For Quick Alerts
ALLOW NOTIFICATIONS  
For Daily Alerts

ಉತ್ತಮ ಜೀವನಕ್ಕಾಗಿ ಈ ಹೂಡಿಕೆಗಳಿಗೆ ನೀವು ರೆಡಿನಾ?

By ಲೇಖಕ
|

ನಮ್ಮ ಜೀವನದಲ್ಲಿ ಬರುವ ಅನೇಕ ಸಮಸ್ಯೆಗಳಿಗೆ ನಮ್ಮಲ್ಲಿ ಸರಿಯಾದ ಪ್ಲಾನಿಂಗ್ ಇಲ್ಲದಿರುವುದು ಕಾರಣ. ಜೀವನ ಹೇಗಾದರೂ ನಡೆಯುತ್ತದೆ ಎನ್ನುವ ಮನೋಭಾವ ಇರುವವನಿಗೆ ಜೀವನದಲ್ಲಿ ಬರುವ ಕಷ್ಟಗಳು ಸವಾಲಾಗುವುದು. ಅದೇ ಮುಂದಿನ ಜೀವನಕ್ಕಾಗಿ ಈ ದಿನ ಯೋಚಿಸುವವನು ಭವಿಷ್ಯದಲ್ಲಿ ಕಷ್ಟಗಳನ್ನು ಸುಲಭವಾಗಿ ಎದುರಿಸುತ್ತಾನೆ. ಆದರೆ ಈ ವಿಷಯವನ್ನು ನಾವು ಯೋಚಿಸುವುದೇ ಇಲ್ಲ.

ಇದು ಬರೀ ಹಣಕಾಸಿನ ಬಗ್ಗೆ ಅಂತ ಯೋಚನೆ ಮಾಡಬೇಡಿ. ಹಣಕಾಸು ಮಾತ್ರವಲ್ಲ, ಉತ್ತಮ ಆರೋಗ್ಯಕ್ಕಾಗಿಯೂ ಹೂಡಿಕೆ ಮಾಡಬೇಕಾಗುತ್ತದೆ. ನಮ್ಮ ಚಿಕ್ಕ ವಯಸ್ಸಿನಲ್ಲಿಯೇ ಆರೋಗ್ಯಕರ ಜೀವನವನ್ನು ನಡೆಸಲು ಎಲ್ಲಾ ವಿಧಗಳಲ್ಲಿ ಹೂಡಿಕೆಯನ್ನು ಮಾಡಿದರೆ ಉತ್ತಮವಾದ ಜೀವನ ಶೈಲಿ ನಡೆಸುವುದು ಸುಲಭವಾಗುವುದು. ಯಾವುದೇ ಹೂಡಿಕೆಗಳು ನಮ್ಮ ವಸ್ತು ನಿಷ್ಠ ಭವಿಷ್ಯವನ್ನು ಉತ್ತಮವಾಗಿಸುವಲ್ಲಿ ಸಹಕಾರಿಯಾಗುತ್ತವೆ ಎಂಬುದನ್ನು ಮರೆಯದಿರಿ.

ಈ ಕೆಳಗಿನ ಹೂಡಿಕೆಗಳು ನಿಮಗೊಂದು ಉತ್ತಮ ಜೀವನ ಶೈಲಿ ರೂಪಿಸಿಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ:

1. ಹೆಲ್ತ್ ಇನ್ಸೂರೆನ್ಸ್ / ಆರೋಗ್ಯ ವಿಮೆ

1. ಹೆಲ್ತ್ ಇನ್ಸೂರೆನ್ಸ್ / ಆರೋಗ್ಯ ವಿಮೆ

ನಿಮ್ಮಲ್ಲಿ ಆರೋಗ್ಯ ವಿಮೆ ಇಲ್ಲದಿದ್ದರೆ ಮೊದಲು ಮಾಡಿಸಿ. ಯಾರ ಆರೋಗ್ಯ ಯಾವ ಸಮಯದಲ್ಲಿ ಹದಗೆಡುವುದೋ ಹೇಳುವುದು ಅಸಾಧ್ಯ. ಆದ್ದರಿಂದ ಆರೋಗ್ಯ ವಿಮೆ ಅತ್ಯಂತ ಅವಶ್ಯಕವಾದ ಅಂಶವಾಗಿದೆ.

