For Quick Alerts
ALLOW NOTIFICATIONS  
For Daily Alerts

ಫೇಮಸ್ ಬಾಲಿವುಡ್ ಸೆಲೆಬ್ರಿಟಿಗಳ ಇಷ್ಟದ ಆಹಾರಗಳು

By Super
|

ಸೆಲೆಬ್ರಿಟಿಗಳ ಆಹಾರಕ್ರಮದ ಬಗ್ಗೆ ಜನಸಾಮಾನ್ಯರಲ್ಲಿ ಅಧಿಕ ಕುತೂಹಲವಿರುತ್ತದೆ. ಅವರ ಸಪೂರವಾದ ಆಕರ್ಷಕವಾದ ಮೈಮಾಟ ನೋಡುವಾಗ ಅವರು ಆಹಾರವನ್ನು ತುಂಬಾ ಹಿತಿ ಮಿತವಾಗಿ ತಿನ್ನುತ್ತಾರೆ, ಐಸ್ ಕ್ರೀಮ್ , ಚಾಕಲೇಟ್ ಈ ರೀತಿಯ ಆಹಾರಗಳನ್ನು ಮುಟ್ಟುವುದೇ ಇಲ್ಲ ಎಂದು ಭಾವಿಸುತ್ತೇವೆ. ಆದರೆ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್ ಈ ಪ್ರಸಿದ್ಧ ಬಾಲಿವುಡ್ ನಟರು ಇಷ್ಟಪಟ್ಟು ತಿನ್ನುವುದೇ ನಾನ್ ವೆಜ್ ಆಹಾರವನ್ನು, ಆದರೂ ತಮ್ಮ ವಯಸ್ಸನ್ನು ಮರೆ ಮಾಚುವ ಮೈಮಾಟ ಅವರಿಗಿದೆ, ಇದಕ್ಕೆ ಕಾರಣ ಅವರು ಸರಿಯಾಗಿ ವರ್ಕ್ ಔಟ್ ಮಾಡುತ್ತಿರುವುದು. ನಾವು ಚೆನ್ನಾಗಿ ತಿನ್ನುತ್ತೇವೆ, ಆದರೆ ವರ್ಕ್ ಔಟ್ ಮಾಡಲು ಹಿಂದೆ ಬೀಳುತ್ತೇವೆ, ಆದ್ದರಿಂದಲೇ ಅಡ್ಡಾದಿಡ್ಡಿ ಮೈ ಬೆಳೆದು ಬಿಡುತ್ತದೆ.

ದಪ್ಪಗಾಗುತ್ತೇವೆ ಎಂದು ನಮ್ಮ ಇಷ್ಟದ ಆಹಾರಗಳನ್ನು ದೂರ ಮಾಡುವ ಬದಲು, ಚೆನ್ನಾಗಿ ತಿಂದು ವರ್ಕ್ ಔಟ್ ಮಾಡಬೇಕು, ಆಗ ಆಕರ್ಷಕ ಮೈಕಟ್ಟನ್ನು ಉಳಿಸಿಕೊಳ್ಳಬಹುದು ಎನ್ನುವುದನ್ನು ಈ ಸೆಲೆಬ್ರಿಟಿಗಳನ್ನು ನೋಡಿದಾಗ ತಿಳಿಯುತ್ತದೆ. ಬಾಲಿವುಡ್ ಸೆಲೆಬ್ರಿಟಿಗಳ ಇಷ್ಟದ ಆಹಾರಗಳನ್ನು ತಿಳಿಯಲು ಸ್ಲೈಡ್ ನೋಡಿ:

1.ಸಲ್ಮಾನ್ ಖಾನ್ - ಬಿರಿಯಾನಿ

1.ಸಲ್ಮಾನ್ ಖಾನ್ - ಬಿರಿಯಾನಿ

ಭಾರತದಲ್ಲೇ ಉತ್ತರ ಭಾರತದ ಖಾರ ಮಿಶ್ರಿತ ಸುವಾಸನೆ ಭರಿತ ಪದಾರ್ಥಗಳು ಹೆಚ್ಚು ಪ್ರಖ್ಯಾತಿ.ಅದರಲ್ಲೂ ಸಲ್ಲೂ ಬಾಯ್ ಬಿರಿಯಾನಿಯನ್ನು ಹೆಚ್ಚು ಇಷ್ಟಪಡುತ್ತಾರೆ.ಯಾವುದೋ ಬಿರಿಯಾನಿಯಲ್ಲ ಅವರ ಅಮ್ಮ ಸಲ್ಮಾ ಮನೆಯಲ್ಲೇ ಮಾಡಿದ ಬಿರಿಯಾನಿ ಸಲ್ಮಾನ್ ಗೆ ಇಷ್ಟ.ಜೊತೆಗೆ ಕಬಾಬ್ ಮತ್ತು ಮೋದಕ ಕೂಡ ಆತನ ಇಷ್ಟದ ತಿನಿಸು.

