For Quick Alerts
ALLOW NOTIFICATIONS  
For Daily Alerts

ಕೆಲಸದ ಸ್ಥಳದಲ್ಲಿ ಮಾಡಲೇಬಾರದಂತಹ 5 ತಪ್ಪುಗಳು

|

" ಕಾಯಕವೇ ಕೈಲಾಸ" ಎಂದಿದ್ದಾರೆ ನಮ್ಮ ಬಸವಣ್ಣನವರು. ಇದನ್ನು ಖ್ಯಾತ ಲೇಖಕ ಫಾಲೋ ಕೊಯೆಲ್ಹೊ ಸಹ ತಮ್ಮ ಜಗತ್‍ಪ್ರಸಿದ್ಧ " ಅಲ್‍ಕೆಮಿಸ್ಟ್" ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ. ಅವರು ಇದನ್ನು ನಿಯತಿ (ಕನ್ನಡದ ಸಮಾನಾರ್ಥ) ಎಂಬ ಪದದಿಂದ ಕರೆದಿದ್ದಾರೆ. ನಮ್ಮ ಜೀವನದ ಬಹುಪಾಲು ಸಮಯವನ್ನು ನಾವು ಕೆಲಸ ಮಾಡುತ್ತ ಕಳೆಯುತ್ತೇವೆ. ಲೆಕ್ಕ ಹಾಕಿ ಪ್ರತಿದಿನ ಅಂದಾಜು ಅರ್ಧಕ್ಕಿಂತ ಹೆಚ್ಚು ಕಾಲ ನಾವು ಕೆಲಸದಲ್ಲಿ ಕಳೆಯುತ್ತೇವೆ.

ವಾರಕ್ಕೆ ಸುಮಾರು 40 ಗಂಟೆಗಳು ನಾವು ಹೀಗೆ ಕಾಲ ಕಳೆಯುತ್ತೇವೆ. ಈ ಸಮಯದಲ್ಲಿ ನಮ್ಮ ಮಾನವ ಸಹಜ ಗುಣಗಳು ಕೆಲವು ತಪ್ಪುಗಳನ್ನು ಮಾಡಿಬಿಡುತ್ತವೆ. ತಪ್ಪು ಆದ ನಂತರ ಪ್ರಾಯಶ್ಚಿತ ಅನುಭವಿಸಿ ಏನು ಫಲ? ಅದಕ್ಕೆ ಅದನ್ನು ಮೊದಲೆ ತಿಳಿದು ತಿದ್ದಿಕೊಳ್ಳುವುದು ಜಾಣತನ. ನೀವು ಕೆಲಸದ ಸ್ಥಳದಲ್ಲಿ ಮಾಡಲೆಬಾರದಂತಹ 5 ತಪ್ಪುಗಳನ್ನು ನಾವು ಇಲ್ಲಿ ನೀಡಿದ್ದೇವೆ ಓದಿ, ನಿಮ್ಮಲ್ಲಿ ಆ ತಪ್ಪುಗಳಿದ್ದರೆ ತಿದ್ದಿಕೊಳ್ಳಿ. ಇಲ್ಲವಾದಲ್ಲಿ ತಿಳಿದುಕೊಂಡು ಭವಿಷ್ಯದಲ್ಲಿ ಇದನ್ನು ಪಾಲಿಸಿ.

ಗಟ್ಟಿಯಾಗಿ ಮಾತನಾಡಬೇಡಿ

ಗಟ್ಟಿಯಾಗಿ ಮಾತನಾಡಬೇಡಿ

ಕೆಲಸದ ಸ್ಥಳಕ್ಕೆ ಅಚಾನಕ್ ಆಗಿ ಒಂದು ಫೋನ್ ಬಂದಿತು. ಅದಕ್ಕಾಗಿ ನಿಮ್ಮ ಧ್ವನಿ ಇಡೀ ಆಫೀಸಿಗೆ ಕೇಳಿಸುವಂತೆ ಕಿರುಚುತ್ತ ಮಾತನಾಡಬೇಕೆ? ಬೇಡ. ಇದರಿಂದ ಇತರರಿಗೆ ತೊಂದರೆಯುಂಟಾಗುತ್ತದೆ ಎಂಬ ಕನಿಷ್ಠ ಸೌಜನ್ಯ ನಿಮ್ಮಲ್ಲಿರಲಿ. ಹೀಗೆ ಮಾಡುವುದರಿಂದ ನೀವೊಬ್ಬ ಕೆಟ್ಟ ಸಹೋದ್ಯೋಗಿ ಎಂಬ ಅಭಿಪ್ರಾಯ ಸಹ ಇದರಿಂದ ಬರುವುದಿಲ್ಲ. ಕೆಲಸದ ಸ್ಥಳದಲ್ಲಿ ಮೆತ್ತಗೆ ಮಾತನಾಡಿ. ತೀರ ಅವಶ್ಯಕತೆ ಇದ್ದಲ್ಲಿ, ಫೋನಿನ ಸಿಗ್ನಲ್ ದೊರಕದೆ ಜೋರಾಗಿ ಮಾತನಾಡಬೇಕಾದಗ ಹೊರಗೆ ಹೋಗಿ ಅಥವಾ ಇತರರಿಂದ ದೂರ ಹೋಗಿ

