For Quick Alerts
ALLOW NOTIFICATIONS  
For Daily Alerts

ಜಾತಕದಲ್ಲಿ ಗ್ರಹದ ಪ್ರಭಾವಿದ್ದರೆ ಯಾವ ಹರಳು ಒಳ್ಳೆಯದು?

|

ಆಭರಣ ಕೊಳ್ಳಲು ಹೋದಾಗ ರತ್ನದ ಹರಳುಗಳಿಂದ ಮಾಡಿದ ಆಭರಣಗಳು ತಟ್ಟನೇ ನಮ್ಮ ಗಮನ ಸೆಳೆಯುತ್ತದೆ. ಅವುಗಳ ಹೊಳೆಯುವ ಕಲ್ಲುಗಳನ್ನು ನೋಡುವಾಗ ಕೊಳ್ಳಬೇಕೆಂದು ಮನಸ್ಸಾಗುತ್ತದೆ, ಆದರೆ ತಟ್ಟನೆ ನೆನಪಾಗುವುದು ಈ ಹರಳನ್ನು ನಾನು ಧರಿಸಿದರೇ ಒಳ್ಳೆಯದಾ? ನನಗೆ ಯಾವ ಹರಳು ಅದೃಷ್ಟವನ್ನು ತರುತ್ತದೆ ಎಂದು ರತ್ನಶಾಸ್ತ್ರಜ್ಞರGemologist)ಬಳಿ ಕೇಳಿ ನಂತರ ಕೊಳ್ಳೋಣ ಎಂದು ಯೋಚಿಸುತ್ತೇವೆ.

ರತ್ನದ ಹರಳುಗಳಿರುವ ಆಭರಣಗಳನ್ನು ಇಷ್ಟವಾಯಿತು ಎಂದು ಕೊಂಡು ಧರಿಸುವವರು ತುಂಬಾ ವಿರಳ, ಆ ಕಲ್ಲು ಧರಿಸುವುದರಿಂದ ದೊರೆಯುವ ಗುಣಗಳ ಬಗ್ಗೆ ತಿಳಿದುಕೊಂಡ ನಂತರವಷ್ಟೇ ಧರಿಸುತ್ತೇವೆ. ನಿಮಗೆ ರತ್ನದ ಹರಳುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕೆಂದು ಬಯಸುವುದಾದರೆ ರತ್ನದ ಹರಳುಗಳ ಕುರಿತು ಬೋಲ್ಡ್ ಸ್ಕೈ ಪ್ರಸಿದ್ಧ ರತ್ನಶಾಸ್ತ್ರಜ್ಞರಾದ ಅಮಿತ್ ದೋಶಿಯವರ ಜೊತೆ ನಡೆಸಿದ ಸಂದರ್ಶನ ನೋಡಿ ಇಲ್ಲಿದೆ:

ಅಮಿತ್ ದೋಶಿ ಪರಿಚಯ
ಅಮಿತ್ ದೋಶಿ ಅಮೇಕರಿದಲ್ಲಿ ನೆಲೆ ನಿಂತಿರುವ ಭಾರತೀಯ. ರತ್ನಶಾಸ್ತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಹರಳುಶಾಸ್ತ್ರ ಮತ್ತು ವಿಜ್ಞಾನ ಎರಡನ್ನು ಬೆರೆಸಿ ರತ್ನದ ಆಭರಣಗಳನ್ನು ತಯಾರಿಸುವುದೇ ಇವರ ವೈಶಿಷ್ಟ್ಯ. ಇವರ ಆಭರಣ ವಿನ್ಯಾಸವೂ ಹಾಲಿವುಡ್ ನಲ್ಲೂ ಜನಪ್ರಿಯತೆಯನ್ನು ಗಳಿಸಿದೆ ಹಾಲಿವುಡ್ ನ . ಮೈಕೇಲ್ ಓ ' ಕೋನೋರ್ ( Michael O'Connor) ಹೀಗೆ ಅನೇಕ ಪ್ರಸಿದ್ಧ ನಟ-ನಟಿಯರು ತಮ್ಮ ಅದೃಷ್ಟದ ಹರಳುಗಳನ್ನು ಇವರ ಕೈಯಿಂದಲೇ ಮಾಡಿಸುತ್ತಾರೆ.