2.ಸೋನಂ ಕಪೂರ್ - ಪಾವ್ ಬಾಜಿ

2.ಸೋನಂ ಕಪೂರ್ - ಪಾವ್ ಬಾಜಿ

ಎಲ್ಲರಿಗೂ ಸೋನಂ ಕಪೂರ್ ಚಾಕಲೇಟ್ ಎಷ್ಟು ಇಷ್ಟಪಡುತ್ತಾಳೆ ಎಂಬುದು ಗೊತ್ತು ಜೊತೆಗೆ ಆಕೆಗೆ ಪಾವ್ ಭಾಜಿ ಕೂಡ ಇಷ್ಟದ ತಿನಿಸು.ಆಕೆ ಪಂಜಾಬಿ ಆಗಿಯೂ ಕೂಡ ಬಂಗಾಳಿ ಅಡುಗೆಗಳಾದ ಶೋರ್ಷೆ ಲಿಶ್ ಮತ್ತು ಚೋಲರ್ ದಾಲ್ ಆಕೆಗೆ ಬಹಳ ಪ್ರೀತಿ.

3.ಬಿಪಾಶಾ ಬಸು - ಬಂಗಾಳಿ ಅಡುಗೆ

3.ಬಿಪಾಶಾ ಬಸು - ಬಂಗಾಳಿ ಅಡುಗೆ

ತಮ್ಮದೇ ಸಂಸ್ಕೃತಿಯ ಅಡುಗೆಯನ್ನು ಇಷ್ಟಪಡುವವರು ಬಿಪಾಶ ಬಸು.ಅಕ್ಕಿ ಪ್ರಾಧಾನ್ಯತೆ ಪಡೆದಿರುವ ಬಂಗಾಳಿಯಲ್ಲಿ ಹುಟ್ಟಿದ ಬಿಪಾಶ ಬಸು ಬಂಗಾಳಿ ಅಡುಗೆಯನ್ನು ಇಷ್ಟ ಪಡುತ್ತಾರೆ ಮತ್ತು ಅನ್ನದ ಪದಾರ್ಥಗಳು ಆಕೆಗೆ ಇಷ್ಟ.

4.ಕತ್ರಿನಾ ಕೈಫ್ - ಐಸ್ ಕ್ರೀಂ

4.ಕತ್ರಿನಾ ಕೈಫ್ - ಐಸ್ ಕ್ರೀಂ

ಯಾವಾಗಲೂ ಸುಂದರವಾಗಿ ಕಾಣಬೇಕಾಗಿರುವುದರಿಂದ ಸೆಲೆಬ್ರಿಟಿಗಳು ಸಾಕಷ್ಟು ಇಷ್ಟದ ಆಹಾರಗಳನ್ನು ತ್ಯಜಿಸಬೇಕಾಗುತ್ತದೆ.ಆದರೆ ಕತ್ರಿನಾ ಕೈಫ್ ಅವರ ಇಷ್ಟದ ಡೆಸರ್ಟ್ ಅನ್ನು ಯಾವಾಗಲು ತಿನ್ನುವುದನ್ನು ಬಿಡಲಾರರು.ಕತ್ರಿನಾಳ ಇಷ್ಟದ ಡೆಸರ್ಟ್ ಐಸ್ ಕ್ರೀಂ ಮತ್ತು ಸಿನ್ನಮೋನ್ ರೋಲ್ಸ್.

5.ಹೃತಿಕ್ ರೋಷನ್ - ಸಮೋಸ

5.ಹೃತಿಕ್ ರೋಷನ್ - ಸಮೋಸ

ಭಾರತದ ಎಲ್ಲರಿಗು ಇಷ್ಟವಾಗುವ ಖಾರದ ತಿಂಡಿ ಎಂದರೆ ಬಿಸಿ ಸಮೋಸ.ಹೃತಿಕ್ ರೋಷನ್ ಗೆ ಇದು ಬಹಳ ಇಷ್ಟದ ತಿಂಡಿ.ಹೃತಿಕ್ ಒಮ್ಮೆ ಕುಳಿತು ಡಜನ್ ಸಮೋಸ ತಿನ್ನಬಲ್ಲರು.

