For Quick Alerts
ALLOW NOTIFICATIONS  
For Daily Alerts

ಸೆಲೆಬ್ರಿಟಿಗಳ ಬಗ್ಗೆ ಇರುವ ಜನಪ್ರಿಯ ಪುಸ್ತಕಗಳು

By Super
|

ಸೆಲೆಬ್ರಿಟಿ ಸುದ್ದಿ, ಗಾಸಿಪ್ ಗಳು, ಪೋಟೊಗಳು ಇದರಲ್ಲಿ ಯಾವುದಾದರೂ ನಿಮಗೆ ಆಸಕ್ತಿ ಮೂಡಿಸದೆ ಇರುತ್ತದೆಯಾ? ಸೆಲೆಬ್ರಿಟಿ ಸ್ವವಿವರಗಳನ್ನು ಹೊಂದಿರುವ ಒಬ್ಬ ವ್ಯಕ್ತಿ ಮತ್ತು ನಿಮ್ಮ ಫೇವರಿಟ್ ಸೆಲೆಬ್ರಿಟಿ ಬಗ್ಗೆ ಪುಸ್ತಕ ಬಿಡುಗಡೆಯಾದರೆ ಅದು ಖಂಡಿತವಾಗಿಯೂ ನಿಮ್ಮಲ್ಲಿ ವಿಶೇಷ ಆಸಕ್ತಿ ಹುಟ್ಟಿಸುತ್ತದೆ. ಇಂಗ್ಲಿಷ್ ಗೆ ಬಂದರೆ ಕಾಲ್ಪನಿಕ, ಕಾಲ್ಪನಿಕವಲ್ಲದ, ರೋಮಾಂಚಕ ಮತ್ತು ಇತರ ಸೇರಿದಂತೆ ವಿವಿಧ ಬಗೆಯ ಪುಸ್ತಕಗಳಿರುತ್ತದೆ. ಪುಸ್ತಕಗಳ ಬಗ್ಗೆ ಜನರಿಗೆ ಭಿನ್ನ ರುಚಿಯಿರುತ್ತದೆ. ಪುಸ್ತಕವನ್ನು ಓದುವುದೆಂದರೆ ಅದರ ಲೇಖಕನೊಂದಿಗೆ ಪ್ರಯಾಣ ಮಾಡಿ, ಅದರ ನೈಜ ಸಾರವನ್ನು ಪಡೆಯುವುದು. ಪುಸ್ತಕವನ್ನು ಅದರ ನಿಜವಾದ ರೂಪದಲ್ಲಿ ಓದಿ ಸ್ವೀಕರಿಸಬೇಕು.

ಪ್ರತಿಯೊಂದು ಪುಸ್ತಕವೂ ಅನನ್ಯ, ಅದೇ ರೀತಿ ಪ್ರತಿಯೊಬ್ಬ ಲೇಖಕ-ಲೇಖಕಿಯು. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆಯಲಾಗಿದೆ. ಈ ಪುಸ್ತಕಗಳಲ್ಲಿ ನಿಮ್ಮ ಫೇವರಿಟ್ ಸೆಲೆಬ್ರಿಟಿ ಬಗ್ಗೆ ವಿವಿಧ ರೀತಿಯ ಮಾಹಿತಿಯಿರುತ್ತದೆ. ಓದುಗರು ಸೆಲೆಬ್ರಿಟಿಗಳ ಜೀವನ ಮತ್ತು ನಿಜ ಶೈಲಿಯನ್ನು ಇದರಿಂದ ತಿಳಿದುಕೊಳ್ಳಬಹುದು. ಸೆಲೆಬ್ರಿಟಿಗಳು ನಮಗೆ ಮನರಂಜನೆ ತಮ್ಮ ಎಲ್ಲಾ ಶಕ್ತಿಯನ್ನು ಧಾರೆಯೆರೆದಾಗ ಅವರ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಹಜವಾಗಿಯೇ ಇರುತ್ತದೆ. ನಿಮ್ಮ ಸೆಲೆಬ್ರಿಟಿಗಳ ಬಗ್ಗೆ ವಿವರವಾಗಿ ತಿಳಿಯಲು ಪುಸ್ತಕ ಒಳ್ಳೆಯ ಮಾಧ್ಯಮ. ಕ್ರೀಡೆಯಲ್ಲಿ ಸಾಧನೆ ಮಾಡಿದ ಕೆಲವು ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಬರೆದಿರುವ ಪುಸ್ತಕಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನೀವು ಕ್ರೀಡಾ ಪ್ರೇಮಿಯಾಗಿದ್ದರೆ ಖಂಡಿತವಾಗಿಯೂ ಇದನ್ನ ಇಷ್ಟಪಡುತ್ತೀರಿ.