ಅವರು ಹರಳು ವ್ಯಾಪಾರ ಮತ್ತು ಅದರ ವಿನ್ಯಾಸ, ಜಾತಕದ ಮೇಲೆ ಗ್ರಹಗಳ ಪ್ರಭಾವ, ಗ್ರಹದೋಷಕ್ಕೆ ಯಾವ ಹರಳು ಧರಿಸಬೇಕು? ಬಣ್ಣದ ಹರಳುಗಳ ಗುಣಗಳೇನು ಇವುಗಳ ಬಗ್ಗೆ ಏನು ಹೇಳಿದ್ದಾರೆ ಎಂದು ನೋಡೋಣ ಬನ್ನಿ:

 ರತ್ನ ಶಾಸ್ತ್ರಜ್ಞ

ರತ್ನ ಶಾಸ್ತ್ರಜ್ಞ

ಅಮಿತ್ ದೋಶಿ 'Gemological Institute of America'ದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಬಣ್ಣದ ಹರಳುಗಳ ಬಗ್ಗೆ ಏನು ಹೇಳಿದ್ದಾರೆ ಎಂದು ತಿಳಿಯಲು ಮುಂದೆ ಓದಿ.

ಚಂದ್ರ ಗ್ರಹದ ಪ್ರಭಾವಿದ್ದರೆ

ಚಂದ್ರ ಗ್ರಹದ ಪ್ರಭಾವಿದ್ದರೆ

ಬಿಳಿ ಹರಳು ಮನುಷ್ಯನ ಮೇಲೆ ಸಕಾರಾತ್ಮಕವಾದ ಪರಿಣಾಮವನ್ನು ಬೀರುವುದು. ಈ ಹರಳು ಧರಿಸಿದರೆ ಉತ್ತಮವಾದ ಹವ್ಯಾಸ, ಮನಸ್ಸಿನ ನಿಯಂತ್ರಣ ಮತ್ತು ಆರೋಗ್ಯ ವೃದ್ಧಿ, ಸಂಪತ್ತು ದೊರೆಯುವುದು.

ಗುರುಗ್ರಹದ ಪ್ರಭಾವಿದ್ದರೆ

ಗುರುಗ್ರಹದ ಪ್ರಭಾವಿದ್ದರೆ

ಮಂಕಾದ ತೆಳು ಹಳದಿ ಬಣ್ಣದ, ಹೊಳೆಯುವ ಈ ಕಲ್ಲು ಮನುಷ್ಯನ ವ್ಯಕ್ತಿತ್ವ ವಿಕಸನವಾಗುವಂತೆ ಮಾಡುವುದು. ಆ ವ್ಯಕ್ತಿಯಲ್ಲಿ ಧಾರ್ಮಿಕತೆ ಹೆಚ್ಚಾಗುವುದು, ವಸ್ತು ನಿಷ್ಠತೆ, ನಂಬಿಕೆ ಬೆಳೆಯುವುದು, ತೆಗೆದುಕೊಳ್ಳುವ ತೀರ್ಮಾನಗಳು ಉತ್ತಮವಾಗಿರುವುದು. ಈ ರತ್ನದ ಹರಳು ಆ ವ್ಯಕ್ತಿಯಲ್ಲಿ ನಾಯಕತ್ವದ ಗುಣ ಬೆಳೆಸುತ್ತದೆ, ಅವನ ಕೋಪವನ್ನು ನಿಯಂತ್ರಿಸುತ್ತದೆ.

ಜಾತಕದಲ್ಲಿ ನೀರಿನಿಂದ ದೋಷವಿದ್ದರೆ

ಜಾತಕದಲ್ಲಿ ನೀರಿನಿಂದ ದೋಷವಿದ್ದರೆ

ಈ ಹರಳು (Orange Zircon)ಮನುಷ್ಯನಿಗೆ ಅವನ ಮೂಲ ಗುಣ ಮರಳಿ ಪಡೆಯುವಂತೆ ಮಾಡುತ್ತದೆ, ಅವನಲ್ಲಿರುವ ಸುಪ್ತವಾದ ಪ್ರತಿಭೆಯನ್ನು ಹೊರತರುತ್ತದೆ, ಅವನನ್ನು ಮತ್ತೊಬ್ಬರಿಗೆ ಒಬ್ಬ ಮಾರ್ಗದರ್ಶಕವಾದ ವ್ಯಕ್ತಿಯಾಗಿ ಬಿಂಬಿಸುತ್ತದೆ. ಈ ಹರಳು ಸಂಪತ್ತು ತರುತ್ತದೆ.

