For Quick Alerts
ALLOW NOTIFICATIONS  
For Daily Alerts

ಮೊನಾಲಿಸಾ ಬಗ್ಗೆ ಕುತೂಹಲ ಮೂಡಿಸುವ 9 ರಹಸ್ಯಗಳು

|

ಮೊನಾಲಿಸಾ ಪೇಯಿಟಿಂಗ್ ಬಗ್ಗೆ ಗೊತ್ತಿಲ್ಲದವರೇ ವಿರಳ. ಅರಸಿಕನನ್ನು ಸೆಳೆಯುವಂತಿದೆ ಮೊನಾಲಿಸಾಳ ನಗು. ಜಗತ್ತಿನ ಖ್ಯಾತ ಕಲಾವಿದನಾಗಿದ್ದ ಇಟಾಲಿಯ ಲಿಯೋನಾರ್ಡೊ ಡಾ ವಿಂಚಿಯ ಸುಪ್ರಸಿದ್ಧ ಕಲಾಕೃತಿ ಮೊನಾಲಿಸಾ . ಮೊನಾಲಿಸಾಳ ನಗುವಿನ ಹಿಂದಿರುವ ರಹಸ್ಯದಿಂದಾಗಿ ಆ ಚಿತ್ರಕಲೆ ನೋಡಲು ಅತ್ಯಂತ ಆಕರ್ಷೀಣಿಯವಾಗಿದೆ.

ಈ ಚಿತ್ರದ ಬಗ್ಗೆ ಅನೇಕ ದಂತ ಕತೆಗಳಿದ್ದು ಅವು ಆ ಚಿತ್ರದ ಬಗ್ಗೆ ಮತ್ತಷ್ಟು ತಿಳಿಯುವಂತೆ ಜನರಲ್ಲಿ ಕುತೂಹಲ ಮೂಡಿಸಿದೆ. ಈ ಮೊನಾಲಿಸಾ ಯಾರು ಎಂಬ ರಹಸ್ಯವನ್ನು ಬೇಧಿಸಲು ಅನೇಕ ಶತಮಾನಗಳಿಂದ ಪ್ರಯತ್ನ ನಡೆಯುತ್ತಿವೆ. ಈ ಪೇಯಿಟಿಂಗ್ ಲಿಯೋನಾರ್ಡೊ ಡಾ ವಿಂಚಿ ಮರಣ ಹೊಂದಿ 500 ವರ್ಷಗಳು ಕಳೆದರೂ ಇದರ ಜನಪ್ರಿಯತೆ ಹೆಚ್ಚಾಯಿತೇ ಹೊರತು ಕಮ್ಮಿಯಾಗಲಿಲ್ಲ.

ಈ ಮೊನಾಲಿಸಾ ಹೆಣ್ಣಾ? ಗಂಡಾ? ಲಿಯೋನಾರ್ಡೊ ಡಾ ವಿಂಚಿ ತಾವು ಹೋದ ಕಡೆಯೆಲ್ಲಾ ಇದನ್ನು ಜೊತೆಯಲ್ಲಿಯೇ ಏಕೆ ಕೊಂಡೊಯ್ಯುತ್ತಿದ್ದರು? ಈ ರೀತಿಯ ಅನೇಕ ಕುತೂಹಲಗಳಿಗೆ. ಈ ರೀತಿ ಈ ಕೆಳಗಿನ ಅನೇಕ ಕುತೂಹಲಗಳಿಗೆ ಇನ್ನೂ ಉತ್ತರ ದೊರೆತಿಲ್ಲ.

ಮೊನಾಲಿಸಾ ಯಾರು?

ಮೊನಾಲಿಸಾ ಯಾರು?

