For Quick Alerts
ALLOW NOTIFICATIONS  
For Daily Alerts

ವಿಶ್ವದ ನಂ.1 ಶ್ರೀಮಂತ ದೇವಾಲಯ ಭಾರತದಲ್ಲಿದೆ!

|

ಭಾರತದಲ್ಲಿ ಲಕ್ಷಕ್ಕೂ ಮಿಗಿಲು ದೇವಾಲಯಗಳಿರಬಹುದು. ಪ್ರತಿಯೊಂದು ಹಳ್ಳಿಯಲ್ಲೂ ಕಮ್ಮಿಯೆಂದರೂ 2-3 ದೇವಾಲಯಗಳು ಕಂಡು ಬರುತ್ತವೆ. ಕೆಲವೊಂದು ದೇವಾಲಯಗಳು ತನ್ನ ಶಕ್ತಿ ಮತ್ತು ಸಂಪತ್ತಿನಿಂದ ಭಾರತ ಮಾತ್ರವಲ್ಲ, ವಿಶ್ವ ಪ್ರಸಿದ್ಧವಾಗಿದೆ.

ನಮ್ಮಲ್ಲಿರುವ ಅನೇಕ ದೇವಾಲಯಗಳು ಇತಿಹಾಸ ಪ್ರಸಿದ್ಧವಾದದು, ರಾಜ ಮಹಾರಾಜರ ಕಾಲದಲ್ಲಿ ನಿರ್ಮಿಸಿದಂತಹ ದೇವಾಲಯಗಳು. ಹೆಚ್ಚಿನ ದೇವಾಲಯಗಳಲ್ಲಿ ದೇವರ ಪೂರ್ತಿಯೇ ಚಿನ್ನದಾಗಿರುತ್ತದೆ. ಇನ್ನೂ ಅನೇಕ ಹೊಸ ದೇವಾಲಯಗಳನ್ನು ನಿರ್ಮಿಸಿದ್ದಾರೆ. ದೇವಾಲಯಗಳಿಗೆ ಆದಾಯ ಕೊರತೆ ಯಾವತ್ತಿಗೂ ಉಂಟಾಗುವುದಿಲ್ಲ!

ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವೆಂದು ಗುರುತಿಸಲಾಗಿದೆ. ನಮ್ಮ ದೇವಾಲಯಗಳಲ್ಲಿರುವ ಸಂಪತ್ತು, ರಾಜಕಾರಣಿಗಳು ಭ್ರಷ್ಟಚಾರ ಮಾಡಿ ಕೂಡಿಟ್ಟ ಹಣ ಇವುಗಳನ್ನು ಒಟ್ಟು ಮೊತ್ತ ಮಾಡಿದರೆ ಭಾರತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಕೆಲವೊಂದು ದೇವಾಲಯಗಳಿಗೆ ದಿನದಲ್ಲಿ ಲಕ್ಷಗಟ್ಟಲೆ ಹಣ ಭಕ್ತಾದಿಗಳಿಂದ ಕಾಣಿಕೆಯ ರೂಪದಲ್ಲಿ ದೊರೆಯುತ್ತದೆ. ತನ್ನ ಅಪೂರ್ವ ಶಕ್ತಿ ಕೂಡ ಭಕ್ತಾದಿಗಳನ್ನು ಆಕರ್ಷಿಸುವವಲ್ಲಿ ಪ್ರಮುಖ ಕಾರಣವಾಗಿದೆ. ಇಲ್ಲಿ ನಾವು ಭಾರತದಲ್ಲಿರುವ ಅನೇಕ ಶ್ರೀಮಂತ ದೇವಾಲಯಗಳಲ್ಲಿ ಟಾಪ್ 10 ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ನೋಡಿ:

ಪದ್ಮನಾಭ ಸ್ವಾಮಿ ದೇವಾಲಯ

ಪದ್ಮನಾಭ ಸ್ವಾಮಿ ದೇವಾಲಯ

ಪದ್ಮನಾಭ ಸ್ವಾಮಿ ದೇವಾಲಯ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲಿಯೇ ಶ್ರೀಮಂತ ದೇವಾಲಯವಾಗಿದೆ. ಇಲ್ಲಿಯ ಸಂಪತ್ತು 20 ಬಿಲಿಯನ್ ಡಾಲರ್ ಗೂ (ಒಂದು ಡಾಲರ್ 54.78 ರೂ) ಹೆಚ್ಚು ಬೆಲೆ ಬಾಳುತ್ತದೆ.