2. ಆರೋಗ್ಯ ತಪಾಸಣೆ

2. ಆರೋಗ್ಯ ತಪಾಸಣೆ

ನಿಮ್ಮ ಆರೋಗ್ಯವು ಸುಸ್ಥಿತಿಯಲ್ಲಿದೆಯೇ ಎಂದು ತಿಳಿಯಲು ಕಾಯಿಲೆ ಬರದಿದ್ದರೂ ಆಗಾಗ ಸಾಮಾನ್ಯ ತಪಾಸಣೆಯನ್ನು ಮಾಡಿಸುತ್ತಿರಿ. ಇದರಿಂದ ಮುಂಬರಲಿರುವ ಯಾವುದೇ ಆರೋಗ್ಯ ಸಮಸ್ಯೆಗಳಿಂದ ನೀವು ದೂರವಿರಲು ಸಾಧ್ಯ.

3. ಹಣ್ಣುಗಳು

3. ಹಣ್ಣುಗಳು

ಹಣ್ಣುಗಳು ಹಲವಾರು ಆರೋಗ್ಯಕರ ಪೋಷಕಾಂಶಗಳನ್ನು ಒದಗಿಸುತ್ತದೆ. ದಿನವೂ ಹಣ್ಣನ್ನು ಸೇವಿಸುವುದು ಉತ್ತಮ. ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಹಣ್ಣುಗಳೆಂದರೆ, ಬಾಳೆಹಣ್ಣು. ದಿನವೂ ಒಂದೊಂದು ಬಾಳೆಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

4. ಕಾರ್ಬೋಹೈಡ್ರೇಟ್ಸ್

4. ಕಾರ್ಬೋಹೈಡ್ರೇಟ್ಸ್

ಕಾರ್ಬೋಹೈಡ್ರೇಟ್ಸ್ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತವೆ. ಇದು ಕ್ಯಾನ್ಸರ್, ಡಯಾಬಿಟಿಸ್ (ಸಕ್ಕರೆ ಖಾಯಿಲೆ). ಹಾಗೂ ಹೃದಯ ಸಂಬಂಧಿ ಖಾಯಿಲೆಗಳಿಂದ ದೂರವಿಡುತ್ತದೆ.

5. ಬೆಳಗಿನ ಉಪಹಾರ

5. ಬೆಳಗಿನ ಉಪಹಾರ

ಪ್ರತಿದಿನ ಬೆಳಗಿನ ಉಪಹಾರವನ್ನು ತಪ್ಪದೇ ಸೇವಿಸಿ. ಇದು ನಿಮ್ಮ ದೇಹದ ಆರೋಗ್ಯವನ್ನು ಮಾತ್ರವಲ್ಲದೇ ನೀವು ದಿನವಿಡಿ ಲವಲವಿಕೆಯಿಂದಿರುವಂತೆ ಮಾಡುತ್ತದೆ.

6. ಆರೋಗ್ಯಕರ ಎಣ್ಣೆ ಬಳಕೆ

6. ಆರೋಗ್ಯಕರ ಎಣ್ಣೆ ಬಳಕೆ

ಆರೋಗ್ಯಕರವಾದ ಆಲೀವ್ ಎಣ್ಣೆ, ತೆಂಗಿನೆಣ್ಣೆ, ಕ್ಯಾನೋಲ್ ನಂತಹ ಎಣ್ಣೆಗಳನ್ನೇ ಬಳಸಿ.ಪರಿಷ್ಕರಿಸಿದ ಎಣ್ಣೆಯನ್ನು ಹೆಚ್ಚು ಉಪಯೋಗಿಸಬೇಡಿ. ಆರೋಗ್ಯಕರ ಎಣ್ಣೆಯ ಉಪಯೋಗ ಆರೋಗ್ಯಕರ ಊಟಕ್ಕೆ ಬುನಾದಿ.

