For Quick Alerts
ALLOW NOTIFICATIONS  
For Daily Alerts

ನಿಮ್ಮ ಬದುಕನ್ನೇ ಬದಲಾಯಿಸಬಲ್ಲಂತಹ 8 ಪುಸ್ತಕಗಳು ಇಲ್ಲಿದೆ ನೋಡಿ!

By Deepak M
|

ಪುಸ್ತಕಗಳು ಕೆಲವರಿಗೆ ಸ್ನೇಹಿತರ ತರಹ ಮತ್ತು ಕೆಲವರಿಗೆ ಶಿಕ್ಷಕರ ತರಹ. ಒಂದು ಗುಂಪಿನ ಜನರು ಪುಸ್ತಕ ಓದುವುದನ್ನು ಹವ್ಯಾಸವೆಂದು ಪರಿಗಣಿಸಿ ಮಾತ್ರ ಓದುತ್ತಿರುತ್ತಾರೆ; ಇನ್ನೊಂದು ಗುಂಪಿನ ಜನ ಆಗಲ್ಲ, ಅವರಿಗೆ ಪುಸ್ತಕಗಳೆಂದರೆ ಪಂಚಪ್ರಾಣ ಆ ಪುಸ್ತಕಗಳನ್ನು ಸಮರ್ಪಣಾ ಭಾವದಿಂದ ಓದುವ ಗುಂಪು ಇದಾಗಿರುತ್ತದೆ.

ಆದರೆ ಕೆಲವು ಪುಸ್ತಕಗಳು ಇರುತ್ತವೆ ಅವು ನೀವು ಯಾವ ಗುಂಪಿಗೆ ಸೇರಿದ್ದೀರಿ, ಯಾವ ವರ್ಗಕ್ಕೆ ಸೇರಿದ್ದೀರಿ ಎಂಬ ಪ್ರಶ್ನೆಯೇ ಇಲ್ಲದೆ ನಿಮ್ಮ ಬದುಕಿನ ದಿಕ್ಕನ್ನೆ ಬದಲಾಯಿಸುವಂತಹ ಪ್ರಭಾವವನ್ನು ನಿಮ್ಮ ಮೇಲೆ ಬೀರುತ್ತವೆ. ಅದು ಒಳ್ಳೆಯ ಬದಲಾವಣೆಯೋ ಅಥವಾ ಕೆಟ್ಟ ಬದಲಾವಣೆಯೋ ಅದು ಬೇರೆ ಪ್ರಶ್ನೆ ಆದರೆ ನಿಮ್ಮ ಬದುಕಿನಲ್ಲಿ ಆ ಪುಸ್ತಕದಿಂದ ಶಾಶ್ವತವಾದ ಬದಲಾವಣೆಯಂತು ಆಗುವುದು ಖಂಡಿತ. ಆದರೆ ಬದುಕನ್ನು ಬದಲಾಯಿಸುವ ಮಾತಿಗೆ ಬಂದರೆ ಪುಸ್ತಕ ಓದುವುದರಿಂದ ಒಳ್ಳೆಯ ಬದಲಾವಣೆಯನ್ನೇ ನಿರೀಕ್ಷಿಸಬೇಕು, ಆಗಲೇ ಆ ಪುಸ್ತಕಕ್ಕೆ ಮತ್ತು ಓದುಗರಿಗೆ ಒಂದು ಬಗೆಯ ಸಾರ್ಥಕತೆ ಮೂಡುವುದು.

ಹಾಗಾದರೆ ಪುಸ್ತಕ ಓದುವುದರಿಂದ ಬದುಕು ಬದಲಾಗುತ್ತದೆ ಎಂಬುದನ್ನು ಪರೀಕ್ಷಿಸಬೇಕೆ ಅಥವಾ ಪುಸ್ತಕ ಓದುವುದರಿಂದ ನಿಮ್ಮ ಬದುಕನ್ನು ಬದಲಾಯಿಸಿಕೊಳ್ಳಬೇಕು ಎಂಬ ಆಸೆ ನಿಮಗಿದೆಯೇ? ಈ ಅಂಕಣ ಓದುತ್ತಿದ್ದೀರಿ ಎಂದರೆ ಆಸೆ ಇರಲೇ ಬೇಕು! ಮುಂದೆ ನಾವು ನೀಡಿರುವ ಪಟ್ಟಿಯನ್ನು ಓದಿ, ನಿಮ್ಮ ಪ್ರಶ್ನೆಗೆ ಉತ್ತರಗಳು ಸಿಗುತ್ತವೆ. ಹೆಚ್ಚಿನ ಮಾಹಿತಿಗೆ ಪಟ್ಟಿಯಲ್ಲಿ ನೀಡಿದ ಪುಸ್ತಕಗಳನ್ನು ಓದಬಹುದು!

