For Quick Alerts
ALLOW NOTIFICATIONS  
For Daily Alerts

ಮನುಷ್ಯ ತಿನ್ನುವ ತುಂಬಾ ವಿಲಕ್ಷಣವಾದ ಆಹಾರಗಳಿವು!

|

ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಲಿಸಿದರೆ ಆಹಾರಕ್ರಮ ಭಿನ್ನವಾಗಿರುತ್ತದೆ. ಉದಾಹರಣೆಗೆ ಉತ್ತರ ಭಾರತದವರ ಆಹಾರಕ್ರಮಕ್ಕೂ, ದಕ್ಷಿಣ ಭಾರತದವರ ಆಹಾರ ಕ್ರಮಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಉತ್ತರ ಭಾರತದವರು ಅನ್ನಕ್ಕಿಂತ, ರೊಟ್ಟಿ, ಚಪಾತಿ ಹೆಚ್ಚಾಗಿ ತಿಂದರೆ ನಾವು ಚಿತ್ರಾನ್ನ, ಉಪ್ಪಿಟ್ಟು, ವಾಂಗೀಬಾತ್ ಅಂತ ಅನ್ನದ ಐಟಂಗಳನ್ನೇ ಹೆಚ್ಚಾಗಿ ತಿನ್ನುತ್ತೇವೆ.

ಇನ್ನು ವಿದೇಶದ ಅಡುಗೆಯಂತೂ ಸಂಪೂರ್ಣ ಭಿನ್ನವಾಗಿರುತ್ತದೆ. ಅದರಲ್ಲಿ ನಾವು ಚೈನೀಸ್ ಅಡುಗೆಯ ಬಗ್ಗೆ ಸಾಕಷ್ಟು ಕೇಳಿರುತ್ತೇವೆ. ಜಿರಳೆ ತಿನ್ನುತ್ತಾರೆ, ಹಾವು ತಿನ್ನುತ್ತಾರೆ. ಅಯ್ಯೋ ಅದನ್ನೆಲ್ಲಾ ತಿನ್ನುತ್ತಾರಾ? ಎಂದು ನಾವು ಮುಖ ಕಿವುಚುತ್ತೇವೆ. ಆದರೆ ಇದನ್ನು ರುಚಿ ನೋಡಿರುವವರು ಇವು ಅತ್ಯಂತ ಸವಿರುಚಿ ಆಹಾರ ಎಂದು ನಮ್ಮನ್ನು ಮತ್ತಷ್ಟು ಬೆರಗಾಗಿಸುತ್ತಾರೆ.

ಇದನ್ನೆಲ್ಲಾ ನೋಡುವಾಗ ಮನುಷ್ಯ ಎಂಬ ಪ್ರಾಣಿ ಏನೆಲ್ಲಾ ತಿನ್ನುತ್ತಾನೆ, ಎಲ್ಲಾ ಪ್ರಾಣಿಗಳಿಗಿಂತ ಹೆಚ್ಚು ಅಪಾಯಕಾರಿಯಾದ ಪ್ರಾಣಿ ಮನುಷ್ಯ ಎಂದರೆ ತಪ್ಪಲ್ಲ! ಇಲ್ಲಿ ನಾವು ಕೆಲವು ವಿಚಿತ್ರ ಆಹಾರಗಳ ಬಗ್ಗೆ ಹೇಳಿದ್ದೇವೆ. ಇವೆನ್ನೆಲ್ಲಾ ತಿನ್ನುತ್ತಾರಾ ಎಂದು ನೆನೆದು ವಾಂತಿ ಮಾಡಿಕೊಳ್ಳಬೇಡಿ ಪ್ಲೀಸ್...

 ಪಕ್ಷಿಗೂಡು

ಪಕ್ಷಿಗೂಡು

ಪಕ್ಷಿ ಮೊಟ್ಟೆ ತಿನ್ನುವುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ, ನಮ್ಮಲ್ಲಿ ಕೆಲವರು ರುಚಿ ನೋಡಿಯೂ ಇರುತ್ತಾರೆ. ಆದರೆ ಚೀನಾದಲ್ಲಿ ಪಕ್ಷಿಗೂಡಿನಿಂದ ಸೂಪ್ ಮಾಡಿ ಕುಡಿಯುತ್ತಾರೆ!

ಹಸಿ ರಕ್ತದ ಸೂಪ್

ಹಸಿ ರಕ್ತದ ಸೂಪ್

ವಿಯೆಟ್ನಾಂನಲ್ಲಿ ಹಸಿ ರಕ್ತದ ಸೂಪ್ ತುಂಬಾ ಫೇಮಸ್. ಚಿಕನ್, ಬಾತುಕೋಳಿಯ ರಕ್ತದಿಂದ ಈ ಸೂಪ್ ತಯಾರಿಸಲಾಗುವುದು.

ಮಂಗನ ಮೆದುಳು

ಮಂಗನ ಮೆದುಳು

ನಮ್ಮ ಭಾರತದಲ್ಲೂ ಕೆಲವರು ಮಂಗ ತಿನ್ನುತ್ತಾರೆ. ವಿಶ್ವದ ಕೆಲವು ಕಡೆ ಮಂಗನ ಮೆದುಳು ತಿನ್ನುವ ವರ್ಗದವರು ಕಾಣ ಸಿಗುತ್ತಾರೆ.

