For Quick Alerts
ALLOW NOTIFICATIONS  
For Daily Alerts

18ರ ಹರೆಯದಲ್ಲಿ ಇವನ್ನು ಮರೆಯದೆ ಮಾಡಿ

By Hemanth Amin
|

ಬಾಲ್ಯವನ್ನು ಕಳೆದು 18ರ ಹರೆಯಕ್ಕೆ ಕಾಲಿಟ್ಟರೆ ಅದು ಜೀವನದ ಮೈಲುಗಲ್ಲು ಮುಟ್ಟಿದಂತೆ. ನೀವು ವಯಸ್ಕರಾಗಿದ್ದೀರಿ ಎನ್ನುವುದಕ್ಕೆ ಇದು ಅಧಿಕೃತ ಮತ್ತು ಕಾನೂನು ಬದ್ಧ ಘೋಷಣೆ. 18 ವರ್ಷಕ್ಕೆ ಮೊದಲು ಕೆಲವೊಂದು ವಿಷಯಗಳಿಗೆ ನಿಮಗೆ ನಿರ್ಬಂಧವಿರುತ್ತದೆ. ಆದರೆ 18 ತುಂಬಿದ ಕೂಡಲೇ ನೀವು ವಯಸ್ಕರಾಗುತ್ತೀರಿ. ನಿಮ್ಮ ಟೀನೇಜ್ ದಿನಗಳು ಅಂತ್ಯಗೊಂಡು ನೀವೊಬ್ಬ ಪ್ರೌಢ ವ್ಯಕ್ತಿಯಾಗುತ್ತೀರಿ. 20ರ ಹರೆಯ ನಿಮ್ಮನ್ನು ಕಠಿಣವಾಗಿ ಕಾಡುವ ಮೊದಲು 18ರಲ್ಲಿ ಮಾಡಬೇಕಾದ ಕೆಲವೊಂದು ವಿಷಯಗಳಿವೆ.

18ಕ್ಕೆ ಕಾಲಿಡುತ್ತಿದ್ದಂತೆ ನೀವು ಹಲವಾರು ವಿಷಯಗಳನ್ನು ಮಾಡಬೇಕಾಗಿದೆ. 18ರ ಹರೆಯಕ್ಕೆ ಕಾಲಿಡುತ್ತಿದ್ದಂತೆ ನಿಮಗೆ ಕೆಲವೊಂದು ವಿಷಯಗಳನ್ನು ಮಾಡಲು ಸ್ವಾತಂತ್ರ್ಯ ಮತ್ತು ಜವಾಬ್ದಾರಿ ಬರುತ್ತದೆ. 18ರ ಹರೆಯಕ್ಕೆ ಕಾಲಿಡುತ್ತಿದ್ದಂತೆ ನೀವು ಮಾಡುವ ಕೆಲವೊಂದು ವಿಷಯಗಳಿಗೆ ಕಾನೂನುಬದ್ಧವಾಗಿ ಜವಾಬ್ದಾರರಾಗಬೇಕಾಗುತ್ತದೆ. ಎಲ್ಲಿ ಹೋದರೂ ನೀವು ಪ್ರಬುದ್ಧತೆಯಿಂದ ವರ್ತಿಸಬೇಕಾಗುತ್ತದೆ. ಆದರೆ ಇದು ನೀವು ಹೊಸತಾಗಿ ಪ್ರಬುದ್ಧರಾದ ಸಂತಸ ಕಿತ್ತುಕೊಳ್ಳಲಾರದು.

