For Quick Alerts
ALLOW NOTIFICATIONS  
For Daily Alerts

ಈ ಗುಣಗಳು ಇಲ್ಲದಿದ್ದರೆ ದುಡ್ಡು ಮಾಡಲು ಸಾಧ್ಯವಿಲ್ಲ ರೀ

By Super
|

ಬಹಳ ಕ್ರಿಯಾಶೀಲ ಹಾಗೂ ಉತ್ಪಾದಕ ವ್ಯಕ್ತಿಯನ್ನು ನೋಡಿದಾಗ ನೀವು ಹೊಗಳುವುದಕ್ಕಿಂತ ಹೆಚ್ಚು ಅಸೂಯೆ ಪಟ್ಟದ್ದೇ ಹೆಚ್ಚೇ? ಅವರಂತಾಗಲು ಯಾವತ್ತಾದರೂ ಯೋಚಿಸಿದ್ದೀರಾ? ಕೇವಲ ಶ್ರಮ ವಹಿಸಿ ದುಡಿಯುವದಷ್ಟೇ ಯಶಸ್ಸಿನ ಹಿಂದಿರುವ ಗುಟ್ಟೇ?

ಅದರರ್ಥ ವೀಕೇಂಡ್ ಗಳಲ್ಲೂ ಕೆಲಸದಲ್ಲಿ ಮೈ ಮರೆಯೋದು ಉಚಿತವೇ? ಅಥವಾ ಶುಕ್ರವಾರವೇ ಕೆಲಸಕ್ಕೆಲ್ಲ ಗುಡ್ ಬೈ ಹೇಳಿ ಉಳಿದೆರಡು ದಿನ ಕುಟುಂಬಸ್ಥರೊಡನೆ ಸಮಯ ಕಳೆಯುವುದು ಲಾಭವಾ? ನಿಮ್ಮ ಬದುಕನ್ನು ಹೆಚ್ಚು ಉಪಯುಕ್ತ ಮತ್ತು ಉತ್ಪಾದಕಗೊಳಿಸಲು ಇಲ್ಲಿದೆ 9 ಸಲಹೆಗಳು:

1. ವೇಳಾಪಟ್ಟಿ ರಚಿಸಿಕೊಳ್ಳಿ ಮತ್ತು ಅದಕ್ಕೆ ಅಂಟಿಕೊಳ್ಳಿ

1. ವೇಳಾಪಟ್ಟಿ ರಚಿಸಿಕೊಳ್ಳಿ ಮತ್ತು ಅದಕ್ಕೆ ಅಂಟಿಕೊಳ್ಳಿ

ಶಾಲೆಯ ದಿನಗಳಲ್ಲಿ ವೇಳಾಪಟ್ಟಿಯನ್ನು ರಚಿಸಿಕೊಂಡದ್ದು ನೆನಪಿರಬಹುದು. ಸರಿಯಾದ ಸಮಯಕ್ಕೆ ಸರಿಯಾದ ಸಮಯದ ಒಳಗೆ ಕೆಲಸಗಳನ್ನು ಪೂರೈಸಬೇಕು ಎನ್ನುವ ಉದ್ದೇಶ ವೇಳಾಪಟ್ಟಿಯ ಹಿಂದಿದೆ. ಇದೇ ಉದ್ದೇಶ ನಿಮ್ಮ ಉದ್ಯೋಗಕ್ಕೂ ಅನ್ವಯಿಸಿಕೊಂಡರೆ ಒಳ್ಳೆಯದು. ದಿನವನ್ನು ಉಪಯುಕ್ತವಾಗಿ ಕಳೆಯುವವರು ದಿನಚರಿಯನ್ನು ಪಾಲಿಸುತ್ತಾರೆ ಮತ್ತು ಅದಕ್ಕೆ ಅಂಟಿಕೊಳ್ಳುತ್ತಾರೆ.