ಇತಿಹಾಸದ ಪ್ರಕಾರ ಮೊನಾಲಿಸಾ ಫ್ಲೋರನ್ ಟೈನೆ ಎಂಬ ವ್ಯಕ್ತಿಯ ಹೆಂಡತಿ. ನಿಜವಾದ ಹೆಸರು ಲಿಸಾ ಡೆಲ್ ಜಿಯೋಕೊನೊಡೊ. ಆದರೆ ಇವರ ಪೇಯಿಟಿಂಗ್ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ನಗುವಿನಿ ಹಿಂದಿನ ರಹಸ್ಯ

ನಗುವಿನಿ ಹಿಂದಿನ ರಹಸ್ಯ

ಮೊನಾಲಿಸಾಳ ಚಿತ್ರ ನೋಟಿದವರಿಗೆ ಮೊನಾಲಿಸಾಳ ತುಟಿಯಲ್ಲಿ ನುಗು ಮತ್ತು ಕಣ್ಣುಗಳಲ್ಲಿ ದುಃಖದ ಛಾಯೆಯನ್ನು ಕಾಣಬಹುದು. ಮೊನಾಲಿಸಾಳ ಈ ನಗುವಿನ ಹಿಂದಿನ ಅರ್ಥವೇನು ಅನ್ನುವುದು ಇದುವರೆಗೂ ತಿಳಿದು ಬಂದಿಲ್ಲ.

ಮೊನಾಲಿಸಾ ಗರ್ಭಿಣಿಯಾಗಿದ್ದಳೆ?

ಮೊನಾಲಿಸಾ ಗರ್ಭಿಣಿಯಾಗಿದ್ದಳೆ?

ಚಿತ್ರದಲ್ಲಿ ಕಾಣುವ ಮೊನಾಲಿಸಾ ಗರ್ಭಿಣಿಯಂತೆ ತೋರುವುದಿಲ್ಲ. ಆದರೆ ನಿಜವಾದ ಮೊನಾಲಿಸಾಳನ್ನು ಅನ್ನು ಪೇಯಿಂಟ್ ಮಾಡಿದಾಗ ಅವರು ಗರ್ಭಿಣಿಯಾಗಿದ್ದರು. ಹಾಗಾದರೆ ಈ ಮೊನಾಲಿಸಾ ಯಾರು?

ಮೊನಾಲಿಸಾ , ಇದು ಪುರುಷನ ಚಿತ್ರ

ಮೊನಾಲಿಸಾ , ಇದು ಪುರುಷನ ಚಿತ್ರ

ಹೆಚ್ಚಿನವರು ಈ ಚಿತ್ರದಲ್ಲಿರುವ ಮೊನಾಲಿಸಾ ಮಹಿಳೆಯಲ್ಲ, ಪುರುಷ! ಮೊನಾಲಿಸಾಳ ದೇಹದ ಆಕೃತಿ ನೋಡಿದರೆ ಆ ರೀತಿ ಅನಿಸುವುದು ಎಂದು ಹೇಳುತ್ತಾರೆ.

ಮೊನಾಲಿಸಾ ಲಿಯೋನಾರ್ಡೋರ ಅಮ್ಮ

ಮೊನಾಲಿಸಾ ಲಿಯೋನಾರ್ಡೋರ ಅಮ್ಮ

ಚಿತ್ರದಲ್ಲಿರುವ ಮೊನಾಲಿಸಾ ಲಿಯೋನಾರ್ಡ ರ ತಾಯಿ ಕತ್ರೀನಾ ಡಾ ವಿಂಚಿ. ತಾಯಿ ಮೇಲಿನ ಪ್ರೀತಿಯಿಂದ ಅವರು ಈ ಚಿತ್ರವನ್ನು ಬಿಡಿಸಿದರು.

