For Quick Alerts
ALLOW NOTIFICATIONS  
For Daily Alerts

ಒಂಟಿಯಾಗಿ ಪ್ರಯಾಣಿಸುವಾಗ ಸ್ತ್ರೀಯರೇ, ಎಚ್ಚರ!

By Super
|

ಭಾರತದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರು ಎದುರಿಸಬೇಕಾದ ಕಷ್ಟಗಳು ಒಂದೆರಡಲ್ಲ. ಕೊಲೆ, ರೇಪ್ ಮತ್ತು ಸಣ್ಣಪುಟ್ಟ ಕಳ್ಳತನಗಳು ರೈಲು ಮತ್ತು ಬಸ್ಸುಗಳಲ್ಲಿ ನಡೆಯುತ್ತಲೇ ಇರುತ್ತವೆ. ಇಂಥ ಸಂದರ್ಭಗಳಲ್ಲಿ ಮಹಿಳೆಯರು ಹೆಚ್ಚಿನ ಕಾಳಜಿ ಮತ್ತು ಸುತ್ತಲಿನ ಘಟನಾವಳಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಭಾರತದಲ್ಲಿ ಪ್ರಯಾಣಿಸಬೇಕೆಂದರೆ ಹೆಚ್ಚಿನ ಶ್ರಮ ಬೇಕೇ ಬೇಕು. ನಿಮ್ಮನ್ನು ಸುಡುಗಣ್ಣಿನಿಂದ ಕೆಕ್ಕರಿಸಿ ನೋಡುವ ಅಪರಿಚಿತ ಗಂಡಸರ ಕಣ್ಣುಗಳಿಂದ ನೀವು ತಪ್ಪಿಸಿಕೊಳ್ಳುವುದು ಇಲ್ಲಿ ಸುಲಭವಲ್ಲ. ಸಾಮಾಜಿಕ ಬದಲಾವಣೆ ಇನ್ನೂ ಬಲಗೊಳ್ಳದ ದೇಶದಲ್ಲಿ ನಾವಿಂದು ಬದುಕುತ್ತಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ವ್ಯವಹರಿಸೋದಕ್ಕೆ ಮಹಿಳೆಯರು ಇನ್ನಷ್ಟು ಶಿಕ್ಷಣ ಪಡೆಯಬೇಕಾದ ಅಗತ್ಯತೆಯಿದೆ.

ನಿಮ್ಮ ಉಡುಗೆಯತ್ತ ಗಮನವಿರಲಿ

ನಿಮ್ಮ ಉಡುಗೆಯತ್ತ ಗಮನವಿರಲಿ

ನೀವು ಹೆಚ್ಚಿನ ಗಮನವನ್ನು ಆಕರ್ಷಿಸುವುದು ನಿಮ್ಮ ಉಡುಗೆಯಿಂದಾಗಿ. ಬಿಗಿಯಾದ ಉಡುಗೆಗಳನ್ನು ಮತ್ತು ಸಣ್ಣನೆಯ ಸ್ಕರ್ಟ್ ತೊಡುವುದರಿಂದ ಬೇರೆಯವರಿಂದ ಅನವಶ್ಯಕ ಗಮನ ಸೆಳೆದಂತಾಗುತ್ತದೆ. ಸೆಲ್ವಾರ್ ಜೊತೆಗೆ ದುಪ್ಪಟ್ಟಾ ಅಥವಾ ಶಾಲ್ ಧರಿಸುವ ರೂಢಿ ಇಟ್ಟುಕೊಳ್ಳಿ. ಜೀನ್ಸ್ ಮತ್ತು ಕುರ್ತಾ ಕೂಡ ಧರಿಸಬಹುದು. ಆದರೆ ಯಾವತ್ತೂ ಒಂದು ಶಾಲ್ ನಿಮ್ಮ ಜೊತೆಗೆ ಇರಲಿ.

