For Quick Alerts
ALLOW NOTIFICATIONS  
For Daily Alerts

ಪರಿಸರ ಮಾಲಿನ್ಯಕ್ಕೆ ನಮ್ಮ ಅನಿವಾರ್ಯ ಕೊಡುಗೆಗಳಿವು!

|

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನೆಲ್ಲೆಡೆ ಉಸಿರಾದ ಹಸಿರನ್ನು ಉಳಿಸಲು ಆಂದೋಲನಗಳು ನಡೆಯುತ್ತಿವೆ, ಪರಿಸರ ಉಳಿವಿಗಾಗಿ ಜನಜಾಗೃತಿ ಮೂಡಿಸಲು ಪ್ರಯತ್ನಗಳು ಪ್ರತೀವರ್ಷ ಈ ದಿನದಂದು(!)ನಡೆಯುತ್ತವೆ. ಮಾರನೆಯ ದಿನ ಎಲ್ಲರೂ ತಮ್ಮ-ತಮ್ಮ ಕೆಲಸದಲ್ಲಿ ಬ್ಯುಸಿಯಾಗಿ ಬಿಡುತ್ತೇವೆ. ದೊಡ್ಡ-ದೊಡ್ಡ ಗಿಡವನ್ನು ರೋಡ್ ವಿಸ್ತಾರ ಮಾಡಲೆಂದು ಕತ್ತರಿಸಿ ಉರುಳಿಸುವಾಗ ರೋಡ್ ಅಗಲವಾದರೆ ನನ್ನ ಗಾಡಿ ಸರಾಗವಾಗಿ ಹೋಗಬಹುದೆಂದು ಮನದಲ್ಲಿಯೇ ಖುಷಿ ಪಡುತ್ತಾ ಮೂಖರಂತೆ ನಿಂತು ನೋಡುತ್ತೇವೆ. ರೋಡ್ ಅಗಲ ಮಾಡುವುದು ಅನಿವಾರ್ಯ, ಆದರೆ ಇಲ್ಲಿ ಒಂದು ಗಿಡ ಕತ್ತರಿಸಿದಕ್ಕೆ ಪಶ್ಚಾತಾಪವಾಗಿ ಅರಣ್ಯದಲ್ಲಿ 10 ಗಿಡಗಳನ್ನು ನೆಡುವ ಪ್ರಯತ್ನವನ್ನು ನಾವು ಮಾಡುವುದಿಲ್ಲ ಅನ್ನುವುದೇ ವಾಸ್ತವ ಅಲ್ಲವೇ?

ಅಭಿವೃದ್ಧಿಯ ಹೆಸರಿನಲ್ಲಿ, ನಮ್ಮ ಸಂತೋಷಕ್ಕೆಂದು ಸಾಕಷ್ಟು ಪರಿಸರ ನಾಶ ಮಾಡಿದ್ದೇವೆ, ಮಾಡುತ್ತಲೇ ಇದ್ದೇವೆ. ಇಲ್ಲಿ ನಾನು ದಿನನಿತ್ಯ ಪರಿಸರ ಮಾಲಿನ್ಯಕ್ಕೆ ನಾವು ಕೊಡುತ್ತಿರುವ ಕೊಡುಗೆಗಳ ಬಗ್ಗೆ ಹೇಳಿದ್ದೇನೆ. ಈ ರೀತಿಯ ಕೊಡುಗೆಯನ್ನು ನಿಲ್ಲಿಸುವುದು ಬಾಯಿಯಲ್ಲಿ ಹೇಳಿದಷ್ಟು ಸುಲಭವಲ್ಲವೆಂದೂ ನನಗೂ, ನಿಮಗೂ ಗೊತ್ತು, ಆದರೂ ಪ್ರಯತ್ನಿಸಿದರೆ ಪರಿಸರಕ್ಕೆ ನಮ್ಮ ಈ ಕೊಡುಗೆಯನ್ನು ಕೊಡುವುದನ್ನು ಕಮ್ಮಿ ಮಾಡಬಹುದು, ಏನಂತೀರಿ:

ಜನ ಸಂಖ್ಯೆ

ಜನ ಸಂಖ್ಯೆ

ಜನ ಸಂಖ್ಯೆ ಹೆಚ್ಚಳದ ಬಗ್ಗೆ ಈಗಾಗಲೇ ಸಾಕಷ್ಟು ಜಾಗೃತಿ ಜನರಲ್ಲಿ ಮೂಡಿದೆ. ಆದರೆ ಇದರ ಬಗ್ಗೆ ಮತ್ತಷ್ಟು ಜಾಗೃತಿಯ ಅವಶ್ಯಕತೆ ಇದೆ.