 ಲಿಯೋನಾರ್ಡೋ ಮತ್ತು ಮೊನಾಲಿಸಾ ಬೇರೆ-ಬೇರೆಯಲ್ಲ

ಲಿಯೋನಾರ್ಡೋ ಮತ್ತು ಮೊನಾಲಿಸಾ ಬೇರೆ-ಬೇರೆಯಲ್ಲ

ಲಿಯೋನಾರ್ಡೋ ವಿಂಚಿಯ ಯೌವನದಲ್ಲಿ ಹೇಗಿರಬಹುದು ಅನ್ನುವ ಕಲ್ಪನೆಗೆ ಮತ್ತು ಮೊನಾಲಿಸಾ ಫೋಟೊಕ್ಕೆ ತುಂಬಾ ಹೊಂದಾಣಿಕೆಯಿದೆ. ಆದ್ದರಿಂದ ಇದು ಅವರು ಅವರದ್ದೇ ಗಡ್ಡ ಮೀಸೆ ಇಲ್ಲದ ಚಿತ್ರವನ್ನು ರಚಿಸಿರಬಹುದು ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತ ಪಡಿಸುತ್ತಾರೆ.

ಗಂಡು-ಹೆಣ್ಣಿನ ಮಿಶ್ರ ರೂಪ

ಗಂಡು-ಹೆಣ್ಣಿನ ಮಿಶ್ರ ರೂಪ

ಮೊನಾಲಿಸಾ ಗಂಡು-ಹೆಣ್ಣಿನ ಮಿಶ್ರ ರೂಪವಾಗಿದೆ. ಲ್ಯಾಟಿನ್ ಶಬ್ದ ಅಮೊನ್(ಪುರುಷ) ಮತ್ತು ಎಲಿಸಾ(ಮಹಿಳೆ)ವನ್ನು ಕೂಡಿಸಿದಾಗ ಮೊನಾಲಿಸಾ ಎಂದು ಬರುತ್ತದೆ.

ಗೋಲ್ಡನ್ ಟ್ರೈ ಆಂಗಲ್

ಗೋಲ್ಡನ್ ಟ್ರೈ ಆಂಗಲ್

ಗೋಲ್ಡನ್ ಟ್ರೈ ಆಂಗಲ್ (golden try angle) ಫೋಟೊಗ್ರಫಿಯಲ್ಲಿರುವ ಮುಖ್ಯವಾದ ರೂಲ್ಸ್ ಗಳಲ್ಲಿ ಒಂದು. ಸಮಸೂತ್ರತೆಯನ್ನು (ಹೊಂದಿಕೆ) ಮೊನಾಲಿಸಾಳ ಚಿತ್ರದಲ್ಲಿ ಕಾಣಬಹುದು. ಈ ಚಿತ್ರವನ್ನು ಯಾವುದೇ ಯಾವುದೇ ಕಡೆಯಿಂದ ನೋಡಿದರೂ ಮೊನಾಲಿಸಾ ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತದೆ.

ಏಕೆ ಹುಬ್ಬುಗಳಿಲ್ಲ?

ಏಕೆ ಹುಬ್ಬುಗಳಿಲ್ಲ?

ಮೊನಾಲಿಸಾಳ ಚಿತ್ರದಲ್ಲಿ ಹುಬ್ಬಿಲ್ಲ. ಮುಖದಲ್ಲಿ ಯಾವುದೇ ಕೂದಲು ಇಲ್ಲ. ಆದರೆ ಕೆಲ ಇತಿಹಾಸ ತಜ್ಞರ ಪ್ರಕಾರ 16ನೇ ಶತಮಾನದಲ್ಲಿ ಶ್ರೀಮಂತ ಮನೆತನದ ಸ್ತ್ರೀಯರು ಹುಬ್ಬು ಮತ್ತು ಮುಖದ ಕೂದಲನ್ನು ಸಂಪೂರ್ಣ ತೆಗೆಯುವುದು ಫ್ಯಾಷನ್ ಅಗಿತ್ತು.

English summary

9 Conspiracy Theories About Mona Lisa | ಮೊನಾಲಿಸಾಳ ಬಗ್ಗೆ ಕುತೂಹಲ ಮೂಡಿಸುವ 9 ರಹಸ್ಯಗಳು

The Mona Lisa is also famous because it is rumoured to be legendary painter Leonardo Da Vinci's favourite work. In fact, he carried it wherever he went. This painting's proximity to its creator has given rise to many conspiracy theories.
X
Desktop Bottom Promotion