ಅಪರಿಚಿತರೊಂದಿಗೆ ಮಾತುಕತೆ ಬೇಡ

ಅಪರಿಚಿತರೊಂದಿಗೆ ಮಾತುಕತೆ ಬೇಡ

ನೀವು ಸಾಮಾಜಿಕವಾಗಿ ಹೆಚ್ಚು ಬೆರೆಯಲು ಇಷ್ಟಪಡುತ್ತೀರಿ. ನಿಜ, ನಿಮ್ಮ ಮನಸ್ಸು ನಮಗರ್ಥವಾಗುತ್ತದೆ. ಆದರೆ ನೀವು ಏಕಾಂಗಿಯಾಗಿ ಪ್ರಯಾಣಿಸುವಾಗ ಈ ರೀತಿ ಮಾಡಬೇಡಿ. ಒಬ್ಬಂಟಿಯಾಗಿದ್ದಾಗ ಬೇರೇ ಅಪರಿಚಿತರೊಂದಿಗೆ ವಿನಾಕಾರಣ ಮಾತುಕತೆ ಬೇಡ. ಅಂಥ ಅನಿವಾರ್ಯ ಪ್ರಸಂಗ ಬಂದರೆ ಆದಷ್ಟು ಕಡಿಮೆ ಮಾತನಾಡಿ ಮತ್ತು ನಿಮ್ಮ ಖಾಸಗಿ ಸಂಗತಿಗಳನ್ನು ಬಿಚ್ಚಿಡಬೇಡಿ.

ನಿಮ್ಮ ವಸ್ತುಗಳ ಮೇಲೆ ಕಣ್ಣಿಟ್ಟಿರಿ

ನಿಮ್ಮ ವಸ್ತುಗಳ ಮೇಲೆ ಕಣ್ಣಿಟ್ಟಿರಿ

ನಿಮ್ಮ ಸಾಮಾನು ಸರಂಜಾಮುಗಳು ನಿಮ್ಮ ಹತ್ತಿರವೇ ಇರಲಿ. ನಿಮ್ಮ ದ್ರಷ್ಟಿಯಿಂದ ನಿಮ್ಮ ವಸ್ತುಗಳು ದೂರವಾಗುವುದು ಬೇಡ. ನೀವು ಒಂದು ನಮಸ್ತೆ ಹೇಳುವುದರೊಳಗಾಗಿ ನಿಮ್ಮ ವಸ್ತುಗಳು ಮಂಗಮಾಯವಾಗಿಬಿಡುತ್ತವೆ. ಯಾವಾಗಲೂ ಎಚ್ಚರದಿಂದಿರಿ.

ನಿಮ್ಮ ದುಡ್ಡಿನ ಚೀಲವನ್ನು ಪ್ರೀತಿಸಿ

ನಿಮ್ಮ ದುಡ್ಡಿನ ಚೀಲವನ್ನು ಪ್ರೀತಿಸಿ

ನಿಮ್ಮ ದುಡ್ಡು ಮತ್ತಿತರ ವಸ್ತುಗಳ ಚೀಲವನ್ನು ನಿಮ್ಮ ಹತ್ತಿರವೇ ಇಟ್ಟುಕೊಳ್ಳಿ. ಹಣವನ್ನು ಬೇರೇ ಬೇರೇ ಕಡೆಗಳಲ್ಲಿ ಇಟ್ಟುಕೊಳ್ಳಿ. ದುರಾದೃಷ್ಟದ ಸಂಗತಿಗಳು ನಡೆದರೆ ಇಂಥ ಹೊತ್ತಲ್ಲಿ ಸ್ವಲ್ಪವಾದರೂ ಹಣ ನಿಮ್ಮನ್ನು ಕಾಪಾಡುತ್ತದೆ.

