For Quick Alerts
ALLOW NOTIFICATIONS  
For Daily Alerts

ವೈದ್ಯರ ಬಳಿ ಮುಚ್ಚಿಡಬಾರದ ಟಾಪ್ ಸೀಕ್ರೆಟ್!

|

ಆರೋಗ್ಯ ಸಮಸ್ಯೆಯಿಂದ ನೀವು ವೈದ್ಯರನ್ನು ಭೇಟಿ ಮಾಡಿದಾಗ ನಿಮ್ಮ ಅಭ್ಯಾಸ, ಯಾವುದಾದರೂ ಔಷಧಿಯನ್ನು ಸೇವಿಸುತ್ತಿದ್ದರೆ ಯಾವುದನ್ನು ಮರೆಮಾಚದೆ ವೈದ್ಯರ ಹತ್ತಿರ ಹೇಳಿ. ಕೆಲವರು ತಮ್ಮ ಗುಪ್ತ ಸಮಸ್ಯೆಗಳನ್ನು ವೈದ್ಯರ ಬಳಿ ಹೇಳಿಕೊಳ್ಳಲು ಹೇಳಲು ಸಂಕೋಚ ಪಡುತ್ತಾರೆ. ಆದರೆ ಆ ರೀತಿ ಮಾಡಿದರೆ ನಿಮ್ಮ ತೊಂದರೆಗೆ ಪರಿಹಾರ ದೊರೆಯುವುದಿಲ್ಲ, ನೆನಪಿರಲಿ.

ನೀವು ತೊಂದರೆ ಅನುಭವಿಸುತ್ತಿರುವ ವಿಷಯಗಳ ಬಗ್ಗೆ ವೈದ್ಯರಿಗೆ ಸಂಪೂರ್ಣ ಮಾಹಿತಿಯಿದ್ದರೆ ಭವಿಷ್ಯದಲ್ಲಿ ದೊಡ್ಡ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದು. ಭಯಬೀಳದೇ ನಿಮ್ಮ ವೈದ್ಯರಿಗೆ ನಿಮ್ಮ ಆರೋಗ್ಯದ ಸಂಪೂರ್ಣ ಮಾಹಿತಿ ನಿಡುವುದು ನಿಮಗೇ ಒಳ್ಳೆಯದು.

ನಿಮ್ಮ ವೈದ್ಯರ ಮುಂದೆ ಆದಷ್ಟು ಪಾರದರ್ಶಕವಾಗಿರುವುದು ನಿಮಗೆ ಸೂಕ್ತವಾದ ಚಿಕಿತ್ಸೆ ನೀಡುವುದಕ್ಕೆ ವೈದ್ಯರಿಗೆ ಬಹಳವೇ ಸಹಾಯ ಮಾಡುತ್ತದೆ. ಈ ಲೇಖನ ಓದಿಕೊಳ್ಳಿ ಮತ್ತು ನಿಮ್ಮ ವೈದ್ಯರಿಂದ ಯಾವೆಲ್ಲ ವಿಷಯಗಳನ್ನು ಮುಚ್ಚಿಡಬಾರದು ಅನ್ನುವುದನ್ನು ತಿಳಿದುಕೊಳ್ಳಿ.

1. ಕೆಟ್ಟ ಚಟಗಳ ಬಗ್ಗೆ

1. ಕೆಟ್ಟ ಚಟಗಳ ಬಗ್ಗೆ

ಸಿಗರೇಟು, ಕುಡಿತ ಮತ್ತು ಡ್ರಗ್ಸ್ ಸೇವಿಸುವ ಚಟವಿದ್ದರೆ ಮುಕ್ತವಾಗಿ ವೈದ್ಯರೆದುರು ಹೇಳಿಕೊಳ್ಳಿ. ನಿಮ್ಮ ಚಟಗಳ ಬಗ್ಗೆ ವೈದ್ಯರಿಗೆ ತಿಳಿಸದಿದ್ದರೆ ಸೂಕ್ತವಾದ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ.

2. ಹಿಂದಿನ ಶಸ್ತ್ರಚಿಕಿತ್ಸೆಗಳ ಬಗ್ಗೆ:

2. ಹಿಂದಿನ ಶಸ್ತ್ರಚಿಕಿತ್ಸೆಗಳ ಬಗ್ಗೆ:

ನೀವು ಈ ಹಿಂದೆ ಮಾಡಿಸಿಕೊಂಡ ಶಸ್ತ್ರ ಚಿಕಿತ್ಸೆಗಳ ಬಗ್ಗೆ ಈಗಿನ ವೈದ್ಯರಿಗೆ ಮಾಹಿತಿ ನೀಡಬೇಕಾದ್ದು ಬಹು ಮುಖ್ಯ. ಇವುಗಳ ಬಗ್ಗೆ ಮಾಹಿತಿ ಇದ್ದರೆ ಮಾತ್ರ ಮುಂದಿನ ಚಿಕಿತ್ಸೆಗಳ ಬಗ್ಗೆ ವೈದ್ಯರಿಗೆ ನಿರ್ಧರಿಸಲು ಸಾಧ್ಯ.

