For Quick Alerts
ALLOW NOTIFICATIONS  
For Daily Alerts

ಈ ಟೀ ಶರ್ಟ್ಸ್ ಧರಿಸುವುದನ್ನು ಇಂದೇ ಸ್ಟಾಪ್ ಮಾಡಿ!

By Super
|

ಘೋಷವಾಕ್ಯಗಳುಳ್ಳ ಟೀ ಶರ್ಟ್ ಗಳು ನೀವು ಯಾರು-ಏನು ಎಂಬುದರ ಬಗ್ಗೆ ಬಹಳಷ್ಟನ್ನು ಹೇಳುತ್ತವೆ, ಆದರೆ ಕೆಲವು ಮಾತ್ರ ನಿಮ್ಮನ್ನು ಒಟ್ಟಾರೆ ಸೋಲುಗಾರರೆಂದು ನಿಮ್ಮನ್ನು ಪರಿಚಯಿಸಿಬಿಡುತ್ತವೆ! ಈ ಬಗ್ಗೆ ಹುಷಾರಾಗಿ ಇರಿ.

ಸ್ವಂತದ ಬಗ್ಗೆ ಪ್ರಚಾರ ಮಾಡಿಕೊಳ್ಳುವುದೇನೋ ಒಳ್ಳೆಯದೇ, ಆದರೆ ಅಬ್ಬರ ಆರ್ಭಟದಿಂದ ಅರಚುವುದು ಅತಿಯಾದೀತು. ಅಲ್ಲವೇ?

ಏನೇ ಇರಲಿ, ಇಂತಹ ಟೀ ಶರ್ಟ್ ಗಳನ್ನು ಹಾಕಿಕೊಳ್ಳದಿರುವುದು ಒಳ್ಳೆಯದು.

1. ಕಂಪನಿಯ ಹೆಸರುಳ್ಳ ಟೀ ಶರ್ಟ್ ಗಳು

1. ಕಂಪನಿಯ ಹೆಸರುಳ್ಳ ಟೀ ಶರ್ಟ್ ಗಳು

ನೀವು ಟೀ ಶರ್ಟ್ ಗಳನ್ನು FCUK ಯಿಂದಲೋ , UMM ಯಿಂದಲೋ, ಅಥವಾ ಯೂನೈಟೆಡ್ ಕಲರ್ಸ್ ಆಫ್ ಬೆನೆಟ್ಟನ್ ನಿಂದಲೋ ಖರೀದಿಸುತ್ತೀರಿ ಎಂಬುದು ನಮಗೆ ಬೇಕಿಲ್ಲ , ಆದರೆ ನಿಮ್ಮ ಎದೆಯ ಮೇಲೆ ರಾರಾಜಿಸುವ ಹೆಸರಿನಿಂದಾಗಿ ಎಲ್ಲ ಕಡೆಗಳಲ್ಲೂ ನೀವು ಅನಗತ್ಯವಾಗಿ ಎದ್ದು ಕಾಣಿಸುತ್ತೀರಿ.

2. ಅಶ್ಲೀಲ ಕೈಸನ್ನೆಗಳ ಟೀ ಶರ್ಟ್

2. ಅಶ್ಲೀಲ ಕೈಸನ್ನೆಗಳ ಟೀ ಶರ್ಟ್

ಅಶ್ಲೀಲ ರೀತಿಯಲ್ಲಿ ಮೇಲ್ಮುಖವಾಗಿರುವ ನಡುಬೆರಳಿನ ಚಿತ್ರ ಇರುವ ಟೀ ಶರ್ಟ್ ಯಾರು ತಾನೇ ಹಾಕಿಕೊಳ್ಳಲು ಬಯಸಿಯಾರು? ಅದು ಮನುಜಕುಲದ ವಿರುದ್ಧದ ಘೋರ ಅಪರಾಧವೂ ಆಗಿದೆ.

3. ಹಳಸಲು ಘೋಷಣೆಗಳ ಟೀ ಶರ್ಟ್

3. ಹಳಸಲು ಘೋಷಣೆಗಳ ಟೀ ಶರ್ಟ್

ಇವು 1980ರ ದಶಕದಲ್ಲಿಯೇ ಹಳಸಲಾಗಿದ್ದವು. ಮತ್ತೆ ಯಾರು ಇವಕ್ಕೆ ಜೀವ ತುಂಬಿದರೋ ಗೊತ್ತಿಲ್ಲ. ಇವನ್ನು ಬಳಸದಿರುವುದು ಒಳ್ಳೆಯದು. 'I Look Better Naked' ( ನಾನು ಬೆತ್ತಲೆಯಾಗಿದ್ದಾಗ ಚೆಂದ ಕಾಣುತ್ತೇನೆ) , ಅದರಲ್ಲೂ ತುಂಬ ಕೊಳಕಾದದ್ದು -'F.B.I. Female Body Inspector' ( ಹೆಣ್ಣು ದೇಹದ ಪರೀಕ್ಷಕ) ಇಂತಹ ವಾಕ್ಯಗಳ ಟೀ ಶರ್ಟ್ ಗಳನ್ನು ಕೆಲವರು ಹಾಕಿಕೊಳ್ಳುತ್ತಾರೆ! ಆದರೆ ಹಾಕಿಕೊಳ್ಳದಿರುವುದು ಸಭ್ಯತೆ.