ಆತ್ಮವಿಶ್ವಾಸದಿಂದಿರಿ

ಆತ್ಮವಿಶ್ವಾಸದಿಂದಿರಿ

ನೀವು ಮೊದಲ ಸಲ ಪ್ರಯಾಣಿಸುತ್ತಿದ್ದರೆ ಆತ್ಮವಿಶ್ವಾಸದಿಂದಿರಿ. ನೀವು ಮೊದಲ ಸಲ ಪ್ರಯಾಣಿಸುತ್ತಿದ್ದೀರಿ ಎಂಬುದನ್ನು ತೋರಿಸಿಕೊಳ್ಳಬೇಡಿ. ನೀವು ಏನು ಮಾಡ್ತಿದ್ದೀರಿ ಮತ್ತು ಎಲ್ಲಿಗೆ ಹೋಗ್ತಿದ್ದೀರಿ ಎಂಬುದು ನಿಮಗೆ ಚೆನ್ನಾಗಿ ಗೊತ್ತಿರುವಂತೆ ನಟಿಸಿ. ನಿಮ್ಮ ತಲೆ ಎತ್ತಿರಲಿ ಮತ್ತು ಧ್ವನಿಯಲ್ಲಿ ಗಟ್ಟಿತನವಿರಲಿ.

ಅಪರಿಚಿತರಿಂದ ಏನೂ ತೆಗೆದುಕೊಳ್ಳಬೇಡಿ

ಅಪರಿಚಿತರಿಂದ ಏನೂ ತೆಗೆದುಕೊಳ್ಳಬೇಡಿ

ಅಪರಿಚಿತರು ಏನನ್ನಾದರೂ ನೀಡಿದರೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಯಾರಾದರೂ ಬಿಸ್ಕಿಟ್ಸ್, ಅಥವಾ ಹಣ್ಣು ನೀಡಿದರೆ ನಿರಾಕರಿಸಿ ನಿಮ್ಮ ಸೀಟಿನಲ್ಲಿ ಕುಳಿತುಕೊಳ್ಳಿ.

ಒಬ್ಬಂಟಿಯಾಗಿರಬೇಡಿ

ಒಬ್ಬಂಟಿಯಾಗಿರಬೇಡಿ

ಬಸ್ಸು ಅಥವಾ ರೈಲಿನ ಮೂಲೆಯೊಂದರಲ್ಲಿ ಪರುಷರ ಜೊತೆಗೆ ಒಬ್ಬಂಟಿಯಾಗಿ ನಿಂತಿರುವುದು ಗಮನಕ್ಕೆ ಬಂದರೆ ಮಹಿಳೆಯರು ಇರುವ ಸ್ಥಳಕ್ಕೆ ಸಾಗಿ. ನಿಮ್ಮ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿಯಿಂದ ನಿಮಗೆ ತೊಂದರೆಯ ಅನುಭವವಾಗುತ್ತಿದ್ದರೆ ನಿಮ್ಮ ಸ್ಥಳವನ್ನು ಬದಲಾಯಿಸಿ ಅಥವಾ ಉಳಿದ ಪ್ರಯಾಣಿಕರ ಗಮನಕ್ಕೆ ತನ್ನಿ.

ಹಗುರವಾದ ಲಗೇಜ್ ಒಯ್ದರೆ ಸಾಕು:

ಹಗುರವಾದ ಲಗೇಜ್ ಒಯ್ದರೆ ಸಾಕು:

ಭಾರವಾದ ಲಗೇಜ್ ಒಯ್ಯುವುದು ಬೇಡ. ಭಾರವಾದ ಲಗೇಜ್ ಒಬ್ಬರೇ ನಿಭಾಯಿಸಬೇಕು. ಹೀಗಾಗಿ ಹಗುರವಾದ ಲಗೇಜ್ ಇರಲಿ. ಬೆನ್ನಿಗೊಂದು, ಟ್ರಾಲಿ ಬ್ಯಾಗ್ ಸಾಕು. ಬಹಳಷ್ಟು ಆಭರಣಗಳು ಮತ್ತು ಹಣ ಬೇಡವೇ ಬೇಡ.

Read more about: ಭಾರತ ಜೀವನ life
English summary

Tips for women travelers in India | Life And Lifestyle

Travelling in India can be a herculean task. You cannot escape the wandering eyes of some men who get some kind of a sadistic kick out of ogling at women. We live in a country where social conservatism is still very much prevalent. And because of this social conservatism, it is important that women educate themselves of how to handle themselves in public. 
X
Desktop Bottom Promotion