ಬುಧಗ್ರಹದ ಪ್ರಭಾವಿದ್ದರೆ

ಬುಧಗ್ರಹದ ಪ್ರಭಾವಿದ್ದರೆ

Emerald ಹರಳು ಧರಿಸಿದರೆ ಸೌಂದರ್ಯ, ಬುದ್ಧಿವಂತಿಕೆ, ಕೌಶಲ್ಯ ಹೆಚ್ಚುವುದು. ಈ ಹರಳು ವ್ಯಕ್ತಿಗೆ ಹಣ, ಸಂಪತ್ತು, ಜ್ಞಾನ, ಕೀರ್ತಿ ಇವೆಲ್ಲಾವನ್ನು ತಂದುಕೊಡುತ್ತದೆ.

ನಮ್ಮ ಜಾತಕದಲ್ಲಿ ಶುಕ್ರನ ಪ್ರಭಾವವಿದ್ದರೆ

ನಮ್ಮ ಜಾತಕದಲ್ಲಿ ಶುಕ್ರನ ಪ್ರಭಾವವಿದ್ದರೆ

ಅಂತಹ ವ್ಯಕ್ತಿ ವಜ್ರ ಧರಿಸಿದರೆ ಆಕರ್ಷಕವಾದ ವ್ಯಕ್ತಿತ್ವ ಬೆಳೆಯುವುದು, ಸೊಗಸಾದ ಜೀವನ ನಡೆಸುವುದು ಅಲ್ಲದೆ, ದೀರ್ಘಾಯುಷ್ಯದಿಂದ, ನೆಮ್ಮದಿಯಿಂದ ಬಾಳಬಹುದು.

ಜಾತಕದಲ್ಲಿ ಕೇತುವಿನ ಪ್ರಭಾವವಿರುವವರು

ಜಾತಕದಲ್ಲಿ ಕೇತುವಿನ ಪ್ರಭಾವವಿರುವವರು

ಜಾತಕದಲ್ಲಿ ಕೇತುವಿನ ಪ್ರಭಾವವಿರುವವರು Fibrolite Cat's Eye ಎಂಬ ಹರಳನ್ನು ಧರಿಸಿದರೆ ಒಳ್ಳೆಯದಾಗುವುದು. ಧಾರ್ಮಿಕ ಚಿಂತನೆ ಹಚ್ಚುವುದು, ಐಶ್ವರ್ಯ ಹೆಚ್ಚುವುದು. ದುಷ್ಟಶಕ್ತಿಗಳಿಂದ ನಿಮ್ಮನ್ನು ರಕ್ಷಿಸುವುದು.

ಜಾತಕದಲ್ಲಿ ಶನಿಗ್ರಹದ ಪ್ರಭಾವವಿದ್ದರೆ

ಜಾತಕದಲ್ಲಿ ಶನಿಗ್ರಹದ ಪ್ರಭಾವವಿದ್ದರೆ

ಜಾತಕದಲ್ಲಿ ಶನಿಗ್ರಹದ ಪ್ರಭಾವಿದ್ದರೆ ಅಂತಹವರು Blue Sapphire ಎಂಬ ಹರಳು ಧರಿಸುವುದು ಒಳ್ಳೆಯದು. ಇದುನ್ನು ಧರಿಸಿದರೆ ಆಯಸ್ಸು ಹೆಚ್ಚುವುದು, ಮನಸ್ಸಿಗೆ ಸಮಧಾನ ದೊರೆಯುವುದು.