2. ನಿಮ್ಮ ಗುರಿಗಳ ಬಗ್ಗೆ ಸ್ಪಷ್ಟತೆಯಿರಲಿ

2. ನಿಮ್ಮ ಗುರಿಗಳ ಬಗ್ಗೆ ಸ್ಪಷ್ಟತೆಯಿರಲಿ

ನಿಮಗೆ ನೀವೇ ಟಾರ್ಗೆಟ್ ಹಾಕಿಕೊಳ್ಳಿ ಮತ್ತು ಯಾವ ಹೊತ್ತಿಗೆ ಯಾವ ಕೆಲಸ ಮುಗಿಸಬೇಕು ಎನ್ನೋದನ್ನು ಗಮನದಲ್ಲಿಟ್ಟುಕೊಳ್ಳಿ. ನಿಮ್ಮ ದಿನ, ವಾರ ತಿಂಗಳುಗಳ ಲೆಕ್ಕಾಚಾರ ಸ್ಪಷ್ಟವಾಗಿದ್ದರೆ ಸಹಜವಾಗಿಯೇ ನಿಮ್ಮ ಕೆಲಸ ಹಾಗೂ ಉತ್ಪತ್ತಿಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

3. ದಿನವನ್ನು ಉತ್ತಮವಾಗಿ ಆರಂಭಿಸಿ

3. ದಿನವನ್ನು ಉತ್ತಮವಾಗಿ ಆರಂಭಿಸಿ

ನಿಮ್ಮ ಗುರಿಯನ್ನು ತಲುಪುವುದಕ್ಕೆ ದಿನದ ಪ್ರತಿ ನಿಮಿಷವನ್ನೂ ಉತ್ಸಾಹದ ಚಿಲುಮೆಯಿಂದ ತುಂಬಿಕೊಂಡಿರಿ.

4. ವಿರಾಮ ತೆಗೆದುಕೊಳ್ಳಿ

4. ವಿರಾಮ ತೆಗೆದುಕೊಳ್ಳಿ

ತಾಸುಗಟ್ಟಲೆ ಕೆಲಸ ಮಾಡುವುದು ಚಾಟ್ ಮಾಡುವುದು ಶುದ್ದ ಕಾಠಿಣ್ಯದ ಲಕ್ಷ. ಮನಸ್ಸಿಗೆ ಹಿತವಾಗಲು ಸ್ವಲ್ಪ ಸಮಯದ ವಿರಾಮ ಅಗತ್ಯವಿದೆ. ಕಟ್ಟಡದ ಸುತ್ತಮುತ್ತ ಒಂದು ನಡಿಗೆ ಮಾಡಿ, ಐದು ನಿಮಿಷದ ಮಟ್ಟಿಗೆ ಪಾರ್ಕ್ ನಲ್ಲಿ ಕೂರಿ. ಆಫೀಸಿನ ಸುತ್ತಮುತ್ತ ತಿರುಗಾಡಿ. ಸಹದ್ಯೋಗಿ ಜೊತೆ ಕಾಫಿ ಕುಡಿಯಿರಿ, ಆಗ ಅವರ ಐಡಿಯಾವೂ ನಿಮಗೆ ತಿಳಿಯುತ್ತದೆ.ಮತ್ತೆ ಹೊಸ ಉತ್ಸಾಹದೊಂದಿಗೆ ಕೆಲಸಕ್ಕೆ ಮರಳಿ.

5. ಉತ್ತಮ ಮನಸ್ಥಿತಿ

5. ಉತ್ತಮ ಮನಸ್ಥಿತಿ

ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು ಮಾನಸಿಕ ಸ್ಥಿತಿಯನ್ನು ಸರಿಯಾಗಿ ಕಾಯ್ದಿಟ್ಟುಕೊಳ್ಳುವುದು ಅಗತ್ಯ. ಅದರಲ್ಲೂ ಮೀಟಿಂಗ್ ನಲ್ಲಿ ಬೇಗನೆ ಕೋಪಗೊಳ್ಳಬೇಡಿ. ನಿಮ್ಮ ಲ್ಯಾಪ್ ಟಾಪ್ ನ ಮುಂದೆ ನೀವು ಸರಿಯಾದ ಆ್ಯಂಗಲ್ ನಲ್ಲಿ ಕೂರದೇ ಇದ್ದರೆ ನಿಮ್ಮ ಬೆನ್ನು ಮತ್ತು ಕುತ್ತಿಗೆಗೆ ನೋವು ಖಾಯಂ. ಹೆಚ್ಚು ಬೆನ್ನು ಬಾಗಿಸಿ ಕೂರುವುದು, ಪರದೆಗೆ ಹತ್ತಿರದಲ್ಲಿ ಕೂರುವುದು ಮುಂತಾದವುಗಳಿಂದ ನೋವು ಗ್ಯಾರಂಟಿ.