4. I'm With Stupid- ನಾನು ಮೂರ್ಖನ ಜತೆ ಇದ್ದೇನೆ

4. I'm With Stupid- ನಾನು ಮೂರ್ಖನ ಜತೆ ಇದ್ದೇನೆ

ಈ ತರಹದ ವಾಕ್ಯ ಇರುವ ಟೀ ಶರ್ಟ್ ಹಾಕಿಕೊಂಡಿದ್ದು ಹತ್ತುವರ್ಷದ ಹಿಂದೆ ಮೊದಲ ಬಾರಿ ತಮಾಷೆ ಆಗಿತ್ತೇನೋ ನಿಜ. ಆದರೆ ನಂತರ ತಮಾಷೆ ಆಗಿ ಉಳಿಯಲಿಲ್ಲ. ಜನರು ನಿಮ್ಮ ಟೀ ಶರ್ಟ್ ನ ಕಾರಣದಿಂದಾಗಿ, ಅದನ್ನು ಹಾಕಿಕೊಳ್ಳುವ ನಿಮ್ಮ ನಿರುತ್ತೇಜಕ ವ್ಯಕ್ತಿತ್ವದಿಂದಾಗಿ ನಿಮ್ಮ ಹತ್ತಿರ ಸುಳಿಯಲೇ ಹಿಂಜರಿಯುವುದು ಖಂಡಿತ.

5. ತಪ್ಪು ಕಾಗುಣಿತದ ಟಿಶರ್ಟ್

5. ತಪ್ಪು ಕಾಗುಣಿತದ ಟಿಶರ್ಟ್

ಇವು ಕೂಡ ಘೋಷವಾಕ್ಯಗಳ ಟೀ ಶರ್ಟ್ ಗಳನ್ನು ಹಾಗೆ ಮೊದಲ ಸಲ ನೋಡಿದಾಗೆ ತಮಾಷೆಯಾಗಿರುತ್ತವೇನೋ ನಿಜ ಆದರೆ ಒಂದು ಹಂತದ ನಂತರ ಕಿರಿಕಿರಿಯನ್ನು ಉಂಟುಮಾಡುತ್ತವೆ.

6. ಮದ್ಯಸೇವನೆಯ ಟೀ ಶರ್ಟ್

6. ಮದ್ಯಸೇವನೆಯ ಟೀ ಶರ್ಟ್

ಪಾರ್ಟಿಗಳಲ್ಲಿ ಧರಿಸಲು ಇವು ತಮಾಷೆಯಾಗಿರುತ್ತವೆ, ನಿಜ. ಆದರೆ ಶಾಲೆ, ಕಾಲೇಜು, ಕೆಲಸ ಮಾಡುವ ಸ್ಥಳ , ಅಥವಾ ಪಾರ್ಟಿಗಳು ಜರುಗುತ್ತಿಲ್ಲದ ಯಾವುದೇ ಸ್ಥಳಗಳು ನೀವು ಪಕ್ಕಾ ಕುಡುಕರೆಂಬುದನ್ನು ಸಾರಿ ಹೇಳುತ್ತವೆ.

7. ನಕಲಿ ದೇಹಪ್ರದರ್ಶನದ ಟೀ ಶರ್ಟ್

7. ನಕಲಿ ದೇಹಪ್ರದರ್ಶನದ ಟೀ ಶರ್ಟ್

ಬಲಿಷ್ಠ ಸ್ನಾಯುಗಳು, ಮಾಂಸಖಂಡಗಳ ನಟ ಸಲ್ಮಾನ್ ಖಾನ್ ತರಹದ ಸಂಪೂರ್ಣ ದೇಹದ ಚಿತ್ರಣ ಇರುವ ಟೀ ಶರ್ಟ್ ಎದ್ದು ಕಾಣುವುವಾದರೂ ನೀವು ಮಂದ ಬೆಳವಣಿಗೆಯ ಬುದ್ಧಿಯವರು ಎಂಬುದನ್ನು ಎತ್ತಿ ತೋರಿಸುತ್ತವೆ, ಇಷ್ಟಕ್ಕೂ ಅವು ದೇಹದ ಚರ್ಮದ ಬಣ್ಣಕ್ಕೆ ಹೊಂದಾಣಕೆಯೂ ಆಗುವುದಿಲ್ಲ. ಇವನ್ನು ನೋಡಿದಾಗ ಪ್ರತಿಬಾರಿಯೂ ಬಿದ್ದು ಬಿದ್ದು ನಗುವಂತೆ ನಮ್ಮನ್ನು ಮಾಡಿವೆ.

ಇಂತಹ ಟೀ ಶರ್ಟ್ ಗಳು ಏನಾದರೂ ನಿಮ್ಮ ಬಳಿ ಇದ್ದರೆ ಯಾವುದೇ ಸಾಕ್ಷಿಯೂ ಉಳಿಯದಂತೆ ಅವುಗಳನ್ನು ಸುಟ್ಟುಹಾಕಿ ಎಂಬುದು ನಮ್ಮ ಸಲಹೆ.

English summary

Types of T-shirts you should avoid wearing

T-Shirts with slogans says a lot about who you are, but here are a few that'll totally tag you as a loser. Beware! Subtle marketing is fine, but shoving it down our throat while screaming at the same time is a bit too much. Be a human and stop yelling your style out. What you say?
 
X
Desktop Bottom Promotion