ಕುಜ ಸ್ವಾದೀನ

ಕುಜ ಸ್ವಾದೀನ

ಜಾತಕದಲ್ಲಿ ಕುಜಗ್ರಹದ ಸ್ವಾದೀನವಿದ್ದರೆ Red Coral ಹರಳು ಧರಿಸಿದರೆ ಒಳ್ಳೆಯದು. ಇದನ್ನು ಧರಿಸಿದರೆ ಶಕ್ತಿ, ಧೈರ್ಯ, ತಾಳ್ಮೆ ಹೆಚ್ಚಾಗುವುದು, ಕೋಪ ಕಡಿಮೆಯಾಗುವುದು, ಜ್ಞಾನ ಹೆಚ್ಚಾಗುವುದು, ಅವನ/ಳ ಜೀವನದಲ್ಲಿ ಒಳ್ಳೆ ಕಾರ್ಯಗಳು ನಡೆಯುವುದು, ಇಷ್ಟ ನೆರವೇರುವುದು. ಆದರೆ ಇದನ್ನು ಧರಿಸುವ ಮುನ್ನ ರತ್ನ ಶಾಸ್ತ್ರಜ್ಞರ ಸಲಹೆ ಕೇಳಿದ ನಂತರವಷ್ಟೇ ಧರಿಸಿ.

ನಮ್ಮ ಪ್ರಶ್ನೆ, ಅಮಿತ್ ರವರ ಉತ್ತರ

ರತ್ನ ಶಾಸ್ತ್ರದ ಬಗ್ಗೆ ನಿಮಗೆ ಆಸಕ್ತಿ ಮೂಡಲು ಕಾರಣವೇನು?

ರತ್ನಶಾಸ್ತ್ರ ಅನ್ನುವುದು ತುಂಬಾ ಅಪರೂಪದ ವಿಷಯ ಆದ್ದರಿಂದಲೇ ಅದರತ್ತ ಆಸಕ್ತಿ ಮೂಡಿತು. ರತ್ನದ ಹರಳುಗಳನ್ನು ತುಂಬಾ ಇಷ್ಟಪಡುತ್ತೇನೆ, ಆ ಪ್ರೀತಿಯೇ ಈ ಉದ್ಯೋಗದಲ್ಲಿ ತೊಡಗುವಂತೆ ಮಾಡಿತು.

ರತ್ನದ ಹರಳು ನಮ್ಮ ನಡುವಳಿಕೆ, ಆರೋಗ್ಯ ಮತ್ತು ಅದೃಷ್ಟದ ಮೇಲೆ ನಿಜವಾಗಲೂ ಪರಿಣಾಮ ಬೀರುವುದೇ?

ಹಾಗೇನು ಇಲ್ಲ, ಕಲ್ಲುಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಕಲ್ಲುಗಳಿಗೆ ತನ್ನದೇ ಆದ ಶಕ್ತಿ ಇದೆ ಎಂದು ಮಾತ್ರ ಹೇಳಬಲ್ಲೆ.

ಭಾರತದಲ್ಲಿ ನಾವು ಕಾಣಬಹುದು, ಜನರು ತಮ್ಮ ಹುಟ್ಟಿದ ದಿನಾಂಕ ಮತ್ತು ಜಾತಕಕ್ಕೆ ಹೊಂದುವಂತಹ ಹರಳುಗಳನ್ನು ಧರಿಸುತ್ತಾರೆ. ನಮಗೆ ಇಷ್ಟಬಂದ ಹರಳು ಧರಿಸಲು ಸಾಧ್ಯವಿಲ್ಲವೇ?

ರತ್ನದ ಹರಳುಗಳಿಗೂ ನಮ್ಮ ಜನ್ಮ ದಿನಾಂಕಕ್ಕೂ ಯಾವುದೇ ಸಂಬಂಧವಿಲ್ಲ. ಜನರು ತಮಗೆ ಇಷ್ಟಬಂದ ರತ್ನದ ಆಭರಣಗಳನ್ನು ಧರಿಸಬಹುದು.

ನಿಮ್ಮ ಆಭರಣಗಳ ಬೆಲೆ ಸಾಮಾನ್ಯ ಜನರ ಕೈಗೆ ಎಟುಕುವಂತಿದೆಯೇ?

ನಾನು ಮಾಡುವ ಎಲ್ಲಾ ರತ್ನಾಭಾರಣಗಳನ್ನು ತುಂಬಾ ವಿಶಿಷ್ಟವಾಗಿ ರೂಪಿಸಲಾಗಿರುತ್ತದೆ, ಆದ್ದರಿಂದಲೇ ಅವುಗಳ ಬೆಲೆ ಕೂಡ ಅಧಿಕವಾಗಿರುತ್ತದೆ.