3. ಆಹಾರ ಪದ್ದತಿಗಳ ಬಗ್ಗೆ

3. ಆಹಾರ ಪದ್ದತಿಗಳ ಬಗ್ಗೆ

ನಿಮ್ಮ ತಿನ್ನುವ ಆಹಾರ ಪದ್ದತಿಗಳ ಬಗ್ಗೆ ಮಾಹಿತಿ ನೀಡಿ. ಕೆಲವೊಮ್ಮೆ ಆಹಾರ ಪದ್ದತಿಗಳೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

4. ಖಿನ್ನತೆ

4. ಖಿನ್ನತೆ

ಖಿನ್ನತೆ ಅಥವಾ ಒತ್ತಡಗಳಿಂದ ಬಳಲುವ ವ್ಯಕ್ತಿ ಬಹಳಷ್ಟು ಬಾರಿ ಯಾರ ಮುಂದೂ ಹೇಳಿಕೊಳ್ಳದೇ ತಮ್ಮೊಳಗೇ ಮುಚ್ಚಿಟ್ಟುಕೊಳ್ಳುತ್ತಾರೆ. ಇದರಿಂದ ಬಹಳಷ್ಟು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವೈದ್ಯರ ಮುಂದೆ ನಿಮ್ಮ ಖಿನ್ನತೆ ಮತ್ತು ಒತ್ತಡಗಳನ್ನು ಮುಕ್ತವಾಗಿ ಹೇಳಿಕೊಳ್ಳಿ.

5. ಯಾವುದಾದರೂ ಔಷಧಿ ತೆಗೆದುಕೊಳ್ಳುತ್ತಿದ್ದರೆ

5. ಯಾವುದಾದರೂ ಔಷಧಿ ತೆಗೆದುಕೊಳ್ಳುತ್ತಿದ್ದರೆ

ನೀವು ಯಾವಾಗಲೂ ತೆಗೆದುಕೊಳ್ಳುವ ಔಷಧಗಳ ಬಗ್ಗೆ ಪೂರ್ವಾಪರ ಮಾಹಿತಿ ನೀಡಿ. ಚಿಕಿತ್ಸೆಯ ಸಮಯ ಮತ್ತು ಇನ್ಯಾವ ಔಷಧಿಗಳನ್ನು ಸೇವಿಸಬೇಕು ಎನ್ನುವುದು ವೈದ್ಯರಿಗೆ ಸರಿಯಾಗಿ ನಿರ್ಧರಿಸಲು ಒಳ್ಳೆಯದಾಗುತ್ತದೆ.

6. ಅಲರ್ಜಿಗಳು

6. ಅಲರ್ಜಿಗಳು

ಕೆಲವು ಔಷಧಿಗಳು, ಆಹಾರ ಮತ್ತು ವಾತಾವರಣಗಳಿಂದ ನೀವು ಅಲರ್ಜಿ ಹೊಂದಿರಬಹುದು. ನೀವು ಚಿಕಿತ್ಸೆ ಪಡೆಯುವ ಮುಂಚೆ ನಿಮ್ಮ ಅಲರ್ಜಿಗಳ ಬಗ್ಗೆ ಮಾಹಿತಿ ನೀಡುವುದು ಸೂಕ್ತ.

7. ಮಲದಲ್ಲಿ ರಕ್ತ

7. ಮಲದಲ್ಲಿ ರಕ್ತ

ಬಹಳಷ್ಟು ಬಾರಿ ನಿಮ್ಮ ಮಲವಿಸರ್ಜನೆಯ ಸಂದರ್ಭದಲ್ಲಿ ರಕ್ತ ಕಾಣಿಸಿಕೊಂಡರೆ ನೀವದನ್ನು ವೈದ್ಯರಿಗೆ ತಿಳಿಸುವುದಿಲ್ಲ. ಕ್ಯಾನ್ಸರ್ ನಂತ ತೊಂದರೆಗಳಿದ್ದಲ್ಲಿ ಅದನ್ನು ಪ್ರಾರಂಭದಲ್ಲಿ ಗುಣಮುಖಗೊಳಿಸಲು ನೀವು ವೈದ್ಯರಿಗೆ ಮಾಹಿತಿ ನೀಡಲೇಬೇಕು.

English summary

Secrets You Shouldn't Keep From Your Doctor | ಈ ರಹಸ್ಯಗಳನ್ನು ಮಾತ್ರ ನಿಮ್ಮ ವೈದ್ಯರ ಹತ್ತರ ಹೇಳದೆ ಇರಬಾರದು

Read through this article to know some crucial aspects that shouldn’t be concealed from your doctor.
X
Desktop Bottom Promotion