For Quick Alerts
ALLOW NOTIFICATIONS  
For Daily Alerts

ನ್ಯೂ ಟ್ರೆಂಡ್ ನಲ್ಲಿರುವ ಅನಾರ್ಕಲಿ ಮತ್ತು ಸ್ಯಾರಿ

|

ಪ್ರಸಿದ್ಧ ಡ್ರೆಸ್ ವಿನ್ಯಾಸಗಾರ್ತಿ ಸಬ್ಯಸಾಚಿ ಮುಖರ್ಜಿ ರವರು ದೆಹಲಿಯಲ್ಲಿ ನಡೆಯುತ್ತಿರುವ PCJ Delhi Couture Week 2013ರಲ್ಲಿ ತಮ್ಮ ನ್ಯೂ ಡಿಸೈನ್ ನ ಡ್ರೆಸ್ ಗಳನ್ನು ಫ್ಯಾಷನ್ ಜಗತ್ತಿಗೆ ಪರಿಚಯಿಸಿದರು.

ಇವರು ಕ್ರೀಮ್ ಬಣ್ಣಕ್ಕೆ ಹೆಚ್ಚಿನ ಮಹತ್ವ ಕೊಟ್ಟದ್ದು ಈ ಬಣ್ಣದ ಸೀರೆ, ಲೆಹಂಗಾ, ಚೂಡಿದಾರ್ ಗಳು ಇವರ ಕಲ್ಪನೆಯಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಸಬ್ಯಸಾಚಿ ಮುಖರ್ಜಿರವರ ವಿನ್ಯಾಸದತ್ತ ಕಣ್ಣಾಡಿಸೋಣವೇ?

ಕ್ರೀಮ್ ಸ್ಯಾರಿ

ಕ್ರೀಮ್ ಸ್ಯಾರಿ

ಸಬ್ಯಸಾಚಿರವರ ವಿನ್ಯಾಸದಲ್ಲಿ ಮೂಡಿ ಬಂದ ಅತ್ಯಂತ ಆಕರ್ಷಕವಾದ ಸೀರೆ ಇದಾಗಿದೆ. ಫುಲ್ ಕೈ ಬ್ಲೌಸ್ ಈಗೀನ ಟ್ರೆಂಡ್ ಆಗಿದ್ದು, ಈ ಸೀರೆಗೂ ಫುಲ್ ಕೈ ಬ್ಲೌಸ್ ಅನ್ನು ಮ್ಯಾಚ್ ಮಾಡಿದ್ದನ್ನು ನೋಡಬಹುದು.

ನೆಟ್ ಸ್ಯಾರಿ, ಹೂವಿನ ವಿನ್ಯಾಸದ ಶರ್ವಾನಿ

ನೆಟ್ ಸ್ಯಾರಿ, ಹೂವಿನ ವಿನ್ಯಾಸದ ಶರ್ವಾನಿ

ಹೂವಿನ ವಿನ್ಯಾಸ ಸೀರೆ, ಶೇರ್ವಾನಿ, ಲೇಸ್ ಎಲ್ಲವೂ ಫ್ಯಾಷನ್ ಪ್ರಿಯರ ಮನ ಗೆಲ್ಲುವಂತಿದೆ. ತೆಳು ಕ್ರೀಮ್ ಬಣ್ಣದ ಈ ಡ್ರೆಸ್ ಗಳಲ್ಲಿ ಹೂವಿನ ವಿನ್ಯಾಸ ಪ್ರಮುಖ ಆಕರ್ಷಕಣೆಯಾಗಿದೆ.

ಅನಾರ್ಕಲಿ ಗೌನ್

ಅನಾರ್ಕಲಿ ಗೌನ್

ಅನಾರ್ಕಲಿ ಚೂಡಿದಾರ್ ಔಟ್ ಆಫ್ ಫ್ಯಾಷನ್ ಆಗುತ್ತಿರುವ ಸಮಯದಲ್ಲಿ ಅನಾರ್ಕಲಿ ಗೌನ್ ಟ್ರೆಂಡ್ ನಲ್ಲಿದೆ. ಈ ಡ್ರೆಸ್ ಫುಲ್ ಪ್ರಿಂಟ್ ಇದ್ದು, ಎಲ್ಲಾ ಮೈ ಬಣ್ಣದವರೆಗೆ ಹೊಂದುವಂತಿದೆ.

ಜ್ಯೂವೆಲರಿ

ಜ್ಯೂವೆಲರಿ

ಈ ಅನಾರ್ಕಲಿ ಗೌನ್ ಧರಿಸುವುದಾದರೆ ಎದ್ದು ಕಾಣುವಂತಹ ಆಭರಣ ಧರಿಸಬೇಕು. ಅಂದರೆ ಮಾತ್ರ ಆಕರ್ಷಕವಾಗಿ ಕಾಣುವುದು.

ಮತ್ತೊಂದು ವಿನ್ಯಾಸದ ಅನಾರ್ಕಲಿ ಗೌನ್

ಮತ್ತೊಂದು ವಿನ್ಯಾಸದ ಅನಾರ್ಕಲಿ ಗೌನ್

ಅನಾರ್ಕಲಿ ಗೌನ್ ಅನ್ನು ಅನೇಕ ವಿನ್ಯಾಸದಲ್ಲಿ ಮಾಡಲಾಗಿದ್ದು ಅವರ ವಿನ್ಯಾಸದಲ್ಲಿ ಮೂಡಿ ಬಂದ ಮತ್ತೊಂದು ಆಕರ್ಷಕ ಅನಾರ್ಕಲಿ ಗೌನ್ ನೋಡಿ ಇಲ್ಲಿದೆ.

