For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿಯೂ ವಿಚಿತ್ರವಾದ ಆಹಾರ ಪದ್ಧತಿ ಇದೆ!

|

ಚೀನಾದವರು ಜಿರಳೆ ತಿನ್ನುತ್ತಾರೆ, ಕಪ್ಪೆ ತಿನ್ನುತ್ತಾರೆ ಎಂದು ಹೇಳುತ್ತೇವೆ. ಆದರೆ ಭಾರತೀಯರಲ್ಲಿ ಕೂಡ ಕೆಲವರು ಕೆಲ ವಿಚಿತ್ರವಾದ ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ ಅನ್ನುವುದು ಗೊತ್ತೇ?

ಇಲ್ಲಿ ಕೂಡ ಕಪ್ಪೆ, ನಾಯಿ ಮಾಂಸ ಹೀಗೆ ನೀವೆಲ್ಲಾ ವಿಚಿತ್ರವಾದ ಆಹಾರಗಳನ್ನು ತಿನ್ನುವವರು ಇದ್ದಾರೆ. ಇದನ್ನು ಕೇಳಿ yak ಅನ್ನಬೇಡಿ, ಈ ಆಹಾರಗಳು ತುಂಬಾ ರುಚಿಯಾಗಿರುತ್ತದೆಯಂತೆ. ಭಾರತೀಯ ಆಹಾರಗಳೆಂದರೆ ದಾಲ್ ರೊಟ್ಟಿ, ಮಸಾಲೆ ದೋಸೆ, ಇಡ್ಲಿ, ವಡೆ ಎಂದು ಪಟ್ಟಿ ಮಾಡುವಾಗ ಈ ಆಹಾರಗಳನ್ನೂ ಪಟ್ಟಿಯಲ್ಲಿ ಸೇರಿಸಲು ಮರೆಯಬೇಡಿ. ಭಾರತೀಯರು ತಿನ್ನುವ ಈ ಆಹಾರಗಳನ್ನು ಭಾರತೀಯ ಆಹಾರವಲ್ಲವೆಂದು ಹೇಗೆ ತಾನೆ ಹೇಳಲು ಸಾಧ್ಯ?

ಭಾರತದಲ್ಲಿ ಕೆಲ ಪಂಗಡಗಳ ಪ್ರಮುಖ ಆಹಾರಗಳಾದ ಈ ಅಸಾಮಾನ್ಯ ಆಹಾರಗಳಾವುವು ಯಾವುದೆಂದು ನೋಡೋಣವೇ?

ಬೆಣ್ಣೆ ಟೀ

ಬೆಣ್ಣೆ ಟೀ

ಈ ಟೀಯನ್ನು ಹಾಲಿನಲ್ಲಿ ಅಲ್ಲ, ಅದರ ಬದಲು ಬೆಣ್ಣೆಯಲ್ಲಿ ತಯಾರಿಸಲಾಗುವುದು. ಟಿಬೆಟಿಯನ್ ನಿರಾಶ್ರಿತರ ಮುಖಾಂತರ ಈ ಆಹಾರ ಭಾರತೀಯರಿಗೆ ಪರಿಚಯವಾಯಿತು.

ಚಿಕನ್ ರಕ್ತ ಮತ್ತು ಹಂದಿಯ ಕರುಳು

ಚಿಕನ್ ರಕ್ತ ಮತ್ತು ಹಂದಿಯ ಕರುಳು

ವಿಚಿತ್ರ ಅನಿಸುತ್ತದೆಯಲ್ಲವೇ? ಆದರೆ ಇದು ನಿಜ. ಇದನ್ನು ಜಾದೊಹ್ ಎಂಬ ಹೆಸರಿನಿಂದ ಕರೆಯುತ್ತಾರೆ. ಭಾರತದ ಉತ್ತರ -ಪೂರ್ವದಲ್ಲಿ ಕಂಡು ಬರುವ ಬುಡಕಟ್ಟು ಜನಾಂಗದವರಿಗೆ ಬಲು ಪ್ರಿಯವಾದ ಖಾದ್ಯ ಇದಾಗಿದೆ.

ನಾಯಿ ಮಾಂಸ

ನಾಯಿ ಮಾಂಸ

ನಾವೆಲ್ಲಾ ನಾಯಿ ಸಾಕುತ್ತೇವೆ, ಆದರೆ ಅದನ್ನು ತಿನ್ನುವುದಿಲ್ಲ, ಆದರೆ ನಾಗಾಲ್ಯಾಂಡ್ ನ ಜನರು ನಾಯಿ ಮಾಂಸವನ್ನು ತಿನ್ನುತ್ತಾರೆ. ಅಲ್ಲದೆ ಅಲ್ಲಿ ಇತರ ಮಾಂಸಗಳಿಗಿಂತ ನಾಯಿ ಮಾಂಸ ತುಂಬಾ ದುಬಾರಿ.

