For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಆಚರಿಸುವ ವಿವಿಧ ಬಗೆಯ ನವರಾತ್ರಿ ಹಬ್ಬಗಳು

By ರೀನಾ
|

ಭಾರತದ ಎಲ್ಲಾ ಕಡೆಗಳಲ್ಲೂ ನವರಾತ್ರಿಯ ಸಂಭ್ರಮ. 9 ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ 9 ಬಗೆಯ ದೇವರನ್ನು ದೇವತೆಗಳನ್ನು ಆರಾಧಿಸಲಾಗುವುದು. ಈ ನವರಾತ್ರಿ ಹಬ್ಬವನ್ನು ಕರ್ನಾಟಕದಲ್ಲಿ ದಸರಾ ಹಬ್ಬವೆಂದು ಆಚರಿಸಿದರೆ ಪಶ್ಚಿಮ ಬಂಗಾಳದ ಕಡೆ ದುರ್ಗಾಪೂಜೆಯೆಂದು ಭಾರತಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುವುದು. ಅದರಲ್ಲೂ ಮೈಸೂರು ದಸರಾ ಹಬ್ಬ ಜಗತ್ಪ್ರಸಿದ್ಧವಾಗಿದೆ.

ಈ ನವರಾತ್ರಿ ಹಬ್ಬದ ಪ್ರತಿಯೊಂದು ದಿನವೂ ವಿಶೇಷವಾಗಿದ್ದು ಒಂಬತ್ತು ದಿನವೂ ದುರ್ಗಮಾತೆಯ 9 ಅವತಾರಗಳನ್ನು ಪೂಜಿಸಲಾಗುವುದು.

Types Of Navratri Celebrated Across India

ಮೊದಲ ದಿನ-ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ
ಎರಡನೇ ದಿನ - ಬಿದಿಗೆ ದಿನ ದೇವಜಾತ ದುರ್ಗಾಪೂಜಾ
ಮೂರನೇ ದಿನ ತದಿಗೆ - ಮಹಿಷಾಸುರ ಮರ್ಧಿನಿ ದುರ್ಗಾಪೂಜಾ
ನಾಲ್ಕನೇ ದಿನ ಚತುರ್ದಶಿ - ಶೈಲ ಜಾತಾ ದುರ್ಗಾಪೂಜಾ
ಐದನೇ ದಿನ ಪಂಚಮಿ - ದೂಮೃಹಾ ದುರ್ಗಾಪೂಜಾ
ಆರನೇ ದಿನ ಶಷ್ಠಿ - ಚಂಡ-ಮುಂಡ ಹಾ ದುರ್ಗಾಪೂಜಾ
ಏಳನೇ ದಿನ ಸಪ್ತಮಿ - ರಕ್ತ ಬೀಜ ಹಾ ದುರ್ಗಾಪೂಜಾ
ಎಂಟನೇ ದಿನ ಅಷ್ಟಮಿ - ನಿಶುಂಭ ಹಾ ದುರ್ಗಾಪೂಜಾ
(ದುರ್ಗಾಷ್ಠಮಿ) ಒಂಭತ್ತನೇ ದಿನ ಮಹಾನವಮಿ -ಶುಂಭ ಹಾ ದುರ್ಗಾಪೂಜಾ

ಈ ಒಂಬತ್ತು ದಿನದ ಹಬ್ಬವನ್ನು ಒಂದೊಂದು ಕಡೆ ಒಂದೊಂದು ಹೆಸರಿನಲ್ಲಿ ಆಚರಿಸಲಾಗುವುದು. ಅಲ್ಲದೆ ನವರಾತ್ರಿ ಹಬ್ಬವನ್ನು ವರ್ಷದಲ್ಲಿ ಅನೇಕ ಬಾರಿ ಆಚರಿಸಲಾಗುವುದು.

ಶಾರದಾ ನವರಾತ್ರಿ: ಭಾರತದ ಪೂರ್ವದ ಕಡೆ ನವರಾತ್ರಿಯನ್ನು ಶಾರದಾ ನವರಾತ್ರಿಯೆಂದು ಆಚರಿಸುತ್ತಾರೆ. ಇನ್ನು ಕೆಲವು ಕಡೆ ಮಹಾನವರಾತ್ರಿ ಎಂದು ಕೂಡ ಕರೆಯುತ್ತಾರೆ. ರಾಮ ಸೀತೆಯನ್ನು ಬಿಡಿಸಿಕೊಂಡು ಬರಲು ಲಂಕೆಗೆ ಯುದ್ಧಕ್ಕೆ ಹೋಗುವ ಮುನ್ನ ಈ ಪೂಜೆ ಮಾಡಿದ್ದನು ಎಂದು ಹೇಳಲಾಗುತ್ತದೆ. ಈ ನವರಾತ್ರಿಯನ್ನು ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲಾಗುವುದು.

ವಸಂತ ನವರಾತ್ರಿ: ಉತ್ತರ ಭಾರತದಲ್ಲಿ ನವರಾತ್ರಿಯನ್ನು ವಸಂತ ನವರಾತ್ರಿ ಎಂದು ಆಚರಿಸುತ್ತಾರೆ. ಈ ಹಬ್ಬವನ್ನು ಇಲ್ಲಿ ಚೈತ್ರ ನವರಾತ್ರಿ ಎಂದು ಕೂಡ ಕರೆಯುತ್ತಾರೆ. ಇದನ್ನು ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಆಚರಿಸುತ್ತಾರೆ.

ಆಷಾಢ ನವರಾತ್ರಿ: ಆಷಾಢ ಮಾಸದ ಶುಕ್ಲಪಕ್ಷದಲ್ಲಿ ಇದನ್ನು ಆಚರಿಸಲಾಗುವುದು. ಈ ನವರಾತ್ರಿಯಲ್ಲೂ 9 ಬಗೆಯ ಶಕ್ತಿಯನ್ನು ಪೂಜಿಸಲಾಗುವುದು.

ಶರನ್ನವರಾತ್ರಿ : ಆಶ್ವಯುಜ ಮಾಸದ ಶುಕ್ಲ ಪಕ್ಷದ ಪ್ರಥಮಾ ತಿಥಿಯಿಂದ ನವಮಿಯವರೆಗೆ ಈ ನವರಾತ್ರಿಯನ್ನು ಆಚರಿಸಲಾಗುವುದು. ಉತ್ತರ ಭಾರತದ ಕಡೆ ಈ ನವರಾತ್ರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.

ಪುಷ್ಯ ನವರಾತ್ರಿ: ಪುಷ್ಯಮಾಸದ ಶುಕ್ಲ ಪಕ್ಷದಲ್ಲಿ ಈ ನವರಾತ್ರಿ ಹಬ್ಬವನ್ನು ಆಚರಿಸಲಾಗುವುದು. ಡಿಸೆಂಬರ್-ಜನವರಿ ಸಮಯದಲ್ಲಿ ಈ ಹಬ್ಬವನ್ನು ಆಚರಿಸಲಾಗುವುದು.
ಈ ಎಲ್ಲಾ ನವರಾತ್ರಿ ಹಬ್ಬಗಳಲ್ಲಿ ಶಾರದಾ ನವರಾತ್ರಿ ಮತ್ತು ವಸಂತ ನವರಾತ್ರಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದ್ದು ಇವುಗಳನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.

English summary

Types Of Navratri Celebrated Across India

The festival of Navratri sees all kinds of traditions which is celebrated all through the nine days. However, let us take a look at some of the types of Navratri which is celebrated all over India.
X
Desktop Bottom Promotion