For Quick Alerts
ALLOW NOTIFICATIONS  
For Daily Alerts

2014ರಲ್ಲಿ ಈ 7 ಸಮಸ್ಯೆಗಳಿಗೆ ಪರಿಹಾರ ಸಿಗಬಹುದೇ?

|

ಸಮಸ್ಯೆಯಿಲ್ಲದ ವ್ಯಕ್ತಿಯೇ ಈ ಪ್ರಪಂಚದಲ್ಲಿ ಇರುವುದಿಲ್ಲ. ಪ್ರತಿನಿತ್ಯ ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಲೇ ಬೇಕಾಗುತ್ತದೆ. ಕೆಲವೊಂದು ಸಮಸ್ಯೆಗಳು ಇದೂ ಒಂದು ಸಮಸ್ಯೆನಾ? ಎಂದು ಅನಿಸಿದರೂ ಆ ಸಣ್ಣ ಪುಟ್ಟ ಸಮಸ್ಯೆಗಳೇ ನಮ್ಮನ್ನು ತುಂಬಾ ಚಿಂತೆಗೀಡು ಮಾಡುತ್ತದೆ.

ಇಲ್ಲಿ ನಾನು ಹೇಳ ಹೊರಟಿರುವುದು ಭಾರತ, ಪಾಕ್ ನಡುವೆ ಇರುವ ಗಡಿ ಸಮಸ್ಯೆಯಲ್ಲ. ಇಲ್ಲಿ ಹೇಳಿರುವುದು ನಮ್ಮೆಲ್ಲರ ಜೀವನದಲ್ಲಿ ಕಂಡು ಬರುವ ತಮಾಷೆ ಎಂದು ಅನಿಸುವ ಸೀರಿಯಸ್ ಸಮಸ್ಯೆಗಳ ಬಗ್ಗೆ. ಬನ್ನಿ, ನಮ್ಮನ್ನು ಅಷ್ಟೊಂದು ಚಿಂತೆಗೀಡು ಮಾಡುವ ಆ ಸಮಸ್ಯೆಗಳು ಯಾವುದೆಂದು ನೋಡಿಯೇ ಬಿಡೋಣ:

1. ಶಾಂಪೇನ್ ಬಾಟಲ್ ನ ಮುಚ್ಚಳ ಬಿಚ್ಚುವುದು

1. ಶಾಂಪೇನ್ ಬಾಟಲ್ ನ ಮುಚ್ಚಳ ಬಿಚ್ಚುವುದು

ಶಾಂಪೇನ್ ಬೆಲೆ ಬಾಳುವ ಮದ್ಯ. ಇದರ ಮುಚ್ಚಳವನ್ನು ಬಿಚ್ಚುವುದು ಸುಲಭದ ಕೆಲಸವಲ್ಲ, ಹಾಗೇ ತೆಗೆದಾಗ ಶಾಂಪೇನ್ ಸ್ವಲ್ಪ ಹೊರಚೆಲ್ಲುತ್ತದೆ, ಅಷ್ಟಂದು ಬೆಲೆಕೊಟ್ಟು ತೆಗೆದುಕೊಳ್ಳುವ ಚೆಲ್ಲುವಾಗ ಶಾಂಪೇನ್ ಪ್ರಿಯರ ಮನಸ್ಸಿಗೆ ಹೇಗಾಗ ಬೇಡ, ಆದ್ದರಿಂದ ಅದರ ಮುಚ್ಚಳವನ್ನು ಸುಲಭವಾಗಿ ತೆಗೆಯವಂತಾಗಬೇಕು ಅನ್ನುವದೇ ಶಾಂಪೇನ್ ಪ್ರಿಯರ ಕೋರಿಕೆ ಆಗಿದೆ.

2. ಸೋಪ್ ಬಾಟಲ್

2. ಸೋಪ್ ಬಾಟಲ್

ಸೋಪ್ ಬಾಟಲ್ ಬಳಸಿದರೆ ಸೋಪ್ ನೀರಿನಲ್ಲಿ ವ್ಯರ್ಥವಾಗುವುದಿಲ್ಲವೆಂದು ಸೋಪ್ ಲಿಕ್ವಿಡ್ ಬಳಸುತ್ತೇವೆ. ಆದರೆ ಸೋಪ್ ಬಾಟಲ್ ಖಾಲಿಯಾದಾಗ ಅದರ ತಳದಲ್ಲಿ ಸ್ವಲ್ಪ ಸೋಪು ನಿಂತೇ ನಿಲ್ಲುತ್ತದೆ. ಹಾಗಾದರೆ ಬಾಟಲ್ ಸೋಪ್ ಮತ್ತು ಬಾರ್ ಸೋಪು ಎರಡೂ ಬಳಸಿದರೂ ಸ್ವಲ್ಪ ಸೋಪ್ ವೇಸ್ಟ್ ಆಗುತ್ತದೆ ಎಂದಾಯ್ತು ಅಲ್ಲವೇ?

