For Quick Alerts
ALLOW NOTIFICATIONS  
For Daily Alerts

ಭಾರತದ 9 ನಗರಗಳಲ್ಲಿ ಜನಸಾಮಾನ್ಯರಿಗೆ ಜೀವನ ಕಷ್ಟ

|

ಭಾರತದಲ್ಲಿ ಜೀವನ ಸಾಗಿಸಲು ಕಮ್ಮಿ ದುಡ್ಡಿದ್ದರೆ ಸಾಕು ಎಂಬ ಭಾವನೆ ಹೊರದೇಶದವರಿಗೆ ಇರುತ್ತಾರೆ. ಅಂಥವರು ನಮ್ಮ ಭಾರತದ ಕೆಲ ನಗರಗಳಿಗೆ ಭೇಟಿ ಕೊಟ್ಟರೆ ನಿಜವಾದ ಸತ್ಯಾಂಶ ತಿಳಿಯುತ್ತದೆ. ತುಂಬಾ ದುಡ್ಡಿರುವವರಿಗೆ ಏನೂ ಗೊತ್ತಾಗುವುದಿಲ್ಲ, ಆದರೆ ಮಧ್ಯಮ ವರ್ಗದವರಿಗೆ ಮಾತ್ರ ಜೀವನ ತುಂಬಾ ಕಷ್ಟಕರವಾಗುತ್ತಿದೆ.

ಏರುತ್ತಿರುವ ಪ್ರಯಾಣ ದರ, ದುಬಾರಿ ಆಗುತ್ತಿರುವ ತರಕಾರಿಗಳು, ಜೀವನ ಶೈಲಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಸುರಿಯಬೇಕು ಲಕ್ಷಾಂತರ ರುಪಾಯಿ, ಸಿಂಗಲ್ ಬೆಡ್ ರೂಂನ ಇಕ್ಕಟ್ಟಾದ ಮನೆಗೂ ಕೊಡಬೇಕು ಕಮ್ಮಿಯೆಂದರೂ 7-8 ಸಾವಿರ ರುಪಾಯಿ, ಆದರೆ ದೊರೆಯುವ ಸಂಬಳದಲ್ಲಿ ಮಾತ್ರ ಏರಿಕೆಯಿಲ್ಲ, ಕೆಲವರಿಗಂತೂ ಅದು, ಇದು ಅಂತ ಹೇಳಿ ಸಿಗುವ ಸಂಬಳದಲ್ಲೂ ಸಾಕಷ್ಟು ಕತ್ತರಿ ಬೀಳುತ್ತಿದೆ.

ಒಂದು ವರ್ಷದ ಹಿಂದೆ ನಾನು ಬೆಂಗಳೂರಿಗೆ ಬರುವಾಗ ಎಳನೀರಿಗೆ 12 ರುಪಾಯಿ ಇತ್ತು. ತಿಂಗಳ ಬಸ್ ಪಾಸ್ ಗೆ ರು. 625 ಇತ್ತು, ಅದೇ ಇವತ್ತು ಎಳನೀರಿಗೆ 20 ರುಪಾಯಿ, ಬಸ್ ಪಾಸ್ ರು.925 ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.

ಇನ್ನು ದಿನಸಿಗಳು ಮತ್ತು ಅಕ್ಕಿಯ ರೇಟ್ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಆದರೆ ಕಳೆದ ವರ್ಷ ನಮಗೆಲ್ಲಾ ಸಿಗುತ್ತಿದ್ದ ಸಂಬಳ ಈ ವರ್ಷದಲ್ಲಿ ದುಪ್ಪಟ್ಟಾಗಿದೆಯೇ? ಮತ್ತೆ ಉಳಿತಾಯ ಹೇಗೆ ಸಾಧ್ಯ, ಅಲ್ವಾ?. ಇದು ನಮ್ಮ ಬೆಂಗಳೂರಿನ ಪರಿಸ್ಥಿತಿ ಮಾತ್ರ ಅಲ್ಲ, ಭಾರತದ ಇತರ ನಗರಗಳು ತುಂಬಾ ದುಬಾರಿಯಾಗುತ್ತಿವೆ.

ಕೈತುಂಬಾ ಸಂಬಳ ಇರುವವರಿಗೆ ಮಾತ್ರ ಜೀವನ ಸಾಗಿಸಲು ಕಷ್ಟವಾಗದ(?) ನಗರಗಳು ನೋಡಿ ಇಲ್ಲಿವೆ:

ದೆಹಲಿ

ದೆಹಲಿ

ಇಲ್ಲಿಯಂತೂ ಭೂಮಿ ತೆಗೆಯಬೇಕೆಂಬ ಕನಸ್ಸಿದ್ದರೆ ಅದು ಕನಸ್ಸಾಗಿಯೇ ಉಳಿಯುವ ಸಾಧ್ಯತೆ ಹೆಚ್ಚು. ಏಕೆಂದರೆ ದಿನ-ದಿನಕ್ಕೆ ಭೂಮಿ ಬೆಲೆ ಹೆಚ್ಚಾಗುತ್ತಿದೆ. ಜೀವನ ಶೈಲಿ ಕೂಡ ತುಂಬಾ ದುಬಾರಿ.