1. ದಿ ರೇಸ್ ಆಫ್ ಮೈ ಲೈಫ್: ಮಿಲ್ಖಾ ಸಿಂಗ್ ಆತ್ಮಚರಿತ್ರೆ

1. ದಿ ರೇಸ್ ಆಫ್ ಮೈ ಲೈಫ್: ಮಿಲ್ಖಾ ಸಿಂಗ್ ಆತ್ಮಚರಿತ್ರೆ

ರೂಪಾ ಪ್ರಕಾಶನ ಮುದ್ರಿಸಿದ ಅತ್ಯಂತ ಹೆಚ್ಚು ಮೆಚ್ಚುಗೆ ಪಡೆದ ಪುಸ್ತಕ ಇದಾಗಿದೆ. ಓಡುವುದು ತನ್ನ ಜೀವನದ ಮುಖ್ಯ ಧ್ಯೇಯ ಎನ್ನುವುದನ್ನು ಸ್ಟಾರ್ ಕ್ರೀಡಾಪಟು ಅವರದೇ ಮಾತಿನಲ್ಲಿ ವಿವರಿಸುತ್ತಾರೆ. ಪುಸ್ತಕವು ಆದರ್ಶಪ್ರಾಯ ಸ್ಥಿತಿಸ್ಥಾಪಕತ್ವದ ಬಗ್ಗೆ ವಿವರಿಸುತ್ತದೆ. ಇದರಿಂದ ಮಿಲ್ಖಾ ಕತ್ತಲಿನಿಂದ ಹೊರಬಂದರು. ಮಿಲ್ಖಾ ಸಿಂಗ್ ಬಗ್ಗೆ `ಭಾಗ್ ಮಿಲ್ಖಾ ಭಾಗ್' ಚಿತ್ರ ನಿರ್ಮಿಸಿದ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

2. ದಿ ಟೇಸ್ಟ್ ಆಫ್ ಮೈ ಲೈಫ್: ಫ್ರಮ್ ಕ್ರಿಕೆಟ್ ಟು ಕ್ಯಾನ್ಸರ್ ಆ್ಯಂಡ್ ಬ್ಯಾಕ್

2. ದಿ ಟೇಸ್ಟ್ ಆಫ್ ಮೈ ಲೈಫ್: ಫ್ರಮ್ ಕ್ರಿಕೆಟ್ ಟು ಕ್ಯಾನ್ಸರ್ ಆ್ಯಂಡ್ ಬ್ಯಾಕ್

ಸರಳವಾಗಿ ಹೇಳಲಾಗಿರುವ ಪ್ರೇರಣೆಯ ಕಥೆ ಇದಾಗಿದೆ. ಈ ಪುಸ್ತಕ ಕ್ಯಾನ್ಸರ್ ವಿರುದ್ಧ ಹೋರಾಡಿದ ಭಾರತದ ಅದ್ಭುತ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಆತ್ಮಚರಿತ್ರೆ. ಯುವಿ ಕ್ಯಾನ್ಸರ್ ವಿರುದ್ಧ ಯಾವ ರೀತಿ ಹೋರಾಡಿದರು ಮತ್ತು ಕ್ರಿಕೆಟಿಗೆ ಹೇಗೆ ಮರಳಿದರು ಎನ್ನುವ ವಿವರ ಈ ಪುಸ್ತಕದಲ್ಲಿದೆ. ಆಲ್ ರೌಂಡರ್ ಹಿಂದಿರುವ ಒಬ್ಬ ವ್ಯಕ್ತಿಯ ಬಗ್ಗೆ ಪುಸ್ತಕದಲ್ಲಿ ವಿವರವಿದೆ ಮತ್ತು ಇದು ಅತ್ಯುತ್ತಮ ಸೆಲೆಬ್ರಿಟಿ ಪುಸ್ತಕ.

3. ಕ್ಯಾಪ್ಟನ್ ಕೂಲ್: ದಿ ಎಂಎಸ್ ಧೋನಿ ಸ್ಟೋರಿ

3. ಕ್ಯಾಪ್ಟನ್ ಕೂಲ್: ದಿ ಎಂಎಸ್ ಧೋನಿ ಸ್ಟೋರಿ

ಇತ್ತೀಚಿನ ಕೆಲವು ವರ್ಷಗಳಿಂದ ಎಂಎಸ್ ಧೋನಿ ಭಾರತೀಯ ಕ್ರಿಕೆಟಿನ ಹೃದಯಬಡಿತವಾಗಿದ್ದಾರೆ. ಪ್ರತಿಯೊಬ್ಬರು ಅವರ ಯಶಸ್ಸಿನ ಬಗ್ಗೆ ಅಚ್ಚರಿಗೊಂಡಿದ್ದಾರೆ. ಈ ಪುಸ್ತಕ ನಿಮ್ಮ ಬಳಿ ಇರಲೇಬೇಕು ಮತ್ತು ಸೆಲೆಬ್ರಿಟಿ ಬಗ್ಗೆ ಇರುವ ಅತ್ಯುತ್ತಮ ಪುಸ್ತಕ

