For Quick Alerts
ALLOW NOTIFICATIONS  
For Daily Alerts

ಕಣ್ಮೆರೆಯಾದ ಪ್ರಸಿದ್ಧ 7 ಪುರಾತನ ಧರ್ಮಗಳು

|

ಆಧುನಿಕತೆ ಬೆಳೆದಂತೆ ಸಾಕಷ್ಟು ಧರ್ಮಗಳು, ಆಚಾರಗಳು ಕಣ್ಮೆರೆಯಾಗಿವೆ. ವಿಶ್ವದ ಇತಿಹಾಸ ನೋಡುವಾಗ ಈ ಹಿಂದೆ ಇದ್ದಂತಹ ಅನೇಕ ಧರ್ಮಗಳು ಈಗ ಅಸ್ತಿತ್ವದಲ್ಲಿ ಇಲ್ಲದಿರುವುದನ್ನು ಗಮನಿಸಬಹುದು. ಹಳೆ ಧರ್ಮಗಳ ಬದಲಿಗೆ ಸಾಕಷ್ಟು ಹೊಸ ಧರ್ಮಗಳು ಹುಟ್ಟಿಕೊಂಡೆವು, ಕಾಲ ಕಳೆದಂತೆ ಪುರಾತನವಾದ ಕೆಲವೊಂದು ಧರ್ಮಗಳು ಸಂಪೂರ್ಣವಾಗಿ ಕಣ್ಮೆರೆಯಾದವು.

ಈ ಧರ್ಮಗಳು ಕಣ್ಮೆರೆಯಾಗಲು ಕಾರಣಗಳು ಹಲವು. ಯುದ್ಧ, ಪ್ರಾಕೃತಿಕ ವಿಕೋಪಗಳು, ಹೆಚ್ಚಿನ ಸಂಖ್ಯೆಯಲ್ಲಿ ಧರ್ಮದ ಪರಿವರ್ತನೆ ಅಥವಾ ಮತ ಪರಿವರ್ತನೆ ಹೀಗೆ ಯಾವುದೋ ಒಂದು ಕಾರಣದಿಂದ ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ ಧರ್ಮಗಳು ಸಂಪೂರ್ಣವಾಗಿ ಕಣ್ಮೆರೆಯಾಗಿವೆ. ಅಂತಹ ಕೆಲವೊಂದು ಧರ್ಮಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ನೋಡಿ:

ಸುಮೇರಿಯನ್

ಸುಮೇರಿಯನ್

ಇವರು ಪ್ರಕೃತಿಯನ್ನು ಪೂಜಿಸುತ್ತಿದ್ದರು. ಅವರ ಪ್ರಮುಖ ದೇವರೇ ಭೂಮಿಯಾಗಿತ್ತು.

ಗ್ರೀಕ್

ಗ್ರೀಕ್

ಪುರಾತನ ಪ್ರಾಬಲ್ಯ ಧರ್ಮಗಳಲ್ಲಿ ಗ್ರೀಕ್ ಧರ್ಮ ಕೂಡ ಒಂದಾಗಿತ್ತು. ಇವರು ಪ್ರಕೃತಿ ಮಾತೆಯನ್ನು ಪೂಜಿಸುತ್ತಿದ್ದರು ಅದರ ಜೊತೆಗೆ ಕಲ್ಲಿನಲ್ಲಿ ತಮ್ಮ ಆರಾಧನ ಮೂರ್ತಿಗಳನ್ನು ಕೆತ್ತುತ್ತಿದ್ದರು. ಕ್ರಿ. ಶ 475ರಲ್ಲಿ ಬೈಜಾಂಟೈನ್ ನ ರಾಜ ಒಲಂಪಿಯಾದಲ್ಲಿರುವ ಜೀಯಸ್ ದೇವಾಲಯವನ್ನು ಸುಡುವುದರೊಂದಿಗೆ ಈ ಧರ್ಮ ಕೊನೆಗೊಂಡಿತು.