6.ಪ್ರಿಯಾಂಕಾ ಚೋಪ್ರಾ

6.ಪ್ರಿಯಾಂಕಾ ಚೋಪ್ರಾ

ಜೋಳದ ರೊಟ್ಟಿ ಮತ್ತು ಸಾರ್ಸೋನ್ ಕಾ ಸಾಗು ಪ್ರಿಯಾಂಕಾ ಚೋಪ್ರ ತೆಳು ಮೈಮಾಟವನ್ನು ಹೊಂದಿದವರು. ಹಾಗಂತ ಅವರು ಹಕ್ಕಿ ತಿಂದಂತೆ ತಿನ್ನಬಹುದು ಎಂದುಕೊಳ್ಳಬೇಡಿ.ಪ್ರಿಯಾಂಕಾಳಿಗೆ ತಿನ್ನುವುದೆಂದರೆ ಇಷ್ಟ.ಆದರೆ ಅವರಿಗೆ ತಿನ್ನುವುದೆಂದರೆ ಇಷ್ಟ ಅದರಲ್ಲೂ ಪಂಜಾಬಿ ಅಡುಗೆಯಾದ ಜೋಳದ ರೊಟ್ಟಿ ಮತ್ತು ಸಾರ್ಸೋನ್ ಕಾ ಸಾಗು ಎಂದರೆ ತುಂಬಾ ಅಚ್ಚುಮೆಚ್ಚು.ಅಂತರಾಷ್ಟ್ರೀಯ ಆಹಾರದಲ್ಲಿ ಅವಳಿಗೆ ಇಷ್ಟವಾದುದೆಂದರೆ ಲಸಂಗಾ.

7.ಶಾಹೀದ್ ಕಪೂರ್ - ಚೈನೀಸ್ ಅಡುಗೆಗಳು

7.ಶಾಹೀದ್ ಕಪೂರ್ - ಚೈನೀಸ್ ಅಡುಗೆಗಳು

ಶಾಹೀದ್ ಕಪೂರ್ ತಿನ್ನುವುದನ್ನು ಇಷ್ಟಪಡುತ್ತಾರೆ ಮತ್ತು ಆತ ಒಳ್ಳೆಯ ಅಡುಗೆ ಮಾಡುತ್ತಾರೆ.ಶಹೀದ್ ಸಸ್ಯಾಹಾರಿ ಮತ್ತು ಚೈನೀಸ್, ಇಟಲಿಯನ್ ಅಡುಗೆಗಳನ್ನು ಇಷ್ಟಪಡುತ್ತಾರೆ.ಮಳೆಗಾಲದಲ್ಲಿ ಶಾಹೀದ್ ಗೆ ಸಮೋಸ ಅಥವಾ ಬಜ್ಜಿ ತಿನ್ನುವುದೆಂದರೆ ಇಷ್ಟ ಜೊತೆಗೆ ಬಿಸಿ ಸಿಹಿ ಟೀ ಇರಬೇಕು.

8.ದೀಪಿಕಾ ಪಡುಕೋಣೆ - ಇಡ್ಲಿ

8.ದೀಪಿಕಾ ಪಡುಕೋಣೆ - ಇಡ್ಲಿ

ದಕ್ಷಿಣ ಭಾರತದಲ್ಲಿ ಬೆಳೆದವಳಾದ್ದರಿಂದ ಈಕೆಯ ಇಷ್ಟದ ತಿನಿಸು ಇಡ್ಲಿ ಮತ್ತು ಸಮುದ್ರ ಆಹಾರಗಳು.ಜೊತೆಗೆ ಇವರ ಇಷ್ಟದ ತಿನಿಸುಗಳ ಪಟ್ಟಿ ದೊಡ್ಡದಿದೆ. ಸೇವ್ ಪುರಿಯಿಂದ ಪ್ರಾರಂಭಿಸಿ ಮೆಡಿಟರೇನಿಯನ್ ಅಡುಗೆಗಳವರೆಗೆ ಇವರ ಮೆಚ್ಚಿನ ಆಹಾರಗಳ ಪಟ್ಟಿ ಮಾಡಬಹುದು.

