For Quick Alerts
ALLOW NOTIFICATIONS  
For Daily Alerts

ಬಾಲಿವುಡ್ ನಟರ ಫಿಟ್ನೆಸ್ ರಹಸ್ಯಗಳು

By Super
|

ಯೋಗ,ವ್ಯಾಯಾಮ ಇವುಗಳನ್ನು ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡು ಸದೃಢವಾಗುವುದು ಎಂಬುದು ಸುಳ್ಳಲ್ಲ. ದೇಹದ ಮೈಕಟ್ಟು ಮಾಟವಾಗಿದ್ದರೆ ಎಂತವರು ಕೂಡ ಆಕರ್ಷಿತ ಆಗುವುದರಲ್ಲಿ ಅನುಮಾನವಿಲ್ಲ. ಸುಂದರ ಮೈಮಾಟಕ್ಕೆ ಆಹಾರದ ಜೊತೆಗೆ ವ್ಯಾಯಾಮವು ಅಷ್ಟೇ ಅವಶ್ಯಕ. ಹಾಗಾಗಿಯೇ ಚಲನಚಿತ್ರಗಳ ಸ್ಟಾರ್ ಗಳಿಗೆ ಎಲ್ಲಿಲ್ಲದ ಬೇಡಿಕೆ. ಅಭಿಮಾನಿಗಳ ಮಹಾಪೂರವೇ ಇರುತ್ತದೆ.

ಚಲನಚಿತ್ರಗಳಲ್ಲಿ ಕಾಣುವ ನಟರನ್ನು ನೋಡಿದರೆ ಯಾರಿಗಾದರೂ ಆಶ್ಚರ್ಯವಾಗುತ್ತದೆ. ವಯಸ್ಸು ಐವತ್ತರ ಆಸುಪಾಸಿದ್ದರು ನೋಡಲು ಮಾತ್ರ ಇಪ್ಪತ್ತೈದು ಎಂಬಷ್ಟು ಸುಂದರ ಮೈಕಟ್ಟು ಹೊಂದಿರುತ್ತಾರೆ. ಅತಿ ಹೆಚ್ಚು ತೂಕವಿದ್ದರೂ ತೊಂದರೆ, ಅತಿ ಕಡಿಮೆ ಇದ್ದರೂ ಸುಂದರವಾಗಿ ಕಾಣಲಾಗದು. ದೇಹದ ತೂಕವನ್ನು ಸಮತೋಲನವಾಗಿ ಇಟ್ಟುಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕೂಡ ಸರಿಯಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಹೆಚ್ಚು ಹೆಚ್ಚು ವರ್ಕ್ ಔಟ್ ಮಾಡಬೇಕಾಗುತ್ತದೆ. ಒಂದು ಸಿನೆಮಾದಲ್ಲಿ ಕಾಣಿಸಿಕೊಳ್ಳಲು ಎಷ್ಟೆಲ್ಲಾ ಕಷ್ಟ ಪಡಬೇಕು ಎಷ್ಟೆಲ್ಲಾ ವ್ಯಾಯಾಮ, ಯೋಗ ಮೊರೆ ಹೋಗಬೇಕು ಎಂಬುದನ್ನು ಇಲ್ಲಿ ನೋಡೋಣ ಬನ್ನಿ. ನೀವು ಈ ರೀತಿ ಮಾಡಿದ್ದಲ್ಲಿ ಅವರಂತೆ ಸದೃಢವಾದ ದೇಹ ನಿಮ್ಮದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಾಲಿವುಡ್ ನಟರಲ್ಲಿ ಹೆಚ್ಚಿನವರು, ಸಲ್ಮಾನ್ ಖಾನ್,ಹೃತಿಕ್ ರೋಶನ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ಜಾನ್ ಅಬ್ರಾಹಂ, ಅರ್ಜುನ್ ರಾಂಪಾಲ್ ಮತ್ತು ಅಮೀರ್ ಖಾನ್ ಮುಂತಾದವರು ತಮ್ಮ ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಬಹುಷಃ ಆ ಕಾರಣದಿಂದಾಗಿ ಅವರು ಅವರ ವಯಸ್ಸಿಗಿಂತ ಚಿಕ್ಕವರಂತೆ ಕಾಣುತ್ತಾರೆ.

