For Quick Alerts
ALLOW NOTIFICATIONS  
For Daily Alerts

ಜೀನ್ಸ್ ಡ್ರೆಸ್ಸಿಂಗ್ ನಲ್ಲಿ ಲೇಟಸ್ಟ್ ಫ್ಯಾಷನ್ ಯಾವುವು?

|

ಜೀನ್ಸ್ ಅನ್ನು ಹುಡುಗಿಯರು ಮಾತ್ರವಲ್ಲ 50 ವರ್ಷ ದಾಟಿದವರೂ ಧರಿಸಲು ಇಷ್ಟಪಡುತ್ತಾರೆ. ಜೀನ್ಸ್ ತುಂಬಾ ಕಂಪರ್ಟ್ ಆದ ಉಡುಗೆಯಾಗಿದೆ ಅನ್ನುವುದು ಜೀನ್ಸ್ ಧರಿಸುವವರ ಅಭಿಪ್ರಾಯ. ಕಾಲದಿಂದ ಕಾಲಕ್ಕೆ ಜೀನ್ಸ್ ನಲ್ಲಿ ಅನೇಕ ಫ್ಯಾಷನ್ ಗಳು ಬರುತ್ತವೆ, ಆದರೆ ಜೀನ್ಸ್ ಅನ್ನುವುದು ಕಾಮನ್ ಫ್ಯಾಷನ್ .

ಜೀನ್ಸ್ ನಲ್ಲಿ ಕ್ಯಾಷ್ಯೂಯಲ್ ವೇರ್, ಟೈಟ್ ಫಿಟ್ ಪ್ಯಾಂಟ್, ಪೆನ್ಸಿಲ್ ಕಟ್ ಪ್ಯಾಂಟ್ ಹೀಗೆ ಅನೇಕ ಬಗೆಯ ಪ್ಯಾಂಟ್ ಗಳಿವೆ. ಜೀನ್ಸ್ ನ ಮುಖ್ಯ ಗುಣವೆಂದರೆ ಜೀನ್ಸ್ ಧರಿಸಿ ಅದರ ಮೇಲೆ ಯಾವ ರೀತಿಯ ಟಾಪ್ ಧರಿಸುತ್ತೇವೊ ಅದರಂತೆ ನಮ್ಮ ಲುಕ್ ಬದಲಾಗುತ್ತದೆ.

ಯಾವ ರೀತಿಯ ಜೀನ್ಸ್ ಸ್ಟೈಲ್ ಈಗ ಟ್ರೆಂಡ್ ನಲ್ಲಿದೆ ಎಂದು ನೋಡೋಣ ಬನ್ನಿ:

ಜೀನ್ಸ್ ವಿಥ್ ಸ್ವೆಟರ್ ಟೈಪ್ ಟಾಪ್

ಜೀನ್ಸ್ ವಿಥ್ ಸ್ವೆಟರ್ ಟೈಪ್ ಟಾಪ್

ಜೀನ್ಸ್ ಧರಿಸಿ, ತೆಳು ಸ್ಟೆಟರ್ ರೀತಿಯ ಟಾಪ್ ಧರಿಸಿದರೆ ಇದು ಚಳಿಯಲ್ಲಿ ಮೈಯನ್ನು ಬೆಚ್ಚಗಿಡುತ್ತದೆ ಹಾಗೂ ನೋಡಲು ಹಾಟ್ ಲುಕ್ ನೀಡುತ್ತದೆ.

ಸೆಮಿ ಫಾರ್ಮಲ್ ಲುಕ್

ಸೆಮಿ ಫಾರ್ಮಲ್ ಲುಕ್

ಕೆಲವೊಂದು ಆಫೀಸ್ ಗೆ ಸೆಮಿ ಫಾರ್ಮಲ್ ಲುಕ್ ನಲ್ಲಿ ಹೋಗಬಹುದು. ಜೀನ್ಸ್ ಧರಿಸಿ ನಿಮಗೆ ಸೂಕ್ತವಾದ ಡೀಸೆಂಟ್ ಲುಕ್ ನೀಡುವ ಮುಕ್ಕಾಲು ಕೈ ಅಥವಾ ಫುಲ್ ಕೈಯಿರುವ ಶರ್ಟ್ ಧರಿಸಿ, ಇನ್ ಶರ್ಟ್ ಮಾಡಿದರೆ ಸೆಮಿ ಫಾರ್ಮಲ್ ಲುಕ್ ನಿಮ್ಮದಾಗುವುದು.

ರೆಡ್ ಜೀನ್ಸ್

ರೆಡ್ ಜೀನ್ಸ್

ರೆಡ್ ಜೀನ್ಸ್ ಧರಿಸಿ ಅದಕ್ಕೆ ತೆಳು ಬಣ್ಣದ ಶರ್ಟ್ ಹಾಕಿ ಇನ್ ಶರ್ಟ್ ಮಾಡುವುದು ಕೂಡ ಈಗೀನ ಟ್ರೆಂಡ್. ಈ ರೀತಿಯ ಡ್ರೆಸ್ಸಿಂಗ್ ಫ್ಯಾಷನಬಲ್ ಲುಕ್ ನೀಡುತ್ತದೆ.