9.ಅನುಷ್ಕಾ ಶರ್ಮಾ - ಚಿಕನ್ ಬೆಣ್ಣೆ ಮಸಾಲಾ

9.ಅನುಷ್ಕಾ ಶರ್ಮಾ - ಚಿಕನ್ ಬೆಣ್ಣೆ ಮಸಾಲಾ

ಅನುಷ್ಕಾ ಶರ್ಮಾ ನೋಡಲು ತೆಳು ಮೈ ಮಾಟ ಹೊಂದಿರುವುದರಿಂದ ನೋಡಿದವರಿಗೆ ಆಕೆ ಚಿಕನ್ ಇಷ್ಟಪಟ್ಟು ತಿನ್ನುತ್ತಾಳೆ ಎಂದು ಗೊತ್ತೇ ಆಗುವುದಿಲ್ಲ.ಆಕೆಗೆ ಚಿಕನ್ ಬಟರ್ ಮಸಾಲಾ ಇಷ್ಟ.ಆಕೆ ಮಾಂಸಾಹಾರವನ್ನು ಹೆಚ್ಚು ಇಷ್ಟಪಡುತ್ತಾಳೆ ಅದರಲ್ಲೂ ಅಮ್ಮ ಮಾಡಿದ ಅಡುಗೆ ಅನುಷ್ಕಾ ಫೇವರೆಟ್.

10.ಕರೀನಾ ಕಪೂರ್ -ಇಟಾಲಿಯನ್ ಅಡುಗೆಗಳು

10.ಕರೀನಾ ಕಪೂರ್ -ಇಟಾಲಿಯನ್ ಅಡುಗೆಗಳು

ಕರೀನಾ ಕಪೂರ್ ತಲಾಶ್ ಚಲನಚಿತ್ರಕ್ಕೋಸ್ಕರ ಹೆಚ್ಚು ತೂಕ ಕಳೆದುಕೊಂಡಿದ್ದು ಸಾಕಷ್ಟು ವಿಮರ್ಶಕರ ಚರ್ಚೆಗೆ ಒಳಗಾಗಿತ್ತು.ಆದರೆ ಆಕೆಗೆ ಪಾಸ್ತ ಮತ್ತು ಪಿಜ್ಜಾ ಎಂದರೆ ತುಂಬಾ ಇಷ್ಟ.ಜೊತೆಗೆ ಸಲಾಡ್ ಮತ್ತು ಜ್ಯೂಸ್ ಇರಬೇಕು.ಈ ನಟಿ ಮನೆಯಲ್ಲಿ ಎಂದಾದರು ಒಮ್ಮೊಮ್ಮೆ ಪಾಸ್ತ ಮಾಡಿ ಗೊರ್ಗೊನಜೊಲಾ ಚೀಸ್ ಹಾಕಿ ತಿನ್ನುತ್ತಾರೆ.

11.ಶಾರುಖ್ ಖಾನ್ - ಗ್ರಿಲ್ಲ್ದ್ ಚಿಕನ್

11.ಶಾರುಖ್ ಖಾನ್ - ಗ್ರಿಲ್ಲ್ದ್ ಚಿಕನ್

ಈ ಕಿಂಗ್ ಖಾನ್ ಪ್ರಪಂಚವನ್ನೇ ತನ್ನದಾಗಿಸಿಕೊಂಡಿದ್ದಾರೆ.ಆದರೆ ಬೇರೆ ಯಾವುದೇ ಅಂತರಾಷ್ಟ್ರೀಯ ಅಡುಗೆ ಇವರಿಗೆ ಇಷ್ಟವಿಲ್ಲ.ಇವರಿಗೆ ಗ್ರಿಲ್ದ್ ಕೋಳಿ ಎಂದರೆ ಇಷ್ಟ.ಪ್ರತಿ ದಿನ ಕ್ರಿಸ್ಪಿ ಮತ್ತು ಜ್ಯೂಸ್ ಆಗಿರುವ ಈ ಅಡುಗೆ ಊಟಕ್ಕೆ ಇರಲೇಬೇಕು.