4.ಪ್ಲೇಯಿಂಗ್ ಟು ವಿನ್- ಸೈನಾ ನೆಹ್ವಾಲ್

4.ಪ್ಲೇಯಿಂಗ್ ಟು ವಿನ್- ಸೈನಾ ನೆಹ್ವಾಲ್

ಜನಪ್ರಿಯ ಆಟಗಾರನ ಒಂದು ಆಕರ್ಷಣೀಯ ಆತ್ಮಚರಿತ್ರೆ ಮತ್ತು ಪ್ರಖ್ಯಾತ ಪುಸ್ತಕಗಳಲ್ಲಿ ಒಂದಾಗಿದೆ. ಇದನ್ನು ನಿಮ್ಮ ಸಂಗ್ರಹಕ್ಕೆ ಸೇರಿಸಬಹುದಾಗಿದೆ. ಈ ಪುಸ್ತಕದಲ್ಲಿ ರಾಷ್ಟ್ರಕ್ಕೆ ಕೀರ್ತಿಯನ್ನು ತಂದ ಹುಡುಗಿ ತನ್ನ ಬಾಲ್ಯ, ವರ್ಷಗಳಲ್ಲಿ ಆಕೆ ಬೆಳೆದ ರೀತಿ ಮತ್ತು ಇತರ ಹಲವಾರು ವಿಷಯಗಳಿವೆ.

5. ರಫಾ: ಮೈ ಸ್ಟೋರಿ

5. ರಫಾ: ಮೈ ಸ್ಟೋರಿ

ಜನಪ್ರಿಯ ಟೆನಿಸ್ ಆಟಗಾರ ರಫೆಲ್ ನಡಾಲ್ ಆತ್ಮಚರಿತ್ರೆ ಮತ್ತು ಸೆಲೆಬ್ರಿಟಿಗಳ ಬಗ್ಗೆ ಇರುವ ಪ್ರಸಿದ್ಧ ಪುಸ್ತಕಗಳಲ್ಲಿ ಒಂದು. ಪ್ರಖ್ಯಾತ ಟೆನಿಸ್ ಆಟಗಾರನಾಗಲು ತನ್ನ ಅಂಕಲ್ ಯಾವ ರೀತಿಯಲ್ಲಿ ಮಾನಸಿಕ ಧೈರ್ಯವನ್ನು ಬೆಳೆಸಿದರು ಎನ್ನುವುದನ್ನು ನಡಾಲ್ ಈ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.

6. ಫಾಸ್ಟರ್ ದೆನ್ ಲೈಟ್ನಿಂಗ್: ಮೈ ಅಟೋಬಯೋಗ್ರಾಫಿ

6. ಫಾಸ್ಟರ್ ದೆನ್ ಲೈಟ್ನಿಂಗ್: ಮೈ ಅಟೋಬಯೋಗ್ರಾಫಿ

ಸೆಲೆಬ್ರಿಟಿಗಳ ಬಗ್ಗೆ ಜನಪ್ರಿಯ ಪುಸ್ತಕಗಳನ್ನು ಖರೀದಿಸಲು ಬಯಸಿದ್ದರೆ ನೀವು ಇದನ್ನು ಮಿಸ್ ಮಾಡಿಕೊಳ್ಳಬೇಡಿ. ಇದು ಸ್ಟಾರ್ ಒಲಿಂಪಿಯನ್ ಉಸೈನ್ ಬೋಲ್ಟ್ ಅವರ ಆತ್ಮಚರಿತ್ರೆ. ಉಸೈನ್ ಪಯಣದ ಆರಂಭದಿಂದ ಹಿಡಿದು ಆತ ಉತ್ತುಂಗಕ್ಕೇರಿದ ತನಕ ಪ್ರತಿಯೊಂದು ಈ ಪುಸ್ತಕದಲ್ಲಿದೆ.