ಕೂಲ್ ಅರ್ಬನ್ ಲುಕ್

ಕೂಲ್ ಅರ್ಬನ್ ಲುಕ್

ದೀಪಿಕಾ ಪಡುಕೋಣೆ ಮಾಡಿರುವ ಡ್ರೆಸ್ಸಿಂಗ್ ನೋಡಿ ಜೀನ್ಸ್ ಧರಿಸಿ ಅದಕ್ಕೆ ಸೂಕ್ತವಾದ ಪ್ಯಾಷನಬಲ್ ಟಾಪ್ ಧರಿಸಿ ಕೈಯಲ್ಲಿ ಜೀನ್ಸ್ ಬ್ಯಾಗ್ ಹಿಡಿಯುವುದು ಈ ಕೂಲ್ ಅರ್ಬನ್ ಲುಕ್ ನ ಸ್ಟೈಲ್.

ದಿ ಹಿಪ್ ಹಾಪ್ ಲುಕ್

ದಿ ಹಿಪ್ ಹಾಪ್ ಲುಕ್

ಗಾಢ ಬಣ್ಣದ ಜೀನ್ಸ್ ಧರಿಸಿ ಶರ್ಟ್ ಹಾಕಿ ಇನ್ ಶರ್ಟ್ ಮಾಡುವ ಬದಲು ಶರ್ಟ್ ನ ತುದಿಯನ್ನು ಕಟ್ಟುವುದು ಕೂಡ ಲೇಟಸ್ಟ್ ಫ್ಯಾಷನ್.

ಜೀನ್ಸ್ ವಿಥ್ ಥ್ರೆಡ್ಡ್ ಕೋಟ್

ಜೀನ್ಸ್ ವಿಥ್ ಥ್ರೆಡ್ಡ್ ಕೋಟ್

ಜೀನ್ಸ್ ಹಾಕಿ ಟೀ ಶರ್ಟ್ ಅದರ ಮೇಲೆ ದಾರ-ದಾರದ ಕೋಟ್ ಹಾಕಿ ಕವೌ ಬಾಯ್ ಬೂಟ್ ಹಾಕಿದರೆ ಈ ಡ್ರೆಸ್ಸಿಂಗ್ ನಿಮಗೆ ಅಲ್ಟ್ರಾ ಮಾಡರ್ನ್ ಲುಕ್ ನೀಡುತ್ತದೆ.

ಕಾರ್ಸೆಟೆಡ್ ಲುಕ್

ಕಾರ್ಸೆಟೆಡ್ ಲುಕ್

ಚಿತ್ರದಲ್ಲಿ ತೋರಿಸಿದಂತೆ ಡ್ರೆಸ್ಸಿಂಗ್ ಮಾಡಲು ಹೆಚ್ಚಿನ ಹುಡುಗಿಯರು ಇಷ್ಟಪಡುತ್ತಾರೆ. ಇದು ಡೀಸೆಂಟ್ ಲುಕ್ ಜೊತೆ ಫ್ಯಾಷನಬಲ್ ಆಗಿ ಕಾಣುವಿರಿ.

ಜೀನ್ಸ್ ಮತ್ತು ಗುಂಜಿ

ಜೀನ್ಸ್ ಮತ್ತು ಗುಂಜಿ

ಟೈಟ್ ಜೀನ್ಸ್ ಮತ್ತು ಸ್ಪೆಗಟಿ ಹಾಕಿ ಹೈ ಹೀಲ್ಸ್ ಬೂಟ್ ಹಾಕಿದರೆ ಫ್ಯಾಷನಬಲ್ ಆಗಿ ಕಾಣುವಿರಿ.

ಜೀನ್ಸ್ ಮತ್ತು ಟೀ ಶರ್ಟ್

ಜೀನ್ಸ್ ಮತ್ತು ಟೀ ಶರ್ಟ್

ಕಡು ಜೀನ್ಸ್ ಹಾಕಿ ಟೈಲ್ ಬಣ್ಣದ ಟೀ ಶರ್ಟ್ ಅಥವಾ ತೆಳು ಜೀನ್ಸ್ ಗೆ ಗಾಢ ಬಣ್ಣದ ಟೀ ಶರ್ಟ್ ಹಾಕಬಹುದು.

ಜಿನ್ಸ್ ವಿಥ್ ಜರ್ಕೀನ್

ಜಿನ್ಸ್ ವಿಥ್ ಜರ್ಕೀನ್

ಜೀನ್ಸ್ ಮತ್ತು ಟೀ ಶರ್ಟ್ ಹಾಕಿ ಅದಕ್ಕೆ ಜೀನ್ಸ್ ಜರ್ಕೀನ್ ಹಾಕುವ ಫ್ಯಾಷನ್ ಹಳೆಯದ್ದಾಗಿತ್ತು. ಮತ್ತೆ ಈ ಫ್ಯಾಷನ್ ಮರುಕಳಿಸಿದೆ.

English summary

Different Styles To Wear Jeans | Fashion And lifestyle | ಜೀನ್ಸ್ ಗೆ ಯಾವ ರೀತಿ ಡ್ರೆಸ್ಸಿಂಗ್ ಮಾಡುವುದು ಈಗೀನ ಟ್ರೆಂಡ್ | ಫ್ಯಾಷನ್ ಮತ್ತು ಜೀವನ ಶೈಲಿ

Wearing jeans is an everyday affair for most women. Most often we slip into a pair of jeans when we have nothing better to wear . Jeans is comfort clothing for most people. If you take a poll, most women would say that they are most comfortable in wearing jeans. Although jeans are casual and way too common, you can try various ideas to wear these ragged pants fashionably.
X
Desktop Bottom Promotion