ಜೇಡರ ಹುಳು

ಜೇಡರ ಹುಳು

Tarantula ತುಂಬಾ ವಿಷಕಾರಿಯಾದ ಜೇಡರ ಹುಳು ಕೂಡ ಕಾಂಬೋಡಿಯಾದ ಕೆಲವರಿಗೆ ತುಂಬಾ ಪ್ರಿಯವಾದ ಆಹಾರವಾಗಿದೆ.

ಮೀನನ್ನು ಜೀವಂತ ತಿನ್ನುವುದು

ಮೀನನ್ನು ಜೀವಂತ ತಿನ್ನುವುದು

ಜಪಾನ್ ನಲ್ಲಿ Ikizukuri ಫುಡ್ಸ್ ಪದ್ಧತಿ ಇದೆ. Ikizukuri ಅಂದರೆ ಜೀವಂತ ತಿನ್ನುವುದು. ಜಪಾನ್ ನಲ್ಲಿ ತಮ್ಮ ಅಥಿತಿ ಮುಂದೆ ಮೀನನ್ನು ಹಸಿಯಾಗಿ ಕಟ್ ಮಾಡಿ, ಅದರ ರಕ್ತ ಸಹಿತ ಸರ್ವ್ ಮಾಡಲಾಗುವುದು.

ಇಟಲಿಯ -Casu Marzu

ಇಟಲಿಯ -Casu Marzu

ಇದು ಇಟಲಿಯಲ್ಲಿ ದೊರೆಯುವ ಆಹಾರವಾಗಿದ್ದು, ಇದು ಕೂಡ ವಿಚಿತ್ರವಾದ ಆಹಾರ ಪದ್ಧತಿಯಲ್ಲಿ ಒಂದಾಗಿದೆ.

ಹಾಳಾದ ಮೊಟ್ಟೆಯಿಂದ ಅಡುಗೆ

ಹಾಳಾದ ಮೊಟ್ಟೆಯಿಂದ ಅಡುಗೆ

ಮೊಟ್ಟೆ ಹಾಳಾದರೆ ಅದರ ಕೆಟ್ಟ ವಾಸನೆಗೆ ಹೊಟ್ಟೆ ತೊಳಸಿ ಬರುತ್ತದೆ. ಅಂತದರಲ್ಲಿ ಹಾಳಾದ ಮೊಟ್ಟೆಯಿಂದ ರುಚಿಯಾದ ಆಹಾರವನ್ನು ತಯಾರಿಸಿ, ಚೈನೀಸ್ ಅಡುಗೆಯಲ್ಲಿ ಕಾಣಬಹುದು. ವರ್ಷಗಟ್ಟಲೆ ಹಳತಾದ ಈಸ್ಟರ್ ಮೊಟ್ಟೆಯನ್ನು ಸಾಸ್ ನಲ್ಲಿ ಬೇಯಿಸಿ ತಿನ್ನಲಾಗುವುದು.

ಮೆಕ್ಸಿಕೋದ Escamoles ಎಂಬ ಅಡುಗೆ

ಮೆಕ್ಸಿಕೋದ Escamoles ಎಂಬ ಅಡುಗೆ

ಇದು ಸ್ವಲ್ಪ ಭಿನ್ನವಾದ ಮೀನೋಗರವಾಗಿದ್ದು ನೋಡಲು ಬೀನ್ಸ್ ನಂತೆ ಇದ್ದು ಇದನ್ನು ಸ್ನ್ಯಾಕ್ಸ್ ಆಗಿ ತಿನ್ನುತ್ತಾರೆ.

ಹಸಿಯಾದ ಸರ್ಪದ ಹೃದಯ

ಹಸಿಯಾದ ಸರ್ಪದ ಹೃದಯ

ಹಾವನ್ನು ಮಾತ್ರವಲ್ಲ, ಸರ್ಪದ ಹೃದಯವನ್ನೂ ಹಸಿಯಾಗಿ ತಿನ್ನುವುದು ಕೂಡ ಒಂದು ಆಹಾರಕ್ರಮವಾಗಿದೆ.

ಬೆಕ್ಕು

ಬೆಕ್ಕು

ಭಾರತದಲ್ಲಿ ಕಾಡು ಬೆಕ್ಕು ತಿನ್ನುವುದನ್ನು ಕೇಳಿರುತ್ತೀರಿ. ಇನ್ನು ಕೆಲವರು ಮನೆಯಲ್ಲಿ ಸಾಕಿದ ಕಪ್ಪು ಬೆಕ್ಕನ್ನು ಕೂಡ ತಿನ್ನುತ್ತಾರೆ.

Balut: ಫಿಲಿಫೈನ್ಸ್

Balut: ಫಿಲಿಫೈನ್ಸ್

ಇದು ತುಂಬಾ ಕ್ರೂರವಾದ ಆಹಾರ ಪದ್ಧತಿಯಾಗಿದೆ. ಬಾತ್ ಕೋಳಿಯ ಮೊಟ್ಟೆಯನ್ನು ಮರಿ ಮಾಡಲು ಇಟ್ಟು ಮರಿಯಾಗುವ ಹಂತಕ್ಕೆ ಬಂದಾಗ ಮೊಟ್ಟೆಯನ್ನು ಒಡೆದು ಅಡುಗೆ ಮಾಡಲಾಗುವುದು.

English summary

Top 11 Bizarre Foods That Are Delicacies | Bizarre Things

You will be surprised to know that some of these foods that are bizarre to us are not only relished in some countries but are very expensive foods too. For example, bird nest soup is a delicacy in China that is on the list of one of the most expensive foods in the world.
X
Desktop Bottom Promotion