12.ಅಕ್ಷಯ್ ಕುಮಾರ್ - ಥಾಯ್ ಗ್ರೀನ್ ಕರಿ

12.ಅಕ್ಷಯ್ ಕುಮಾರ್ - ಥಾಯ್ ಗ್ರೀನ್ ಕರಿ

ಥೈಲ್ಯಾಂಡ್ ನ ಚೆಫ್ ಗೆ ನಟ ಅಕ್ಷಯ್ ಕುಮಾರ್ ಗೆ ಯಾವುದು ಇಷ್ಟ ಎಂದು ಹೊಸದಾಗಿ ಹೇಳಬೇಕಾಗಿಲ್ಲ.ಖಾರವಾದ ಮಸಾಲೆಗೆ ವಿರುದ್ಧವಾದ ಸಂಪೂರ್ಣ ಬೇಯಿಸಿದ ಥಾಯ್ ಗ್ರೀನ್ ಕರಿ ಅಕ್ಷಯ್ ಗೆ ಇಷ್ಟವಾದ ಆಹಾರವಾಗಿದೆ.

13.ಅಮೀರ್ ಖಾನ್ - ಮುಘಲಾಯಿ ಅಡುಗೆ

13.ಅಮೀರ್ ಖಾನ್ - ಮುಘಲಾಯಿ ಅಡುಗೆ

ಶತಮಾನಗಳ ಹಿಂದೆ ಮೊಘಲ್ ಸಾಮ್ರಾಜ್ಯದಿಂದ ಪ್ರಾರಂಭವಾದ ಮೊಘಲರ ಅಡುಗೆ ಇಂದಿಗೂ ಜನರ ಮೆಚ್ಚುಗೆ ಪಡೆದುಕೊಂಡಿದೆ.ಅಮೀರ್ ಖಾನ್ ಈ ಮೊಘಲರ ಅಡುಗೆಯನ್ನು ಹೆಚ್ಚು ಇಷ್ಟಪಡುತ್ತಾರೆ.ಬಿರಿಯಾನಿ ಬಾದಶಹ ದಿಂದ ಶಾಹಿ ರೋಗನ್ ಜೋಶ್ ವರೆಗೆ ಎಲ್ಲ ರೀತಿಯ ಅಡುಗೆಯೂ ಅಮೀರ್ ಗೆ ಇಷ್ಟವಾಗುತ್ತದೆ.

14.ಅಮಿತಾಬ್ ಬಚ್ಚನ್ - ಬೆಂಡಿ ಸಬ್ಜಿ

14.ಅಮಿತಾಬ್ ಬಚ್ಚನ್ - ಬೆಂಡಿ ಸಬ್ಜಿ

ಬಿಗ್ ಬಿ ಅಮಿತಾಬ್ ಅಲಹಾಬಾದಿನವರು,ಅಮಿತಾಬ್ ಗೆ ಬೆಂಡೆಕಾಯಿ ಪಲ್ಯ ಮತ್ತು ಹೆಸರುಬೇಳೆ ಸಾರು ಎಂದರೆ ಪಂಚಪ್ರಾಣವಂತೆ.

15.ರಣಭೀರ್ ಕಪೂರ್ - ಪೋರ್ಕ್

15.ರಣಭೀರ್ ಕಪೂರ್ - ಪೋರ್ಕ್

ರಾಜರು ಕಾಡುಗಳಿಗೆ ಹೋಗಿ ಬೇಟೆ ಮಾಡಿ ಅಲ್ಲಿ ಕಾಡು ಹಂದಿಯನ್ನು ಕೊಂದು ತಯಾರಿಸುವ ಖಾದ್ಯ ಅಲ್ಲಿಂದ ಪ್ರಾರಂಭವಾಯಿತು. ರಣಭೀರ ಕಪೂರ್ ಗೆ ಪೋರ್ಕ್ ಕರಿ ಕರಿ ಎಂದರೆ ಬಹಳ ಇಷ್ಟ. ಅದರಲ್ಲೂ ಇದನ್ನು ಅವರ ಅಜ್ಜಿ ಮಾಡಿಕೊಟ್ಟರೆ ಇನ್ನೂ ಅಚ್ಚುಮೆಚ್ಚು.

16.ಅರ್ಬಾಜ್ ಖಾನ್ -ಮಟನ್ ಪಾಯ

16.ಅರ್ಬಾಜ್ ಖಾನ್ -ಮಟನ್ ಪಾಯ

ಅರ್ಬಾಜ್ ಖಾನ್ ಗೆ ಮಟನ್ ಪಾಯ ಎಂದರೆ ತುಂಬಾ ಇಷ್ಟ.ಇದು ದಕ್ಷಿಣ ಭಾರತದ ಪ್ರಖ್ಯಾತ ಕೆಂಪು ಮಾಂಸ.ಅರ್ಭಾಜ್ ಖಾನ್ ನಿಗೆ ಪ್ರತಿ ಊಟದಲ್ಲಿ ಇದು ಬೇಕು.