2. ನಿಮ್ಮ ಆಪ್ತ ಮಿತ್ರನಿಗಾಗಿ ಹುಡುಕಬೇಡಿ

2. ನಿಮ್ಮ ಆಪ್ತ ಮಿತ್ರನಿಗಾಗಿ ಹುಡುಕಬೇಡಿ

ವೈಯುಕ್ತಿಕ ಮತ್ತು ವೃತ್ತಿಪರ ವಿಚಾರಗಳನ್ನು ಒಂದೇ ತಕ್ಕಡಿಯಲ್ಲಿ ತೂಗಬೇಡಿ. ಇವೆರಡು ಬೇರೆ ಬೇರೆ ವಿಚಾರಗಳೆಂಬುದನ್ನು ಮೊದಲು ಮನಗಾಣಿರಿ. ಇದನ್ನು ಆದಷ್ಟು ಬೇರೆ ಬೇರೆ ಇಟ್ಟಷ್ಟು ನಿಮಗೆ ಒಳ್ಳೆಯದು. ನಿಮ್ಮ ಸಹೋದ್ಯೋಗಿಯಲ್ಲಿ ಒಬ್ಬ ಆಪ್ತಮಿತ್ರನನ್ನು ಹುಡುಕಬೇಡಿ. ಇದು ಮುಂದೆ ನಿಮಗೆ ತೊಂದರೆಯನ್ನುಂಟು ಮಾಡುತ್ತದೆ.

3. ನಿಮ್ಮ ಬಾಸ್‍ನ ಕೆಳಗಿನ ಉದ್ಯೋಗಿಯಾಗಿ, ಸೇವಕನಾಗ ಬೇಡಿ.

3. ನಿಮ್ಮ ಬಾಸ್‍ನ ಕೆಳಗಿನ ಉದ್ಯೋಗಿಯಾಗಿ, ಸೇವಕನಾಗ ಬೇಡಿ.

ಮೊದಲ ಬಾರಿಗೆ ಕೆಲಸ ಮಾಡುವವರಾದಲ್ಲಿ ಪರವಾಗಿಲ್ಲ. ಸ್ವಲ್ಪ ಹಳಬರಾದಲ್ಲಿ ಯಾವಾಗಲು ನಿಮ್ಮ ಬಾಸ್ ಜೊತೆಯಲ್ಲಿ ತುಂಬಾ ಸಲುಗೆಯಿಂದ ಅಥವಾ ಅವರು ಹೇಳಿದಂತೆ ಕೇಳಿ ಇತರರ ಕಣ್ಣಲ್ಲಿ ನಿಕೃಷ್ಠರಾಗಬೇಡಿ. ನಿಮ್ಮ ಸಹೋದ್ಯೋಗಿ ನಿಮ್ಮನ್ನು ಬಕೆಟ್, ಸೌಟು, ಚಮಚ ಮುಂತಾದ ವಸ್ತುಗಳೊಂದಿಗೆ ಹೋಲಿಸುವ ಮಟ್ಟಕ್ಕೆ ನೀವು ಇಳಿಯದಿದ್ದಲ್ಲಿ ನಿಮಗೆ ಉತ್ತಮ. ಸ್ವಲ್ಪ ಯೋಚಿಸಿ ನಿಮ್ಮ ಶಾಲಾ ದಿನಗಳಲ್ಲಿ ಶಿಕ್ಷಕರ ಬಳಿಯಲ್ಲಿ ನಿಮ್ಮ ಮೇಲೆ ಚಾಡಿ ಹೇಳುತ್ತಿದ್ದ, ಆ ಮೊದಲ ಬೆಂಚಿನ ಹುಡುಗನನ್ನು ನೀವು ಹೇಗೆ ಕರೆಯುತ್ತಿದ್ದಿರೀ ನೆನಪಿಸಿಕೊಳ್ಳಿ!