Things To Do When You Turn 18

18ರ ಹರೆಯಕ್ಕೆ ಕಾಲಿಡುತ್ತಿದ್ದಂತೆ ನೀವು ಕೆಲವೊಂದು ಸಮತೋಲಿತ ಕೆಲಸಗಳನ್ನು ಮಾಡುವ ಬಗ್ಗೆ ಪಟ್ಟಿ ಮಾಡಬೇಕು. ಈ ಕೆಲಸಗಳು ಮನರಂಜನೆ ಮತ್ತು ಜವಾಬ್ದಾರಿಯ ಮಿಶ್ರಣವಾಗಿರಬೇಕು. ಇಂತಹ ಕೆಲವೊಂದು ವಿಷಯಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಮತದಾನ
ನೀವು 18ರ ಹರೆಯಕ್ಕೆ ಕಾಲಿಟ್ಟ ಬಳಿಕ ನೀವು ಜವಾಬ್ದಾರಿ ಮತ್ತು ರಾಷ್ಟ್ರದ ಉತ್ತಮ ವ್ಯಕ್ತಿಯಾಗಿ ಮಾಡಬೇಕಾದ ಮೊದಲ ಕೆಲಸವೆಂದರೆ ಮತದಾನದ ಹಕ್ಕು ಚಲಾಯಿಸುವುದು. ಕಾನೂನು ಬದ್ಧವಾಗಿ ವಯಸ್ಕರಾಗಿರುವ ಕಾರಣ ನೀವು ನಿಮ್ಮ ರಾಷ್ಟ್ರದ ಭವಿಷ್ಯ ನಿರ್ಧರಿಸಬಹುದು. ಪ್ರತಿಯೊಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಆ ರಾಷ್ಟ್ರದ ಯುವಕರು ಪಾಲ್ಗೊಳ್ಳುವುದು ತುಂಬಾ ಮುಖ್ಯ. ಒಳ್ಳೆಯ ಮತ್ತು ಪ್ರಾಮಾಣಿಕ ವ್ಯಕ್ತಿಗೆ ಮತ ಚಲಾಯಿಸುವುದರಿಂದ ರಾಷ್ಟ್ರದ ಅಭಿವೃದ್ಧಿಯೊಂದಿಗೆ ನಿಮಗೂ ಅಭಿವೃದ್ಧಿಯಾಗಲು ನೆರವಾಗಬಹುದು. ಯಾವಾಗಳು ಮತದಾನ ಮಾಡಿ....

2. ರಾತ್ರಿ ಜೀವನ
ಯುವ ಸಮುದಾಯಕ್ಕೆ ದೊಡ್ಡ ಆಕರ್ಷಣೆಯೆಂದರೆ ನೈಟ್ ಕ್ಲಬ್ ಮತ್ತು ಲಾಂಜ್ ಗಳು. ಸಂಗೀತ, ಡ್ಯಾನ್ಸ್, ಸೆಕ್ಸಿ ಮಹಿಳೆಯರು ಮತ್ತು ಸಂಪೂರ್ಣ ಸ್ವಾತಂತ್ರ್ಯ ಇಂದಿನ ಯುವಜನರು ಜೀವನಮಾನದಲ್ಲೊಮ್ಮೆ ಅನುಭವಿಸಲು ಬಯಸುತ್ತಾರೆ. ಇಂತಹ ನೈಟ್ ಕ್ಲಬ್ ಗಳು 18ರ ಕೆಳಹರೆಯದವರಿಗೆ ಪ್ರವೇಶ ನೀಡುವುದಿಲ್ಲ. 18 ತಲುಪುತ್ತಿದ್ದಂತೆ ನಿಮ್ಮ ನಗರದಲ್ಲಿರುವ ಅತ್ಯುತ್ತಮ ನೈಟ್ ಕ್ಲಬ್ ನ್ನು ಆಯ್ಕೆ ಮಾಡಿ ಮತ್ತು ಜೀವನದ ಅದ್ಭುತ ರಾತ್ರಿ ಕಳೆಯಿರಿ.