7. ಬಾಯಿ ಶೂಚಿಗೆ ಗುಣ ಮಟ್ಟದ ಸಾಧನಗಳು

7. ಬಾಯಿ ಶೂಚಿಗೆ ಗುಣ ಮಟ್ಟದ ಸಾಧನಗಳು

ಟೂಥ್ ಬ್ರೆಷ್, ಟಂಗ್ ಕ್ಸಿನರ್ ಮೊದಲಾದ ಉಪಕರಣಗಳನ್ನು ಬದಲಾಯಿಸುತ್ತಿರಿ. ಮತ್ತು ನಿಮ್ಮ ದಂತ ವೈದ್ಯರು ಸಲಹೆ ನೀಡಿದ್ದನ್ನೇ ಬಳಸಿ. ತುಂಬಾ ಸಮಯದಿಂದ ಬಳಸುತ್ತಿರುವ ಟೂಥ್ ಬ್ರೆಷ್ ತನ್ನ ಸ್ವಚ್ಛಗೊಳಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಆದ್ದರಿಂದ ಒಳ್ಳೆಯ ಟೂಥ್ ಬ್ರೆಷ್ ಹಾಗೂ ಪೇಸ್ಟ್ ಗಳನ್ನು ಬಳಸಿ.

8. ಯು.ವಿ ಸನ್ ಗ್ಲಾಸ್

8. ಯು.ವಿ ಸನ್ ಗ್ಲಾಸ್

ಉತ್ತಮ ಗುಣಮಟ್ಟದ ಕನ್ನಡಕಗಳನ್ನು ಬಳಸಿ. ಯು ವಿ ಸನ್ ಗ್ಲಾಸ್ ಸೂರ್ಯನ ನೇರಳಾತೀತ ಕಿರಣಗಳು ನಿಮ್ಮ ಕಣ್ಣಿಗೆ ಬೀಳುವುದನ್ನು ತಡೆದು ಕಣ್ಣಿಗೆ ರಕ್ಷಣೆ ನೀಡುತ್ತದೆ ಹಾಗೂ ನಿಮ್ಮ ನೋಟವನ್ನು ಉತ್ತಮಗೊಳಿಸುವುದಲ್ಲದೆ ನಿಮ್ಮ ಕಣ್ಣುಗಳ ಆರೋಗ್ಯಕ್ಕೂ ಉತ್ತಮ.

9. ಉತ್ತಮ ಹಾಸಿಗೆ

9. ಉತ್ತಮ ಹಾಸಿಗೆ

ಮಲಗುವ ಹಾಸಿಗೆಯೂ ಉತ್ತಮವಾಗಿದ್ದರೆ ನಿಮ್ಮ ದಣಿದ ದೇಹಕ್ಕೆ ವಿಶ್ರಾಂತಿಯನ್ನು ಒದಗಿಸುತ್ತದೆ. ಅಲ್ಲದೇ ಇಂತಹ ಬೆಡ್/ ಹಾಸಿಗೆಯಲ್ಲಿ ಮಲಗುವುದರಿಂದ ಚೆನ್ನಾಗಿ ನಿದ್ದೆ ಬರುವುದಲ್ಲದೆ ಬೆನ್ನು ನೋವುಗಳಂತಹ ಸಮಸ್ಯೆಗಳೂ ನಿಮ್ಮನ್ನು ಬಾಧಿಸುವುದಿಲ್ಲ.

10. ಸನ್ ಸ್ಕ್ರೀನ್

10. ಸನ್ ಸ್ಕ್ರೀನ್

ಉತ್ತಮವಾದ ಸನ್ ಸ್ಕ್ರೀನ್ ಗಳನ್ನು ಬಳಸಿ. ಇವು ನಿಮ್ಮ ತ್ವಚೆಯನ್ನು ಬಿಸಿಲಿನಿಂದ ಕಾಪಾಡುವಲ್ಲಿ ಸಹಾಯ ಮಾಡುತ್ತವೆ.