ಕಾರ್ಖಾನೆಗಳು

ಕಾರ್ಖಾನೆಗಳು

ಒಂದು ದೇಶ ಆರ್ಥಿಕವಾಗಿ ಬೆಳೆಯಲು, ಜನರ ಅವಶ್ಯಕತೆಗಳನ್ನು ಪೂರೈಸಲು ಕೈಗಾರಿಕೆಗಳು ಬೇಕು. ಆದರೆ ಇವುಗಳು ಪರಿಸರಕ್ಕೆ ಅಷ್ಟೇ ಮಾರಕ. ಕೈಗಾರಿಕೆಗಳು ಇಲ್ಲದೆ ಜೀವನ ಊಹಿಸಲು ಸಾಧ್ಯವಿಲ್ಲ, ಪರಿಸರ ಹಾಳಾದರೆ ಬದುಕುವುದು ಕಷ್ಟ. ಆದ್ದರಿಂದ ಕೈಗಾರಿಕೆಗಳ ತ್ಯಾಜ್ಯ ವಸ್ತುವನ್ನು ಸರಿಯಾಗಿ ವಿಲೇವಾರಿ ಮಾಡುವುದೇ ಸ್ವಲ್ಪ ಮಟ್ಟಿಗೆ ಪರಿಸರ ರಕ್ಷಣೆಗೆ ನಾವು ಕೊಡುವ ಕಾಣಿಕೆ. ಒಂದು ವೇಳೆ ಕಾರ್ಖಾನೆಗಳು ಈ ಕೆಲಸದಲ್ಲಿ ಎಡವಿದರೆ ಇದರ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬ ಜನ ಸಾಮಾನ್ಯನ ಕರ್ತವ್ಯ.

ಸರಿಯಿಲ್ಲದ ಚರಂಡಿ ವ್ಯವಸ್ಥೆ

ಸರಿಯಿಲ್ಲದ ಚರಂಡಿ ವ್ಯವಸ್ಥೆ

ಸಾಕಷ್ಟು ಕಡೆ ಮಳೆ ನೀರು ಬಿದ್ದರೆ ಅದು ಭೂಮಿಯಲ್ಲಿ ಇಂಗದೆ ರಸ್ತೆಗಳು ನೀರು ತುಂಬಿ, ರಸ್ತೆ ಮಲೀನವಾಗಿ ನೀರು ಪೋಲಾಗುತ್ತಿದೆ. ಇನ್ನು ಒಳ ಚರಂಡಿ ವ್ಯವಸ್ಥೆಗಳು ಸರಿಯಿಲ್ಲದೆ ನೀರು ಮಲೀನವಾಗುತ್ತಿದೆ. ಇವುಗಳ ಬಗ್ಗೆ ಕಾಳಜಿ ಸರ್ಕಾರಕ್ಕೆ ಮಾತ್ರವಲ್ಲ, ಜನ ಸಾಮಾನ್ಯನಿಗೂ ಇರಬೇಕು.

ಮರಗಳ ನಾಶ

ಮರಗಳ ನಾಶ

ನಮ್ಮ ಅನುಕೂಲಕ್ಕೆ ಹಾಗೂ ಅಭಿವೃದ್ಧಿಗೆ ಅಗಲವಾದ ರೋಡ್ ಗಳು ಅತ್ಯವಶ್ಯಕ. ಆದರೆ ಈ ಕಾರಣದಿಂದ ನಷ್ಟವಾದ ಮರಗಿಡಗಳಿಗೆ ಪರ್ಯಾಯವಾಗಿ ಬೇರೊಂದು ಕಡೆ ಗಿಡಗಳನ್ನು ನೆಟ್ಟು ಬೆಳೆಸಿದರೆ ನಷ್ಟವನ್ನು ತಕ್ಕಮಟ್ಟಿಗೆ ಸರಿದೂಗಿಸಬಹುದು.

ಎಲೆಕ್ಟ್ರಾನಿಕ್ಸ್ ವೇಸ್ಟ್

ಎಲೆಕ್ಟ್ರಾನಿಕ್ಸ್ ವೇಸ್ಟ್

ಕಂಪ್ಯೂಟರ್, ಮೊಬೈಲ್ ಇಲ್ಲದೆ ಜೀವನವೇ ಕಷ್ಟ ಅನ್ನುವ ಹಂತಕ್ಕೆ ಬಂದಿದೆ. ಮನೆಗಳಲ್ಲೂ ಅಷ್ಟೇ ಅಡುಗೆ ಸಾಮಾಗ್ರಿಗಳಿಂದ ಹಿಡಿದು ಮಕ್ಕಳ ಆಟಿಕೆಗಳು ಕೂಡ ಎಲೆಕ್ಟ್ರಾನಿಕ್ಸ್ ಐಟಂಗಳು. ಸಾಕಷ್ಟು ಎಲೆಕ್ಟ್ರಾನಿಕ್ಸ್ ವೇಸ್ಟ್ ಪ್ರತೀವರ್ಷ ಕಸದ ಬುಟ್ಟಿಗೆ ಬೀಳುತ್ತದೆ. ಇವುಗಳಿಂದ ಪರಿಸರಕ್ಕೆ ಹಾನಿಯಾಗದಂತೆ ತಡೆಯುವುದು ಹೇಗೆ?

