ಕ್ರಿಸ್‌ಮಸ್ ಹಬ್ಬವನ್ನು 12 ದಿನಗಳ ಕಾಲ ಆಚರಿಸಲಾಗುತ್ತದೆಯೇ?

ಕ್ರಿಸ್‌ಮಸ್ ಹಬ್ಬವನ್ನು 12 ದಿನಗಳ ಕಾಲ ಆಚರಿಸಲಾಗುತ್ತದೆ ಎಂಬುದು ನಿಮಗೆಲ್ಲಾ ತಿಳಿದಿದೆಯೇ? ಹೌದು 12 ನೆಯ ದಿನವೇ ಕ್ರಿಸ್‌ಮಸ್ ಹಬ್ಬವಾಗಿದ್ದು ಇದು ಕೊನೆಗೊಳ್ಳುವುದು ಜನವರಿ 5 ಅಥವಾ 6 ನೆಯ ತಾರೀಕಿನಂದಾಗಿದೆ. ಇದನ್ನು ಎಫನಿ ಎಂದು ಕರೆಯಲಾಗಿದ

By: Jaya subramanya
Subscribe to Boldsky

ಎಲ್ಲರಿಗೂ ತಿಳಿದಂತೆ ಕ್ರಿಸ್‌ಮಸ್ ಹಬ್ಬವನ್ನು ಡಿಸೆಂಬರ್ 25 ರಂದು ಆಚರಿಸುತ್ತಾರೆ. ನಾವು ಒಂದೇ ದಿನದಂದು ಏಸುವಿನ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಿ ಮುಂದಿನ ವರ್ಷದ ಕ್ರಿಸ್‌ಮಸ್‌ಗಾಗಿ ಕಾಯುತ್ತೇವೆ. ಆದರೆ ನಿಮಗೆ ಗೊತ್ತೇ?

ಕ್ರಿಸ್‌ಮಸ್ ಹಬ್ಬವನ್ನು 12 ದಿನಗಳ ಕಾಲ ಆಚರಿಸಲಾಗುತ್ತದೆ ಎಂಬುದು ನಿಮಗೆಲ್ಲಾ ತಿಳಿದಿದೆಯೇ? ಹೌದು 12 ನೆಯ ದಿನವೇ ಕ್ರಿಸ್‌ಮಸ್ ಹಬ್ಬವಾಗಿದ್ದು ಇದು ಕೊನೆಗೊಳ್ಳುವುದು ಜನವರಿ 5 ಅಥವಾ 6 ನೆಯ ತಾರೀಕಿನಂದಾಗಿದೆ. ಇದನ್ನು ಎಫನಿ ಎಂದು ಕರೆಯಲಾಗಿದೆ. ಇದು ಕ್ರಿಶ್ಚಿಯನ್ ಫೀಸ್ಟ್ ಆಗಿದ್ದು ಇಡೀ ಮಾನವ ಕುಲಕ್ಕೆ ದೇವರ ಅನನ್ಯ ಅನುಭೂತಿ ಇದಾಗಿದೆ. ಕ್ರಿಸ್‌ಮಸ್‌ ವಿಶೇಷ: ನಂಬಿಕೆ ಭರವಸೆಯ ಪ್ರತೀಕ 'ಮೇಣದ ಬತ್ತಿ'

Christmas tree

ಕ್ರಿಸ್‌ಮಸ್‌ನ ಹನ್ನೆರಡನೇ ದಿನವು ಏಸುವಿನ ಜನನ ದಿನವನ್ನು ಸಾರುತ್ತದೆ. ಬಾಲ ಏಸುವಿನ ಜನ್ಮ ವೃತ್ತಾಂತವನ್ನು ಈ ಹನ್ನೆರಡನೆಯ ದಿನ ತಿಳಿಸಲಿದ್ದು ಬ್ಯಾಪ್ಟಿಸಂಗೆ ಆತನ ಪ್ರಯಾಣವನ್ನು ಸಾರಲಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಕ್ರಿಸ್‌ಮಸ್‌ನ 12 ದಿನಗಳ ವಿಶೇಷತೆಯನ್ನು ಅರಿತುಕೊಳ್ಳೋಣ....

ಪ್ರಥಮ ದಿನ
ಡಿಸೆಂಬರ್ 25 ರಂದು ಪೂರ್ವ ಸಾಂಪ್ರದಾಯಿಕ ಚರ್ಚ್‌ಗಳಲ್ಲಿ ಏಸುವಿನ ಜನ್ಮದಿನವನ್ನು ಕೊಂಡಾಡಲಾಗುತ್ತದೆ. ಇದು ಡಿಸೆಂಬರ್ 25 ರ ಸಂಜೆ ಆರಂಭವಾಗುತ್ತದೆ. ಬೆತ್ಲಹೆಮ್‌ನಲ್ಲಿ ಏಸುವಿನ ಜನನ ಮೊದಲಾದ ಕಥೆಗಳನ್ನು ಇದು ತಿಳಿಸಲಿದೆ. ಕ್ರಿಸ್‌ಮಸ್ ವಿಶೇಷ: ನೀವು ತಿಳಿದಿರದ ಇಂಟರೆಸ್ಟಿಂಗ್ ವಿಷಯಗಳು...