ವಿಶ್ವದೆಲ್ಲೆಡೆ ಜನಪ್ರಿಯವಾಗಿರುವ ವಿವಿಧ ಬಗೆಯ ಕಾಫಿಗಳು!

ಝೆನ್ ಅಂಡ್ ಆರ್ಟ್ ಆಫ್ ಹ್ಯಾಪಿನೆಸ್ (Zen and the Art of Happiness)

ಝೆನ್ ಅಂಡ್ ಆರ್ಟ್ ಆಫ್ ಹ್ಯಾಪಿನೆಸ್ (Zen and the Art of Happiness)

ಸಂತಸ ಮತ್ತು ಧನಾತ್ಮಕ ಮನೋಭಾವದ ಕುರಿತಾಗಿ ಬರೆಯಲಾದ ಈ ಪುಸ್ತಕವು ನಿಮ್ಮನ್ನು ಆಹ್ಲಾದಕರವಾದ ಮತ್ತು ಸಂತಸದಿಂದ ಕೂಡಿದ ಜೀವನವನ್ನು ನಡೆಸಲು ಸ್ಫೂರ್ತಿಯನ್ನು ತುಂಬುತ್ತದೆ. ಇದನ್ನು ರಚಿಸಿದವರು ಕ್ರಿಸ್ ಪ್ರೆಂಟಿಸ್. ಇವರು ಈ ಪುಸ್ತಕದಲ್ಲಿ ನೆಮ್ಮದಿಯ ಬಗೆಗೆ ಮನುಷ್ಯನ ಭಾವನೆಗಳು ಹೇಗಿರುತ್ತವೆ ಎಂಬುದರ ಕುರಿತ ಪ್ರಾಯೋಗಿಕ ವಿಶ್ಲೇಷಣೆಯನ್ನು ಮಾಡಿದ್ದಾರೆ.

ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್ (Man’s Search for Meaning)

ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್ (Man’s Search for Meaning)

ಈ ಪುಸ್ತಕವನ್ನು ಬರೆದವರು ವಿಕ್ಟರ್ ಫ್ರಾಂಕ್ಲ್. ಇವರು ತಮ್ಮ ಜೀವಾನಾನುಭವವನ್ನೆ ಈ ಪುಸ್ತಕದಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇವರು ನಾಜಿ ಯಾತಾನ ಶಿಬಿರಗಳಲ್ಲಿ ಸೆರೆವಾಸವನ್ನು ಅನುಭವಿಸುವಾಗ ಜೀವನದ ಕುರಿತಾಗಿ ಹೊಸ ದೃಷ್ಟಿ ಕೋನವನ್ನು ಗ್ರಹಿಸಿದರು. ಈ ಪುಸ್ತಕವು ನಿಮ್ಮ ಜೀವನವನ್ನು ಬದಲಾಯಿಸಬಲ್ಲ ಕೆಲವು ಪುಸ್ತಕಗಳಲ್ಲಿ ಒಂದಾಗಿದೆ.

ಒನ್ ಹಂಡ್ರೆಡ್ ಯಿಯರ್ಸ್ ಆಫ್ ಸಾಲಿಟ್ಯೂಡ್ (One Hundred Years of Solitude)

ಒನ್ ಹಂಡ್ರೆಡ್ ಯಿಯರ್ಸ್ ಆಫ್ ಸಾಲಿಟ್ಯೂಡ್ (One Hundred Years of Solitude)

ನೀವು ಸಾಹಿತ್ಯವನ್ನು ಇಷ್ಟಪಡುವವರಾದಲ್ಲಿ ಖಂಡಿತ ಈ ಪುಸ್ತಕದ ಬಗ್ಗೆ ತಿಳಿದಿರುತ್ತೀರಿ. ನಿಮ್ಮ ಬದುಕನ್ನು ಬದಲಾಯಿಸಬಲ್ಲ ಕೆಲವೊಂದು ಪುಸ್ತಕಗಳ ಪಟ್ಟಿಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಪುಸ್ತಕಗಳಲ್ಲಿ ಇದು ಸಹ ಒಂದು. ಇದನ್ನು ಬರೆದವರು ನೋಬೆಲ್ ಪ್ರಶಸ್ತಿ ವಿಜೇತರಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೇಜ್.

