For Quick Alerts
ALLOW NOTIFICATIONS  
For Daily Alerts

ನಮ್ಮಲ್ಲಿರುವ ವಿಶೇಷವಾದ, ವಿಚಿತ್ರವಾದ ಗೀಳುಗಳಿವು

By Super
|

ಪ್ರತಿಯೊಬ್ಬರು ತಮ್ಮದೇ ಆದ, ತಮಗಿಷ್ಟವಾದ ಹಲವಾರು ಹವ್ಯಾಸಗಳನ್ನು ಹೊಂದಿರುತ್ತಾರೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಆ ಹವ್ಯಾಸಗಳಿಗೆ ಅಡಿಕ್ಟ್ ಆಗಿರುತ್ತಾರೆ. ಅದು ಒಳ್ಳೆಯ ಹವ್ಯಾಸಗಳೂ ಆಗಿರಬಹುದು ಅಥವಾ ಕೆಟ್ಟದ್ದೂ ಆಗಿರಬಹುದು. ಆದರೆ ಆ ಹವ್ಯಾಸಗಳು ಯಾವುದೇ ಆಗಿರಲಿ ಅದನ್ನು ಬಿಡುವುದಂತೂ ಕಷ್ಟಸಾಧ್ಯ.

ಸಾಮಾನ್ಯವಾಗಿ ಯಾರಾದರೂ ನಿಮ್ಮ ಹವ್ಯಾಸಗಳೇನು ಎಂದು ಕೇಳಿದರೆ, ನೃತ್ಯ, ಸಂಗೀತ ಹೀಗೆ ಹಲವಾರು ಅಭ್ಯಾಸಗಳನ್ನು ನೀವು ಹೇಳಬಹುದು ಆದರೆ ಈ ಹವ್ಯಾಸಗಳನ್ನು ಬಿಟ್ಟು ನಿಮಗೇ ಗೊತ್ತಿಲ್ಲದೆ ನೀವು ಆ ಹವ್ಯಾಸವನ್ನು ನೆಚ್ಚಿಕೊಂಡಿರುವ ಹವ್ಯಾಸಗಳ ಪಟ್ಟಿಯ ಬಗ್ಗೆ ಅರಿವಿದೆಯೇ?

ಇಲ್ಲಿದೆ ಅಂತಹ 10 ವಿಶೇಷವಾದ ಹವ್ಯಾಸಗಳು!

1. ಇಂಟರ್ನೆಟ್ (ಅಂತರ್ಜಾಲ)

1. ಇಂಟರ್ನೆಟ್ (ಅಂತರ್ಜಾಲ)

ಸಮಯವನ್ನು ಕಳೆಯಲು ಇಂಟರ್ನೆಟ್ ಬಳಸುವಷ್ಟು ಉತ್ತಮವಾದ ವಿಧಾನ ಇನ್ನೊಂದಿಲ್ಲ ಎಂದು ನೀವು ತಿಳಿದಿರಬಹುದು. ಚೀನಾ ಸಂಶೋಧಕರ ಪ್ರಕಾರ, ಡ್ರಗ್ಸ್ ಹಾಗೂ ಮದ್ಯಪಾನದಂತೆ ಇಂಟರ್ನೆಟ್ ಬ್ರೌಸಿಂಗ್ ಕೂಡ ನಿಮ್ಮ ಮೆದುಳನ್ನು ಬದಲಾಯಿಸಬಲ್ಲ ಒಂದು ವ್ಯಸನ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಟರ್ನೆಟ್ ವ್ಯಸನ ಖಾಯಿಲೆ (Internet addiction disorder (IAD)) ಹೊಂದಿರುವವರು ಇತರ ಚಟಗಳಿಹೆ ಹೋಲಿಸಿದರೆ ಅವುಗಳಂತೆ ವ್ಯಸನವನ್ನು ಬಿಡಲಾಗದಂತಹ ಸನ್ನಿವೇಶವನ್ನು ಎದುಸಬೇಕಾಗುತ್ತದೆ ಎಂದು ಹೇಳಲಾಗಿದೆ. ಅಂತರ್ಜಾಲ ಮತ್ತು ಸ್ಮಾರ್ಟ ಪೋನ್ ಬಳಕೆದಾರ ಮೇಲೆ ಸಡೆಸಿದ ಅಧ್ಯಯನದಿಂದ ತಿಳಿದುಬಂದಿರುವುದೇನೆಂದರೆ, ಮೆಸೆಜ್/ ಸಂದೇಶಗಳಿಂದ ಬರುವ 'ಫ್ಯಾಂಟಮ್ ವೈರ್ಬೆಶನ್ಸ್ ಕೇಳಲು ಕಾತುರಕಾಗಿರುತ್ತಾರೆ ಎಂದು ಹೇಳಲಾಗಿದೆ.