11. ವ್ಯಾಯಾಮ ಮ್ಯಾಟ್ ಖರೀದಿಸಿ

11. ವ್ಯಾಯಾಮ ಮ್ಯಾಟ್ ಖರೀದಿಸಿ

ವ್ಯಾಯಾಮಕ್ಕೆ ಮ್ಯಾಟ್ ತೆಗೆದುಕೊಳ್ಳಿ. ಇದಕ್ಕೆ ಹಣ ಹಾಕಿದರೆ ನಿಮ್ಮ ಆರೋಗ್ಯ ವೃದ್ಧಿಸುವಲ್ಲಿ ಇದು ಸಹಾಯ ಮಾಡುತ್ತದೆ.

12. ಸ್ಪಾ ಚಿಕಿತ್ಸೆ

12. ಸ್ಪಾ ಚಿಕಿತ್ಸೆ

ಆಗಾಗ ಒಳ್ಳೆಯ ಮಸಾಜ್ ಕೇಂದ್ರಗಳಿಗೆ ಹೋಗಿ. ಈ ರೀತಿ ಮಾಡುವುದರಿಂದ ನಿಮ್ಮ ದೇಹದಲ್ಲಿ ದಣಿವು ಅಥವಾ ದೇಹದ ಯಾವುದೇ ಭಾಗದಲ್ಲಿ ಆಗಾಗ ನೋವು ಕಾಣಿಸಿಕೊಳ್ಳದೇ ಚೈತನ್ಯದಿಂದ ಇರುವಿರಿ.

13. ಕೆಲವು ಪ್ರಾಥಮಿಕ ವ್ಯಾಯಾಮ ಉಪಕರಣಗಳನ್ನು ಖರೀದಿಸಿ

13. ಕೆಲವು ಪ್ರಾಥಮಿಕ ವ್ಯಾಯಾಮ ಉಪಕರಣಗಳನ್ನು ಖರೀದಿಸಿ

ದಿನದಲ್ಲಿ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಉತ್ತಮ. ಆದರೆ ದಿನವೂ ಜಿಮ್ ಸೆಂಟರ್ ಗಳಿಗೆ ಹೋಗಲು ಸಾಧ್ಯವಾಗದೇ ಹೋಗಬಹುದು. ಆದ್ದರಿಂದ ನಿಮ್ಮ ಮನೆಯಲ್ಲಿಯೇ ವ್ಯಾಯಾಮಕ್ಕೆ ಅಗತ್ಯವಾದ ಉಪಕರಣಗಳನ್ನು ಇಡುವುದು ಒಳ್ಳೆಯದು.

14. ಪ್ರವಾಸ

14. ಪ್ರವಾಸ

ವಾರವಿಡೀ ದುಡಿದ ನಿಮಗೆ ದಣಿವಾರಿಸಿಕೊಳ್ಳಲು ಬದಲಾವಣೆಯ ಅಗತ್ಯವಿದೆ. ಆದರಿಂದ ನಿಮ್ಮವರ ಜೊತೆ ವಾರಾಂತ್ಯದಲ್ಲಿ ಹೊರಗಡೆ ಸುತ್ತಾಡಲು ಹೋಗಿ ಇದು ನಿಮ್ಮ ಮನಸ್ಸಿಗೂ ನೆಮ್ಮದಿಯನ್ನು ನೀಡುತ್ತದೆ.

15. ಆರೋಗ್ಯಕರ ಆಹಾರ

15. ಆರೋಗ್ಯಕರ ಆಹಾರ

ನಿಮ್ಮ ಆಹಾರದಲ್ಲಿ ತಾಜಾ ಹಣ್ಣು, ತರಕಾರಿಗಳನ್ನು ಸೇರಿಸಿ. ಇವು ನಿಮ್ಮ ಆರೋಗ್ಯವನ್ನು ನಿರಂತರವಾಗಿ ಉತ್ತಮವಾಗಿರಿಸುತ್ತದೆ.

