For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲಿರುವ ಅಭೂತ ಪೂರ್ವ ಕಲಾ ನಗರಗಳಿವು

By Super
|

ಪ್ರತಿಯೊಂದು ನಗರವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕೆಲವು ಪಾರ್ಟಿ ಸ್ಥಳಗಳಾದರೆ, ಮತ್ತೆ ಕೆಲವು ಕಮರ್ಷಿಯಲ್, ಕೆಲವು ಬಿಸ್ ನೆಸ್ ಸೆಂಟರ್ . ಆದರೆ ಇಲ್ಲಿ ನಾನು ಅಪೂರ್ವ ಕಲಾಕೃತಿಯಿಂದ ಆಕರ್ಷೀಣೀಯ ಕೇಂದ್ರವಾಗಿರುವ ಕೆಲವು ನಗರಗಳ ಬಗ್ಗೆ ಚಿತ್ರ ಮಾಹಿತಿ ನೀಡಿದ್ದೇವೆ.

ಇಲ್ಲಿ ನೀಡಿರುವ ನಗರಗಗಳು ಕಲೆ ಮತ್ತು ಸಂಸ್ಕೃತಿಯ ಬೀಡಾಗಿದ್ದು ಸಿನಿಮಾ, ರಂಗ ಮಂದಿರ, ಚಿತ್ರಕಲೆ, ಬರಹ, ಸಂಗೀತ ಇವುಗಳಿಗೆ ಉಳಿದೆಲ್ಲಾ ನಗರಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಉದಾಹರಣೆಗೆ ಪ್ಯಾರಿಸ್, ಈ ನಗರ ಅನೇಕ ಕಲಾವಿದರಿಗೆ ಆಶ್ರಯವನ್ನು ನೀಡಿದೆ. ಇತರ ದೇಶದವರು ಗಡಿ ಪಾರು ಮಾಡಿದ ಕಲಾವಿದರಿಗೂ ಆಶ್ರಯವನ್ನು ನೀಡಿದೆ. ಇನ್ನು ರೋಮ್ ನಲ್ಲಿ ಅತ್ಯಾದ್ಭುತವಾದ ಕಲಾ ವಸ್ತು ಸಂಗ್ರಹಾಲಯವಿದೆ.

ವಿಶ್ವದ ಕಲಾವಿದವರಿಗೆ ವಿಶೇಷ ಸ್ಥಾನಮಾನವನ್ನು ನೀಡುತ್ತಿರುವ ಆ ನಗರಗಳ ಪರಿಚಯ ನೋಡಿ ಇಲ್ಲಿದೆ:

ಪ್ಯಾರೀಸ್

ಪ್ಯಾರೀಸ್

ಪ್ಯಾರೀಸ್ ಕಲಾವಿದರ ಬೀಡು. ಯಾವುದೇ ಕಲಾವಿದ ಇಲ್ಲಿಗೆ ಆಶ್ರಯ ಬೇಡಿ ಬಂದರೆ ಇಲ್ಲ ಅನ್ನುವುದಿಲ್ಲ.

ನ್ಯೂಯಾರ್ಕ್

ನ್ಯೂಯಾರ್ಕ್

ನ್ಯೂಯಾರ್ಕ್ ನಲ್ಲಿ ವಿಶ್ವ ಪ್ರಸಿದ್ಧವಾದ ಬ್ರಾಡ್ ವೇ ರಂಗಮಂದಿರವಿದೆ. ಇಲ್ಲಿ ಇಂದಿಗೂ ಪ್ರದರ್ಶನಗಳು ನಡೆಯುತ್ತಿರುತ್ತವೆ. ಅನೇಕ ಹಾಲಿವುಡ್ ಇಲ್ಲಿಂದಲೇ ಬಂದವರು. ನ್ಯೂಯಾರ್ಕ್ ಯೂನಿವರ್ಸಿಟಿ ಆಫ್ ಸಿನಿಮಾ ಕೂಡ ವಿಶ್ವ ಪ್ರಸಿದ್ಧವಾಗಿದೆ.

 ಪುಣೆ

ಪುಣೆ

ಚಿಕ್ಕ ನಗರವಾದ ಪುಣೆ ಕೆಲ ಮತ್ತು ಸಂಸ್ಕೃತಿಗೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಅನೇಕ ಕಲಾವಿದರಿಗೆ ಪುಣೆಯೆಂದರೆ ಸ್ವರ್ಗಕ್ಕೆ ಸಮಾನ. ಇಲ್ಲಿರುವ ಮರಾಠಿ ಥಿಯೇಟರ್ ಕಲಾ ಸಂಸ್ಕೃತಿಗೆ ಮತ್ತಷ್ಟು ಕೊಡುಗೆಯನ್ನು ನೀಡಿ ಪುಣೆಯ ಕೀರ್ತಿಯನ್ನು ಎತ್ತಿ ಹಿಡಿದಿದೆ.

ಬೆರ್ಲಿನ್

ಬೆರ್ಲಿನ್

ಬೆರ್ಲಿನ್ ಯೂರೋಪ್ ನ ಕಲಾ-ಸಂಸ್ಕೃತಿಯ ಕೇಂದ್ರವೆಂದು ಗುರುತಿಸಿಕೊಂಡಿದೆ. ಪ್ಯಾರೀಸ್ ನ ನಂತರ ಕಲಾ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿರುವುದು ಬರ್ಲಿನ್ ಎಂದು ಹೇಳಬಹುದು.