2. ಪ್ರೀತಿ ಮಾಡುವ ಗೀಳು

2. ಪ್ರೀತಿ ಮಾಡುವ ಗೀಳು

ಎಲ್ಲರಿಗೂ ಗೊತ್ತಿರುವ ಹಾಗೆ ಒಂದು ಸಂಬಂಧದಿಂದ ಇನ್ನೊಂದು ಸಂಬಂಧಕ್ಕೆ ಹೋಗಲು ಬಯಸುವ ವ್ಯಕ್ತಿ ಯಾವುದೇ ಸಮಯದಲ್ಲಿ ಹೆಚ್ಚು ಹೊತ್ತು ಇಂದು ಸಂಬಂಧದಲ್ಲಿ ನಿಲ್ಲಲಾರ. ಸಂಶೋಧನೆಯ ಪ್ರಕಾರ, ಇಂತಹವರು ಪ್ರೀತಿ ಮಾಡುವ ಚಟಕ್ಕೆ ಗಂಟು ಬಿದ್ದಿದ್ದಾರೆ ಅಥವಾ ಪ್ರೀತಿಯಲ್ಲಿ ಬೀಳುವ ಗೀಳು ಹೊಂದಿದ್ದಾರೆ! (ಫಾಲ್ ಇನ್ ಲವ್) ಹೌದು, ಪ್ರೀತಿಯಲ್ಲಿ ಹೌದು ಇದೇ ಹೃದಯ ರೇಸಿಂಗ್, ಭ್ರಮಾಧೀನ ಭಾವನೆ ... ಇದು ಕೊಂಡಿಯಂತೆ ನಿಮ್ಮಿಂದ ಬಿಡಲಾರದ ವ್ಯಸನ. ಮನಶ್ಶಾಸ್ತ್ರಜ್ಞ ಆರ್ಥರ್ ಅರೊನ್ ಅವರ ಪ್ರಕಾರ, ಮಾದಕ ವ್ಯಸನಗಳಿಗೆ ತೊಡಗಿದವರಂತೆ ಪ್ರೀತಿ ಮಾಡುವ ಗೀಳು ಕೂಡ ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ಮೊದಲನೆ ಪ್ರೀತಿಯ ಆಕರ್ಷಣೆ ಕೆಲವೇ ದಿನಗಳಲ್ಲಿ ಆ ಭಾವನೆ ಮಸುಕಾಗಲು ಪ್ರಾರಂಭಿಸುತ್ತದೆ. ಮತ್ತು ಮತ್ತೊಂದು ಪ್ರೀತಿಗೆ ಹಂಬಲಿಸುತ್ತದೆ.