 ರುಮ್ವಾ(rumva)

ರುಮ್ವಾ(rumva)

ಯುರೋಪಿನ ಪಾರ್ಗನ್ ಧರ್ಮಗಳಲ್ಲಿ ಈ ಧರ್ಮ ಕೊನೆಯದ್ದಾಗಿತ್ತು. ಇದು 1387ರಲ್ಲಿ ಕೊನೆಗೊಂಡಿತು.

ಮೈತ್ರೇಯಿಸಮ್

ಮೈತ್ರೇಯಿಸಮ್

ಈ ಧರ್ಮ ಕ್ರೈಸ್ತ ಧರ್ಮದ ಜೊತೆಗೆ ಬೆಳೆಯಿತು, ಮೆಡಿಟೇರಿಯನ್ ಮತ್ತು ಬ್ರಿಟನ್ ನ ಕೆಲವು ಭಾಗದಲ್ಲಿ ಹೆಚ್ಚಿನ ಜನರು ಈ ಧರ್ಮವನ್ನು ಅನುಸರಿಸುತ್ತಿದ್ದರು. ಈ ಧರ್ಮ ಕ್ರಿ.ಶ 5ನೇ ಶತಮಾನದಲ್ಲಿ ಕೊನೆಗೊಂಡಿತು.

ಮಾನಿಚೈಸಮ್

ಮಾನಿಚೈಸಮ್

ಈ ಧರ್ಮವನ್ನುಪ್ರವಾದಿ ಮಾನಿ ಕ್ರಿ.ಶ 200ರಲ್ಲಿ ಸ್ಥಾಪಿಸಿದರು. ಈ ಧರ್ಮ ಈಜಿಪ್ಟ್, ಸೆಂಟ್ರಲ್ ಏಷ್ಯಾದಲ್ಲಿ ಜನಪ್ರಿಯವಾಗಿತ್ತು. ಆದರೆ ಕ್ರಿ. ಶ 13ನೇ ಶತಮಾನ ಆಗುವಷ್ಟರಲ್ಲಿ ಸಂಪೂರ್ಣವಾಗಿ ನಶಿಸಿ ಹೋಯಿತು. ಈ ಧರ್ಮ ಕಣ್ಮೆರೆಯಾಗಲು ಕಾರಣವೇನು ಎಂಬುವುದಕ್ಕೆ ಸೂಕ್ತ ಪುರಾವೆ ಸಿಕ್ಕಿಲ್ಲ.

ಮಿಸೋಮೇರಿಕನ್ ಧರ್ಮ

ಮಿಸೋಮೇರಿಕನ್ ಧರ್ಮ

ಈ ಧರ್ಮ ಕೂಡ ಒಂದು ಕಾಲದಲ್ಲಿ ಪ್ರಸಿದ್ಧವಾದ ಧರ್ಮವಾಗಿತ್ತು. ಈ ಧರ್ಮ ಪ್ರಾಕೃತಿಕ ವಿಕೋಪದಿಂದಾಗಿ ನಾಶವಾಯಿತು ಎಂದು ಅಂದಾಜಿಸಲಾಗಿದೆ.

ದಿನ್ ಇ ಇಲಾಹಿ( Din E Ilahi)

ದಿನ್ ಇ ಇಲಾಹಿ( Din E Ilahi)

ಈ ಧರ್ಮವು ಮೊಘಲ್ ಚಕ್ರವರ್ತಿಯಾದ ಅಕ್ಬರ್ ನ ಕಾಲದಲ್ಲಿ ಪ್ರಾರಂಭವಾಗಿ ಅವನ ಅಂತ್ಯದ ನಂತರ ಧರ್ಮ ಕೂಡ ಪತನವಾಯಿತು.

English summary

The Lost Religions Of The World

The reasons for the religions getting extinct can be numerous. Natural calamity, invasions, wars, mass conversions or merging into a new religious order. Let us have a look at some of the lost religions of the world.
 
X
Desktop Bottom Promotion