ನಿಮಗೆ ಅವರ ವ್ಯಾಯಾಮದ ದಿನಚರಿಯ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ಇಲ್ಲಿ ನೋಡಿ ಅವರ ಬಗ್ಗೆ ಮಾಹಿತಿ ನೀಡಲಾಗಿದೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

ಸಲ್ಮಾನ ಖಾನ್ ಬಾಗಿದ,ಸುಂದರವಾದ ಎದೆಯನ್ನು ಹೊಂದಿದ್ದಾರೆ.ಸಲ್ಮಾನ್ ಪ್ರತಿದಿನ ಹೃದಯ ವ್ಯಾಯಾಮವನ್ನು ಮಾಡುತ್ತಾರೆ ಮತ್ತು ಅವುಗಳನ್ನು ಸುಂದರವಾಗಿ ಇರಿಸಿಕೊಳ್ಳಲು ಸರಿಯಾಗಿ ವರ್ಕ್ಔಟ್ ಮಾಡುತ್ತಾರೆ. ಪ್ರತಿದಿನ 10 ಕಿ ಮೀ ಸೈಕಲ್ ತುಳಿಯುವುದಾಗಿ ಕೂಡ ಅವರು ಹೇಳಿದ್ದಾರೆ.

ಹೃತಿಕ್ ರೋಶನ್

ಹೃತಿಕ್ ರೋಶನ್

ಹೃತಿಕ್ ರೋಶನ್ ಗೆ ಒಳ್ಳೆಯ ದೇಹ ಸೌಂದರ್ಯವಿದೆ, ಸದೃಡವಾದ ಭುಜಗಳು, ಸವೆದ ರಸ್ತೆಯಂತೆ ಸಮತಟ್ಟಾದ ಎದೆ ಇವರದ್ದಾಗಿದೆ. ಇವರ ಈ ಮಾಟವಾದ ದೇಹಕ್ಕೆ ಇವರು ಹೃದಯ ವ್ಯಾಯಾಮ, ತಿನ್ನುವ ಅಭ್ಯಾಸ ಎಲ್ಲ ಸೇರಿ ವಾರದಲ್ಲಿ 4 ಭಾರಿ ಕಟ್ಟುನಿಟ್ಟಾಗಿ ತರಭೇತಿ ತೆಗೆದುಕೊಳ್ಳುತ್ತಾರೆ. ಅವರು ಸಾಕಷ್ಟು ನೀರು ಕುಡಿಯುತ್ತಾರೆ ಮತ್ತು ಎಣ್ಣೆ,ಬೆಣ್ಣೆ ಮತ್ತು ತುಪ್ಪಗಳನ್ನು ಕಡಿಮೆ ಬಳಸುತ್ತಾರೆ.

ಅಕ್ಷಯ ಕುಮಾರ್

ಅಕ್ಷಯ ಕುಮಾರ್

ಇವರು ಸಪೂರ,ಫಿಟ್ ಮತ್ತು ಶೇಪ್ ಇರುವ ದೇಹ ತಮ್ಮದಾಗಿಸಿಕೊಂಡಿದ್ದಾರೆ. ಇವರು ಫಿಟ್ನೆಸ್ ಕಾಪಾಡಿಕೊಳ್ಳಲು ವಾರಕ್ಕೆ 2 ಭಾರಿ ಬಾಸ್ಕೆಟ್ ಬಾಲ್ ಆಡುತ್ತಾರೆ ಮತ್ತು ವಾರದಲ್ಲಿ 10 ಮೈಲಿ ವಾಕ್ ಮಾಡುತ್ತಾರೆ.ಇವರು ಈಜು ಮತ್ತು ಟ್ರೆಕ್ಕಿಂಗ್ ನಿಂದ ದೇಹವನ್ನು ಫಿಟ್ ಆಗಿ ಮತ್ತು ಹೆಚ್ಚು ಬಲಯುತವಾಗಿರುವಂತೆ ನೋಡಿಕೊಂಡಿದ್ದಾರೆ. ಅಕ್ಷಯ್ ಮನೆ ಅಡುಗೆಯನ್ನು ಹೆಚ್ಚು ಇಷ್ಟಪಡುತ್ತಾರೆ ಅದರಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಬಳಸುತ್ತಾರೆ ಮತ್ತು ಉಪ್ಪನ್ನು ಕಡಿಮೆ ಬಳಸುತ್ತಾರೆ. ಧ್ಯಾನ ಕೂಡ ಇವರ ಫಿಟ್ನೆಸ್ ನ ರಹಸ್ಯವಾಗಿದೆ.