ಹಾಲಿವುಡ್ ಹೊರತು ಪಡಿಸಿ ಭಾರತದ ಸೆಲೆಬ್ರಿಟಿಗಳಲ್ಲಿ ಯಾರಾದರೂ ನಿಮ್ಮ ಹರಳು ಧರಿಸಿದ್ದಾರೆಯೇ?

Oh yes! ರೇಖಾ, ಸುಷ್ಮಿತಾ ಸೇನ್ ನಮ್ಮloyal customers. ಹಾಲಿವುಡ್ ನಲ್ಲಿ ಏಂಜಲೀನಾ ಜೋಲಿ ಮುಂತಾದ ಪ್ರಮುಖ ಗಿರಾಕಿಗಳು ನನ್ನ ಅಂಗಡಿಗೆ ಭೇಟಿ ಕೊಡುತ್ತಾರೆ.

ವಜ್ರವೂ ಇತರ ಕಲ್ಲುಗಳಿಗಿಂತ ಶ್ರೇಷ್ಠವೆಂದು ನಂಬುತ್ತೀರಾ?

ವಜ್ರವೂ ಹೆಚ್ಚಿನ ಬೆಲೆಯದ್ದು ಅನ್ನುವುದಕ್ಕಿಂತ ಅದೊಂದು ಶ್ರೇಷ್ಠವಾದ ಕಲ್ಲು ಎಂದು ಹೇಳಬಹುದು. ಇತರ ಕಲ್ಲುಗಳಿಗೆ ಹೋಲಿಸಿದರೆ ವಜ್ರದ ಕಲ್ಲುಗಳು ದೊರೆಯುವುದು ತುಂಬಾ ಅಪರೂಪ. ವಜ್ರಕ್ಕೆ ವಿಶ್ವದ ಎಲ್ಲೆಡೆ ಒಂದೇ ಬೆಲೆ. ಆದರೆ ರತ್ನದ ಹರಳುಗಳ ಬೆಲೆಗಳಲ್ಲಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಕಂಡು ಬರಬಹುದು.

ಜ್ಯೂವೆಲರಿ ಡಿಸೈನರ್ ಆಗಿ ನಿಮಗೆ ಯಾವ ಡಿಸೈನ್ ಇಷ್ಟ?

ನನಗೆ ಆಯ್ಕೆ ಕೊಟ್ಟರೆ Alexandrite ಜೆಮ್ ಸ್ಟೋನ್ ಡಿಸೈನ್ ತುಂಬಾ ಇಷ್ಟ. ಇವು ದೊರೆಯುವುದು ತುಂಬಾ ಅಪರೂಪ ಹಾಗೂ ತುಂಬಾ ದುಬಾರಿ ಕೂಡ.

ಉತ್ತಮವಾದ ಹರಳುಗಳನ್ನು ಆಯ್ಕೆ ಮಾಡುವುದು ಹೇಗೆ ಎಂಬ ಟಿಪ್ಸ್ ಅನ್ನು ನಮ್ಮ ಓದುಗರಿಗೆ ನೀಡುವಿರಾ?
ಮೊದಲಿನದಾಗಿ ಸರ್ಟಿಫಿಕೆಟ್ ಇಲ್ಲದ ಯಾವುದೇ ಹರಳುಗಳನ್ನು ಕೊಳ್ಳಬೇಡಿ. ನಾವು 3 ಸರ್ಟಿಫಿಕೆಟ್ ಇರುವ ಹರಳುಗಳ ಸಜೆಸ್ಟ್ ಮಾಡಲು ಇಷ್ಟಪಡುತ್ತೇನೆ.

1. GIA (Gemological Institute of America)
2. HRD
3. IGI (the International Gemology Institute)

ಅಮಿತ್ ರವರ ರತ್ನದ ಆಭರಣಗಳ ಡಿಸೈನ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ http://www.heritagepointeltd.com/.

English summary

Talking of Gemstones with Amit Doshi

Amit Doshi is the famous Gemologist and an Indian jewellery designer whose creations are famous even in Hollywood. He has the rare quality of mixing the scientific know-how of a gemologist with the creative brilliance of a jewellery designer.
X
Desktop Bottom Promotion