್ಯ ಸಮಸ್ಯೆಯ ಕಾರಣವನ್ನು ನೀಡಿ ರಜೆ ಪಡೆಯಿರಿ.

ಪ್ರಯಾಣ ಯೋಜನೆಗಳು:
ನೀವು ಇದಕ್ಕಾಗಿ ಹೊರಗೆ ಹೋಗಬೇಕೆಂದೇನಿಲ್ಲ. ನಿಮ್ಮ ಸಹೋದ್ಯೋಗಿ ಅಥವಾ ಬಾಸ್ ಬಳಿ ದೂರ ಪ್ರಯಾಣ ಹೋಗುತ್ತಿರುವುದಾಗಿ ತಿಳಿಸಿ ಮತ್ತು ಈ ಸಮಯದಲ್ಲಿ ನಾವು ಸಂಪರ್ಕಕ್ಕೆ ಸಿಗುವುದಿಲ್ಲ ಎಂಬುದನ್ನು ಪ್ರಸ್ತುತಪಡಿಸಿ.

ಸಮಾರಂಭಗಳು:
ಸಮಾರಂಭಗಳು ಇರುವುದಾಗಿ ಕಾರಣಗಳನ್ನು ಹೇಳಿ. ಮದುವೆ ವಾರ್ಷಿಕೋತ್ಸವ ಅಥವಾ ಚಿಕ್ಕಮ್ಮನ ಹುಟ್ಟುಹಬ್ಬ ಮುಂತಾದ ಕಾರಣಗಳನ್ನು ನಿಮಗೆ ತಿಳಿಸಬಹುದು.

ಬೆಂಗಳೂರಿನ ರಸ್ತೆ ಬದಿಯ ಫುಡ್‌ನ ವೈಶಿಷ್ಟ್ಯ ಗೊತ್ತಿದೆಯೇ?

ವೈದ್ಯಕೀಯ ತಪಾಸಣೆ:
ವೈದ್ಯಕೀಯ ತಪಾಸಣೆ ಮಾಡಿಕೊಳ್ಳಲು ವೈದ್ಯರು ಬರ ಹೇಳಿದ್ದಾರೆ ಎಂಬುದನ್ನು ತಿಳಿಸಿ. ಇದರಿಂದ ರಜಾ ದಿನದ ಮಜವೂ ನಿಮಗೆ ಸಿಗುತ್ತದೆ ಮತ್ತು ತಪಾಸಣೆ ಕೂಡ ನಡೆಸಿದಂತಾಗುತ್ತದೆ. ಇವುಗಳು ವಾರಾಂತ್ಯದ ವಿಶ್ರಾಂತಿ ಪಡೆಯಲು ಸೂಕ್ತ ವಿಧಾನಗಳಾಗಿದ್ದು ನೀವು ಖಂಡಿತ ಟ್ರೈ ಮಾಡಲೇಬೇಕು.

X
Desktop Bottom Promotion