3. ರಕ್ತದಾನ
ಪ್ರತಿಯೊಬ್ಬ ಯುವ ನಾಗರಿಕರು ಪ್ರತೀ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು. 18ರ ಬಳಿಕವಷ್ಟೇ ರಕ್ತದಾನ ಮಾಡಬಹುದಾದ ಕಾರಣ ಇದನ್ನು ನಿಮ್ಮ ಪಟ್ಟಿಗೆ ಸೇರಿಸಿ ಮತ್ತು ಜಾರಿಗೆ ತನ್ನಿ. ರೋಗಿಗಳ ಬಗ್ಗೆ ಕಾಳಜಿ ಹೊಂದುವುದು ಮತ್ತು ನೆರವಾಗುವುದು ಸಮಾಜದ ಕಡೆ ನಿಮ್ಮ ಕಾಳಜಿ ತೋರಿಸಿದಂತಾಗುತ್ತದೆ. ಪ್ರತಿಯೊಬ್ಬ ಜವಾಬ್ದಾರಿಯುತ ಮನುಷ್ಯನಲ್ಲಿ ಸಣ್ಣ ಮಟ್ಟದ ಮಾನವೀಯತೆ ಇರಬೇಕು. ಯುವ ಜನಾಂಗವು ತಮ್ಮ ಆಯೋಚನೆಗಳನ್ನು ಸುಧಾರಿಸಿದರೆ ವಿಶ್ವವು ಶ್ರೇಷ್ಠವಾಗಲಿದೆ. 18ರ ಬಳಿಕ ಮಾಡಬಹುದಾದ ಒಳ್ಳೆಯ ಕೆಲಸವೆಂದರೆ ಅದು ರಕ್ತದಾನ.

4. ಟ್ಯಾಟೂ ಹಾಕಿಸಿ
ದೇಹದ ಮೇಲೆ ಒಂದು ಟ್ಯಾಟೂ ಹಾಕಿಸಿಕೊಳ್ಳುವುದು ಈಗಿನ ಟ್ರೆಂಡ್ ಆಗಿದೆ. ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಒಳ್ಳೆಯ ವಿಷಯ. ಆದರೆ 18 ವರ್ಷದ ಬಳಿಕವಷ್ಟೇ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬಹುದು. ಒಮ್ಮೆ ನೀವು 18ರ ಹರೆಯಕ್ಕೆ ಕಾಲಿಡುತ್ತಿರುವಂತೆ ನಿಮ್ಮ ದೇಹದ ಮೇಲೆ ಚಿಟ್ಟೆ, ನಕ್ಷತ್ರ, ನಿಮ್ಮ ಹೆತ್ತವರ ಹೆಸರಿನ ಆರಂಭಿಕ ಅಕ್ಷರ ಅಥವಾ ಇನ್ಯಾವುದೇ ಟ್ಯಾಟೂ ಹಾಕಿಕೊಳ್ಳಬಹುದು.

5. ಡ್ರೈವಿಂಗ್ ಲೈಸನ್ಸ್
ಇಂದಿನ ದಿನಗಳಲ್ಲಿ 18ಕ್ಕೆ ಮೊದಲೇ ವಾಹನ ಚಾಲನೆ ಹೇಗೆ ಮಾಡಬೇಕೆಂದು ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. 18 ತಲುಪಿದ ಬಳಿಕ ನೀವು ವಾಹನ ಚಾಲನೆಗೆ ಕಾನೂನುಬದ್ಧ ಲೈಸನ್ಸ್ ಪಡೆಯಿರಿ. ಇದು ಸುರಕ್ಷತೆಗೆ ಮತ್ತು ನೀವು ರಾಷ್ಟ್ರದ ಲೈಸನ್ಸ್ ಹೊಂದಿರುವ, ಪರಿಗಣಿಸಲ್ಪಟ್ಟ ಚಾಲಕನಾಗುತ್ತೀರಿ. ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ಅದು ಗಂಭೀರ ಅಪರಾಧವಾಗುತ್ತದೆ.

Read more about: life ಬದುಕು
English summary

Things To Do When You Turn 18

Turning 18 is like reaching a milestone in life. It is an official and legal declaration of you being an adult. There were things that were restricted to you when you were younger, after you turn 18 you are an adult. Your teenage years would almost come to an end and you would soon be a mature person.
X
Desktop Bottom Promotion