For Quick Alerts
ALLOW NOTIFICATIONS  
For Daily Alerts

ಹುಡುಗಿಯರಿಗೆ ಆತ್ಮ ವಿಶ್ವಾಸ ತುಂಬುವ 10 ಹವ್ಯಾಸಗಳು

By Super
|

ಶಾಲಾ ಕಾಲೇಜಿನಲ್ಲಿ ನಲ್ಲಿರುವಾಗ ಉಪನ್ಯಾಸಕರು ವಹಿಸುವ ಹತ್ತು ಹಲವು ಬಗೆಯ ಪ್ರಾಜೆಕ್ಟ್/ಅಸೈನ್ಮೆಂಟುಗಳ ಕೆಲಸದಿಂದ ಬೇಸತ್ತು ರಜೆಗಾಗಿ ಹಂಬಲಿಸುತ್ತೀರಿ ಆದರೆ ನಿಜವಾಗಲೂ ರಜೆ ಬಂದಾಗ ಏನು ಮಾಡಬೇಕೆಂದೇ ತೋಚುವುದಿಲ್ಲ. ಸುಮ್ಮನೆ ನಿಷ್ಕ್ರಿಯರಾಗಿ ಎಲ್ಲ ರಜೆಯನ್ನು ನಿಮ್ಮ ರೂಮಿನಲ್ಲೇ ಕೂತು ಕಳೆದರೆ, ನೀವು ಎಚ್ಚೆತ್ತುಕೊಳ್ಳುವದರೊಳಗೆ ಮತ್ತೆ ಕಾಲೇಜು ಆರಂಭವಾಗಿ ನಿಮ್ಮ ಹತಾಶೆ ಮತ್ತಷ್ಟು ಹೆಚ್ಚುವುದರಲ್ಲಿ ಸಂಶಯವಿಲ್ಲ.

ಆದ್ದರಿಂದ ರಜೆಯನ್ನು ಕಳೆಯುವ ಅತ್ಯುತ್ತಮ ವಿಧಾನವೆಂದರೆ ನಿಮಗೆ ಆಸಕ್ತಿ ಇರುವ ವಿಷಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು. ಹಾಗೆ ಮಾಡಿದಾಗ ರಜಾ ದಿನಗಳು ಮಿಂಚಿನ ವೇಗದಲ್ಲಿ ಕಳೆದು ಹೋಗುವುದು ನಿಮ್ಮ ಅನುಭವಕ್ಕೆ ಬರುತ್ತದೆ. ಹರೆಯದ ಹುಡುಗಿಯರಿಗೆಂದೇ ಪಟ್ಟಿ ಮಾಡಿರುವ ಕೆಲವು ಉತ್ತಮ ಹವ್ಯಾಸಗಳು ಇಂತಿವೆ.

1. ಓದು

1. ಓದು

ಯಾವುದಾದರು ಸಣ್ಣ ಕಥೆಗಳ ಪುಸ್ತಕ ಅಥವ ಪ್ರಣಯ ಕಾದಂಬರಿ ಅಥವ ಇನ್ಯಾವುದಾದರೂ ನಿಮಗಿಷ್ಟದ ಪುಸ್ತಕವನ್ನು ಕೈಗೆತ್ತಿಕೊಳ್ಳಿ. ಆದರೆ ಅದು ಅಪ್ಪಿತಪ್ಪಿಯೂ ನಿಮ್ಮ ಶಾಲಾ ಕಾಲೇಜಿನ ಓದಿಗೆ ಸಂಬಂಧಿಸಿರಬಾರದು! ಇಲ್ಲವಾದಲ್ಲಿ ನೀವು ಅದರಲ್ಲಿ ಬೇಗ ಆಸಕ್ತಿ ಕಳೆದುಕೊಳ್ಳುತ್ತೀರಿ.

