For Quick Alerts
ALLOW NOTIFICATIONS  
For Daily Alerts

ಬೂಕರ್ ಪ್ರಶಸ್ತಿ ಗಳಿಸಿದ10 ಭಾರತೀಯ ಕಾದಂಬರಿಕಾರರು

By Super
|

ಸಾಹಿತ್ಯ ಕ್ಷೇತ್ರದಲ್ಲಿ ಆಸ್ಕರ್ ಎಂದೇ ಕರೆಯಲ್ಪಡುವ ಮ್ಯಾನ್ ಬೂಕರ್ ಪ್ರಶಸ್ತಿಗೋಸ್ಕರ ರಾಷ್ಟ್ರದ ಪ್ರತಿಯೊಬ್ಬ ಕಾದಂಬರಿ ಕೂಡ ಇಚ್ಛಿಸುತ್ತಾರೆ. 2013ರ ಅಂತರಾಷ್ಟ್ರೀಯ ಮ್ಯಾನ್ ಬೂಕರ್ ಪ್ರಶಸ್ತಿಯಲ್ಲಿ ಕೊನೆಯ ಹಂತದವರೆಗೆ ಯು ಆರ್ ಅನಂತಮೂರ್ತಿಯವರು ಹೋಗಿದ್ದು ನಿಜಕ್ಕೂ ಹೆಮ್ಮೆಯ ವಿಚಾರ . ಕನ್ನಡ ಬರಹಗಾರರಾದ ಅವರಿಗೆ ಶುಭವಾಗಲಿ.

ಮೇ 22 ರಂದು ಮ್ಯಾನ್ ಬೂಕರ್ ಪ್ರಶಸ್ತಿ ಪ್ರಕಟಿಸಲಾದ ಹಿನ್ನೆಲೆಯಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿಗೆ ಅರ್ಹರಾದ ಮತ್ತು ಪ್ರಶಸ್ತಿ ತಮ್ಮದಾಗಿಸಿಕೊಂಡ 10 ಭಾರತೀಯ ಕಾದಂಬರಿಕಾರರ ಬಗ್ಗೆ ನಾವಿಲ್ಲಿ ತಿಳಿಸುತ್ತಿದ್ದೇವೆ.

1 . ವಿ. ಎಸ್. ನೈಪಾಲ್

1 . ವಿ. ಎಸ್. ನೈಪಾಲ್

ಈ ಕಾದಂಬರಿಕಾರ ಪಕ್ಕಾ ಭಾರತೀಯನಾಗಿಲ್ಲದಿರಬಹುದು ಆದರೆ ಇವರು ಭಾರತೀಯ ವಂಶದವರಾಗಿದ್ದರಿಂದ ಅವರನ್ನು ಈ ಪಟ್ಟಿಯಲ್ಲಿ ಸೇರಿಸಬಹುದು. ಇವರು ಬೂಕರ್ ಪ್ರಶಸ್ತಿ ಗೆ ಅರ್ಹರಾದ ಮತ್ತು ಆಯ್ಕೆಯಾದ ಮೊದಲ ಭಾರತೀಯ. ಇವರ '‘In a Free State' ಎಂಬ ಕಾದಂಬರಿಗೆ 1971 ರಲ್ಲಿ ಬೂಕರ್ ಪ್ರಶಸ್ತಿ ದೊರೆಯಿತು. ಇವರ ಮತ್ತೊಂದು ಕಾದಂಬರಿ 'A Bend in the River' ಪುಸ್ತಕ 1979 ರಲ್ಲಿ ಬೂಕರ್ ಪ್ರಶಸ್ತಿಗೆ ಅರ್ಹತೆ ಪಡೆದಿತ್ತು. ಆಧುನಿಕ ಗ್ರಂಥಾಲಯದಲ್ಲಿ ಈ ಕಾದಂಬರಿ 20 ನೆ ಶತಮಾನದ 100 ಅತುತ್ತಮ ಕಾದಂಬರಿಗಳಲ್ಲಿ 83 ನೆಯ ಸ್ಥಾನ ಪಡೆದಿದೆ.