3. ಮೊಬೈಲ್

3. ಮೊಬೈಲ್

ಇದರ ಬಗ್ಗೆ ಪ್ರತಿಯೊಬ್ಬರಲ್ಲೂ ವ್ಯಥೆ ಇದ್ದೇ ಇರುತ್ತದೆ. ಕೆಲವು ತಿಂಗಳಿನಿಂದ ದುಡ್ಡು ಒಟ್ಟು ಕೂಡಿಸಿ ಲೇಟಸ್ಟ್ ಮೊಬೈಲ್ ಕೊಂಡುಕೊಳ್ಳುತ್ತೇವೆ. ಆ ಮೊಬೈಲ್ ಕೊಂಡ ಎರಡೇ ತಿಂಗಳಿಗೆ ಹೊಸ ಮಾಡಲ್ ಬರುತ್ತದೆ, ನಮ್ಮ ಕೈಯಲ್ಲಿರುವುದು ಓಲ್ಡ್ ಮಾಡಲ್ ಆಗಿ ಬಿಡುತ್ತದೆ. ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲದ ಮಾತು. ಆದರೂ ನಮ್ಮ ಮೊಬೈಲ್ ಎರಡೇ ತಿಂಗಳಿಗೆ ಹಳೆಯ ಮಾಡಲ್ ಆದರೆ ಮನಸ್ಸಿಗೆ ಹೇಗಾಗ ಬೇಡ ಅಲ್ವಾ?

4. ಫೇಸ್ ಬುಕ್

4. ಫೇಸ್ ಬುಕ್

PDA(public display of affection) ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರ ತರುವಂತೆ ವರ್ತಿಸಬಾರದು ಎಂಬ ನೀತಿ ಈ ಸಮಾಜದಲ್ಲಿದೆ. ಆದರೆ ಫೇಸ್ ಬುಕ್ ನಲ್ಲಿರುವ hug, pokes ಈ ರೀತಿಯ ಅಪ್ಲಿಕೇಷನ್ ಗಳು ಮುಜುಗರ ತರುತ್ತದೆ. ಇದಕ್ಕೆ ಯಾವುದೇ ಪರಿಹಾರವಿಲ್ಲವೇ?

5. ಚಿಕನ್ ಸ್ಯಾಂಡ್ ವಿಚ್

5. ಚಿಕನ್ ಸ್ಯಾಂಡ್ ವಿಚ್

ಚಿಕನ್ ಪ್ರಿಯರು ಚಿಕನ್ ಸ್ಯಾಂಡ್ ವಿಚ್ ಕೊಂಡು ತಿಂದರೆ ನಿರಾಸೆ ಉಂಟಾಗುವುದು ಸಹಜ. ಏಕೆಂದರೆ ಚಿಕನ್ ಸ್ಯಾಂಡ್ ವಿಚ್ ನಲ್ಲಿ ಸ್ವಲ್ಪ ಮಾತ್ರ ಚಿಕನ್ ಇರುತ್ತದೆ. ಇದನ್ನು ತಿಂದವನಿಗೆ ಈ ಬ್ರೆಡ್ ತಿನ್ನುವ ಬದಲು, ಇದೇ ದುಡ್ಡಿನಲ್ಲಿ ಒಂದು ಪ್ಲೇಟ್ ಚಿಕನ್ ಕಬಾಬ್ ತಿನ್ನಬಹುದಾಗಿತ್ತು ಎಂದು ಅನಿಸುವುದು ಸಹಜ.

6. ಬ್ರಿಟಿಷ್ ಇಂಗ್ಲೀಷ್ ಮತ್ತು ಮೈಕ್ರೋಸಾಫ್ಟ್

6. ಬ್ರಿಟಿಷ್ ಇಂಗ್ಲೀಷ್ ಮತ್ತು ಮೈಕ್ರೋಸಾಫ್ಟ್

ಬ್ರಿಟಿಷ್ ಇಂಗ್ಲೀಷ್ ಅನ್ನು ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಬರೆಯುವುದು ಕಷ್ಟ. ಕಂಪ್ಯೂಟರ್ ನಲ್ಲಿ ಯು ಎಸ್ ಇಂಗ್ಲೀಷ್ ಅಕ್ಷರಗಳದೇ ಪ್ರಾಬಲ್ಯ.

7. ಟಚ್ ಸ್ಕ್ರೀನ್

7. ಟಚ್ ಸ್ಕ್ರೀನ್

ಟಚ್ ಸ್ಕ್ರೀನ್ ಮೊಬೈಲ್ ಬಳಸುವುದನ್ನು ನಮ್ಮಲ್ಲಿ ಹೆಚ್ಚಿನವರು ಇಷ್ಟಪಡುತ್ತೇವೆ. ಆದರೆ ಇದು ಮಾಡುವ ಅವಾಂತರ ಇದೆಯೆಲ್ಲಾ, ಲವರ್ ಗೆ ಕಳಿಸುವ ಮೆಸೇಜ್ ತಪ್ಪಿ ಬಾಸ್ ಗೆ ಹೋದರೂ ಹೋದಿತು. ಟಚ್ ಸ್ಕ್ರೀನ್ ಬಿ ಕೇರ್ ಫುಲ್.

English summary

7 Problems That Need Immediate Solution In 2014

Here are 13 day to day problems of 2013, that we must pledge to solve. If you have any way of solving these problems then do share it with us.
X
Desktop Bottom Promotion