For Quick Alerts
ALLOW NOTIFICATIONS  
For Daily Alerts

ಇಲ್ಕ್ ಬುಟಿಕ್‍ನಲ್ಲಿ ಡಿಸೈನರ್ ಬಟ್ಟೆಗಳ ಪ್ರದರ್ಶನ

|

ಕಳೆದ ಒಂದು ವರ್ಷದಿಂದ ಇಂಡಿಯನ್ ಕ್ರಾಫ್ಟ್ ಮತ್ತು ಟೆಕ್ಸ್‍ಟೈಲ್ ವಲಯದಲ್ಲಿ ತೊಡಗಿಸಿಕೊಂಡು ಯುವ ವಸ್ತ್ರ ವಿನ್ಯಾಸಕಾರರಿಂದ ವಿವಿಧ ವಿಶಿಷ್ಟ ಉಡುಪುಗಳನ್ನು ಡಿಸೈನ್ ಮಾಡಿಸಿ ಫ್ಯಾಷನ್ ಲೋಕಕ್ಕೆ ಸೇರಿಸುತ್ತಿರುವ ಇಲ್ಕ್, ಎ ಕಾನ್ಸೆಫ್ಟ್ ಬುಟಿಕ್ ಇದೀಗ ಮತ್ತಷ್ಟು ಪ್ರಯತ್ನಗಳನ್ನು ಕೈಗೆತ್ತಿಕೊಂಡಿದ್ದು, ಪ್ರಸಿದ್ಧ ಇಬ್ಬರು ವಸ್ತ್ರ ವಿನ್ಯಾಸಕಾರರು ರೂಪಿಸಿದ ಡಿಜೈನ್‍ಗಳ ಪ್ರದರ್ಶನ ಏರ್ಪಡಿಸಿದೆ.

ಪ್ರೆಂಚ್ ಡಿಸೈನರ್ ಮೆಲಿಸ್ಸಾ ಡೇ ವಲೇರಾ ಮತ್ತು ಕೆದಾರ್ ಅವರ ಡಿಸೈನ್‍ಗಳ ಅಪೂರ್ವ ಪ್ರದರ್ಶನ ಇದಾಗಿದೆ. ಈ ಪ್ರದರ್ಶನ 'ಪಾಂಡಿ-ಕ್ಯೂಟರ್' ಹೆಸರಿನಲ್ಲಿ ಸೆಪ್ಟೆಂಬರ್ 14 ರಿಂದ 22ರವರೆಗೆ ಇಲ್ಕ್ ಬುಟಿಕ್‍ನಲ್ಲಿ ನಡೆಯಲಿದೆ. ಇಲ್ಕ್ ಮಾಲೀಕರಾದ ಪ್ರೀತಿ ರಾಮ್ ಮೋಹನ್ ತಮ್ಮ ಆರ್ಕಿಟೆಕ್ಟ್ ಪತಿಯೊಂದಿಗೆ 12 ವಿಶ್ವ ಪ್ರಸಿದ್ಧ ವಸ್ತ್ರ ವಿನ್ಯಾಸಕರು ರೂಪಿಸಿದ ಡಿಸೈನ್‍ಗಳ ಮಾರಾಟ ಮತ್ತು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಭಾರತದಾದ್ಯಂತ ಡಿಸೈನರ್ ಗಳು ಹಾಗೂ ನೇಕಾರ ಸಂಸ್ಥೆಗಳೊಂದಿಗೆ ನೇರ ಸಂಪರ್ಕದ ಮೂಲಕ ಆರ್ಗನಿಕ್ ವಸ್ತುಗಳನ್ನು ಬಳಸಿ ಅಪೂರ್ವ ಫ್ಯಾಷನ್ ಡಿಸೈನ್‍ಗಳನ್ನು ಸೃಷ್ಟಿಸಿದ್ದಾರೆ.

PONDY-COUTURE exbition At ILK Boutique

ಮೆಲಿಸ್ಸಾ ಮತ್ತು ಟಕ್ಲಾ ಮಕಾನ್ "ಪಾಂಡಿ- ಕ್ಯೂಟರ್"ನಲ್ಲಿ: ಮೆಲಿಸ್ಸಾ ಡೇ ವಾಲೇರಾ, ಪ್ರೆಂಚ್ ಫ್ಯಾಷನ್ ಡಿಸೈನರ್ ಅವರು ಪಾಂಡಿ ಕ್ಯೂಟರ್‍ನಲ್ಲಿ ತಮಗೆ ಭಾರತದ ಸಾಂಪ್ರಾದಾಯಿಕ ಬಟ್ಟೆಗಳ ಮೇಲಿರುವ ಆಸಕ್ತಿಯನ್ನು ತೋರಿಸಲಿದ್ದಾರೆ. ಸಾಂಪ್ರದಾಯಿಕ ಭಾರತೀಯ ಉಡುಪು ತಯಾರಿಕೆಯಲ್ಲಿ ಆಸಕ್ತಿ ವಹಿಸಿದ ಇವರು ಭಾರತ ಟೆಕ್ಸಟೈಲ್ಸ್ ಪದ್ಧತಿಯನ್ನು ಪರ್ಷಿಯನ್ ವಿನ್ಯಾಸದೊಂದಿಗೆ ಜೋಡಿಸಿ ಅಮೋಘ ಸಾಧನೆ ಕೈಗೊಂಡರು. ಅಲ್ಲದೆ ಇವರು ಪ್ಯಾರಿಸ್‍ನಲ್ಲಿ ಕಲಿತ ವಿದ್ಯೆ ಹಾಗೂ ದೇಶ ವಿದೇಶಗಳಲ್ಲಿ ರೂಪಿಸಿದ ವಸ್ತ್ರ ವಿನ್ಯಾಸ ಕಲೆ ಭಾರತದ ವಿವಿಧೆಡೆ ಟೆಕ್ಸ್‍ಟೈಲ್ ಆರ್ಟಿಸನ್ಸ್ ಕೈಗೊಂಡರು. ಮೆಲಿಸ್ಸಾ ಕೇವಲ ಉಡುಗೆ ತಯಾರಿಕೆಗೆ ಸೀಮಿತವಾಗದೆ ಫ್ಯಾಷನ್ ಡಿಸೈನಿಂಗ್ ಜೊತೆ ಮಹಿಳೆಯರಿಗೆ ಅಕ್ಸೆಸರಿಸ್ ರೂಪಿಸುವುದರಲ್ಲಿಯೂ ನಿಸ್ಸೀಮರು.