2. ಅನಿತಾ ದೇಸಾಯಿ

2. ಅನಿತಾ ದೇಸಾಯಿ

ಅನಿತಾ ದೇಸಾಯಿ ಯವರು ಬೂಕರ್ ಪ್ರಶಸ್ತಿಗೆ ಒಂದಲ್ಲ ಎರಡಲ್ಲ ಮೂರು ಭಾರಿ ಅರ್ಹರೆನಿಸಿಕೊಂಡಿದ್ದರು.ಮೊದಲು 1980 ರಲ್ಲಿ ಅವರ 'Clear Light of Day' ಎಂಬ ಪುಸ್ತಕಕ್ಕೆ ಮತ್ತು ಎರಡನೆಯ ಭಾರಿ 1984 ರಲ್ಲಿ ಇವರ 'In Custody' ಎಂಬ ಪುಸ್ತಕ ಬೂಕರ್ ಪಟ್ಟಿಯಲ್ಲಿ ಸೇರಿತು ಇದನ್ನು 1993 ರಲ್ಲಿ ಚಲನಚಿತ್ರ ವನ್ನಾಗಿ ನಿರ್ಮಿಸಲಾಯಿತು. ಮೂರನೆ ಮತ್ತು ಕೊನೆಯದಾಗಿ ದ್ವಿ ಸಂಸ್ಕೃತಿಯನ್ನು ಬಿಂಬಿಸುವ 'Fasting, Feasting'(ಫಾಸ್ಟಿಂಗ್ ಫೀಸ್ಟಿಂಗ್)ಎಂಬ ಕಾದಂಬರಿಗೆ 1999 ರಲ್ಲಿ ಅರ್ಹವೆನಿಸಿಕೊಂಡಿತ್ತು. ಸಾಹಿತ್ಯ ಅಕಾಡಮಿ ಪ್ರಶಸ್ತಿ ಕೂಡ ಲಭಿಸಿದೆ. 2011 ರಲ್ಲಿ ಪ್ರಕಟವಾದ 'The Artist of Disappearance' ಎಂಬುದು ಇವರ ಕೊನೆಯ ಕಾದಂಬರಿಯಾಗಿದೆ.

3.ಸಲ್ಮಾನ್ ರಶೀದ್

3.ಸಲ್ಮಾನ್ ರಶೀದ್

ವಿವಾದಾತ್ಮಕ ಮಾಂತ್ರಿಕ ವಾಸ್ತವವಾದಿಯಾದ ಸಲ್ಮಾನ್ ರಶೀದ್ 4 ಭಾರಿ ಬೂಕರ್ ಪ್ರಶಸ್ತಿ ಪಡೆದುದಷ್ಟೇ ಅಲ್ಲ 'ಬೂಕರ್ ಆಫ್ ಬೂಕರ್' ಮತ್ತು 'ದಿ ಬೆಸ್ಟ್ ಬೂಕರ್' ಪ್ರಶಸ್ತಿಯನ್ನು ಪಡೆದಿದ್ದಾರೆ. ಮೊದಲು 1981 ರಲ್ಲಿ 'Midnight's Children ', ನಂತರ 1983 ರಲ್ಲಿ 'ಶೇಮ್' ಪುಸ್ತಕ, 1988 ರಲ್ಲಿ 'The Satanic Verses' ಮತ್ತು 1995 ರಲ್ಲಿ 'The Moor's Last Sigh' ಎಂಬ ಪುಸ್ತಕವು ಅಂತಿಮ ಪಟ್ಟಿಯಲ್ಲಿ ಸೇರಿದ ಪುಸ್ತಕಗಳಾಗಿವೆ.

4.ರೋಹಿನ್ ಟನ್ ಮಿಸ್ತ್ರಿ

4.ರೋಹಿನ್ ಟನ್ ಮಿಸ್ತ್ರಿ

ಇಂಡೋ ಕೆನಡಿಯನ್ ಆದ ರೋಹಿನ್ ಟನ್ ಮಿಸ್ತ್ರಿ ಇದುವರೆಗೆ ಮೂರು ಕಾದಂಬರಿಗಳನ್ನು ಬರೆದಿದ್ದು ಮೂರೂ ಕೂಡ ಬೂಕರ್ ಪ್ರಶಸ್ತಿ ಗೆ ಆಯ್ಕೆಯಾಗಿವೆ.1991 ರಲ್ಲಿ 'Such a Long Journey'(ಸಚ್ ಎ ಲಾಂಗ್ ಜರ್ನಿ) ಬೂಕರ್ ಪಟ್ಟಿಗೆ ಸೇರಿ,ಬಾಳ ಠಾಕ್ರೆಯವರ ದೂರು ಮುಂಬೈ ವಿಶ್ವವಿದ್ಯಾಲಯದ ಪಟ್ಯ ಪುಸ್ತಕದಿಂದ ತೆಗೆಯುವಂತೆ ಮಾಡಿ ಹೆಚ್ಚು ಜನಪ್ರಿಯತೆ ಪಡೆಯಿತು. ಇವರ ಎರಡನೇ ಪುಸ್ತಕ 'A Fine Balance'1996 ರಲ್ಲಿ ಮತ್ತು ಮೂರನೆ ಮತ್ತು ಕೊನೆಯ ಪುಸ್ತಕ 'Family Matters' ಗೆ 2002 ರಲ್ಲಿ ಲಭಿಸಿತು.