3. ಸಕ್ಕರೆ

3. ಸಕ್ಕರೆ

ನಾವು ಕಾಲಕಾಲಕ್ಕೆ ನಮ್ಮ ನೆಚ್ಚಿನ ಸಿಹಿ ತಿಂಡಿಗಳನ್ನು ಸೇವಿಸುತ್ತೇವೆ. ಆದರೆ ನೀವು ನಿಜವಾಗಿಯೂ ಚಾಕೊಲೇಟ್ ನಂತಹ ಸಿಹಿ ತಿಂಡಿಗಳನ್ನು ತಿನ್ನುವ ಗೀಳು ಬೆಳೆಸಿಕೊಂಡಿದ್ದೀರಾ ಎಂಬುದು ತಿಳಿದಿದೆಯೇ? ಒಂದು ಅಧ್ಯಯನದ ಪ್ರಕಾರ, ನಾವು ಸಿಹಿಯಾದ ಲಘು ತಿಂಡಿಗಳನ್ನು ತಿನ್ನುವಾಗ, ಅದರಲ್ಲಿರುವ ಓಪಿಯಾಡ್ಸ್ (opiods) ರಾಸಾಯನಿಕಗಳು ತೀವ್ರತರವಾದ ಸಂತೋಷದ ಭಾವನೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸಾಮಾನ್ಯವಾಗಿ ಸಕ್ಕರೆಯನ್ನು ಮತ್ತೆ ಮತ್ತೆ ಸೇವಿಸುತ್ತೇವೆ. ವಾಸ್ತವವಾಗಿ, ಕ್ಯಾಲಿಫೋರ್ನಿಯಾ ತಂಡದ ಒಂದು ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ಸಕ್ಕರೆಯು ಹಾನಿಕಾರಕ ಮತ್ತು ಆಲ್ಕೊಹಾಲ್ ಮತ್ತು ಸಿಗರೇಟ್ ನಂತೆಯೇ ಇದೂ ಒಂದು ಚಟ ಎಂದು ಹೇಳಲಾಗುತ್ತದೆ.

4. ಟ್ಯಾಟೂಸ್ ಮತ್ತು ಚುಚ್ಚಿಸುವಿಕೆ

4. ಟ್ಯಾಟೂಸ್ ಮತ್ತು ಚುಚ್ಚಿಸುವಿಕೆ

ದೇಹದ ಬೇರೆ ಬೇರೆ ಭಾಗಗಳಲ್ಲಿ ಟ್ಯಾಟೂ ಗಳನ್ನು ಹಾಕಿಸಿಕೊಳ್ಳುವುದು ಇವತ್ತಿನ ಫ್ಯಾಶನ್. ಸಾಮಾನ್ಯವಾಗಿ ಸೆಲಿಬ್ರೆಟಿಗಳಲ್ಲಿ ಇಂತಹ ವಿವಿಧ ಹಚ್ಚೆ ಹಾಕಿಸಿಕೊಂಡಿರುವ / ಬಿಡಿಸಿಕೊಂಡಿರುವ ಟ್ಯಾಟೂಗಳನ್ನು ಕಾಣಬಹುದು. ಆದರೆ ಇದು ನಿಜವಾದ ಚಟವೇ ಎಂಬುದು ವಿವಾದಾಸ್ಪದವಾಗಿದೆ. ಇದು ನಿಸ್ಸಂಶಯವಾಗಿ ಭಾಗಶಃ ನೋವನ್ನುಂಟುಮಾಡುವ ಪ್ರಕ್ರಿಯೆ. ಆದರೆ ಈ ಹಚ್ಚೆ ಹಾಕಿಸಿಕೊಳ್ಳುವಾಗಿನ ನೋವು ಬಹುಶಃ ಕೆಲವರಿಗೆ ಹಿತವೆನಿಸಬಹುದು.

