For Quick Alerts
ALLOW NOTIFICATIONS  
For Daily Alerts

ಬಣ್ಣದ ಓಕುಳಿಯ ದಿನ ಮಹಿಳೆಯರೇ ಎಚ್ಚರ!

|

ಬಣ್ಣದ ಓಕುಳಿ ಆಡಲು ರೆಡಿಯಾಗಿದ್ದೀರಾ? ಹೋಳಿ ಹಬ್ಬಕ್ಕಾಗಿ ಹೇಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದೀರಿ? ಎಂದು ಕೇಳಿದರೆ ಇದೇನು ಪ್ರಶ್ನೆ ಸ್ವಾಮಿ, ನಾವು ಆಡುತ್ತಿರುವುದು ಬಣ್ಣಗಳಿಂದ, ಇವರೇನು ಪಟಾಕಿ ಹಬ್ಬದಲ್ಲಿ ಕೇಳಿದಂತೆ ಇಲ್ಲೂ ಕೇಳುತ್ತಿದ್ದಾರೆ ಎಂದು ಅನಿಸುತ್ತಿದೆಯಲ್ಲವೇ?

ಹೌದು ಬರೀ ಪಟಾಕಿ ಹಬ್ಬದಲ್ಲಿ ಮಾತ್ರವಲ್ಲ ಇಲ್ಲೂ ಎಚ್ಚಾರಿಕೆವಹಿಸದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ. ಅದರಲ್ಲೂ ಹೆಂಗಳೆಯರು ಹಾಗೂ ಮಕ್ಕಳು ತುಂಬಾ ಎಚ್ಚರಿಕೆಯಿಂದರಬೇಕು. ಬರೀ ತ್ವಚೆ ಹಾಗೂ ಕೂದಲಿನ ಆರೈಕೆಗಷ್ಟೇ ಅಲ್ಲ ಈ ಕೆಳಗಿನ ವಿಷಯಗಳಲ್ಲೂ ಎಚ್ಚರಿಕೆಯಿಂದ ಇರಬೇಕು:

How To Stay Safe This Holi?

ಕಾಮಾಂಧರಿಂದ ದೂರವಿರಿ
ದಾರಿಯಲ್ಲಿ ತುಂಬಾ ಜನರು ಸೇರಿ ಹೋಳಿ ಹಬ್ಬ ಆಚರಿಸುವಾಗ ನಮ್ಮ ಪಕ್ಕದಲ್ಲಿರುವ ವ್ಯಕ್ತಿ ಯಾರು ಎಂದು ಪಕ್ಕನೆ ಗುರುತು ಹಿಡಿಯಲು ಸಾಧ್ಯವಿಲ್ಲ. ಇದೇ ಸಂದರ್ಭಕ್ಕಾಗಿ ಕಾಯುವ ನೀಚ ಬುದ್ಧಿಯವರು ಇರುತ್ತಾರೆ. ಸಂದರ್ಭವನ್ನು ಉಪಯೊಗಿಸಿಕೊಂಡು ಮೈ ಮುಟ್ಟು ಮಾಡುತ್ತಾರೆ. ಆದ್ದರಿಂದ ಹೆಂಗಳೆಯರು ತಮ್ಮ ಪರಿಚಿತರ ಜೊತೆಗೆ ಹೋಳಿ ಆಡುವುದು ೊಳ್ಳೆಯದು.

ಗುಂಪಿನಲ್ಲಿರಿ
ಮಹಿಳೆಯರು ಗುಂಪಿನಲ್ಲಿ ಆಡುವುದಾದರೆ ಪರಿಚಿತರ ಗುಂಪಿನಲ್ಲಿ ಸೇರಿ ಆಡಿ. ಅಪರಿಚಿತರಿಂದ ದೂರವಿರಿ.

ಭಾಂಗ್(ಮದ್ಯ) ಕುಡಿಯುವಾಗ ಎಚ್ಚರ
ಭಾಂಗ್ (ಮದ್ಯ) ಇದನ್ನು ಹೋಳಿ ಸಮಯದಲ್ಲಿ ಕುಡಿಯುವುದು ವಾಡಿಕೆ. ಆದರೆ ಕುಡಿಯುವಾಗ ಮಿತಿಯಲ್ಲಿ ಕುಡಿಯಿರಿ ಹಾಗೂ ಬರೀ ಹೊಟ್ಟೆಯಲ್ಲಿ ಕುಡಿಯಬಾರದು ಹಾಗೂ ಬೇರೆ ಯಾವುದೇ ಮದ್ಯದ ಜೊತೆ ಕಲೆಸಿ ಕುಡಿಯಬಾರದು.

ತ್ವಚೆಯ ರಕ್ಷಣೆ
ಎಣ್ಣೆ ಮಸಾಜ್ ಮಾಡಿ ತ್ವಚೆಗೆ ಬಣ್ಣ ಹಿಡಿದುಕೊಳ್ಳದಂತೆ ತ್ವಚೆ ರಕ್ಷಣೆ ಮಾಡಿ. ಬಣ್ಣ ಎರಚಲು ಬಂದಾಗ ಕಣ್ಣು ಹಾಗೂ ಬಾಯಿಯನ್ನು ಮುಚ್ಚಿ.

ಕಣ್ಣಿನ ಬಗೆಯೂ ಎಚ್ಚರ
ಒಂದು ವೇಳೆ ಬಣ್ಣ ಕಣ್ಣಿಗೆ ತಾಗಿದರೆ ಕಣ್ಣನ್ನು ಉಜ್ಜಬೇಡಿ, ಮನೆಗೆ ಹೋಗಿ ಸ್ವಚ್ಛ ನೀರಿನಿಂದ ತೊಳೆಯಿರಿ.

ಸನ್ ಸ್ಕ್ರೀನ್ ಲೋಷನ್
ಮುಖಕ್ಕೆ ತುಂಬಾ ಸನ್ ಸ್ಕ್ರೀನ್ ಲೋಷನ್ ಹಚ್ಚಿ ನಂತರ ಹೋಳಿ ಆಡಲು ಹೋದರೆ ಒಳ್ಳೆಯದು.

ರಾಸಾಯನಿಕ ಬಣ್ಣ ಬಳಸದಿರುವುದು ಒಳ್ಳೆಯದು.

ಕೆಮಿಕಲ್ ಇರುವ ಬಣ್ಣ ಬಳಸುವ ಬದಲು ಅರಿಶಿಣ, ಹಾಗೂ ಇತರ ನೈಸರ್ಗಿಕವಾದ ಬಣ್ಣ ಬಳಸಿ ಆಡಿದರೆ ತ್ವಚೆ ಅಲರ್ಜಿ ಉಂಟಾಗುವುದಿಲ್ಲ.

ಈ ಬಣ್ಣದ ಹಬ್ಬ ನಿಮ್ಮ ಬದುಕಿನಲ್ಲೂ ರಂಗನ್ನು ತರಲಿ....

English summary

How To Stay Safe This Holi?| Festival And Lifestyle | ಈ ಹೋಳಿಯಲ್ಲಿ ಮುನ್ನೆಚ್ಚರಿಕೆಯಿಂದ ಇರಿ | ಹಬ್ಬ ಮತ್ತು ಜೀವನ ಶೈಲಿ

Other than health issues, another important concern is about personal safety of women and children. Keeping an eye on matters which need extra care is the best and only way to make your festive season a memorable event.
X
Desktop Bottom Promotion