 ಫ್ಲೋರೆನ್ಸ್

ಫ್ಲೋರೆನ್ಸ್

ಇಲ್ಲಿರುವ ಕಲಾ ವಸ್ತು ಸಂಗ್ರಹಾಲಯ ಪ್ರಮುಖ ಆಕರ್ಷಕ ಕೇಂದ್ರವಾಗಿದೆ. ಇಟಾಲಿಯ ಲಿಯೋನಾರ್ಡೊ ಡಾ ವಿಂಚಿಯ ಸುಪ್ರಸಿದ್ಧ ಕಲಾಕೃತಿ ಮೊನಾಲಿಸಾವನ್ನು ಇದೇ ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.

ಕೋಲ್ಕತ್ತಾ

ಕೋಲ್ಕತ್ತಾ

ಕೋಲ್ಕತ್ತಾವನ್ನು ಭಾರತದ ಸಂಸ್ಕೃತಿಯ ರಾಜಧಾನಿ ಎಂದು ಕರೆಯಲಾಗುತ್ತದೆ. ಈ ಪ್ರದೇಶ ಸಂಗೀತ, ಸಿನಿಮಾ, ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದೆ. ಸತ್ಯಜಿತ್ ರೇ , ಆಸ್ಕರ್ ಪ್ರಶಸ್ತಿ ಗೆದ್ದ ಭಾರತದ ಏಕೈಕ ನಿರ್ದೇಶಕ ಬಾಳಿ, ಬೆಳೆದದ್ದು ಇದೇ ನಗರದಲ್ಲಿ.

ಚಿಕಾಗೋ

ಚಿಕಾಗೋ

ಚಿಕಾಗೋ ಕೂಡ ಕಲಾ ಕ್ಷೇತರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಅನೇಕ ಹೆಸರಾಂತ ಚಿತ್ರಕಲಾವಿದರು ಈ ಪ್ರದೇಶಕ್ಕೆ ಸೇರಿದವರು. ಇವರ ಕೆಲಯ ಹಿತಿಹಾಸವನ್ನು ಸಾರುವ ವಸ್ತು ಸಂಗ್ರಹಾಲಯವು ಕಲಾ ಕ್ಷೇತ್ರಕ್ಕೆ ಇವರ ಮತ್ತೊಂದು ಕೊಡುಗೆಯಾಗಿದೆ.

ಲಂಡನ್

ಲಂಡನ್

ಕಲೆ, ಸಂಸ್ಕೃತಿ, ವ್ಯಾಪಾರ, ವ್ಯವಹಾರ ಎಲ್ಲಾದಕ್ಕೂ ಸಮಾನ ಕೊಡುಗೆಯನ್ನು ನೀಡಿರುವ ನಗರ ಲಂಡನ್. ಶೇಕ್ಸ್ ಪಿಯರ್ ನಾಟಕವನ್ನು ಆಡುತ್ತಿದ್ದ ರಂಗ ಮಂದಿರವಿದೆ. Madame Trussaud's ಎಂಬ ವಸ್ತು ಸಂಗ್ರಹಾಲಯವಿದ್ದು ಇಲ್ಲಿ ಮೇಣದಿಂದ ಪ್ರಸಿದ್ಧ ಕಲಾವಿದರ ಆಕೃತಿಯನ್ನು ಮಾಡಲಾಗುವುದು.

 ರೋಮ್

ರೋಮ್

ಈ ಸಿಟಿ ಕಲಾವಿದರಿಗೆ ಸ್ಪೂರ್ತಿಯನ್ನು ತುಂಬುವಲ್ಲಿ ಎತ್ತಿದ ಕೈ. ಇಲ್ಲಿ ಪ್ರತೀ ಗಲ್ಲಿ ಗಲ್ಲಿಯಲ್ಲೂ ಚರ್ಚ್ ಕಾಣಸಿಗುವುದು. ರೋಮ್ ನ ಅನೇಕ ದೊಡ್ಡ-ದೊಡ್ಡ ಕಲಾವಿದರು ಸಾಂಸ್ಕೃತಿಕ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ಧಾರೆ.

ವಿಯನ್ನಾ

ವಿಯನ್ನಾ

ಈ ನಗರ ಗೋಥಿಕ್ ಶೈಲಿಯ ಕಲಾಕೃತಿಗೆ ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲದೆ ತನ್ನದೇ ಶೈಲಿಯ ಸಂಗೀತದಿಂದಲೂ ಮನೆಮಾತಾಗಿದೆ.

ಮುಂಬಯಿ

ಮುಂಬಯಿ

ಕಲಾವಿದನಾಗಬೇಕೆಂಬ ತೀವ್ರ ತುಡಿತ ಇರುವವನಿಗೆ ಸೂಕ್ತವಾದ ಸ್ಥಳ ಮುಂಬಯಿ. ಬಾಲಿವುಡ್ ಅಪೂರ್ವ ಕೊಡುಗೆ ನೀಡಿರುವ ಮುಂಬಯಿ ಅನೇಕ ಆರ್ಟ್ ಗ್ಯಾಲರಿ ಮತ್ತು ಐತಿಹಾಸಿಕವಾದ ಪೃಥ್ವಿ ಥಿಯೇಟರ್ ನಿಂದ ತನ್ನ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.

English summary

Most Artist Friendly Cities In The World | Life And LIfestyle | ವಿಶ್ವದಲ್ಲಿರುವ ಅಭೂತ ಪೂರ್ವ ಕಲಾ ನಗರಗಳಿವು |ಜೀವನ ಮತ್ತು ಜೀವನಶೈಲಿ

Today we are talking about the artist friendly cities of the world. These are cities that are centres of art and culture. They are melting pots of different artistic styles. Mind you, the term 'art' here includes all art forms like film, theatre, painting, writing, music etc.
X
Desktop Bottom Promotion