5. ಅರುಂಧತಿ ರಾಯ್

5. ಅರುಂಧತಿ ರಾಯ್

ಈ ರಾಜಕೀಯ ಚಳುವಳಿಕಾರ್ತಿ 1997 ರಲ್ಲಿ ಅವರ ಮೊದಲ ಕಾದಂಬರಿ 'The God of Small Things' ಗೆ ಬೂಕರ್ ಪ್ರಶಸ್ತಿ ಪಡೆದರು. ಇದು ಅತಿ ಹೆಚ್ಚು ಬುಕ್ ಕೂಡ ಹೌದು . ಅಲ್ಲಿಂದ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದು ಅವರ ರಾಜಕೀಯ ನಿಲುವು ಮತ್ತು ವಿಮರ್ಶೆಯಿಂದ ಹೆಚ್ಚಿನ ಗಮನ ಸೆಳೆದಿದೆ . ಬೂಕರ್ ಅಲ್ಲದೆ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ . 2006 ರಲ್ಲಿ ಸಾಹಿತ್ಯ ಆಕಾಡಮಿ ಕೂಡ ದೊರೆತಿದೆ .

6. ಕಿರಣ್ ದೇಸಾಯಿ

6. ಕಿರಣ್ ದೇಸಾಯಿ

ತಾಯಿ ಮಾಡಲಾಗದ್ದನ್ನು ಮಗಳು ಮಾಡಿದಳು . ಅನಿತಾ ದೇಸಾಯಿ ಮಗಳಾದ ಕಿರಣ್ ದೇಸಾಯಿಗೆ ತನ್ನ ಎರಡನೇ ಮತ್ತು ಕೊನೆ ಪುಸ್ತಕವಾದ 'The Inheritance of Loss'ಎಂಬ ಪುಸ್ತಕಕ್ಕೆ 2006 ರಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿ ಲಭಿಸಿತು. ಇವರ ಮೊದಲ ಕಾದಂಬರಿ ' Hullabaloo in the Guava Orchard ' ಎಂಬ ಪುಸ್ತಕವೂ ಕೂಡ ಸಲ್ಮಾನ್ ರಶೀದ್ ರಂತೆ ಲೇಖಕರಿಂದ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತ್ತು. 2010 ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರಾದ ಒರ್ಹಾನ್ ಪಮುಕ್ ತಮಗೆ ಕಿರಣ್ ದೇಸಾಯಿ ಅವರೊಂದಿಗೆ ಸಂಬಂಧ ಇರುವುದಾಗಿ ತಿಳಿಸಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಒಂದು ದೊಡ್ಡ ವಿಷಯವಾಗಿ ಚರ್ಚೆಯಾಯಿತು.

7. ಇಂದ್ರ ಸಿನ್ಹ

7. ಇಂದ್ರ ಸಿನ್ಹ

ಬ್ರಿಟಿಷ್-ಇಂಡಿಯನ್ ಆದ ಇವರು ಬೋಪಾಲ್ ಅನಿಲ ದುರಂತದ ಬಗ್ಗೆ ಬರೆದ ಕಾದಂಬರಿ 'Animal's People ' 2007 ರಲ್ಲಿ ಬೂಕರ್ ಪ್ರಶಸ್ತಿಗೆ ಅರ್ಹತೆ ಪಡೆದಿತ್ತು. ಭೂಪಾಲ್ ಅನಿಲ ದುರಂತದ ಸಂತ್ರಸ್ತರ ನ್ಯಾಯಕ್ಕಾಗಿ ಭಾವೋದ್ರಿಕ್ತರಾಗಿ ಪ್ರಚಾರ ಮಾಡುವುದರ ಜೊತೆಗೆ ಜಾಹೀರಾತುಗಳನ್ನು ಮತ್ತು ಅನೇಕ ಸಂದರ್ಶನವನ್ನು ನೀಡುವುದರ ಜೊತೆಗೆ ಪತ್ರಿಕೆಗಳಲ್ಲಿ ಲೇಖನಗಳನ್ನು ಕೂಡ ಪ್ರಕಟಿಸಿದರು . ಬ್ರಿಟಿಷ್ ಲೇಖಕರ ಮೊದಲ ಹತ್ತು ಜನರ ಪಟ್ಟಿಯಲ್ಲಿ ಸೇರುವ ಇಂದ್ರ ಸಿನ್ಹರವರು ಸಂಸ್ಕೃತವನ್ನು ಆಂಗ್ಲ ಭಾಷೆಗೆ ಅನುವಾದಿಸುವಲ್ಲಿ ಯಶಸ್ವಿಯಾಗಿದ್ದಾರೆ .