5. ಕೆಲಸ

5. ಕೆಲಸ

ನಮಗೆ ಬಹುತೇಕ ವಾರಾಂತ್ಯದಲ್ಲಿ ಕೆಲಸವನ್ನು ಬಿಟ್ಟು ವಾರಾಂತ್ಯವನ್ನು ಸಂತೋಷವಾಗಿ ಕಳೆಯಲು ಇಷ್ಟಪಡುತ್ತೇವೆ ಆದರೆ ಕೆಲವರಿಗೆ ಈ ದಿನಗಳಲ್ಲೂ ಕಚೇರಿಯಲ್ಲಿ ಕೆಲಸ ಮಾಡುವ ಚಟ ಅಮೂಲ್ಯವಾಗಿರಬಹುದು. ಸಂಶೋಧನೆಯ ಪ್ರಕಾರ ಇಂತಹವರು ತಮಾಷೆಗಾಗಿ ಬಳಸುವ ಪದ "ಕಾರ್ಯವ್ಯಸನಿ" ಪದದಂತೆ ಕೆಲಸ ಮಾಡುವ ಚಟದಿಂದ ಬಳಲುತ್ತಿದ್ದಾರೆ. ಇದು ಕೇವಲ "ಹಾರ್ಡ್ ಕೆಲಸ" ಮಾತ್ರವಲ್ಲ. ಈ ರೋಗಿಗಳು 'ಆರೋಗ್ಯ ಮತ್ತು ಸಂಬಂಧಗಳ'ಲ್ಲಿ ಅಪಾಯದ ಒಂದು ನೈಜ ಸ್ಥಿತಿಯನ್ನು ಎದುರಿಸುತ್ತಾರೆ. ಸ್ಪಾನಿಷ್ ಅಧ್ಯಯನದ ಪ್ರಕಾರ, ಸ್ಪೇನ್ ನಲ್ಲಿ ಕಾರ್ಮಿಕಲ್ಲಿ ಶೇ. 12 ರಷ್ಟು ಜನ ಈ ರೋಗದಿಂದ ಬಳಲುತ್ತಾರೆ. ಜಪಾನ್ ನಲ್ಲಿ "ಮಿತಿಮೀರಿ ಕೆಲಸದಿಂದ ಸಾವು" (ಕರೋಶಿ) ಉಂಟಾಗಿ, ವರ್ಷಕ್ಕೆ ಅಂದಾಜು 1000 ಜನ ಈ ಚಟದಿಂದಾಗಿ ಸಾವಿಗೀಡಾಗುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ.

6. ಟ್ಯಾನಿಂಗ್

6. ಟ್ಯಾನಿಂಗ್

ಸಂಶೋಧನೆ ಮಾಡಿ, ಜರ್ನಲ್ ಅಡಿಕ್ಷನ್ ಬಯಾಲಜಿಯಲ್ಲಿ ಪ್ರಕಟವಾದ ವಿಷಯದ ಪ್ರಕಾರ, ಬಿಸಿಲಿನ ನೇರಳಾತೀತ ಕಿರಣಗಳಿಗೆ ಮೈಯೊಡ್ಡಿ ಮಲಗುವುದು ಮಾದಕ ವ್ಯಸನದ ರೀತಿಯಲ್ಲಿ ಮಿದುಳಿನ ಚಟುವಟಿಕೆಯಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು. ಲೇಖಕ, ಡಾ ಬ್ರಯೊನ್ ಅಡಿನೋಫ್ (Bryon Adinoff) ಅವರ ಅಧ್ಯಯನದ ಪ್ರಕಾರ, ಮೆದುಳು ಪ್ರತಿಫಲ ಜೊತೆಯಾಗಿರುವ ಪ್ರದೇಶಗಳಲ್ಲಿ ನೇರಳಾತೀತ ಕಿರಣಗಳಿಗೆ ಪ್ರತಿಕ್ರಿಯಿಸುತ್ತದೆ. ಇದು ಚಟ ಎನ್ನುವುದಕ್ಕಿಂತ ಹೊರತಾಗಿ ಆರೋಗ್ಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ.