ಶಾರುಖ್ ಖಾನ್

ಶಾರುಖ್ ಖಾನ್

ಓಂ ಶಾಂತಿ ಓಂ ನಲ್ಲಿ ಶಾರುಖ್ ನ ಸಿಕ್ಸ್ ಪ್ಯಾಕ್ ಅನ್ನು ಯಾರು ತಾನೆ ಮರೆತಾರು?ಇವರು ಹೃದಯ ವ್ಯಾಯಾಮ,ವೈಟ್ ಲಿಫ್ಟಿಂಗ್,ಇನ್ನಿತರ ತರಭೇತಿ ಮೂಲಕ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳುತ್ತಾರೆ.ಜೊತೆಗೆ ಬೆಲ್ಲಿ ನೃತ್ಯ ಕೂಡ ಮಾಡುತ್ತಾರೆ ಮತ್ತು ಆರೋಗ್ಯಯುತವಾಗಿ ತಿನ್ನಬೇಕು ಎಂದು ಸದಾ ನಂಬುವವರು.

ಜಾನ್ ಅಬ್ರಹಾಂ

ಜಾನ್ ಅಬ್ರಹಾಂ

ಜಾನ್ ಸಸ್ಯಾಹಾರಿ. ಇವರಲ್ಲಿ ಆಬ್ಸ್ ಹೆಚ್ಚು ಆಕರ್ಷಕವಾಗಿರುವ ಭಾಗ. ಹೃದಯ ವ್ಯಾಯಾಮ ಮತ್ತು ವೈಟ್ ಲಿಫ್ಟಿಂಗ್ ಮಾಡುವುದರ ಮೂಲಕ ತನ್ನ ಮೈಮಾಟವನ್ನು ಹಾಗೆ ಕಾಪಾಡಿಕೊಂಡಿದ್ದಾರೆ. ಪ್ರತಿದಿನ 2-3 ಗಂಟೆ ವ್ಯಾಯಾಮ ಮಾಡುತ್ತಾರೆ ಮತ್ತು ವೈಟ್ ಲಿಫ್ಟಿಂಗ್ ಮತ್ತು ಕಿಕ್ ಬಾಕ್ಸಿಂಗ್ ಮಾಡುತ್ತಾರೆ.

ಅರ್ಜುನ ರಾಂಪಾಲ್

ಅರ್ಜುನ ರಾಂಪಾಲ್

ಅರ್ಜುನ್ ಯಾವುದೇ ರೀತಿಯ ರುಟೀನ್ ಗೆ ಫಿಕ್ಸ್ ಆಗಿಲ್ಲ ಆದಾಗ್ಯೂ ವಾರದಲ್ಲಿ 5 ದಿನ ವೈಟ್ ಲಿಫ್ಟಿಂಗ್,ರನ್ನಿಂಗ್,ಸ್ವಿಮ್ಮಿಂಗ್ ಅಥವಾ ಕರಾಟೆ ಮಾಡುತ್ತಾರೆ.

ಸುನಿಲ್ ಶೆಟ್ಟಿ

ಸುನಿಲ್ ಶೆಟ್ಟಿ

ಸುನಿಲ್ ಶೆಟ್ಟಿ ಬೆಳಗ್ಗಿನ ತಿಂಡಿಯನ್ನು ರಾಜನಂತೆ,ಮಧ್ಯಾನ್ಹದ ಊಟವನ್ನು ರಾಜಕುಮಾರನಂತೆ,ಮತ್ತು ರಾತ್ರಿ ಊಟವನ್ನು ನಿರ್ಗತಿಕನಂತೆ ಅಂದರೆ ಸ್ವಲ್ಪ ತೆಗೆದುಕೊಳ್ಳುತ್ತಾರೆ.ಆದಾಗ್ಯೂ ಅವರು ಸರಿಯಾಗಿ ತಿನ್ನಬೇಕು ಮತ್ತು ವರ್ಕ್ ಔಟ್ ಮಾಡಬೇಕು ಎನ್ನುವುದನ್ನು ನಂಬುತ್ತಾರೆ ಎನ್ನಲಾಗಿದೆ.