ಥಿಂಕ್ ಅಂಡ್ ಗ್ರೋ ರಿಚ್ (Think and Grow Rich)

ಥಿಂಕ್ ಅಂಡ್ ಗ್ರೋ ರಿಚ್ (Think and Grow Rich)

ನಿಮ್ಮ ಬದುಕನ್ನು ಪುಸ್ತಕ ಓದುವುದರಿಂದ ಬದಲಾಯಿಸಿಕೊಳ್ಳಲು ಬಯಸಿದಲ್ಲಿ, ನಿಸ್ಸಂಶಯವಾಗಿ ಈ ಪುಸ್ತಕವನ್ನು ಓದಿ ಪ್ರಯತ್ನಿಸಿ. ನೆಪೋಲಿಯನ್ ಹಿಲ್ ಬರೆದಿರುವ ಈ ಪುಸ್ತಕವು ವ್ಯಕ್ತಿತ್ವ ವಿಕಾಸ ಮತ್ತು ಸ್ವ- ಸಹಾಯ ಮಾದರಿಯ ಪುಸ್ತಕವಾಗಿದೆ. ಈ ಪುಸ್ತಕವು ನೀವು ವಿಜೇತರಾಗಲು ಹೇಗೆ ನಿಮ್ಮ ಆಲೋಚನೆಗಳನ್ನು ಪ್ರಕ್ರಿಯೆಗೆ ಒಳಪಡಿಸಬೇಕು ಮತ್ತು ಅವುಗಳನ್ನು ಹೇಗೆ ದುಡಿಸಿಕೊಳ್ಳಬೇಕು ಎಂಬುದನ್ನು ವಿವರಿಸುತ್ತದೆ. ಕನ್ನಡದಲ್ಲಿ ಇದರ ಅನುವಾದಿತ ಕೃತಿ ದೊರೆಯುತ್ತದೆ ಒಮ್ಮೆ ಓದಿ, ಬದುಕು ಬದಲಾಯಿಸಿಕೊಳ್ಳಿ.

ಡೋಂಟ್ ಸ್ವೆಟ್ ದ ಸ್ಮಾಲ್ ಸ್ಟಫ್ಫ್ (Don't Sweat the Small Stuff)

ಡೋಂಟ್ ಸ್ವೆಟ್ ದ ಸ್ಮಾಲ್ ಸ್ಟಫ್ಫ್ (Don't Sweat the Small Stuff)

ಡಾ.ರಿಚರ್ಡ್ ಕಾರ್ಲ್‍ಸನ್ ಬರೆದಿರುವ ಸ್ಫೂರ್ತಿದಾಯಕ ಪುಸ್ತಕವು ಪುಸ್ತಕ ಓದಲು ಸಹ ಸ್ಫೂರ್ತಿಯನ್ನು ಒದಗಿಸುವಂತಿದೆ. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬುದು ಇದಕ್ಕೆ ಇರಬಹುದು. ಕಾಫಿ ಕುಡಿಯುತ್ತ ಒಂದು ಅಧ್ಯಾಯವನ್ನು ಓದಬಹುದಾದ ಈ ಪುಸ್ತಕದಲ್ಲಿ ಲೇಖಕರು ಜೀವನದಲ್ಲಿ ತಲೆದೋರಬಹುದಾದ ಗಂಭೀರವಾದ ವಿಚಾರಗಳನ್ನು ಕ್ಷುಲ್ಲಕ ಎಂದು ಪರಿತ್ಗಣಿಸಿ, ಹೇಗೆ ಒತ್ತಡದಿಂದ ಹೊರಬರಬಹುದು ಎಂದು ವಿವರಿಸಿದ್ದಾರೆ. ಬದುಕನ್ನೆ ಬದಲಾಯಿಸಿಕೊಳ್ಳಬೇಕು ಎಂಬುವವರು ಈ ಪುಸ್ತಕವನ್ನು ಒಮ್ಮೆ ಓದಲು ಪ್ರಯತ್ನಿಸಿ. ಆಮೇಲೆ ನೀವೇ ಮತ್ತೆ ಮತ್ತೆ ಓದುತ್ತಿರುತ್ತೀರಿ.