2. ದಿನಚರಿ ದಾಖಲಿಸಿ

2. ದಿನಚರಿ ದಾಖಲಿಸಿ

ದಿನವೂ ಮಲಗುವ ಮುನ್ನ ಆ ದಿನದ ನಿಮ್ಮ ಎಲ್ಲ ಚಟುವಟಿಕೆಗಳನ್ನು ಒಂದು ಡೈರಿಯಲ್ಲಿ ಬರೆದಿಡಿ. ಒಂದು ವೇಳೆ ಇದು ಬೋರ್ ಎನಿಸಿದರೆ ನಿಮಗಿಷ್ಟವಾದ ಯಾವುದಾದರೂ ವಿಷಯದ ಬಗ್ಗೆ ಒಂದು ಸಣ್ಣ ಟಿಪ್ಪಣಿಯನ್ನಾದರೂ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಬರೆಯುವ ಕೌಶಲ್ಯ ಅಭಿವೃದ್ದಿಯಾಗುವುದು ಹಾಗೆಯೇ ನಿಮಗೇ ತಿಳಿಯದಂತೆ ನಿಮ್ಮೊಳಗಿರುವ ಲೇಖಕ/ಲೇಖಕಿಯನ್ನು ಹೊರತರಲು ಇದೊಂದು ವೇದಿಕೆಯಾಗಬಹುದು!

3. ಛಾಯಾಗ್ರಹಣ

3. ಛಾಯಾಗ್ರಹಣ

ನೀವು ನೋಡುವ ಮಧುರ ದೃಶ್ಯಗಳನ್ನು ಸೆರೆಹಿಡಿದು ಅವುಗಳನ್ನು ಶಾಶ್ವತಗೊಳಿಸಿ. ಈ ದಿನಗಳಲಂತೂ ಡಿಜಿಟಲ್ ಕ್ಯಾಮೆರಾಗಳ ಸಹಾಯದಿಂದ ಫೋಟೋಗ್ರಫಿ ಬಹಳವೇ ಸುಲಭ ಹಾಗು ಅನುಕೂಲವಾದ ಹವ್ಯಾಸವಾಗಿ ಬದಲಾಗಿದೆ. ಅಷ್ಟೇಕೆ, ನೀವು ನಿಮ್ಮ ಸ್ಮಾರ್ಟ್ ಫೋನ್ ಬಳಸಿ ಕೂಡ ಉತ್ತಮ ಚಿತ್ರಗಳನ್ನು ತೆಗೆಯಬಹುದು.

4. ನೃತ್ಯ

4. ನೃತ್ಯ

ನಿಮಗಿಷ್ಟವಾದ ನೃತ್ಯ ಪ್ರಾಕಾರವನ್ನು ಕಲಿಯಿರಿ. ಈಗಂತೂ ಸಾಲ್ಸಾ ದಿಂದ ಜಾಜ್ ವರೆಗೂ ಬಹಳಷ್ಟು ಆಯ್ಕೆಗಳಿವೆ. ಈ ನೃತ್ಯದ ಮಾದರಿಗಳು ನೋಡಲೂ ಚಂದ ಜೊತೆಗೆ ಒಳ್ಳೆಯ ವ್ಯಾಯಾಮವು ಆಗುತ್ತದೆ.

5. ಹಾಡು

5. ಹಾಡು

ನಿಮ್ಮ ಹಾಡುವ ಸಾಮರ್ಥ್ಯವನ್ನು ಒರೆಗೆ ಹಚ್ಚಿ. ನಿಮ್ಮ ನೆಚ್ಚಿನ ಹಾಡು ಅಥವಾ ರಾಗಗಳನ್ನು ಗುನುಗಲು ಶುರು ಮಾಡಿದರೆ, ಕಾಲ ಸರಿಯುವುದೇ ತಿಳಿಯುವುದಿಲ್ಲ.

6. ಸಂಗೀತ

6. ಸಂಗೀತ

ಕಲಿಯುವುದಕ್ಕೆ ಯಾವುದೇ ವಯಸ್ಸು ಅಥವಾ ಕಾಲ ಮಿತಿ ಇಲ್ಲ. ನಿಮಗ್ಯಾವುದಾದರೂ ವಾಧ್ಯದಲ್ಲಿ ಆಸಕ್ತಿ ಇದ್ದರೆ ತಡ ಮಾಡದೆ ಕಲಿಯಿರಿ.

7. ಅಡುಗೆ

7. ಅಡುಗೆ

ಇದು ಕೇವಲ ಹವ್ಯಾಸವಲ್ಲ ