For Quick Alerts
ALLOW NOTIFICATIONS  
For Daily Alerts

ಚಿತ್ರಗಳಲ್ಲಿ- ಪುರಿ ಜಗನ್ನಾಥ ರಥೋತ್ಸವ

|

ಪ್ರತೀವರ್ಷ ಆಷಾಢ ಮಾಸದಲ್ಲಿ ಒಡಿಸ್ಸಾದಲ್ಲಿ ಪುರಿ ಜಗನ್ನಾಥ ರಥಯಾತ್ರೆ ಉತ್ಸವವನ್ನು ತುಂಬಾ ಸಡಗರ -ಸಂಭ್ರಮದಿಂದ ಆಚರಿಸಲಾಗುವುದು. ಈ ವರ್ಷದ ರಥೋತ್ಸವದಲ್ಲಿ ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪುರಿ ಜಗನ್ನಾಥ ದೇವಾಲಯದ ದಾರಿಯಂತೂ ಭಕ್ತಾದಿಗಳಿಂದ ತುಂಬಿ ಹೋಗಿತ್ತು.

ರಥಯಾತ್ರೆಯೂ ಪುರಿ ಜಗನ್ನಾಥ ದೇವಾಲಯದಿಂದ ಪ್ರಾರಂಭವಾಗಿ ಶ್ರೀ ಗುಂಡಿಚಾ ದೇವಾಲಯದಲ್ಲಿ ಕೊನೆಗೊಳ್ಳುವುದು. ಈ ರಥಯಾತ್ರೆಯಲ್ಲಿ ಜಗನ್ನಾಥ, ಬಲಭದ್ರ ಹಾಗೂ ಸುಭದ್ರ ದೇವಿಯ ಮೂರ್ತಿಯನ್ನು ಬೇರೆ ಬೇರೆ ರಥಗಳಲ್ಲಿ ಕೂರಿಸಿ ರಥಯಾತ್ರೆ ಮಾಡಲಾಗುವುದು. ದೇವ ಜಗನ್ನಾಥನ ರಥ ಹಳದಿ ಬಣ್ಣದಲ್ಲಿ, ಬಲಭದ್ರನ ರಥ ಹಸಿರು ಬಣ್ಣದಲ್ಲಿ, ಸುಭದ್ರ ಮಾತೆಯ ರಥ ಕೆಂಪು ಬಣ್ಣದ್ದಾಗಿರುತ್ತದೆ.

ಈ ರಥ ಯಾತ್ರೆ 7 ದಿನಗಳ ಉತ್ಸವವಾಗಿದ್ದು, ಈ ಮೂರು ದೇವರುಗಳನ್ನ ಹೊತ್ತ ರಥ ಶ್ರೀ ಗುಂಡಿಚಾ ದೇವಾಲಯದವರೆಗೆ ಹೋಗಿ ನಂತರ ಮರಳಿ ಬರುವುದು. ಈ ಮೂರ್ತಿಗಳನ್ನು ರಥದಲ್ಲಿ ಕೂರಿಸುವಾಗ ಅಲ್ಲಿಯ ಮಹಾರಾಜ ಗಜಪತಿ (ನಮ್ಮ ಇಲ್ಲಿ ಮೈಸೂರು ಮಹಾರಾಜರು ಇರುವ ಹಾಗೆ) ಝಾಡಮಾಲಿಯ ವೇಷ ಹಾಕಿ ರೋಡ್ ಅನ್ನು ಚಿನ್ನದ ಪೊರಕೆಯಿಂದ ಗುಡಿಸಿ, ಶ್ರೀಗಂಧದ ನೀರು ಚಿಮಿಕಿಸಿ ಶುದ್ಧ ಮಾಡುವ ಪದ್ಧತಿ ಇದೆ.

ಇಲ್ಲಿ ನಾವು 2013ರ ಸಾಲಿನ ಪುರಿ ಜಗನ್ನಾಥ ರಥೋತ್ಸವದ ವೈಭವವನ್ನು ಚಿತ್ರಗಳಲ್ಲಿ ನೀಡಿದ್ದೇವೆ ನೋಡಿ:

ಜಗನ್ನಾಥನ ಮೂರ್ತಿ

ಜಗನ್ನಾಥನ ಮೂರ್ತಿ

ಮೆರವಣಿಗೆಗೆ ಮೊದಲು ಅಲಂಕರಿಸಿದ ಜಗನ್ನಾಥನ ಮೂರ್ತಿ.

 3 ದೇವರುಗಳು

3 ದೇವರುಗಳು

ಬಲಭಾಗದಲ್ಲಿ ಜಗನ್ನಾಥ, ಮಧ್ಯದಲ್ಲಿ ಸುಭದ್ರ ಮತ್ತು ಎಡ ಭಾಗದಲ್ಲಿರುವುದು ಬಲಭದ್ರನ ಮೂರ್ತಿ.

 3 ರಥಗಳು

3 ರಥಗಳು

ಮೂರ್ತಿಗಳನ್ನು ಹೊತ್ತು ಮೆರವಣಿಗೆಗೆ ತಯಾರಾಗಿ ನಿಂತ 3 ರಥಗಳು.

ಭಕ್ತಾಧಿಗಳು

ಭಕ್ತಾಧಿಗಳು

ದೇವರ ದರ್ಶನಕ್ಕೆ ಕಾದು ನಿಂತಿರುವ ಭಕ್ತಾಧಿಗಳು.

 ಮಕ್ಕಳ ಸಂಭ್ರಮ

ಮಕ್ಕಳ ಸಂಭ್ರಮ

ಬೆಂಗಾಳದಲ್ಲಿ ಜಗನ್ನಾಥ, ಸುಭದ್ರಾ, ಬಲಭದ್ರ ಮೂರ್ತಿಗಳನ್ನು ಅಲಂಕರಿಸಿ ಸಡಗರದಿಂದ ನಕ್ಕು ನಲಿಯುತ್ತಿರುವ ಮಕ್ಕಳು.

 ಸುಭದ್ರ

ಸುಭದ್ರ

ರಥದಲ್ಲಿ ಸುಭದ್ರಳನ್ನು ಕೂರಿಸಲು ಕೊಂಡೊಯ್ಯುತ್ತಿರುವ ಭಕ್ತಾಧಿಗಳು.

ಜಗನ್ನಾಥ

ಜಗನ್ನಾಥ

2013ರ ಪುರಿ ಜಗನ್ನಾಥ ರಥೋತ್ಸವದ ದೃಶ್ಯ

ಪುರಿ ಜಗನ್ನಾಥ ರಥೋತ್ಸವ

2013ರ ಪುರಿ ಜಗನ್ನಾಥ ರಥೋತ್ಸವದ ದೃಶ್ಯ

ಪುರಿ ಜಗನ್ನಾಥ ರಥೋತ್ಸವ

2013ರ ಪುರಿ ಜಗನ್ನಾಥ ರಥೋತ್ಸವದ ದೃಶ್ಯ

ಪುರಿ ಜಗನ್ನಾಥ ರಥೋತ್ಸವ

2013ರ ಪುರಿ ಜಗನ್ನಾಥ ರಥೋತ್ಸವದ ದೃಶ್ಯ

ಪುರಿ ಜಗನ್ನಾಥ ರಥೋತ್ಸವ

2013ರ ಪುರಿ ಜಗನ್ನಾಥ ರಥೋತ್ಸವದ ದೃಶ್ಯ

English summary

Puri Jagannath Rath Yatra 2013 In Pictures

The Rath Yatra in Puri is a 7-days festival where the three idols visit Gundicha (their aunt) and then return back. The huge chariots are well-decorated with flowers and are adorned every year.
X
Desktop Bottom Promotion