For Quick Alerts
ALLOW NOTIFICATIONS  
For Daily Alerts

40 ತುಂಬುವ ಮುನ್ನ ಈ ರೀತಿ ಮಾಡಿದರೆ ಓಕೆ

|

ಮನುಷ್ಯ ಜೀವನದಲ್ಲಿ ಬಾಲ್ಯ, ಯೌವನ, ಮುಪ್ಪು ಹೀಗೆ ಮೂರು ಹಂತಗಳಿದ್ದರು ಎಲ್ಲರೂ ಬಯಸುವುದು ಬಾಲ್ಯ ಮತ್ತು ಯೌವನದ ಪ್ರಾಯವನ್ನು. ಮುಪ್ಪಾಗುವುದು ಯಾರಿಗೂ ಇಷ್ಟವಿರುವುದಿಲ್ಲ, ಆದರೂ ನಿಸರ್ಗದ ನಿಯಮವನ್ನು ಪಾಲಿಸುವುದಲ್ಲದೇ, ಅದನ್ನು ಮುರಿಯಲು ಮನುಷ್ಯರಾದ ನಮ್ಮಿಂದ ಸಾಧ್ಯವೇ?

ಯೌವನ ಪ್ರತೀಯೊಬ್ಬನ ಜೀವನದಲ್ಲಿ ಪ್ರಮುಖ ಘಟ್ಟ. ಮನುಷ್ಯ ಸಾಧಿಸುವುದಾದರೆ ಅದು ಅವನ/ಳ ಯೌವನಾವಸ್ಥೆಯಲ್ಲಿ ಮಾತ್ರ. ಯೌವನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಬರುವವನೆ ಜಾಣ. ಕೆಲವೊಂದು ಕಾರ್ಯಗಳನ್ನು ಯೌವನ ಪ್ರಾಯದಲ್ಲಿ ಮಾಡುವುದೇ ಸೂಕ್ತ. ಇಲ್ಲದಿದ್ದರೆ ಸಂಸಾರ, ಮಕ್ಕಳು, ಅವರ ವಿಧ್ಯಾಭ್ಯಾಸ ಅಂತ ಉಳಿದ ಕಾಲವನ್ನು ಕಳೆಯಬೇಕಾಗುತ್ತದೆ.

ಆದ್ದರಿಂದ 40 ದಾಟುವ ಮುನ್ನ ಈ ಕೆಳಗಿನ ಆಸೆಗಳನ್ನು ಈಡೇರಿಸಿಕೊಳ್ಳದೆ ಇರಬೇಡಿ:

Things Men Should Do Before Turning 40

ಸಾಹಸ ಕ್ರೀಡೆ, ಟ್ರಕ್ಕಿಂಗ್
ನಿಮಗೆ ಸಾಹಸ ಕ್ರೀಡೆಗಳನ್ನು ಆಡಬೇಕೆಂಬ ಬ ಯಕೆ ಇದ್ದರೆ, ಆ ಬಯಕೆಯನ್ನು ಮನಸ್ಸಿನಲ್ಲಿಯೇ ಇಡಬೇಡಿ. 40 ವರ್ಷದ ಬಳಿಕ ಸಾಹಸ ಕ್ರೀಡೆ ಆಡಬಹುದಾದರೂ, ನಿಮ್ಮ ಕೈಯಲ್ಲಿ ಅಷ್ಟೊಂದು ಧೈರ್ಯ, ಸಮಯ, ದೇಹದಲ್ಲಿ ಶಕ್ತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸ್ಪೀಡ್ ಡ್ರೈವಿಂಗ್, ಜಂಪಿಂಗ್, ಪರ್ವತದಲ್ಲಿ ರೈಡಿಂಗ್ ಈ ರೀತಿಯ ಸಾಹಸ ಕ್ರೀಡೆಗಳಿಗೆ ನಿಮ್ಮ ಯೌವನ ಪ್ರಾಯವೇ ಬೆಸ್ಟ್.

ಎಂಜಾಯ್ ಮಾಡುವ ಸಮಯದಲ್ಲಿ ಎಂಜಾಯ್ ಮಾಡಿ

ಪಾರ್ಟಿಗೆ ಹೋಗುವುದು, ಕುಡಿಯುವುದು ಮಾಡುವುದು ತಪ್ಪಲ್ಲ. ಆದರೆ ಕುಡಿತ, ಪಾರ್ಟಿಗಳಿಗೆ ಸಂಪೂರ್ಣ ದಾಸರಾದರೆ ಮಾತ್ರ ಮುಂದಿನ ಜೀವನ ಕಷ್ಟವಾಗಬಹುದು.

