For Quick Alerts
ALLOW NOTIFICATIONS  
For Daily Alerts

'ಸ್ಟೋನ್ ಬೇಬಿ'ಗೆ ಜನ್ಮ ನೀಡಿದ ಮಹಾತಾಯಿ!

|

ಒಬ್ಬ ತಾಯಿಗೆ ತನ್ನ ಮಗುವನ್ನು ಗರ್ಭದಲ್ಲಿ ಎಷ್ಟು ಕಾಲ ಬಚ್ಚಿಡಲು ಸಾಧ್ಯ? ಒಂಬತ್ತು ತಿಂಗಳಾದ ಬಳಿಕ ಮಗು ತಾಯಿಯ ಗರ್ಭದಿಂದ ಈ ಪ್ರಪಂಚಕ್ಕೆ ಬಂದೇ ಬರುತ್ತದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಇಲ್ಲೊಬ್ಬಳು ಮಹಾತಾಯಿ ತನ್ನ ಮಗುವನ್ನು 1955ರಿಂದ ಗರ್ಭದಲ್ಲಿಯೇ ಇಟ್ಟುಕೊಂಡಿದ್ದಳು. ಮಗುವಿಗೆ ಹೊರ ಪ್ರಪಂಚ ನೋಡಲು ಅವಕಾಶವೇ ಕೊಟ್ಟಿರಲಿಲ್ಲ! ನಂಬಲಾಸಾಧ್ಯ ಅಲ್ಲವೇ? ಆದರೆ ನಂಬಲೇ ಬೇಕು. ಸುಮಾರು 400 ವರ್ಷಗಳಲ್ಲಿ 300 ಈ ರೀತಿಯ ಪ್ರಕರಣಗಳು ಕಂಡು ಬಂದಿದೆ ಎಂದು ವೈದ್ಯಕೀಯ ಜಗತ್ತು ಹೇಳುತ್ತದೆ.

1955ರಲ್ಲಿ ಕಾಸಾಬ್ಲಾಂಕಾದ ಹೊರಗಡೆಯಿರುವ ಚಿಕ್ಕ ಹಳ್ಳಿಯ ಝಹರಾ ಎನ್ನುವ ಮಹಿಳೆಗೆ ಹೆರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು, 48 ಗಂಟೆಗಳ ಕಾಲ ತೀವ್ರವಾದ ಹೆರಿಗೆ ನೋವು ಅನುಭವಿಸಿದರೂ ಮಗು ಜನಿಸಿರಲಿಲ್ಲ, ಆಗ ಝಹರಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವಳನ್ನು ಲೇಬರ್ ವಾರ್ಡ್ ನಲ್ಲಿ ಮಲಗಿಸಿದರು, ತನ್ನ ಪಕ್ಕದಲ್ಲಿ ಮಲಗಿದ್ದ ಮಹಿಳೆ ಹೆರಿಗೆ ನೋವಿನಿಂದ ಒದ್ದಾಡುತ್ತಾ ಪ್ರಾಣ ಬಿಟ್ಟದ್ದನ್ನು ಕಣ್ಣಾರೆ ಕಂಡ ಝಹರಾ ಒಂದು ಕ್ಷಣ ತನ್ನ ಹೆರಿಗೆ ನೋವನ್ನು ಮರೆತಳು, ಅಲ್ಲಿದ್ದರೆ ನಾನೆಲ್ಲಿ ಸತ್ತು ಹೋಗುವೆನೋ ಎಂಬ ಭಯದಿಂದ, ಹೆರಿಗೆಯಾಗದೆಯೇ ಮನೆಗೆ ಬಂದಳು.

Zahra Gave Birth To A 'Stone Baby

ತುಂಬಾ ಭಯದಲ್ಲಿದ್ದ ಝಹರಾ ತಾನು ಗರ್ಭಿಣಿ, ನನ್ನ ಮಗುವಿಗೆ ಜನ್ಮ ನೀಡಬೇಕು ಎಂಬ ವಿಷಯವನ್ನು ಸಂಪೂರ್ಣವಾಗಿ ಮರೆತು ಬದುಕಲಾರಂಭಿಸಿದಳು, ಅವಳ ಈ ಆಲೋಚನೆಗೆ ದೇಹ ಸ್ಪಂದಿಸುತ್ತೇನೋ ಎಂಬಂತೆ ಮತ್ತೆ ಅವಳಿಗೆ ಹೆರಿಗೆ ನೋವು ಕಾಣಿಸಲೇ ಇಲ್ಲ, ಹೊಟ್ಟೆಯಲ್ಲಿಯೇ ಆ ಮಗು ಉಳಿದುಕೊಂಡಿತು. ವರ್ಷಗಳು ಉರುಳಿದವು. ಝಹರಾ 3 ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕಿದಳು, ಮಕ್ಕಳಿಗೆ ಮದುವೆಯಾಗಿ ಮೊಮ್ಮಕ್ಕಳೂ ಇದ್ದಾರೆ. ಈಗ ಝಹರಾಳಿಗೆ 75 ವರ್ಷ. ಆದರೆ ಈ ಮಿಸ್ಟ್ರೀ ಇಲ್ಲಿಗೇ ನಿಂತಿಲ್ಲ.

