For Quick Alerts
ALLOW NOTIFICATIONS  
For Daily Alerts

ಕಣ್ಣೀರು ಮಾಡುವ ಮ್ಯಾಜಿಕ್ ಬಗೆ ತಿಳಿದಿರಲಿ

|

ಜೀವನದಲ್ಲಿ ಅಳದ ವ್ಯಕ್ತಿಯೇ ಇರುವುದಿಲ್ಲ. ಅಳು ಬಂದರೆ ತಡೆಯುವ ಪ್ರಯತ್ನ ಮಾಡಬಾರದು. ಜೋರಾಗಿ ಹತ್ತು ಬಿಟ್ಟರೆ ಮನಸ್ಸು ಹಗುರವಾಗುವುದು, ಅಳದೆ ದುಃಖವನ್ನು ಅದುಮಿಟ್ಟು ಕೊಂಡರೆ ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚಾಗುವುದು.

ಸ್ತ್ರೀಯರು ಅಳು ಬಂದರೆ ಜೋರಾಗಿ ಅತ್ತು ಬಿಡುತ್ತಾರೆ, ಆದರೆ ಪುರುಷರು ಅಳುವುದು ತುಂಬಾ ಕಡಿಮೆ, ಪುರುಷರಿಗೆ ಅಳಲೂ ಅಂಜಿಕೆ! ಅತ್ತರೆ ಹುಡುಗಿಯರ ತರ ಏಕೆ ಅಳುಮುಂಜಿಯಾಗಿದ್ದೀಯಾ ಎಂದು ಯಾರಾದರೂ ಹೇಳುತ್ತಾರೆ ಎಂಬ ಅಂಜಿಕೆ.

Know Why Tears Are Beneficial

ಸಾಮಾನ್ಯವಾಗಿ ಅಳುವವರು ಮಾನಸಿಕವಾಗಿ ಸ್ವಲ್ಪ ದುರ್ಬಲರು, ಮನಸ್ಸು ಗಟ್ಟಿ ಇರುವವರು ಬೇಗನೆ ಅಳುವುದಿಲ್ಲ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಯಾರು ಅಳುವುದಿಲ್ಲವೋ ಅವರು ಮಾನಸಿಕವಾಗಿ ದುರ್ಬಲರಾಗುತ್ತಾರೆ ಎಂದು ಮನಶಾಸ್ತ್ರದಲ್ಲಿ ಹೇಳಲಾಗಿದೆ. ಅಳು ನಮ್ಮನ್ನು ಮಾನಸಿಕವಾಗಿ ಸದೃಢವಾಗಿ ಮಾಡುವುದರ ಜೊತೆ ಈ ಕೆಳಗಿನಂತೆ ಪ್ರಯೋಜನಕಾರಿಯಾಗಿದೆ.

ಆರೋಗ್ಯಕ್ಕೆ ಒಳ್ಳೆಯದು
ಕಣ್ಣೀರಿನಲ್ಲಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಗುಣವಿರುತ್ತದೆ. ಕಣ್ಣೀರು ಕಣ್ಣಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.

ಪರಿಹಾರ ಹುಡುಕಲು ಸಹಾಯ ಮಾಡುತ್ತದೆ
ಮನಸ್ಸಿನಲ್ಲಿ ತುಂಬಾ ದುಃಖವಿದ್ದರೆ ಅತ್ತು ಬಿಡಬೇಕು. ಆಗ ಮನಸ್ಸಿನ ಭಾರ ಕಡಿಮೆಯಾಗಿ ನಿಮ್ಮ ಮನಸ್ಸು ಪರಿಹಾರದತ್ತ ಆಲೋಚಿಸುವುದು.

ಖಿನ್ನತೆ ಕಡಿಮೆಯಾಗುವುದು
ಮನಸ್ಸಿನಲ್ಲಿ ದುಃಖ ಇಟ್ಟುಕೊಳ್ಳುವುದರಿಂದ ಖಿನ್ನತೆ ಅನುಭವಿಸುತ್ತೀರಿ. ಮನಸ್ಸಿಗೆ ಸಂಕಟವಾದಾಗ ಜೋರಾಗಿ ಅತ್ತು ಬಿಡಿ. ಇದರಿಂದ ಖಿನ್ನತೆ ಕಡಿಮೆಯಾಗುವುದು. ನಿಮಗೆ ವಿಶ್ರಾಂತಿಯ ಅನುಭವ ಉಂಟಾಗುವುದು.

ಸಂಬಂಧದ ವಿಷಯದಲ್ಲೂ ಕಣ್ಣೀರು ಈ ರೀತಿಯಲ್ಲಿ ಸಹಾಯ ಮಾಡುತ್ತದೆ.

* ಒಬ್ಬ ವ್ಯಕ್ತಿಯ ಮೇಲೆ ನೀವು ಎಷ್ಟು ಪ್ರೀತಿ ಇಟ್ಟಿದ್ದೀರಿ ಅನ್ನುವುದನ್ನು ನಿಮ್ಮ ಅಳು ಅವರಿಗೆ ತಿಳಿಸುತ್ತದೆ. ಪ್ರೀತಿ ವಿಷಯದಲ್ಲಿ ಅಳು ವರ್ಕ್ ಔಟ್ ಆಗುತ್ತದೆ.

* ಮಹಿಳೆಯರ ಎಕೆ 47. ಮಹಿಳೆಯರು ಅಳುವೆಂಬ ಎಕೆ 47 ಪ್ರಯೋಗಿಸಿದರೆ ಸಾಕು ಅದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಅತ್ತರೆ ನಿಮಗೆ ಒಳ್ಳಯದಾಗುವುದಾದರೆ ದುಃಖವನ್ನು ತಡೆಯುವ ಬದಲು ಅಳುವುದೇ ಲೇಸು ಅಲ್ಲವೇ?

English summary

Know Why Tears Are Beneficial | Life And Lifestyle | ಕಣ್ಣೀರಿನಲ್ಲಿದೆ ಆರೋಗ್ಯಕರ ಮ್ಯಾಜಿಕ್ | ಜೀವನ ಮತ್ತು ಜೀವನ ಶೈಲಿ

A room needs ventilation and it is same with our body also. How it will be if crying apart from making you emotionally stronger will also give you some benefits.
X
Desktop Bottom Promotion