7. ಸನ್ನಿ ಡೇಸ್

7. ಸನ್ನಿ ಡೇಸ್

ಭಾರತ ಕ್ರಿಕೆಟಿನಲ್ಲಿ ಸುನಿಲ್ ಗಾವಸ್ಕರ್ ಅವರನ್ನು ಮರೆತಿರುವವರು ತುಂಬಾ ಕಡಿಮೆ. ಸನ್ನಿ ಡೇಸ್ ಪುಸ್ತಕ ಜನಪ್ರಿಯ ಸೆಲೆಬ್ರಿಟಿ ಪುಸ್ತಕಗಳಲ್ಲಿ ಒಂದಾಗಿದೆ ಮತ್ತು ಭಾರತದ ಕ್ರಿಕೆಟಿನ ಬೆಳವಣಿಗೆ, ದಾಖಲೆ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲಿದೆ.

8. ರೋಜರ್ ಫೆಡರರ್: ದ ಗ್ರೇಟೆಸ್ಟ್

8. ರೋಜರ್ ಫೆಡರರ್: ದ ಗ್ರೇಟೆಸ್ಟ್

ಟೆನಿಸ್ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಮತ್ತು ಶ್ರೇಷ್ಠ ಕ್ರೀಡಾಳು. ಈ ಪುಸ್ತಕದಲ್ಲಿ ಮಹಾನ್ ಆಟಗಾರನ ಬಗ್ಗೆ ಸಂಗ್ರಹಿಸಿರುವ ಹಲವಾರು ಸಂದರ್ಶನಗಳಿವೆ. ಇದು ಸೆಲೆಬ್ರಿಟಿಗಳ ಬಗ್ಗೆ ಇರುವ ಪುಸ್ತಕಗಳಲ್ಲಿ ಒಂದು ಸೆಲೆಬ್ರಿಟಿಯಾಗಿದೆ.

9. ಕ್ರಾಸಿಂಗ್ ದಿ ಬೌಂಡರಿ: ಕೆವಿನ್ ಪೀಟರ್ಸನ್

9. ಕ್ರಾಸಿಂಗ್ ದಿ ಬೌಂಡರಿ: ಕೆವಿನ್ ಪೀಟರ್ಸನ್

ಯಾವಾಗಲೂ ಟ್ಯಾಬ್ಲಾಯ್ಡ್ ಗಳಿಗೆ ಆಹಾರವಾಗುವ ಮತ್ತು ಮಾಧ್ಯಮಗಳಿಂದ ಕ್ರಿಕೆಟಿನ ಡೇವಿಡ್ ಬೇಕಮ್ ಎಂದು ಕರೆಯಲ್ಪಟ್ಟಿರುವ ಕೆವಿನ್ ಪೀಟರ್ಸನ್ ಬಗ್ಗೆ ಈ ಪುಸ್ತಕವಿದೆ. ಇದರಲ್ಲಿ ಕ್ರಿಕೆಟಿಗನ ಜೀವನದ ಘಟನೆಗಳ ಬಗ್ಗೆ ಸಂಗ್ರಹವಿದೆ ಮತ್ತು ಸೆಲೆಬ್ರಿಟಿಗಳಲ್ಲಿ ಅತ್ಯುತ್ತಮ ಪುಸ್ತಕವೆಂದು ಪರಿಗಣಿಸಲಾಗಿದೆ.

10. ಎ ಬಯೋಗ್ರಾಫಿ ಆಫ್ ರಾಹುಲ್ ದ್ರಾವಿಡ್: ದಿ ನೈಸ್ ಗೈ ವೂ ಫಿನಿಶ್ಡ್ ಫರ್ಸ್ಟ್

10. ಎ ಬಯೋಗ್ರಾಫಿ ಆಫ್ ರಾಹುಲ್ ದ್ರಾವಿಡ್: ದಿ ನೈಸ್ ಗೈ ವೂ ಫಿನಿಶ್ಡ್ ಫರ್ಸ್ಟ್

ಮಹಾಗೋಡೆ ಯಾವಾಗಲೂ ಎತ್ತರವಾಗಿಯೇ ಇರುತ್ತದೆ ಮತ್ತು ರಾಹುಲ್ ದ್ರಾವಿಡ್ ಬಗ್ಗೆ ಇರುವ ಬಯೋಗ್ರಾಫಿ ನಿಮ್ಮ ಪುಸ್ತಕ ಸಂಗ್ರಹಕ್ಕೆ ಯೋಗ್ಯ ಆಯ್ಕೆ. ರಾಹುಲ್ ದ್ರಾವಿಡ್ ಅವರಂತಹ ಕ್ರಿಕೆಟಿಗನನ್ನು ರೂಪುಗೊಳಿಸಲು ಪ್ರಮುಖ ಪಾತ್ರ ನಿರ್ವಹಿಸಿರುವಂತಹ ಘಟನೆ ಹಾಗೂ ಸನ್ನಿವೇಶಗಳನ್ನು ಈ ಪುಸ್ತಕ ವಿವರಿಸುತ್ತದೆ.

X
Desktop Bottom Promotion