 ಮುಂಬಯಿ

ಮುಂಬಯಿ

ಮುಂಬಯಿ ವಿಶ್ವದ ದುಬಾರಿ ಆಫೀಸ್ ಇರುವ ನಗರಗಳಲ್ಲಿಯೇ 6ನೇ ಸ್ಥಾನದಲ್ಲಿದೆ. ಇಲ್ಲಿ ಜೀವನವನ್ನು ಯಾರು ಬೇಕಾದರೂ ಮಾಡಬಹುದು, ಆದರೆ ಕಂಫರ್ಟ್ ಜೀವನಕ್ಕೆ ಕೈ ತುಂಬಾ ದುಡ್ಡಿರಬೇಕು.

 ಬೆಂಗಳೂರು

ಬೆಂಗಳೂರು

ಹದಿನೈದು ವರ್ಷದ ಹಿಂದಿನ ಬೆಂಗಳೂರು ಎಲ್ಲ? ಈಗೀನ ಬೆಂಗಳೂರು ಎಲ್ಲಿ? ಐಟಿಬಿಟಿ ಕಂಪನಿಗಳು ಹೆಚ್ಚಾಗುತ್ತಿದ್ದಂತೆ ಬೆಂಗಳೂರು ತುಂಬಾ ದುಬಾರಿಯಾಗುತ್ತಿದೆ.

ಚೆನ್ನೈ

ಚೆನ್ನೈ

ಭಾರತದ ದುಬಾರಿ ನಗರಗಳಲ್ಲಿ ಚೆನ್ನೈ 4ನೇ ಸ್ಥಾನದಲ್ಲಿದೆ. ಆಟೋಮೊಬೈಲ್, ಸಾಫ್ಟ್ ವೇರ್, ಹಾರ್ಡ್ ವೇರ್, ಕೈಗಾರಿಕೆಗಳು, ಉತ್ತಮ ಸೌಲಭ್ಯವಿರುವ ಆಸ್ಪತ್ರೆಗಳು ಇವುಗಳು ಬೆಳೆಯುತ್ತಿದ್ದು, ಮಧ್ಯಮವರ್ಗದವರು ಮಾತ್ರ ಇಲ್ಲಿ ಜೀವನ ಮಾಡಲು ತುಂಬಾ ಕಷ್ಟಪಡಬೇಕಾಗಿದೆ.

 ಹೈದ್ರಾಬಾದ್

ಹೈದ್ರಾಬಾದ್

ಈ ನಗರ ಕೈಗಾರಿಕೆ ಕೇಂದ್ರಗಳಿಂದ ಮತ್ತು ಪ್ರವಾಸಿ ಕೇಂದ್ರಗಳಿಂದಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿರುವ ಏರ್ ಪೋರ್ಟ್ ವಿಶ್ವದಲ್ಲಿಯೇ ಅತ್ಯಂತ ಉತ್ತಮವಾದ ಏರ್ ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪುಣೆ

ಪುಣೆ

ಸಾಂಸ್ಕೃತಿಕ ನಗರ ಎಂದು ಗುರುತಿಸಿಕೊಂಡಿರುವ ಪುಣೆ ಕೂಡ ದುಬಾರಿಯಾದ ನಗರವಾಗಿದೆ.

ಕೋಲ್ಕತ್ತಾ

ಕೋಲ್ಕತ್ತಾ

ಬಾಟಾ ಇಂಡಿಯಾ , ಬಿರ್ಲಾ ಕಾರ್ಪೋರೇಷನ್ ಈ ರೀತಿಯ ಹೆಸರುವಾಸಿಯಾದ ಕಂಪನಿಗಳು ಇಲ್ಲಿದ್ದು, ಇಲ್ಲಿ ಜಾಗದ ರೇಟ್ ಕೇಳಿದರೆ ಒಂದು ಕ್ಷಣ ಎದೆ ಬಡೆದ ನಿಂತು ಹೋದ ಅನುಭವಾದರೂ ಆಶ್ಚರ್ಯವಿಲ್ಲ.

ಜೈಪುರ್

ಜೈಪುರ್

ಚಿನ್ನ, ವಜ್ರ, ಹೋಟೆಲ್, ಪ್ರವಾಸಿ ಕೇಂದ್ರಗಳಿಂದಾಗಿ ದುಬಾರಿಯಾದ ನಗರ ಇದಾಗಿದೆ.

ಗೋವಾ

ಗೋವಾ

ಪ್ರವಾಸಿಗರು ಹೆಚ್ಚು ಭೇಟಿಕೊಡುವ ಸ್ಥಳಗಳಲ್ಲಿ ಬೆಲೆಗಳು ದುಬಾರಿಯಾಗಿರುತ್ತವೆ. ಅಲ್ಲಿಯೇ ವಾಸ ಮಾಡುವವರು ತಾವು ಕೂಡ ಅಧಿಕ ದುಡ್ಡು ತೆತ್ತು ವಸ್ತುಗಳನ್ನು ಕೊಳ್ಳಬೇಕಾಗಿದೆ. ಆದ್ದರಿಂದಲೇ ಪ್ರವಾಸಿ ಕೇಂದ್ರಗಳಿರುವ ಈ ನಗರ ದುಬಾರಿಯಾಗಿದೆ.

English summary

The Most Expensive Cities Of India

There are few cities in India which are insanely expensive. For example, Bangalore, the Silicon Valley is a very expensive city in the country.
X
Desktop Bottom Promotion