 ತಿರುಪತಿ

ತಿರುಪತಿ

ಈ ದೇವಾಲಯಕ್ಕೆ ದಿನದಲ್ಲಿ ಕಮ್ಮಿಯೆಂದರೂ 60,000ಕ್ಕಿಂತ ಅಧಿಕ ಭಕ್ತಾದಿಗಳು ಭೇಟಿ ನೀಡುತ್ತಾರೆ. ಇಲ್ಲಿಯ ಖಜಾನೆಗೆ ಪ್ರತೀವರ್ಷ 650 ಕೋಟಿಗೂ ಮಿಗಿಲಾದ ಆಸ್ತಿ ಸೇರುತ್ತದೆ.

 ವೈಷ್ಣೋ ದೇವಿ ದೇವಾಲಯ

ವೈಷ್ಣೋ ದೇವಿ ದೇವಾಲಯ

ಇದು ತುಂಬಾ ಪುರಾತನವಾದ ಶ್ರೀಮಂತ ದೇವಾಲಯವಾಗಿದೆ. ಪ್ರತೀವರ್ಷ ಕಮ್ಮಿಯೆಂದರೂ 500ಕೋಟಿಗೂ ಮಿಗಿಲಾದ ಸಂಪತ್ತು ಕಾಣಿಕೆಯ ರೂಪದಲ್ಲಿ ದೊರೆಯುತ್ತದೆ.

ಸಿದ್ಧಿ ವಿನಾಯಕ ದೇವಾಲಯ

ಸಿದ್ಧಿ ವಿನಾಯಕ ದೇವಾಲಯ

ವಿಘ್ನ ನಿವಾರಕ ಗಣೇಶನ ದೇವಾಲಯಕ್ಕೆ ಸೆಲೆಬ್ರಿಟಗಳು ಹಾಗೂ ವಿಶ್ವದ ಅನೇಕ ಮೂಲೆಯಿಂದ ಭಕ್ತಾದಿಗಳು ಪ್ರತೀದಿನ ಭೇಟಿ ನೀಡುತ್ತಾರೆ. ಈ ದೇವಾಲಯದಲ್ಲಿರುವ ಗುಮ್ಮಟ ಚಿನ್ನದ ಲೇಪನದಿಂದ ಕೂಡಿದ್ದು ಕೋಲ್ಕತ್ತದ ಉದ್ಯಮಿ ಈ ಗುಮ್ಮಟವನ್ನು ಕಾಣಿಯಾಗಿ ನೀಡಿದರು.

ಗೋಲ್ಡನ್ ಟೆಂಪಲ್

ಗೋಲ್ಡನ್ ಟೆಂಪಲ್

ಸಿಖ್ ರ ಪವಿತ್ರ ದೇವಾಲಯವಾದ ದೇವಾಲಯವು ಟಾಪ್ 10 ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಒಂದಾಗಿದೆ. ಈ ದೇವಾಲಯವನ್ನು ಚಿನ್ನ ಮತ್ತು ಬೆಳ್ಳಿ ಸೇರಿಸಿ ತಯಾರಿಸಲಾಗಿದ್ದು, ಇಲ್ಲಿರುವ ಗುರು ಗ್ರಂಥ ಸಾಹೀಬ್ ನ ಮೂರ್ತಿಯನ್ನು ಬೆಲೆ ಬಾಳುವ ಕಲ್ಲು, ವಜ್ರ, ಹರಳುಗಳನ್ನು ಬಳಸಿ ತಯಾರಿಸಲಾಗಿದೆ.

 ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

ಇಲ್ಲಿರುವ ತುಂಬಾ ಸಂಪತ್ತನ್ನು ಮೊಘಲರು ದಾಳಿ ಮಾಡಿ ಕೊಂಡು ಹೋದ ಬಗ್ಗೆ ಚರಿತ್ರೆಯಲ್ಲಿ ಓದಿರುವಿರಿ. ಈ ದೇವಾಲಯದ ಸಂಪತ್ತು ಕೊಳ್ಳೆ ಹೊಡೆಯಲು ಅನೇಕ ಬಾರಿ ಇದರ ಮೇಲೆ ಮಾಡಲಾಗಿದೆ. ಆದರೂ ಈ ದೇವಾಲಯವನ್ನು ಇಂದಿನ ಶ್ರೀಮಂತ ದೇವಾಲಯದ ಪಟ್ಟಿಗೆ ಸೇರಿಸಬಹುದು. ಹಾಗಾದರೆ ಮೊದಲು ಇದರಲ್ಲಿ ಸಂಪತ್ತು ಎಷ್ಟಿದ್ದಿರಬಹುದಲ್ಲವೇ?

ಮೀನಾಕ್ಷಿ ದೇವಾಲಯ

ಮೀನಾಕ್ಷಿ ದೇವಾಲಯ

ಮದುರೈಯ ಮೀನಾಕ್ಷಿ ದೇವಾಲಯ ತಮಿಳು ನಾಡಿನಲ್ಲಿರುವ ಶ್ರೀಮಂತ ದೇವಾಲಯವಾಗಿದೆ.

ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

ಇಲ್ಲಿರುವ ತುಂಬಾ ಸಂಪತ್ತನ್ನು ಮೊಘಲರು ದಾಳಿ ಮಾಡಿ ಕೊಂಡು ಹೋದ ಬಗ್ಗೆ ಚರಿತ್ರೆಯಲ್ಲಿ ಓದಿರುವಿರಿ. ಈ ದೇವಾಲಯದ ಸಂಪತ್ತು ಕೊಳ್ಳೆ ಹೊಡೆಯಲು ಅನೇಕ ಬಾರಿ ಇದರ ಮೇಲೆ ಮಾಡಲಾಗಿದೆ. ಆದರೂ ಈ ದೇವಾಲಯವನ್ನು ಇಂದಿನ ಶ್ರೀಮಂತ ದೇವಾಲಯದ ಪಟ್ಟಿಗೆ ಸೇರಿಸಬಹುದು. ಹಾಗಾದರೆ ಮೊದಲು ಇದರಲ್ಲಿ ಸಂಪತ್ತು ಎಷ್ಟಿದ್ದಿರಬಹುದಲ್ಲವೇ?

ಪುರಿ ಜಗನ್ನಾಥ

ಪುರಿ ಜಗನ್ನಾಥ

ಪುರಾತನವಾದ ಶ್ರೀಮಂತ ದೇವಾಲಯವು ಒರಿಸ್ಸಾದಲ್ಲಿದೆ.

ಕಾಶಿ ವಿಶ್ವನಾಥ ದೇವಾಲಯ

ಕಾಶಿ ವಿಶ್ವನಾಥ ದೇವಾಲಯ

ಶಿವನ ದೇವಾಲಯವಾಗಿರುವ ಕಾಶಿ ವಿಶ್ವನಾಥ ದೇವಾಲಯವು ಕೂಡ ಅತ್ಯಂತ ಸಂಪತ್ತನ್ನು ಹೊಂದಿರುವ ದೇವಾಲಯವಾಗಿದೆ.

English summary

10 Richest Temples Of India | Famous In India | ಭಾರತದಲ್ಲಿರುವ ಟಾಪ್ 10 ಶ್ರೀಮಂತ ದೇವಾಲಯಗಳು | ಭಾರತದ ವೈಶಿಷ್ಟ್ಯತೆ

Every nook and corner, below the tree shades and near footpaths, you will find a big or small temple. But, there are few famous temples that are not only highly religious but one of the richest temples in India.So lets take a look at other richest temples of India.
X
Desktop Bottom Promotion