7. ವೀಡಿಯೋ ಗೇಮ್

7. ವೀಡಿಯೋ ಗೇಮ್

ವಿಶ್ವದಾದ್ಯಂತ, ಹದಿಹರೆಯದವರು ವೀಡಿಯೋ ಗೇಮ್ ಹಿಡಿದು ತಮ್ಮದೇ ಕೊಠಡಿಯಲ್ಲಿ ದೂರದರ್ಶನ ಅಥವಾ ಕಂಪ್ಯೂಟರ್ ಪರದೆಯ ಮುಂದೆ ಕುಳಿತಿರುವುದು ಅಷ್ಟೇನೂ ತೊಂದರೆದಾಯಕವಲ್ಲ ಎನ್ನುತ್ತದೆ ಸಂಶೋಧನೆ. 2006ರ ಬಿಬಿಸಿ-ವರದಿಯ ಪ್ರಕಾರ, ಶೇಕಡಾ 12 ರಷ್ಟು ಜನರ ಆನ್ ಲೈನ್ ಗೇಮ್ ಚಟಗಳ ಬಗ್ಗೆ ಹೇಳಲಾಗಿದೆ. ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಈ ಬೆಳೆಯುತ್ತಿರುವ ಚಟಗಳನ್ನು ಎದುರಿಸಲು ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸಿವೆ. ಇಂತಹ ಗೇಮ್/ಆಟಗಳು ಸಂಬಂಧಗಳ ಮೇಲೆ ಹಾಗೂ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ.

8. ಶಾಪಿಂಗ್

8. ಶಾಪಿಂಗ್

ನಮ್ಮಲ್ಲಿ ಬಹುತೇಕ ಜನ ಇತ್ತೀಚಿನ ಜೀವನ ವೃದ್ಧಿಸುವ ಗ್ಯಾಜೆಟ್ ಅಥವಾ ಪ್ರೀತಿಪಾತ್ರರ ಕೊಡುಗೆಯಾಗಿ ಕೊಟ್ಟ ಹೊಸ ವಸ್ತುಗಳನ್ನು ಖರೀದಿಸುವುದರಲ್ಲಿ ಸಾಕಷ್ಟು ಪ್ರೀತಿ ಬೆಳೆಸಿಕೊಂಡಿರುತ್ತಾರೆ. ಆದಾಗ್ಯೂ, ಕೆಲವು ಹೊಸ ವಸ್ತುಗಳ ಖರೀದಿ ಒಂದು ವಿನಾಶಕಾರಿ ಚಟ ಆಗಬಹುದು. ಶಾಪಿಂಗ್ ಚಟ (ಅಥವಾ omniomania) ಮತ್ತೆ ಮತ್ತೆ ಅನುಭವವನ್ನು ಬಯಸುವ ಒಂದು ತಾತ್ಕಾಲಿಕ "ಉನ್ನತಿ" ಅನುಭವ ಉಂಟುಮಾಡುವ ಎಂಡಾರ್ಫಿನ್ ಗಳು ಮತ್ತು ಡೋಪಮೈನ್ ಉಂಟಾಗುತ್ತದೆ. ಅನೇಕ ಶಾಪಿಂಗ್ ವ್ಯಸನಿಗಳಲ್ಲಿ ನಕಾರಾತ್ಮಕ ಭಾವನೆಗಳಿಂದ ಹೊರಬರಲು ಅಥವಾ ತಮ್ಮ ಜೀವನದ ಕೆಲವು ಸಂದರ್ಭಗಳಿಂದ ತಪ್ಪಿಸಿಕೊಳ್ಳಲು ಶಾಪಿಂಗ್ ನ್ನು ಮಾರ್ಗವಾಗಿ ಬಳಸಿಕೊಳ್ಳುತ್ತಾರೆ. ಆದರೆ ಈ ಚಟ ವಾಸ್ತವವಾಗಿ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು.

