For Quick Alerts
ALLOW NOTIFICATIONS  
For Daily Alerts

ಪುರುಷರು 30ರ ಬಳಿಕ ಇವುಗಳನ್ನು ಧರಿಸುವುದು ಸೂಕ್ತವಲ್ಲ

|

ಯೌವನ ಪ್ರಾಯವನ್ನು ಪ್ರತಿಯೊಬ್ಬರೂ ಇಷ್ಟಪಡುತ್ತೇವೆ. ಆ ವಯಸ್ಸು ಹಾಗೇ ನಿಂತೇ ಬಿಡಲಿ, ನಮಗೆ ಮುಪ್ಪು ಬರದಿರಲಿ ಎಂದೇ ಎಲ್ಲರೂ ಬಯಸುತ್ತೇವೆ. ಆದರೆ ಕಾಲ ಮತ್ತು ವಯಸ್ಸನ್ನು ತಡೆಯಲು ನಮ್ಮಿಂದ ಸಾಧ್ಯವೇ? ಪ್ರತೀವರ್ಷ ಹ್ಯಾಪಿ ಬರ್ತ್‌ಡೇ ಆಚರಿಸುತ್ತೇವೆ. ಆದರೆ ಯಾವಾಗ ನಮ್ಮ 30ನೇ ಬರ್ತ್‌ಡೇ ಬರುತ್ತದೋ ಆಗ ಹೊಟ್ಟೆಯಲ್ಲಿ ತಳಮಳ ಪ್ರಾರಂಭವಾಗುತ್ತದೆ. 30 ವರ್ಷ ಕಳೆದರೆ ಯೌವನ ಪ್ರಾಯ ಕಳೆದು ಮಧ್ಯೆ ವಯಸ್ಸಿನತ್ತ ಸಾಗುತ್ತಿದ್ದೇವೆ ಎಂದು ಯೋಚಿಸುವಾಗ ಛೇ ಯೌವನದ ವಯಸ್ಸು ಇನ್ನು ಸ್ವಲ್ಪ ವರ್ಷ ಇರಬಾರದಿತ್ತೇ, ಒಂದು 50 ಕಳೆದ ಮೇಲೆ ಮಧ್ಯವಯಸ್ಸು ಬರಬಾರದಿತ್ತೇ ಎಂದುಕೊಳ್ಳುತ್ತೇವೆ.

30ರ ನಂತರ ನಮ್ಮ ನಡುವಳಿಕೆಯಲ್ಲಿ ಮತ್ತಷ್ಟು ಪ್ರೌಢರಾಗಬೇಕಾಗುತ್ತದೆ. ವೇಷಭೂಷಣದಲ್ಲೂ ಬದಲಾವಣೆಯಾಗಬೇಕಾಗುತ್ತದೆ. ಪುರುಷರಂತೂ ಈ ವಿಷಯದಲ್ಲೂ ತುಂಬಾ ಎಚ್ಚರದಿಂದ ಇರಬೇಕು. 30ರ ಬಳಿಕ ಕೂಡ 20 ಯುವಕನಂತೆ ಡ್ರೆಸ್ ಮಾಡುತ್ತೇನೆ ಎಂದು ಮಾಡಿದರೆ ನೋಡುಗರ ಕಣ್ಣಿಗೆ ಜೋಕರ್ ನಂತೆ ಕಾಣುತ್ತೀರಿ. ಆದ್ದರಿಂದ ಇಲ್ಲಿ ನಾವು 30 ಬಳಿಕ ಯಾವ ಬಗೆಯ ಡ್ರೆಸ್ಸಿಂಗ್ ಸೂಕ್ತವಲ್ಲ ಎಂದು ಹೇಳಿದ್ದೇವೆ ನೋಡಿ:

croc ಶೂ

croc ಶೂ

ಈ ಶೂ ಧರಿಸಿದರೆ ತುಂಬಾ ಕಂಫರ್ಟ್ ಇರಬಹುದು. ಆದರೆ 30ರ ಒಳಗೆ ಈ ರೀತಿಯ ಶೂ ಓಕೆ, ನಂತರ ಧರಿಸುವುದು ಅಷ್ಟು ಸೂಕ್ತವಲ್ಲ.

ಸ್ಟೈಲೀಶ್ ಸ್ಯಾಂಡಲ್

ಸ್ಟೈಲೀಶ್ ಸ್ಯಾಂಡಲ್

30 ನಂತರ ಕೂಡ ಸ್ಯಾಂಡಲ್ ಧರಿಸಬಹುದು. ಆದರೆ ತುಂಬಾ ಸ್ಟೈಲೀಶ್ ಆದ ಸ್ಯಾಂಡಲ್ ನಿಮಗೆ ಸ್ಟೈಲೀಶ್ ಲುಕ್ ನೀಡುವುದಿಲ್ಲ ಅನ್ನುವುದಿಲ್ಲ ನೆನಪಿರಲಿ.