ಇತ್ತೀಚಿಗೆ ಝಹರಾಳಿಗೆ ಹೊಟ್ಟೆ ನೋವು ಕಾಣಿಸಿತು, ಊದಿಕೊಂಡಂತಿದ್ದ ಹೊಟ್ಟೆ ನೋಡಿದ ವೈದ್ಯರು ಬಹುಶಃ ಟ್ಯೂಮರ್ ಇರಬಹುದೆಂದು ಭಾವಿಸಿ, ಸ್ಕ್ಯಾನಿಂಗ್ ಮಾಡಿಸಿದರು. ಸ್ಕ್ಯಾನಿಂಗ್ ರಿಪೋರ್ಟ್ ನೋಡಿದಾಗ ಆ ವೈದ್ಯರು ಒಂದು ಕ್ಷಣ ಬೆಚ್ಚಿ ಬಿದ್ದರು, ಹೊಟ್ಟೆಯಲ್ಲಿ ಇದ್ದದು ಗಡ್ಡೆಯಲ್ಲ, ಅದರ ಬದಲು ಮಗುವಾಗಿತ್ತು!

ಆದರೆ ಆ ಮಗು ಜಿವಂತವಾಗಿರಲಿಲ್ಲ, ಬದಲು ಅದು ಗಟ್ಟಿಯಾಗಿ ಪರಿವರ್ತನೆಯಾಗಿತ್ತು! ಇದನ್ನು ವೈದ್ಯಕೀಯ ಭಾಷೆಯಲ್ಲಿ 'Lithopedion' ಅಥವಾ 'ಸ್ಟೋನ್ ಬೇಬಿ' ಎಂದು ಕರೆಯುತ್ತಾರೆ.

ಮಗು ಗರ್ಭಕೋಶದಿಂದ ಹೊರಗಡೆಯಿದ್ದು, ಅಲ್ಲಿಯೇ ಗಟ್ಟಿಯಾಗಿತ್ತು, ತಾಯಿಯ ದೇಹದ ರಕ್ಷಣೆಯಿಂದ ಮಗುವಿಗೆ ಯಾವುದೇ ಸೋಂಕು (infection) ತಾಗಿಲ್ಲದ ಕಾರಣ ದೇಹ ಕೊಳೆಯದೆ, ಹುಣ್ಣಾಗದೆ, ಗಟ್ಟಿಯಾಗಿ ಮಾರ್ಪಟ್ಟಿತು. ಈ ಮಗುವನ್ನು ಹೊರತೆಗೆಯುವುದು ವೈದ್ಯಕೀಯ ಜಗತ್ತಿಗೆ ಸವಾಲಿನ ವಿಷಯವಾಗಿತ್ತು. ಝಹರಾ ಅಧಿಕ ರಕ್ತಸ್ರಾವದಿಂದ ಸಾಯುವ ಸಂಭವಿತ್ತು, ಆದರೆ ಇಲ್ಲಿಯೂ ಝಹರಾಳ ಅದೃಷ್ಟ ಚೆನ್ನಾಗಿತ್ತು. ಝಹರಾಳ ಹೊಟ್ಟೆಯಲ್ಲಿದ್ದ ಸ್ಟೋನ್ ಬೇಬಿಯನ್ನು ಆಪರೇಷನ್ ಮಾಡಿ ಹೊರತೆಗೆಯಲಾಯಿತು.

ಮನುಷ್ಯನ ಮನಸ್ಸಿಗೆ ಎಷ್ಟೊಂದು ಶಕ್ತಿ ಇದೆಯೆಲ್ಲಾ? ಝಹರಾ ಹೆರಿಗೆಯಾಗುವುದು ಬೇಡವೆಂದು ತೀರ್ಮಾನಿಸಿದ್ದರಿಂದ ಈ ಮಗು ಈ ಜಗತ್ತನ್ನು ಕಾಣಲೇ ಇಲ್ಲ!

English summary

Zahra Gave Birth To A 'Stone Baby'

In 1955 Zahra Aboutalib was a nine month pregnant lady, that time she decided not to give birth to the baby. She forgot her labour pain, that baby was there in her stomach almost 50 years. Now She gave birth to a stone babay. 
X
Desktop Bottom Promotion