9. ಲಿಪ್ ಬಾಮ್

9. ಲಿಪ್ ಬಾಮ್

ಆಲ್ಕೋಹಾಲ್ ಮತ್ತು ಸಿಗರೇಟ್ ನಂತಹ ರಾಸಾಯನಿಕ ಚಟಗಳಂತೆ, ಲಿಪ್ ಬಾಮ್ ಹಚ್ಚುವುದು ಕೂಡ ಖಂಡಿತವಾಗಿಯೂ ಚಾಳಿಯಾಗಬಹುದು. ಲಿಪ್ ಬಾಮ್, ಒಣ ತುಟಿಗಳಿಗೆ ತಾತ್ಕಾಲಿಕ ತೇವಾಂಶ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ತುಟಿ ಒಣಗಿದಾಗ ಉಂಟಾಗುವ ಪರಿಣಾಮಗಳನ್ನು ಪ್ರತಿರೋಧಿಸುವ ಲಿಪ್ ಬಾಮ್ ನ್ನು ಹೆಚ್ಚೆಚ್ಚು ಹಚ್ಚುವುದು ಚಟವೆನಿಸುತ್ತದೆ. ಇದು ಮಾರಣಾಂತಿಕ ಅಥವಾ ಅಧಿಕೃತ ಅನಾರೋಗ್ಯಕ್ಕೆ ಕಾರಣವಾಗಿರದಿದ್ದರೂ, ಅನೇಕ ವೆಬ್ ಸೈಟ್ ಗಳು ಮತ್ತು ಫೇಸ್ ಬುಕ್ ಗುಂಪುಗಳು ಈ ದುಬಾರಿಯಾದ ಚಟದ ಸಾಲಿಗೆ ಸೇರುತ್ತವೆ.

10. ಸಂಗೀತ

10. ಸಂಗೀತ

ನಾವು ನಮ್ಮ ನೆಚ್ಚಿನ ಹಾಡುಗಳನ್ನು ಮತ್ತೆ ಮತ್ತೆ ಕೇಳುತ್ತೇವೆ. ಆದರೆ ನೀವು ಯಾವಾಗಲಾದರೂ ನಿಮ್ಮ ಮೆಚ್ಚಿನ ಸಂಗೀತ ಕೇಳುವುದು ಒಂದು ಗೀಳು ಎಂದು ಪರಿಗಣಿಸಿದ್ದೀರೇ? ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನ ಈ ಗೀಳಿನ ಬಗ್ಗೆ ಹೇಳುತ್ತದೆ. ಅಧ್ಯಯನ ಹೇಳುವಂತೆ, ನಾವು ಸಂಗೀತ ಕೇಳುವಾಗ ನಾವು ನೈಸರ್ಗಿಕ ಅನುಭವವನ್ನು ಪಡೆಯುತ್ತೇವೆ. ಮತ್ತು ನಮ್ಮ ದೇಹ ಡಾಪ್ಅಮೈನ್ ಬಿಡುಗಡೆ ಮಾಡುತ್ತದೆ. ಜನರು ಡ್ರಗ್ಸ್ ತೆಗೆದುಕೊಳ್ಳುವ ಅಥವಾ ಸಂತೋಷಕರ ಆಹಾರ ತಿನ್ನುವ ಸಮಯದಲ್ಲಿ ನ್ಯೂರೊಟ್ರಾನ್ಸ್ಮೀಟರ್ (neurotransmitter) ಬಿಡುಗಡೆಯಾಗುತ್ತದೆ. ಸಂಶೋಧಕರ ಪ್ರಕಾರ, ಡೋಪಮೈನ್ ನಾವು ನಮ್ಮ ನೆಚ್ಚಿನ ಸಂಗೀತ ಕೇಳುವ ಗೀಳಿನಂತೆ ನಮ್ಮ ನಡವಳಿಕೆಗಳನ್ನು ಪುನರಾವರ್ತಿಸುವಂತೆ ಮಾಡುತ್ತದೆ.

English summary

10 surprising things you may be addicted to

We all have certain activities we love, but did you know you could be addicted to your favourite hobby? Check out the 10 surprising things you may be addicted to.
X
Desktop Bottom Promotion