ಪಿಂಕ್ ಶರ್ಟ್

ಪಿಂಕ್ ಶರ್ಟ್

ಕಡು ಪಿಂಕ್ ಶರ್ಟ್ ಪುರುಷರಿಗೆ ಸೂಕ್ತವಾದ ಬಣ್ಣವಲ್ಲ, ಅದರಲ್ಲೂ 30ರ ನಂತರ ಈ ಬಣ್ಣದ ಆಯ್ಕೆಯಿಂದ ದೂರವಿರುವುದು ಒಳ್ಳೆಯದು.

ಸ್ಲೋಗನ್ ಇರುವ ಟೀ ಶರ್ಟ್

ಸ್ಲೋಗನ್ ಇರುವ ಟೀ ಶರ್ಟ್

ಸ್ಲೋಗನ್ ಇರುವ ಟೀ ಶರ್ಟ್ ಟೀನೇಜ್ ಗೆ ಚೆಂದ, ಆ ವಯಸ್ಸು ಮೀರಿದ ಮೇಲೆ ಅಂತಹ ಟೀ ಶರ್ಟ್ ಧರಿಸದಿರುವುದು ಒಳ್ಳೆಯದು.

 ಕ್ಯಾಪ್

ಕ್ಯಾಪ್

ಸ್ಟೈಲೀಶ್ ಕ್ಯಾಪ್ ಕೂಲ್ ಲುಕ್ ನಲ್ಲಿ ಕಾಣಿಸಬೇಕೆಂಬ ಪ್ರಯತ್ನ ಬೇಡ. ಸ್ಪೋರ್ಟ್ಸ್ ಆಡುವಾಗ ಓಕೆ, ಉಳಿದ ಸಮಯದಲ್ಲಿ ಬೇಡ ಅನ್ನುವುದೇ ನಮ್ಮ ಸಲಹೆ.

ಡಿಸೈನ್ ಡಿಸೈನ್ ಶರ್ಟ್

ಡಿಸೈನ್ ಡಿಸೈನ್ ಶರ್ಟ್

ತುಂಬಾ ಬಣ್ಣ-ಬಣ್ಣದ ಶರ್ಟ್ ಗಿಂತ ಕೂಲ್, ನೀಟಾಗಿರುವ ಶರ್ಟ್ 30ರ ನಂತರ ಹೆಚ್ಚು ಆಕರ್ಷಕ.

 ಸ್ಟಡ್ಸ್

ಸ್ಟಡ್ಸ್

ಕಿವಿಗೆ ಸ್ಟಡ್ಸ್, ಹುಬ್ಬಿಗೆ ಚುಚ್ಚಿಕೊಳ್ಳುವುದು ಇವೆಲ್ಲಾ ಯುವಕರಾಗಿದ್ದಾಗ ಚೆಂದ, ನಂತರ ಹಾಕಿದರೆ ಅಷ್ಟೊಂದು ಆಕರ್ಷಕವಲ್ಲ.

ಬರೀ ಬನಿಯನ್ ನಲ್ಲಿ ತಿರುಗಾಡುವುದು

ಬರೀ ಬನಿಯನ್ ನಲ್ಲಿ ತಿರುಗಾಡುವುದು

ಹೆಚ್ಚಿನವರಿಗೆ ಇದೊಂದು ಫ್ಯಾಷನ್. ಶರ್ಟ್ ಧರಿಸದೆ ಬರೀ ಬನಿಯನ್ ನಲ್ಲಿ ತಿರುಗುವುದು ಫ್ಯಾಷನ್, ಆದರೆ 30ರ ಬಳಿಕ ಹೊರಗಡೆ ಹೋಗುವಾಗ ಈ ರೀತಿಯ ವೇಷ ತುಂಬಾ ಕೆಟ್ಟ ಡ್ರೆಸ್ಸಿಂಗ್.

ಬಿಗಿಯಾದ ಜೀನ್ಸ್

ಬಿಗಿಯಾದ ಜೀನ್ಸ್

ತುಂಬಾ ಬಿಗಿಯಾದ ಜೀನ್ಸ್ ಗಿಂತ ಮಾಮೂಲಿ ಜೀನ್ಸ್ ಹೆಚ್ಚು ಆಕರ್ಷಕ ಲುಕ್ ನೀಡುವುದು.

ರಾಕ್ ಸ್ಟಾರ್ ಇಮೇಜ್

ರಾಕ್ ಸ್ಟಾರ್ ಇಮೇಜ್

ಹುಡುಗರಿಗೆ ರಾಕ್ ಸ್ಟಾರ್ ಇಮೇಜ್ ನಲ್ಲಿ ಕಾಣಿಸಿಕೊಳ್ಳುವುದೆಂದರೆ ಬಲು ಪ್ರೀತಿ, 30ರ ಬಳಿಕವೂ ಹೀಗೆ ಕಾಣಿಸಲು ಇಚ್ಛೆ ಪಟ್ಟರೆ ಜನ ನಿಮ್ಮ ನೋಡಿ ನಕ್ಕಾರು.

English summary

Trends Men Should Not Wear Post 30

To save you from looking your worst, we have come up with some of the fashion trends men should not wear after 30. Take a look:
 
Story first published: Saturday, September 14, 2013, 14:58 [IST]
X
Desktop Bottom Promotion