ಅಮೀರ್ ಖಾನ್

ಅಮೀರ್ ಖಾನ್

ಗಜನಿ ಮೂವಿ ಯಲ್ಲಿ ಅಮೀರ್ ಖಾನ್ ನ 8 ಪ್ಯಾಕ್ ಯಾರು ಮರೆಯುವಂತಿಲ್ಲ. ಅದಕ್ಕೋಸ್ಕರ ಆತ 13 ತಿಂಗಳು ಪ್ರತಿದಿನ 4 ಗಂಟೆಗಳ ಕಾಲ ವ್ಯಾಯಾಮ ಮಾಡಬೇಕಾಯಿತು.

ಶಾಹೀದ್ ಕಪೂರ್

ಶಾಹೀದ್ ಕಪೂರ್

ಶಹೀದ್ ಕಪೂರ್ ಟ್ರೇಡ್ ಮಿಲ್ ನಲ್ಲಿ ಪ್ರತಿದಿನ ಕಡಿಮೆಯೆಂದರೆ 15 ನಿಮಿಷ ವ್ಯಾಯಾಮ ಮಾಡಿಯೇ ಮಾಡುತ್ತಾರೆ ಮತ್ತು ಅವರ ದೇಹದ ತೂಕ ಸರಿಯಾಗಿ ನೋಡಿಕೊಳ್ಳಲು ಆರೋಗ್ಯಯುತವಾದ ಆಹಾರ ಬಳಸುತ್ತಾರೆ.

ರಣಭೀರ್ ಕಪೂರ್

ರಣಭೀರ್ ಕಪೂರ್

ಇವರು ವಾರದಲ್ಲಿ 6 ದಿನ ಗಂಟೆಗೆ 45 ನಿಮಿಷ ವ್ಯಾಯಾಮ ಮಾಡುತ್ತಾರೆ.ಇವರ ವ್ಯಾಯಾಮದ ಬಗ್ಗೆ ಪ್ರದೀಪ ಹೇಳುವುದು ಹೀಗೆ "ರಣಬೀರ್ ಕಷ್ಟಕರವಾದ ವ್ಯಾಯಾಮ ಮಾಡುತ್ತಾರೆ ಮತ್ತು ಅವರಿಗೆ ಸ್ವಿಮ್ಮಿಂಗ್ ಮತ್ತು ಯೋಗ ಎಂದರೆ ಇಷ್ಟ, ಅವರು ಹೆಚ್ಚು ಎದೆ ಮತ್ತು ಹಿಂಬಾಗದ ಬಗ್ಗೆ ಗಮನ ಹರಿಸಿ ವ್ಯಾಯಾಮ ಮಾಡುತ್ತಾರೆ ಆದರೆ ಕೆಲವೊಮ್ಮೆ ಕಾಲು ನೋವಿನಿಂದಾಗಿ ಮಾಡಲಾಗುವುದಿಲ್ಲ. ವ್ಯಾಯಾಮ ಮಾಡುತ್ತಿರುವಾಗ ಸಂಗೀತ ಕೇಳುತ್ತಿರುವುದು ಅವರಿಗೆ ಇಷ್ಟ. ವಾರ್ಮ್ ಅಪ್ ಆಗಲು 5 -10 ನಿಮಿಷ ಹೃದಯ ವ್ಯಾಯಾಮ ಮಾಡುತ್ತಾರೆ. ರಣಭೀರ್ ಬೇರೆಬೇರೆ ದಿನಗಳಲ್ಲಿ ಬೇರೆಬೇರೆ ಭಾಗಗಳ ಬಗ್ಗೆ ಅಂದರೆ ಎದೆ, ಭುಜದ ಸ್ನಾಯುಗಳು,ಕಾಲುಗಳು,ಹಿಂಬಾಗ ಇವುಗಳ ಮೇಲೆ ನಿಗಾ ವಹಿಸುತ್ತಾರೆ.ಕೆಲವೊಮ್ಮೆ ಕಿಕ್ ಬಾಕ್ಸಿಂಗ್ ಕೂಡ ಮಾಡುತ್ತಾರೆ".