ಚಿಕ್ಕ ಶಾರ್ಕ್

ಚಿಕ್ಕ ಶಾರ್ಕ್

ಶಾರ್ಕ್ ಮೀನು ಮನುಷ್ಯರನ್ನು ಭಯ ಪಡಿಸುತ್ತದೆ, ಆದರೆ ಮನುಷ್ಯ ಅದನ್ನು ಮರಿಯಾಗಿರುವಾಗ ಹಿಡಿದು ತಿನ್ನುತ್ತಾನೆ. ಹೌದು ಚಿಕ್ಕ ಶಾರ್ಕ್ ಮೀನು ಗೋವಾದ ಸ್ಪೆಷಲ್ ಆಗಿದೆ. ಆದರೆ ಈ ಖಾದ್ಯದ ಬೆಲೆ ಮಾತ್ರ ತುಂಬಾ ದುಬಾರಿ.

ಕೆಂಪು ಇರುವೆ

ಕೆಂಪು ಇರುವೆ

ಕೆಂಪು ಇರುವೆಯಿಂದ ಚಟ್ನಿ ಮಾಡಿ ತಿನ್ನುವವರು ಕರ್ನಾಟಕದಲ್ಲಿ ತುಂಬಾ ಮಂದಿ ಇದ್ದಾರೆ. ಇದರ ಚಟ್ನಿ ತಿನ್ನಲು ತುಂಬಾ ರುಚಿಯಾಗಿರುತ್ತದೆ ಎಂದು ತಿನ್ನುವವರು ಹೇಳುವುದನ್ನು ಕೇಳಿದ್ದೇನೆ.

ಕಪ್ಪು ಅಕ್ಕಿ

ಕಪ್ಪು ಅಕ್ಕಿ

ಇದು ಮಣಿಪುರದ ಸ್ಪೆಷಲ್. ಇದನ್ನು ಮ್ಯಾಜಿಕ್ ಅಕ್ಕಿ ಎಂದು ಕೂಡ ಕರೆಯುತ್ತಾರೆ. ಈ ಅಕ್ಕಿ ಕಪ್ಪು ಬಣ್ಣದಲ್ಲಿ ಇರುತ್ತದೆ ಆದರೆ ಬೇಯಿಸಿದಾಗ ನೇರಳೆ ಬಣ್ಣಕ್ಕೆ ತಿರುಗುತ್ತದೆ.

ಹಂದಿಯ ಮಿದುಳು

ಹಂದಿಯ ಮಿದುಳು

ಮೆಘಾಲಯ, ಕೊಡಗು ಈ ಕಡೆಯಲ್ಲಿ ಕೆಲವರು ಹಂದಿಯ ಮಾಂಸ ಮಾತ್ರವಲ್ಲ ಮಿದುಳಿನಿಂದ ಅಡುಗೆ ಮಾಡಿ ತಿನ್ನುತ್ತಾರೆ.

 ಕಪ್ಪೆಯ ಕಾಲು

ಕಪ್ಪೆಯ ಕಾಲು

ಸಿಕ್ಕೀಂನಲ್ಲಿ ಕಪ್ಪೆಯ ಕಾಲನ್ನು ಔಷಧೀಯಾಗಿ ಬಳಸುತ್ತಾರೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯನ್ನು ಗುಣಪಡಿಸಲು ಕಪ್ಪೆಯ ಕಾಲಿನ ಅಡುಗೆ ತಿನ್ನುತ್ತಾರೆ.

ರೇಷ್ಮೆ ಹುಳಗಳು

ರೇಷ್ಮೆ ಹುಳಗಳು

ಅಸ್ಸಾಂನವರು ರೇಷ್ಮೆ ಹುಳಗಳಿಂದ ಪುಪ ಅನ್ನುವ ಅಡುಗೆ ಮಾಡಿ ತಿನ್ನುತ್ತಾರೆ.

Read more about: ಭಾರತ ಆಹಾರ food
English summary

Bizarre Foods That Are Eaten In India

Here are many parts of India where you can find some 'unusual dishes' cooked either in an unconventional manner or with some bizarre ingredients. So, if you thought Indian food was all about masala dosa and butter chicken, then you are in for a huge surprise. Check out the bizarre foods in india.
X
Desktop Bottom Promotion