ದ ಪವರ್ ಆಫ್ ಪಾಸಿಟಿವ್ ಥಿಂಕಿಂಗ್ (The Power of Positive Thinking)

ದ ಪವರ್ ಆಫ್ ಪಾಸಿಟಿವ್ ಥಿಂಕಿಂಗ್ (The Power of Positive Thinking)

ಈ ಪುಸ್ತಕವು ಬರೀ ತತ್ವ ಙ್ಞಾನವನ್ನು ಮಾತ್ರ ಬೋಧಿಸುತ್ತದೆ ಎಂದು ಭಾವಿಸಿದ್ದೀರಾ? ಖಂಡಿತ ತಪ್ಪು! ಈ ಪುಸ್ತಕವು ಧನಾತ್ಮಕ ಚಿಂತನೆಯ ಮಹತ್ವದ ಕುರಿತಾಗಿ ಗಮನ ಕೇಂದ್ರೀಕರಿಸಿದೆ. ನಿರಾಯಾಸವಾಗಿ ಓದಿಸಿಕೊಂಡು ಸಾಗುವ ಈ ಪುಸ್ತಕವು ನಿಮಗೆ ಹಲವಾರು ಪ್ರಾಯೋಗಿಕ ಪರಿಹಾರಗಳನ್ನು ತಿಳಿಸಿಕೊಡುತ್ತದೆ.

ದ 7 ಹ್ಯಾಬಿಟ್ಸ್ ಆಫ್ ಹೈಯ್‍ಲಿ ಎಫೆಕ್ಟಿವ್ ಪೀಪಲ್ (The 7 Habits of Highly Effective People)

ದ 7 ಹ್ಯಾಬಿಟ್ಸ್ ಆಫ್ ಹೈಯ್‍ಲಿ ಎಫೆಕ್ಟಿವ್ ಪೀಪಲ್ (The 7 Habits of Highly Effective People)

ಸ್ಟ್ರೀಫನ್ ಕೋವಿ ಬರೆದ ಈ ಪುಸ್ತಕವು ಭಾರೀ ಜನಪ್ರಿಯಗೊಂಡಿದೆ. ಸಾಧಾರಣವಾಗಿ ನಾವೆಲ್ಲರು ಈಗಾಗಲೇ ಯಾವುದೋ ಒಂದು ಕ್ಷೇತ್ರದಲ್ಲಿ ಯಶಸ್ವಿಯಾಗಿರುವವರನ್ನು ಅನುಸರಿಸಲು ಇಷ್ಟಪಡುತ್ತೇವೆ. ಅಂತಹವರ ಕುರಿತು ತಿಳಿದುಕೊಂಡು ತಮ್ಮ ಜೀವನದಲ್ಲಿಯೂ ಬದಲಾವಣೆಯನ್ನು ತಂದುಕೊಳ್ಳಬೇಕು ಎಂದು ಇಚ್ಛಿಸುವವರು ಈ ಪುಸ್ತಕವನ್ನು ಓದಿ. ಇದು ಒಂದು ವ್ಯಕ್ತಿತ್ವ ವಿಕಾಸ ಮತ್ತು ವ್ಯವಹಾರ ಙ್ಞಾನವನ್ನು ಬೆಳೆಸುವ ಪುಸ್ತಕವಾಗಿದೆ.

ಅವೇಕನ್ ದ ಜಿಯಾಂಟ್ ವಿತ್‍ಇನ್ (Awaken the Giant Within)

ಅವೇಕನ್ ದ ಜಿಯಾಂಟ್ ವಿತ್‍ಇನ್ (Awaken the Giant Within)

ಆಂಟೋನಿ ರಾಬ್ಬಿನ್ಸ್ ಬರೆದಿರುವ ಈ ಪುಸ್ತಕವು ಸಹ ಒಂದು ಅದ್ಭುತವಾದ ಸ್ಫೂರ್ತಿದಾಯಕ ಪುಸ್ತಕವಾಗಿದೆ. ಇದು ಸಂಪೂರ್ಣವಾಗಿ ಪ್ರಯೋಗಿಕವಾದ ಪರಿಹಾರಗಳನ್ನು ಒಳಗೊಂಡಿದೆ. ನಿಮ್ಮ ಮಾನಸಿಕ, ದೈಹಿಕ ಮತ್ತು ವಾಸ್ತವಿಕ ಜೀವನವನ್ನು ನಿರ್ವಹಣೆ ಮಾಡಲು ಇದು ಹಂತ ಹಂತವಾಗಿ ಸಲಹೆಗಳನ್ನು ನೀಡುತ್ತದೆ. ಇದು ಸಹ ನಿಮ್ಮ ಬದುಕನ್ನು ಬದಲಾಯಿಸಬಲ್ಲಂತಹ ಪುಸ್ತಕಗಳಲ್ಲಿ ಒಂದಾಗಿದೆ.

English summary

8 Books That Can Change Your Life

Books are like friends for some and teachers for others. The former will be a crowd of people who consider reading books as a part of hobby. Of course, changing the life will make sense only if you consider books that will change your life for the better. If you are planning to read a book, try these interesting books that can change your life forever.
Story first published: Saturday, July 5, 2014, 14:52 [IST]
X
Desktop Bottom Promotion