8.ಅರವಿಂದ್ ಅಡಿಗ

8.ಅರವಿಂದ್ ಅಡಿಗ

ಚೆನ್ನೈ ನ ಮೂಲದವರಾದ ಅರವಿಂದ ಅಡಿಗರ 'The White Tiger ' ಪುಸ್ತಕದ ಮೂಲಕ 2008 ರಲ್ಲಿ ಕೂಡ ಭಾರತ ಬೂಕರ್ ಪ್ರಶಸ್ತಿಯ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಜಾಗತಿಕ ಪ್ರಪಂಚದಲ್ಲಿ ಹಾಸ್ಯ ದೃಷ್ಟಿಕೋನದಿಂದ ಭಾರತದ ವರ್ಗ ಹೋರಾಟದ ಬಗ್ಗೆ ಇರುವ ಈ ಕಾದಂಬರಿಯು ಆಯ್ಕೆಯಾದಾಗ ಅಡಿಗರವರು ಎರಡನೆಯ ಅತಿ ಚಿಕ್ಕ ವಯಸ್ಸಿನ ಲೇಖಕ ಎಂದು ಗುರುತಿಸಲ್ಪಟ್ಟರು. ಅಷ್ಟೇ ಅಲ್ಲದೆ ತಮ್ಮ ಪ್ರಥಮ ಕಾದಂಬರಿಯೇ ಬೂಕರ್ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಇವರು ನಾಲ್ಕನೆಯವರು.

9.ಅಮಿತಾವ್ ಘೋಷ್

9.ಅಮಿತಾವ್ ಘೋಷ್

ಅದೇ ವರ್ಷ ಬೆಂಗಾಲಿ ಬರಹಗಾರರಾದ ಅಮಿತಾವ್ ಘೋಷ್ ಅವರ ಆರನೇ ಕಾದಂಬರಿ 'Sea of Poppies' ಕೂಡ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿ ಭಾರತದಿಂದ ಎರಡು ಹೆಸರು ಪಟ್ಟಿಯಲ್ಲಿ ಮಿಂಚಿತು. 1830 ರ ಮೊದಲ ಆಫೀಮು ಯುದ್ಧದ ಬಗ್ಗೆ ಇದರಲ್ಲಿ ತಿಳಿಸಲಾಗಿದೆ. ಇವರ ಇತ್ತೀಚಿನ (2011 ) ಕಾದಂಬರಿ '‘River of Smoke' ಇದರ ಎರಡನೇ ಸಂಪುಟವಾಗಿದೆ ಮತ್ತು ಮೂರನೆಯ ಸಂಪುಟವು ಪ್ರಕಟಣೆಯ ಹಂತದಲ್ಲಿದೆ . ಇವರಿಗೆ 2007 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

10. ಜೀತ್ ತಾಯಿಲ್

10. ಜೀತ್ ತಾಯಿಲ್

ಕಾದಂಬರಿಕಾರ, ಸಂಗೀತಗಾರ ಮತ್ತು ಕವಿ ಜೀತ್ ತಾಯಿಲ್. 2012 ರ ಬೂಕರ್ ಪ್ರಶಸ್ತಿಗೆ ಇವರ ಹೆಸರು ಆಯ್ಕೆಯಾಗಿತ್ತು. ಇದು ಅವರ ಮೊದಲ ಮತ್ತು ವೈಜ್ಞಾನಿಕ ಪುಸ್ತಕ 'Narcopolis ' 1970 ರ ಬಾಂಬೆ ವ್ಯವಹಾರದ ಬಗ್ಗೆ ಮತ್ತು ಅಫೀಮ್ ಮಾದಕತೆಯ ಒಳಗೆ ಮತ್ತು ಹೊರಗೆ ಮಾನವನ ಕೊಂಡಿಯ ಬಗ್ಗೆ ಬರೆಯಲಾಗಿದೆ . ಈ ಕಾದಂಬರಿಯನ್ನು ಬರೆಯಲು ಐದು ವರ್ಷ ತೆಗೆದುಕೊಂಡಿದ್ದು ಇದು ಆವರ ಮಾದಕತೆಯ ಸ್ವ ಅನುಭವವಾಗಿದೆ .

2013ರ ಬೂಕರ್ ಪ್ರಶಸ್ತಿ

2013ರ ಬೂಕರ್ ಪ್ರಶಸ್ತಿ

2013ರ ಅಂತರಾಷ್ಟ್ರೀಯ ಮ್ಯಾನ್ ಬೂಕರ್ ಪ್ರಶಸ್ತಿಯಲ್ಲಿ ಕೊನೆಯ ಹಂತದಲ್ಲಿ ಯು ಆರ್ ಅನಂತಮೂರ್ತಿಯವರ ಕೈತಪ್ಪಿ ಹೋಯಿತು.

English summary

10 Indian Novelists Who Made It To Bookers Prize

With the announcement of the Man Booker International Prize on this month, we bring you the 10 Indian novelists who have been shortlisted for or have won the Bookers. 
X
Desktop Bottom Promotion