ಹಿಂಜರಿಕೆಯಿಲ್ಲದೆ ಮಾತನಾಡಿ
ಫ್ರೆಂಡ್ಸ್ ಜೊತೆ ಮಾತನಾಡುವಾಗ ಹಿಂಜರಿಕೆಯಿಲ್ಲದೆ ಮಾತನಾಡಿ, ತಮಾಷೆ ಮಾಡಿ. ಆದರೆ ನಿಮ್ಮ, ಮಾತು, ತಮಾಷೆ ಇತರರಿಗೆ ನೋವಾಗಬಾರದು ಎಂಬ ನಿಮಗೆ ಇದ್ದರೆ ಸಾಕು.

ಕಲಿಯಲು ಇದೇ ಬೆಸ್ಟ್ ಸಮಯ
ಯೌವನ ಪ್ರಾಯದಲ್ಲಿ ಗ್ರಹಿಸುವ ಹಾಗೂ ಕಲಿಯುವ ಸಾಮರ್ಥ್ಯ ಹೆಚ್ಚು. ಆದ್ದರಿಂದ ಓದಲು, ಕಲಿಯಲು ಇದೇ ಸರಿಯಾದ ಸಮಯ.

ರಕ್ತದಾನ ಮಾಡಿ
ರಕ್ತದಾನ ಮಾಡಿದರೆ ನನ್ನ ದೇಹದಲ್ಲಿ ರಕ್ತ ಕಮ್ಮಿಯಾಗಿ ಕಾಯಿಲೆ ಬರಬಹುದು ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಆದರೆ ಮಾಡಿದರೆ ಕೊಟ್ಟ ರಕ್ತ ನಮ್ಮ ದೇಹದಲ್ಲಿ ಉತ್ಪತ್ತಿಯಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ, ಅಲ್ಲದೆ ಇದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

ಲಾಂಗ್ ಡ್ರೈವ್
ಲಾಂಗ್ ಡ್ರೈವ್ ಹೋಗುವ ಉತ್ಸಾಹ 40 ನಂತರ ಒಂದೋ, ಎರಡು ಜನರಲ್ಲಿ ಇರುತ್ತದೆಯಷ್ಟೇ. ಆದ್ದರಿಂದ ಲಾಂಗ್ ಡ್ರೈವ್ ಹೋಗುವ ಬಯಕೆ ಇದ್ದರೆ ಕೆಲಸದ ಒತ್ತಡದಿಂದ ಆಸೆಯನ್ನು ಬದಿಗೊತ್ತಬೇಡಿ. ಕೆಲಸದ ಒತ್ತಡ ನಿಮ್ಮ ಜೀವನ ಪೂರ್ತಿ ಇರುತ್ತದೆ. ಆದ್ದರಿಂದ ನಿಮ್ಮ ಯೌವನ ಉತ್ಸಾಹಕ್ಕೆ ತಣ್ಣೀರು ಎರಚಬೇಡಿ.

ಇವುಲ್ಲದೆ NGOದಲ್ಲಿ ಸ್ವಯಂ ಸೇವಕನಾಗಿ ಮನೆಯಿಂದ 2-3 ದೂರವಿದ್ದು ಕೆಲಸ ಮಾಡುವುದು, ಫ್ರೆಂಡ್ಸ್ ಜೊತೆ ಊರು ಸುತ್ತುವುದು ಇವೆಲ್ಲಾ ಮದುವೆಯಾಗುವ ಮುನ್ನ ಮಾತ್ರ ಸಾಧ್ಯ. ಆದ್ದರಿಂದ ನಿಮ್ಮ ಯೌವನ ಪ್ರಾಯವನ್ನು ಸದುಪಯೋಗಪಡಿಸಿಕೊಳ್ಳಿ.

English summary

Things Men Should Do Before Turning 40 | Life And Lifestyle | ಪುರುಷರೇ, ಈ ರೀತಿಯೆಲ್ಲಾ 40 ವರ್ಷ ಆದ ಮೇಲೆ ಮಾಡಲು ಸಾಧ್ಯವಿಲ್ಲ | ಜೀವನ ಮತ್ತು ಜೀವನಶೈಲಿ

At some point we all feel the urge to do something before we outgrow ourselves. We're talking about the best things to do before you hit naughty forty! Lets have a look at few things that you can't afford to miss now.
X
Desktop Bottom Promotion