16. ನಾರಿನಂಶವಿರುವ ಆಹಾರ

16. ನಾರಿನಂಶವಿರುವ ಆಹಾರ

ತಾಜಾ ಆಹಾರಗಳು ಧಾನ್ಯಗಳು ಸ್ಥೂಲಕಾಯ ಬರದಂತೆ ನಿಮ್ಮ ಮೈಕಟ್ಟನ್ನು ರಕ್ಷಣೆ ಮಾಡಿ ರೋಗಗಳಿಂದ ನಿಮ್ಮನ್ನು ದೂರವಿಡುತ್ತದೆ.

17. ಪೋಷಕಾಂಶ ಇರುವ ಆಹಾರ

17. ಪೋಷಕಾಂಶ ಇರುವ ಆಹಾರ

ನಿಮ್ಮ ದೇಹಕ್ಕೆ ಸರಿಯಾಗಿ ಪೋಷಕಾಂಶಗಳು ಸಿಗುತ್ತಿಲ್ಲವೆಂದಾದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ಪೂರಕ ವಸ್ತುಗಳ ಬಗ್ಗೆ ತಿಳಿದುಕೊಳ್ಳಿ.

18. ಸ್ವಿಮಿಂಗ್ ತರಬೇತಿ

18. ಸ್ವಿಮಿಂಗ್ ತರಬೇತಿ

ಈಜುಗಾರಿಕೆ ದೇಹಕ್ಕೆ ನೀಡುವ ಉತ್ತಮ ವ್ಯಾಯಾಮ. ಇದು ದೇಹವನ್ನು ಸದೃಢಗೊಳಿಸುವುದಲ್ಲದೇ ದೇಹದ ಸೌಂದರ್ಯವನ್ನೂ ಹೆಚ್ಚಿಸುತ್ತದೆ.

19. ಉತ್ತಮ ಗುಣಮಟ್ಟದ ಉತ್ಪನ್ನ

19. ಉತ್ತಮ ಗುಣಮಟ್ಟದ ಉತ್ಪನ್ನ

ರಾಸಾಯನಿಕ ಪದಾರ್ಥಗಳನ್ನು ಬಳಸಿ ತಯಾರಿಸಿದ ಉತ್ಪನ್ನಗಳನ್ನು ಹೆಚ್ಚು ಬಳಸಬೇಡಿ. ನಿಮ್ಮ ತ್ವಚೆಗೆ ಸರಿಹೊಂದುವಂತಹ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಬಳಸಿ.

20. ನಟ್ಸ್ ಮತ್ತು ಒಣ ಹಣ್ಣುಗಳು

20. ನಟ್ಸ್ ಮತ್ತು ಒಣ ಹಣ್ಣುಗಳು

ಬಾದಾಮಿ, ವಾಲ್ ನಟ್ಸ್ ಗಳಂತಹ ಒಣ ಹಣ್ಣುಗಳನ್ನು ಆಗಾಗ ಸೇವಿಸುತ್ತಿರಿ. ಇದು ನಿಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಮತ್ತು ಚರ್ಮವೂ ಆರೋಗ್ಯವಾಗಿರುತ್ತದೆ.

ಇಂತಹ ಕೆಲವು ದಿನದ ಜೀವನ ಕ್ರಮವನ್ನು ಅಳವಡಿಸಿಕೊಂಡರೆ ನಿಮ್ಮ ಜೀವನ ಶೈಲಿ ಸುಧಾರಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

English summary

20 little investments for good health | Lifestyle Anf Life | ಉತ್ತಮ ಜೀವನಕ್ಕಾಗಿ ಚಿಕ್ಕ-ಪುಟ್ಟ ಹೂಡಿಕೆ | ಜೀವನ ಶೈಲಿ ಮತ್ತು ಜೀವನ

A healthy lifestyle is easier to achieve and maintain if one makes regular investments in all aspects from healthy living from a young age. As with any kind of investments, the objective is to make a better future possible through present day action.
X
Desktop Bottom Promotion