ಇಮ್ರಾನ್ ಹಶ್ಮಿ

ಇಮ್ರಾನ್ ಹಶ್ಮಿ

ಫಿಟ್ನೆಸ್ ಎಂದು ಅಲ್ಲದಿದ್ದರೂ ಇಮ್ರಾನ್ ವಾರದಲ್ಲಿ 4 -5 ದಿನ ವರ್ಕ್ ಔಟ್ ಮಾಡುತ್ತಾರೆ.ಅವರು ಆರೋಗ್ಯಯುತವಾಗಿ ಇರುವುದನ್ನು ಹೆಚ್ಚು ಇಷ್ಟಪಡುತ್ತಾರೆ.ಆದರೆ ಅವರು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಫಿಟ್ ಆಗಿ ಇರಲೇಬೇಕು. ಅವರು 2 ದಿನ ವ್ಯಾಯಾಮ ಮಾಡುತ್ತಾರೆ ಒಂದು ದಿನ ಬ್ರೇಕ್ ನೀಡಿ ಮತ್ತೆ ಯತಾಪ್ರಕಾರ ವ್ಯಾಯಾಮ ಮುಂದುವರೆಸುತ್ತಾರೆ.ಅವರು ವಾರದಲ್ಲಿ ಒಮ್ಮೆ ಅಥವಾ ಎರಡು ಭಾರಿ ಯೋಗ ಮಾಡುತ್ತಾರೆ.

ಇಮ್ರಾನ್ ತನ್ನದೇ ಆದ ವರ್ಕ್ ಔಟ್ ಮಾಡುತ್ತಾರೆ ಸ್ಟ್ರೆಂತ್ ಟ್ರೇನಿಂಗ್,ವೈಟ್ ಮತ್ತು ಹೃದಯದ ವ್ಯಾಯಾಮ ಮಾಡುತ್ತಾರೆ.

ಅವರ ಫಿಟ್ನೆಸ್ ಮಂತ್ರ ಸರಳವಾಗಿದೆ - ಸರಿಯಾಗಿ ತಿನ್ನಿ,ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ಪ್ರತಿದಿನ ವ್ಯಾಯಾಮ ಮಾಡಿ.ಅವರೂ ಕೂಡ ಅದನ್ನೇ ಮಾಡುತ್ತಾರೆ. ಪ್ರತಿದಿನ ಅವರು ಕಡೆಮೆ ಎಂದರೆ 7 ಗಂಟೆ ಮಲಗುತ್ತಾರೆ ಇದರಿಂದ ಫ್ರೆಶ್ಮತ್ತು ಆಕ್ಟಿವ್ ಆಗಿ ಕಾಣುತ್ತಾರೆ.ಅವರು ಫಿಟ್ನೆಸ್ ವಿಷಯ ಬಂದಾಗ ತುಂಬಾ ಶಿಸ್ತು.

ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್

ಇವರು ಫಿಟ್ ಮತ್ತು ಚಟುವಟಿಕೆಯಿಂದ ಇರಲು ಪ್ರತಿದಿನ 2 ತಾಸು ವ್ಯಾಯಾಮ ಮಾಡುತ್ತಾರೆ.ಹೃದಯ ವ್ಯಾಯಾಮ ಪ್ರಾರಂಭಿಸಿ ನಂತರ ಯೋಗ ಕೂಡ ಮಾಡುತ್ತಾರೆ.ಇವರ ವ್ಯಾಯಾಮ ಯೋಗ ಇದರಿಂದ ಅವರು ಮಾನಸಿಕ ಮತ್ತು ದೈಹಿಕವಾಗಿ ಫಿಟ್ ಆಗಿ ಇರಲು ಬಯಸುತ್ತಾರೆ.ಮಸಲ್ಸ್ ಹೆಚ್ಚಿಸಲು ಹೃದಯ ಮತ್ತು ವೈಟ್ ಲಿಫ್ಟಿಂಗ್ ವ್ಯಾಯಾಮ ಕೂಡ ಮಾಡುತ್ತಾರೆ.ದೇಹದ ಮೈಕಟ್ಟನ್ನು ಸದೃಢವಾಗಿ ಇಡಲು ಇವರು ಕಿಕ್ ಬಾಕ್ಸಿಂಗ್ ಕೂಡ ಮಾಡುತ್ತಾರೆ.

English summary

Fitness Secrets of Bollywood Actors

Most of the popular Bollywood Actors like Salman Khan, Hrithik Roshan, Akshay Kumar, Shah Rukh Khan, John Abraham, Arjun Rampal and Aamir Khan take good care of their bodies. And probably that is the reason why they look much younger to than their age
X
Desktop Bottom Promotion