17.ಮಾಧುರಿ ದೀಕ್ಷಿತ್ - ಕ್ರೀಂ ಫಿಶ್

17.ಮಾಧುರಿ ದೀಕ್ಷಿತ್ - ಕ್ರೀಂ ಫಿಶ್

ಮರಾಠಿ ನಟಿ ಮಾಧುರಿ ದೀಕ್ಷಿತ್ ಗೆ ಮೀನು ಎಂದರೆ ಬಹಳ ಪ್ರೀತಿ.ಮಾಧುರಿ ತನ್ನದೇ ಆದ ಮೀನಿನ ಅಡುಗೆ ಮಾಡುತ್ತಾರೆ.

18.ಅಭಿಷೇಕ್ ಬಚ್ಚನ್ - ರಾಜ್ಮ ಚಾವಲ್

18.ಅಭಿಷೇಕ್ ಬಚ್ಚನ್ - ರಾಜ್ಮ ಚಾವಲ್

ಅಭಿಷೇಕ್ ಗೆ ಅತಿ ಪ್ರಿಯವಾದ ಖಾದ್ಯವೆಂದರೆ ರಾಜ್ಮ ಮತ್ತು ಚಾವಲ್ ಅಂದರೆ ಅನ್ನು ಮತ್ತು ರಾಜ್ಮಾದಿಂದ ಮಾಡಿದ ಖಾದ್ಯ.

19.ಸನ್ನಿ ಡಿಯೋಲ್ - ಮೇಥಿ ಪರಾಟ

19.ಸನ್ನಿ ಡಿಯೋಲ್ - ಮೇಥಿ ಪರಾಟ

ಪಂಜಾಬಿ ಕುಟುಂಬದಿಂದ ಬಂದ ಸನ್ನಿ ಡಿಯೋಲ್ ಗೆ ಚಿಕನ್ ಮತ್ತು ಡೈರಿ ಉತ್ಪನ್ನಗಳು ಇಷ್ಟವಿರಬಹುದು ಎನಿಸಬಹುದು ಆದರೆ ಈತ ಬಹಳ ಸಿಂಪಲ್ ಜೀವನ ಶೈಲಿ ಬಳಸುವ ನಟ.ಈತನ ಇಷ್ಟದ ತಿನಿಸು ಮೆಂತೆ ಪರೋಟ ಮತ್ತು ಲೌಕಿ ಸಬ್ಜಿ.

20.ಸಂಜಯ್ ದತ್ - ಚಿಕನ್ ಟಿಕ್ಕಾ

20.ಸಂಜಯ್ ದತ್ - ಚಿಕನ್ ಟಿಕ್ಕಾ

ಸಂಜಯ್ ದತ್ ಗೆ ಚಿಕನ್ ಟಿಕ್ಕಾಎಂದರೆ ಬಹಳ ಪ್ರಿಯ. ಆದರೆ ಈಗ ಆತನಿಗೆ ಜೈಲಿನಲ್ಲಿ ಇದು ಸಿಗುತ್ತದೆಯ ಅಥವಾ ಇಲ್ಲವ ಎಂದು ಅನುಮಾನವಿದೆ. ಮನೆ ಅಡುಗೆ ಬೇಕು ಎಂಬ ಈತನ ಕೋರಿಕೆಯನ್ನು ನಿರಾಕರಿಸಲಾಗಿದೆ.

 ಐಶ್ವರ್ಯ ರೈ

ಐಶ್ವರ್ಯ ರೈ

ಐಶ್ವರ್ಯ ರೈ ರೆಸ್ಟೋರೆಂಟ್ ಗಿಂತ ಮನೆ ಅಡುಗೆಯನ್ನು ಹೆಚ್ಚು ಇಷ್ಟ ಪಡುತ್ತಾರೆ. ಅದರಲ್ಲೂ ಪಂಜಾಬಿ ಶೈಲಿಯ ಅಡುಗೆಗಳೆಂದರೆ ಅವರ ಫೇವರೆಟ್.

English summary

20 Favorite Foods Of Bollywood Celebrities

A man is known by the company he keeps – and also the food he eats! Our favorite celebrities then range from exotic to regular to complicated, from the kind of foods they prefer best.
X
Desktop Bottom Promotion