4. ಇತರರ ಕಂಪ್ಯೂಟರಿನಲ್ಲಿರುವ ವಿಷಯಗಳನ್ನು ಕದ್ದು ಓದುವುದು.

4. ಇತರರ ಕಂಪ್ಯೂಟರಿನಲ್ಲಿರುವ ವಿಷಯಗಳನ್ನು ಕದ್ದು ಓದುವುದು.

ನಮಗೆ ನಮ್ಮ ವಿಷಯಗಳಿಗಿಂತ ಇತರರ ಮೇಲೆಯೇ ಬಾರಿ ಕಣ್ಣು ಇರುತ್ತದೆ. ಕೆಲವರು ಇದನ್ನು ತಮಗೆ ಅರಿವಿಲ್ಲದೆಯೆ ಮಾಡುತ್ತಿರುತ್ತಾರೆ. ಆದರೆ ಈ ರೀತಿ ಇಣುಕಿ, ಕದ್ದು ಅಥವಾ ಕಳ್ಳನೋಟದಿಂದ ಇತರರ ಕಂಪ್ಯೂಟರಿನಲ್ಲಿರುವ ಈ ಮೇಲ್, ಸರ್ಫಿಂಗ್ ಮುಂತಾದವುಗಳನ್ನು ಓದುವುದು ಒಳ್ಳೆಯ ಬೆಳವಣಿಗೆಯಲ್ಲ. ಪ್ರತಿಯೊಬ್ಬರಿಗು ಕೆಲವೊಂದು ವೈಯುಕ್ತಿಕ ವಿಚಾರಗಳು ಇರುತ್ತವೆ. ಅವುಗಳನ್ನು ಗೌರವಿಸುವುದನ್ನು ಕಲಿಯಿರಿ. ನಿಮ್ಮ ವೈಯುಕ್ತಿಕ ವಿಚಾರಗಳಿಗೆ ಇತರರು ಗೌರವವನ್ನು ವ್ಯಕ್ತಪಡಿಸುವಾಗ ನೀವೇಕೆ ಇತರರಿಗೆ ವ್ಯಕ್ತಪಡಿಸಲು ಪ್ರಾರಂಭಿಸಿಲ್ಲ? ಇಂದೇ ಇದನ್ನು ಬಿಡಿ.

5. ಸಂಬಳದ ವಿಷಯವನ್ನು ಚರ್ಚಿಸಬೇಡಿ

5. ಸಂಬಳದ ವಿಷಯವನ್ನು ಚರ್ಚಿಸಬೇಡಿ

ಯಾರಿಗೆ ಆಗಲಿ ಸಂಬಳವನ್ನು ಚರ್ಚಿಸುವುದು ಬೇಡವಾದ ವಿಷಯವಾಗಿರುತ್ತದೆ. ಅದು ಅವರಿಗೆ ಸಂಬಳ ಹೆಚ್ಚಿಗೆ ಬರುತ್ತಿರಲಿ ಅಥವಾ ಕಡಿಮೆ ಬರುತ್ತಿರಲಿ. ಹಾಗಾಗಿ ಕೆಲಸದ ಸ್ಥಳದಲ್ಲಿ ಸಂಬಳದ ಕುರಿತಾಗಿ ಯಾವುದೇ ಕಾರಣಕ್ಕು ಮಾತನಾಡಲೆ ಬೇಡಿ. ನಿಮಗೆ ಸಂಬಂಧಪಡದೆ ಇರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕು ಈ ಹಣಕಾಸಿನ ವಿಚಾರಗಳ ಕುರಿತು ಮಾತನಾಡಲು ಹೋಗಬೇಡಿ. ಇದು ಕೆಲಸದಲ್ಲಿ ನಿಮ್ಮ ಏಕಾಗ್ರತೆಗೆ ಭಂಗ ತರುವ ಅಪಾಯಕಾರಿ ವಿಷಯ ಮರೆಯಬೇಡಿ.

Read more about: work life ಕೆಲಸ ಜೀವನ
English summary

5 Things You Should Not Do At Work

You spend half your day and more than 40 hours a week in office, so it's obvious that you will get friendly with your colleagues. However tiny little things can infuriate your colleague, make sure you are not doing any of these.
Story first published: Tuesday, September 17, 2013, 10:12 [IST]
X
Desktop Bottom Promotion