6. ಸರಿಯಾಗಿ ಆಹಾರ ಸೇವಿಸಿ

6. ಸರಿಯಾಗಿ ಆಹಾರ ಸೇವಿಸಿ

ಆರೋಗ್ಯಕರವಾದ ಆಹಾರ ಸೇವಿಸಿದರೆ ಮನಸ್ಸು ಮತ್ತು ದೇಹ ಹೆಚ್ಚು ಉತ್ಸಾಹಭರಿತವಾಗಿರುತ್ತದೆ. ಆದ್ದರಿಂದ ಬಹಳಷ್ಟು ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ. ಪೋಷಕಾಂಶ ಹೆಚ್ಚು ದೊರಕಿದಷ್ಟು ಕೆಲಸ ಮಾಡುವ ಸಾಮರ್ಥ್ಯ ಹೆಚ್ಚು.

7. ನೋ- ಎನ್ನಲು ಕಲಿಯಿರಿ

7. ನೋ- ಎನ್ನಲು ಕಲಿಯಿರಿ

ಕೆಟ್ಟ ಹವ್ಯಾಸಗಳಿಗೆ ನೋ ಎನ್ನಲು ಕಲಿಯಿರಿ. ಸಹೋದ್ಯೋಗಗಿಗಳು ಗಾಸಿಪ್ ಮಾಡುತ್ತ ವೇಳೆ ಕಳೆಯಲು ಕರೆದರೆ ಇಲ್ಲ ಎನ್ನಿ. ವ್ಯವಸ್ಥೆಯ ಬಗ್ಗೆ ವಿನಾಕಾರಣ ಬೈಯ್ಯುತ್ತಾ ಕಾಲಹರಣ ಮಾಡುವುದಕ್ಕೆ ನೋ ಎನ್ನಿ. ಅದರ ಬದಲು ನಿಮ್ಮ ಕೆಲಸ ಕಾರ್ಯಗಳನ್ನು ಮುಗಿಸುತ್ತಾ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.

8. ವ್ಯಾಯಾಮಕ್ಕೆ ಪ್ರಾಶಸ್ತ್ಯ ನೀಡಿ

8. ವ್ಯಾಯಾಮಕ್ಕೆ ಪ್ರಾಶಸ್ತ್ಯ ನೀಡಿ

ಜೀವನದ ಒಳ್ಳೆಯ ಕೆಲಸಗಳಿಗೆ ವ್ಯಾಯಾಮವೇ ಮೂಲ ಮಂತ್ರ. ಉತ್ತಮ ಆರೋಗ್ಯಯುತ ದೇಹ ಆರೋಗ್ಯಯುತ ಮನಸ್ಸಿಗೆ ಮೂಲಾಧಾರ. ಇದರಿಂದ ಕೆಲಸದ ಉತ್ಪಾದಕತೆಯೂ ಹೆಚ್ಚು.

9. ಸಂತೋಷವಾಗಿರಿ

9. ಸಂತೋಷವಾಗಿರಿ

ಧನಾತ್ಮಕ ಚಿಂತನೆಗಳು ಯಶಸ್ಸಿನ ಮುನ್ನುಡಿ. ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಲು ಧನಾತ್ಮ ಚಿಂತನೆ ಮಾಡಿ ಮತ್ತು ಮನಸ್ಸನ್ನು ಖುಷಿಯಾಗಿರಿಸಿಕೊಳ್ಳಿ. ಮನಸ್ಸು ಸ್ಪಷ್ಟವಾದ ಚಿಂತನೆಗಳಲ್ಲಿ ತೊಡಗಿದ್ದರೆ ನಿಮ್ಮ ಕೆಲಸದ ಉತ್ಪಾದನಾ ಸಾಮರ್ಥ್ಯವೂ ಹೆಚ್ಚು.

Read more about: ಕೆಲಸ ಜೀವನ work life
English summary

9 Habits Of Really Productive People | Life And Work | ಜೀವನದಲ್ಲಿ ಮುಂದೆ ಬರಬೇಕೆಂದರೆ ಈ ಗುಣಗಳು ಇರಬೇಕು | ಜೀವನ ಮತ್ತು ಕೆಲಸ

Does it mean working over weekends or finishing your work on Friday to enjoy the next two days with the family? Read on to know about the 9 habits you can inculcate for better productivity:
X
Desktop Bottom Promotion