Christmas candle

ಎರಡನೇ ದಿನ
ಪವಿತ್ರ ಥೆಟೊಕಸ್‌ನ ಮಹತ್ವವನ್ನು ತಿಳಿಸಲಿದೆ. ಜೀಸಸ್‌ನ ತಾಯಿ ಮೇರಿಯ ಕುರಿತಾದ ಸಂಗತಿಗಳನ್ನು ಸಾರಲಾಗುತ್ತದೆ.

ಮೂರನೇ ದಿನ
ಸಂತ ಸ್ಟೀಫನ್‌ನ ಪ್ರೊಟೊಡಿಕನ್ ಮತ್ತು ಪ್ರೊಟೊಮರ್ಟರ್ ಎಂಬುದಾಗಿ ಕರೆಯಲಾಗಿದ್ದು ಇದನ್ನು ಹಬ್ಬವೆಂದು ಸ್ಮರಿಸಲಾಗುತ್ತದೆ.

Christmas

ನಾಲ್ಕನೇ ದಿನ
ಪವಿತ್ರ ಮುಗ್ಧರ ಸಾಂಪ್ರದಾಯಿಕ ಹಬ್ಬವೆಂದು ಡಿಸೆಂಬರ್ 29 ನ್ನು ಕರೆಯಲಾಗಿದ್ದು ಕ್ರಿಸ್‌ಮಸ್‌ನ ನಾಲ್ಕನೇ ದಿನ ಇದಾಗಿದೆ.

ಐದು ಮತ್ತು ಆರನೇ ದಿನ
ನೇಟಿವಿಟಿ ಹಬ್ಬವು ಡಿಸೆಂಬರ್ 31 ರವರೆಗೆ ನಡೆಯುತ್ತದೆ. ಈ ದಿನವನ್ನು ನೇಟಿವಿಟಿ ಬೀಳ್ಕೊಡುಗೆ ಎಂದು ಕರೆಯಲಾಗಿದೆ.

ಏಳನೇ ದಿನ
ರಷ್ಯಾದ ಸಂಕೇತವಾಗಿರುವ ಥೆಫೊನಿಯ ಪ್ರಕಾರ, ಜನವರಿ 1 ರಂದು ಇನ್ನೊಂದು ದೇವರ ಹುಟ್ಟುಹಬ್ಬವಿದೆ. ಇದನ್ನು ದೇವರ ಸುನತಿ ಎಂದು ಕರೆಯಲಾಗಿದೆ. ಸಾಮಾನ್ಯ ಜನರೊಂದಿಗೆ ಸಂತ ಬೇಸಿಲ್ ಕೂಡ ಹಬ್ಬವನ್ನು ಆಚರಿಸುತ್ತಾರೆ ಎಂಬ ನಂಬಿಕೆ ಇದೆ. ಈ ದಿನದಂದು ಆಚರಿಸಲಾಗುವ ಸೇವೆಗಳನ್ನು ಸೇಂಟ್ ಬೇಸಿಲ್‌ನ ಪವಿತ್ರ ಪ್ರಾರ್ಥನೆ ಎಂಬುದಾಗಿ ಕರೆಯಲಾಗಿದೆ.

ಎಂಟರಿಂದ ಹನ್ನೊಂದನೇ ದಿನ
ಥಿಯೋಫೆನಿಯ ಫೋರ್‌ಫೀಸ್ಟ್‌ನೊಂದಿಗೆ ಜನವರಿ 2 ಆರಂಭವಾಗುತ್ತಿದ್ದು ಇದು ಮೂರು ದಿನಗಳ ಕಾಲ ನಡೆಯುತ್ತದೆ.

Christmas tree

ಹನ್ನೆರಡನೇ ದಿನ
ಕ್ರಿಸ್‌ಮಸ್‌ನ ಕೊನೆಯ ದಿನವನ್ನು ಉಪವಾಸವಿದ್ದುಕೊಂಡು ಆಚರಿಸಲಾಗುತ್ತದೆ. ರಾತ್ರಿಯಲ್ಲಿ ಮೊದಲ ನಕ್ಷತ್ರ ಕಾಣುವವರೆಗೂ ಏನನ್ನೂ ತಿನ್ನಬಾರದೆಂಬುದಾಗಿ ದೇವರು ತಮ್ಮ ಜನರಿಗೆ ತಿಳಿಸಿದ್ದಾರೆ ಎಂಬುದಾಗಿ ಕ್ರಿಶ್ಚಿಯನ್ ಪುರಾಣಗಳು ತಿಳಿಸಿವೆ. 'ಪವಿತ್ರ ಜಲದ ಪ್ಯಾರಮನಿ' ಎಂಬುದಾಗಿ ಇದನ್ನು ಕರೆಯಲಾಗಿದೆ.

ಹನ್ನೆರಡನೆಯ ದಿನ
ಜೋರ್ಡನ್ ನದಿಯ ಬಳಿ ಜಾನ್‌ನಿಂದ ಏಸುವು ಬ್ಯಾಪ್ಟೈಸ್ ಮಾಡಿಕೊಳ್ಳುತ್ತಾರೆ.

Story first published: Tuesday, December 20, 2016, 23:35 [IST]
English summary

Say Merry Christmas For 12 Days

Before you say that Christmas is celebrated only on 25 December just wait for a while and think, is Christmas just celebrated on one day? The answer is No! Many of us celebrate Christmas for a day or two but do you know that Christmas is a 12-day-celebration?
Please Wait while comments are loading...
Subscribe Newsletter