For Quick Alerts
ALLOW NOTIFICATIONS  
For Daily Alerts

ಮಾನವನ ದಾಳಿಗೆ ತತ್ತರಿಸುತ್ತಿರುವ 'ಭೂಮಿಯ ಸ್ವರ್ಗ'

|

ಹಿಮಾಲಯ ಪ್ರಕೃತಿ ರಮಣೀಯವಾದ ತಾಣ. ಇದರ ಸೌಂದರ್ಯವನ್ನು ನೋಡುತ್ತಿದ್ದರೆ ಅರಸಿಕನಲ್ಲೂ ರಸಿಕತೆ ಮೂಡುತ್ತದೆ. ನಾಸ್ತಿಕ ಸ್ವರ್ಗ ಎಂದರೆ ಹೀಗೆ ಇರಬಹುದೆಂದು ಆ ಕ್ಷಣಕ್ಕೆ ಆಸ್ತಿಕನಂತೆ ಯೋಚಿಸಲಾರಂಭಿಸುತ್ತಾನೆ. ಹಿಮಾಲಯ ಪರ್ವತ ನಮ್ಮ ಪುರಾಣದಲ್ಲೂ ಪ್ರಸಿದ್ಧಿಯನ್ನು ಪಡೆದಿದೆ. ಇದು ಋಷಿ-ಮುನಿಗಳ ತಪಸ್ಸಿನ ತಾಣ.

ಪವಿತ್ರ ಗಂಗಾ ನದಿ ಈ ಹಿಮಾಲಯ ಪರ್ವತದಲ್ಲಿ ಹುಟ್ಟಿ ಹರಿಯುತ್ತಾಳೆ. ಹಿಮಾಲಯವನ್ನು 'ಕೈಲಾಸ' ಅಂದರೆ ದೇವತೆಗಳಿರುವ ಸ್ಥಾನವೆಂದು ಗುರುತಿಸಲಾಗಿದೆ. ಇಂದು 5 ವಿಶ್ವ ಪರಿಸರ ದಿನ. ಆದರೆ ದೇವತೆಗಳ ವಾಸ ಸ್ಥಾನ, ಗಂಗಾ ನದಿಯ ಉಗಮ ಸ್ಥಾನ, ಪ್ರಕೃತಿ ರಮಣೀಯ ತಾಣವಾದ ಹಿಮಾಲಯ ಪರ್ವತ ಕೂಡ ಈಗ ಮಾನವನ ಬೇಜಾವಬ್ದಾರಿಯಿಂದ ತನ್ನ ಮೂಲ ಸೌಂದರ್ಯವನ್ನು ಕಳೆದುಕೊಳ್ಳುತ್ತಿರುವುದು ವಿಷಾದವೇ ಸರಿ. ಪವಿತ್ರ ಜಲ ಗಂಗಾ ಅಂತೂ ಕುಡಿಯಲೂ ಸಾಧ್ಯವಾಗದಷ್ಟು ಕಲುಷಿತಗೊಂಡಿದ್ದಾಳೆ. ಇವನ್ನೆಲ್ಲಾ ನೋಡುವಾಗ 'mountain of the Gods' ಮೂವಿಯ ಟ್ರೇಲರ್ ನಮ್ಮಲ್ಲಿ ಈ ಸುಂದರ ಪ್ರಕೃತ್ತಿ ಮಾತೆಯನ್ನು ಕುರೂಪಗೊಳಿಸಬೇಡಿ ಎಂದು ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದ ಟ್ರೇಲರ್ ನೋಡಿ ಇಲ್ಲಿದೆ.

<center><center><center><style type='text/css'>#vogroll_4{border:none;margin:0px;}</style><iframe src='http://www.indiavideo.org/video-embed.php?f=ODkyMC4=' height='369' width='640' align='center' frameborder='0' marginwidth='0' marginheight='0'></iframe></center></center></center>

X
Desktop Bottom Promotion