ಚೂಡಿದಾರ್

ಚೂಡಿದಾರ್

ಮಂಡಿಗಿಂತ ಸ್ವಲ್ಪ ಉದ್ದವಿರುವ ಪ್ಯಾಂಟ್ ಅಂಡ್ ಟಾಪ್ ಒಂದೇ ವಿನ್ಯಾಸದ ಈ ಚೂಡಿದಾರ್ ಕೂಡ ನೋಡುಗರ ಗಮನ ಸೆಳೆಯುತ್ತದೆ.

ಶೇಡಡ್ಡ್ ನೆಟ್ ಸ್ಯಾರಿ

ಶೇಡಡ್ಡ್ ನೆಟ್ ಸ್ಯಾರಿ

ಶೇಡಡ್ಡ್ ನೆಟ್ ಸ್ಯಾರಿ ಕೂಡ ಸಬ್ಯಸಾಚಿರವರು ವಿನ್ಯಾಸ ಮಾಡಿದಂತಹ ಅಪೂರ್ವ ಸ್ಯಾರಿ ಡಿಸೈನ್ ಆಗಿದೆ.

ಪಿಂಕ್ ಚೂಡಿದಾರ್

ಪಿಂಕ್ ಚೂಡಿದಾರ್

ಫುಲ್ ವಿನ್ಯಾಸದ ಪಿಂಕ್ ಚೂಡಿದಾರ್ ಗೆ ನೆಟ್ ವೇಲ್ ಇದ್ದು ಈ ಸೆಲ್ವಾರ್ ನಿಮಗೆ ಗ್ರ್ಯಾಂಡ್ ಲುಕ್ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ನೆಟ್ ಸ್ಯಾರಿ

ನೆಟ್ ಸ್ಯಾರಿ

ಕ್ರೀಮ್ ಕಲರ್ ಸ್ಯಾರಿಗೆ ಸಿಲ್ವರ್ ಬಣ್ಣದ ವಿನ್ಯಾಸವಿರುವ ಈ ಸ್ಯಾರಿಗೆ ಚಿನ್ನದ ಬಣ್ಣದ ಬ್ಲೌಸ್ ಅನ್ನು ಮ್ಯಾಚ್ ಮಾಡಲಾಗಿದ್ದು, ಇದನ್ನು ಉಟ್ಟರೆ ರಾಯಲ್ ಲುಕ್ ನಿಮ್ಮದಾಗುವುದು.

 ಗೋಲ್ಡನ್ ಕಲರ್ ಸ್ಯಾರಿ

ಗೋಲ್ಡನ್ ಕಲರ್ ಸ್ಯಾರಿ

ಇಲ್ಲಿ ಸ್ಯಾರಿ ಗೋಲ್ಡನ್ ಕಲರ್ ಇದ್ದು, ಸಿಲ್ವರ್ ಕಲರ್ ನ ಬ್ಲೌಸ್ ಅನ್ನು ಮ್ಯಾಚ್ ಮಾಡಲಾಗಿದೆ.

ಲೇಸ್ ಇರುವ ಅನಾರ್ಕಲಿ ಗೌನ್

ಲೇಸ್ ಇರುವ ಅನಾರ್ಕಲಿ ಗೌನ್

ಈ ಗೌನ್ ನಲ್ಲಿ ಲೇಸ್ ಇರುವುದರಿಂದ ಇತರ ಎರಡು ಅನಾರ್ಕಲಿ ಗೌನ್ ಗಿಂತ ಭಿನ್ನವಾಗಿದೆ.

 ಲೆಹಂಗಾ

ಲೆಹಂಗಾ

ಇವರು ಸೀರೆ ಮತ್ತು ಚೂಡಿದಾರ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರೂ, ಕೆಲವೊಂದು ಲೆಹಂಗಾಕ್ಕೂ ವಿನ್ಯಾಸ ಮಾಡಿದ್ದಾರೆ.

ಸಬ್ಯಸಾಚಿ

ಸಬ್ಯಸಾಚಿ

ಸಬ್ಯಸಾಚಿರವರ ಡ್ರೆಸ್ ವಿನ್ಯಾಸದ ಪ್ರದರ್ಶನಕ್ಕೆ ಯಾವುದೇ ಸೆಲೆಬ್ರಿಟಿ ಶೋ ಟಾಪರ್ ಆಗಿ ಇರದಿದ್ದರೂ, ಅವರು ವಿನ್ಯಾಸ ಮಾಡಿದ ಡ್ರೆಸ್ ಗಳು ಸೋ ಟಾಪರ್ ನ ಸಹಾಯವಿಲ್ಲದೆಯೇ ಗಮನ ಸೆಳೆಯುವಂತಿದೆ.

English summary

DCW 2013: Sabyasachi Mukherjee's Collection

Sabyasachi desgined a lot of outfits using lace and white thread floral motifs on creamy white anarkalis and sarees. Sabyasachi Mukherjee's Couture at DCW 2013 was in short, awesome!
 
X
Desktop Bottom Promotion