ಗಾಡಿಗಳು

ಗಾಡಿಗಳು

ಗಾಡಿಗಳು ನಮಗೆ ಅವಶ್ಯಕ, ಆದರೆ ಹೊಗೆಯನ್ನು ಕಮ್ಮಿ ಉಗುಳುವ ಗಾಡಿ ಬಳಕೆ ಒಳ್ಳೆಯದು.

ಪ್ಲಾಸ್ಟಿಕ್

ಪ್ಲಾಸ್ಟಿಕ್

ಪ್ಲಾಸ್ಟಿಕ್ ಮಣ್ಣಿನಲ್ಲಿ ಕೊಳೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಇದರಿಂದಾಗಿ ಮಳೆ ನೀರು ಭೂಮಿನಲ್ಲಿ ಇಂಗುವುದಿಲ್ಲ, ಎಲ್ಲಾ ಗೊತ್ತಿದ್ದರೂ ಪ್ಲಾಸ್ಟಿಕ್ ಬಳಸುತ್ತಿದ್ದೇವೆ. ಸ್ವಲ್ಪ ಪೇಪರ್ ರೀತಿಯ ಪ್ಲಾಸ್ಟಿಕ್ ಬಂದಿದೆಯಾದರೂ ಯಾವುದೇ ಪ್ಲಾಸ್ಟಿಕ್ ಆಗಿರಲಿ ಅದು ಪರಿಸರಕ್ಕೆ ಹಾನಿಕಾರವೇ.

ಕಸ

ಕಸ

ನಗರ ಪ್ರದೇಶದ ಕೆಲವು ಕಡೆಗಳಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಇದರ ಪರಿಣಾಮ ಸುಂದರ ಪರಿಸರ ಕಸದಿಂದ ತುಂಬಿ ತುಳುಕುತ್ತಿದೆ. ಇದಕ್ಕೆ ಮುನ್ಸಿಪಾಲಿಟಿಯವರು ಮಾತ್ರವಲ್ಲ, ಕಸವನ್ನು ಕಂಡ-ಕಂಡಲ್ಲಿ ಹಾಕುವ ಜನಸಾಮಾನ್ಯ ಮೊದಲ ತಪ್ಪಿತಸ್ಥ.

 ಯೂಸ್ ಅಂಡ್ ಥ್ರೋ

ಯೂಸ್ ಅಂಡ್ ಥ್ರೋ

ಯೂಸ್ ಅಂಡ್ ಥ್ರೋ ವಸ್ತುಗಳ ಬಳಕೆಯನ್ನು ಅತೀ ಹೆಚ್ಚಾಗಿ ಮಾಡುತ್ತಿದ್ದೇವೆ. ಇದನ್ನು ಕಮ್ಮಿ ಮಾಡುವತ್ತ ಯೋಚಿಸುವ ಬದಲು ಪ್ರತೀದಿನ ಇವುಗಳ ಬಳಕೆ ಹೆಚ್ಚಾಗುತ್ತಿದೆ ಅನ್ನುವುದು ನೂರಕ್ಕೆ ನೂರು ಸತ್ಯದ ಮಾತು.

ಪ್ರತಿಭಟನೆ

ಪ್ರತಿಭಟನೆ

ಪ್ರತಿಭಟನೆಯ ಹೆಸರಿನಲ್ಲಿ ಬೆಂಕಿ ಹಚ್ಚುವುದು, ನಾಶ ಮಾಡುವುದು, ಕಿರುಚಾಡುವುದು ಮಾಡುತ್ತಾ ಪರಿಸರ ಮಾಲಿನ್ಯಕ್ಕೆ ಕೊಡುಗೆಯನ್ನು ಕೊಡುತ್ತೇವೆ.

ಆಚರಣೆ

ಆಚರಣೆ

ನಮ್ಮ ಸಂತೋಷಕ್ಕೆ ಪಟಾಕಿಗಳನ್ನು ಸಿಡಿಸಿ ಪ್ರಕೃತ್ತಿಗೆ ಭಾರೀ ಪ್ರಮಾಣದ ನಷ್ಟ ಉಂಟು ಮಾಡುತ್ತಿದ್ದೇವೆ.

 ಬಣ್ಣ

ಬಣ್ಣ

ನೀರಿಗಾಗಿ ಜನರು ಪರದಾಡುತ್ತಿದ್ದರೆ ಬಣ್ಣದ ನೀರು ಎರಚಿ ಸಾಕಷ್ಟು ನೀರನ್ನು ವೇಸ್ಟ್ ಮಾಡುತ್ತೇವೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಇವೆ. ಈಗ ಹೇಳಿ ಪರಿಸರ ರಕ್ಷಣೆಗೆ ಮತ್ತು ಮಾಲಿನ್ಯಕ್ಕೆ ನಿಮ್ಮ ಕೊಡುಗೆ ಎಷ್ಟಿದೆ?

English summary

Our Contribution To Environment Pollution

World Environment Day is an annual event that is aimed at being the biggest and most widely celebrated global day for positive environmental action. Unfortunately we are planning for such action only this day. then rest of the days?
X
Desktop Bottom Promotion