ಏಷ್ಯಾ ಫ್ಯಾಷನ್‍ಗೆ ಸರಿಹೊಂದುವ ಅಕ್ಸೆಸರಿಸ್‍ಗಳನ್ನು ಪ್ಯಾರಿಸ್ ವಿನ್ಯಾಸ ಬಳಸಿ ರೂಪಿಸುವ ಮೂಲಕ ಫ್ಯಾಷನ್ ಲೋಕದಲ್ಲಿ ವಿಶಿಷ್ಟತೆ ಮೆರೆದರು. ಇವರು ತಯಾರಿಸಿದ ಟಾಪ್‍ಗಳು, ವೈಸ್ಟ್‍ಕೋಟ್-ಜಾಕೆಟ್‍ಗಳು ಮೂರು ವಿವಿಧ ವಿನ್ಯಾಸಗಳಲ್ಲಿ ಎಲ್ಲರ ಗಮನಸೆಳೆದಿವೆ. ಅಲ್ಲದೆ ಇವರು ಮಹಿಳೆಯರಿಗೆ ಹಾಗೂ ಯುವತಿಯರಿಗೆ ರೂಪಿಸಿರುವ ಡ್ರೆಸ್‍ಗಳು ಎಂತವರನ್ನು ಸ್ಲಿಮ್ ಆಗಿ ಕಾಣುವಂತೆ ಮಾಡುತ್ತವೆ. ಅಲ್ಲದೆ ಕೈಯಿಂದಲೇ ತಯಾರಿಸುವ ಸ್ವಾಭಾವಿಕ ರೇಷ್ಮೆ ಹಾಗೂ ವಿವಿಧ ಸಾಮಾಗ್ರಿಗಳಿಂದ ರೂಪಿಸುವ ಅಕ್ಸೆಸರಿಗಳು(ಬೆಲ್ಟ್ಸ್, ಬ್ರೋಷಸ್, ಹೇರ್ ಕ್ಲಿಪ್ಸ್,) ಎಂತದ್ದೇ ಡ್ರೆಸ್‍ಗೆ ಉತ್ತಮ ಔಟ್‍ಫಿಟ್ ನೀಡುತ್ತವೆ. ಈ ಎಲ್ಲವನ್ನು "ಪಾಂಡಿ- ಕ್ಯೂಟರ್" ನಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.

ಪಾಂಡಿ-ಕ್ಯೂಟರ್ ನಲ್ಲಿ ಕೇದಾರ್: ಕೇದಾರ್, ಮತ್ತೊಬ್ಬ ಪ್ರಸಿದ್ದ ಡಿಸೈನರ್. ಇವರು ಮಾಡಿದ ಡಿಸೈನ್‍ಗಳು ಕೂಡ ಪ್ರದರ್ಶನದಲ್ಲಿ ಇರಲಿವೆ. ಇವರು ಕೂಡ ಪಾಂಡಿಚೆರಿಯನ್ನು ನೆಲೆಯನ್ನಾಗಿಟ್ಟುಕೊಂಡು ದೇಶ ವಿದೇಶದಲ್ಲಿ ವಸ್ತ್ರವಿನ್ಯಾಸ ಮಾಡಿದ್ದಾರೆ. ಹೊಸ ಹೊಸ ಸಾಂಪ್ರದಾಯಿಕ ಉಡುಗೆ ತಯಾರಿಸಿದ್ದಾರಲ್ಲದೆ, ಹೊಸ ಫ್ಯಾಬ್ರಿಕ್‍ಗಳನ್ನು ರೂಪಿಸುವುದರಲ್ಲಿ ಆಸಕ್ತಿ ವಹಿಸಿದ್ದಾರೆ. ಜ್ಯೂಟ್, ಕಾಟನ್, ಬಳಸಿ ಇವರು ಅನೇಕ ನೂತನ ವಿನ್ಯಾಸದ ಉಡುಪು ರೂಪಿಸಿದ್ದಾರೆ. ಭಾರತೀಯ ಸಂಪ್ರದಾಯಕ್ಕೆ ಸರಿಹೊಂದುವ ಕಲ್ಚರಲ್, ಗಮನಸೆಳೆಯುವ ಡಿಸೈನ್‍ಗಳನ್ನು ರೂಪಿಸುವಲ್ಲಿ ಇವರು ನಿಪುಣರಾಗಿದ್ದಾರೆ.

ಪಾಂಡಿ-ಕೊಚೊರ್ ಪ್ರದರ್ಶನ ಸೆಪ್ಟಂಬರ್ 14ರಿಂದ 22 ರವರೆಗೆ ಇಲ್ಕ್ ಬುಟಿಕ್‍ನಲ್ಲಿ ನಡೆಯಲಿದೆ.

English summary

PONDY-COUTURE exbition At ILK Boutique

PONDY-COUTURE exhibition will be held on sept 14-20 at ILK Boutique The accessories, will be all hand made in silk or natural material (brooches, belts, hair clips, feet accessories, creative stoles etc).
X
Desktop Bottom Promotion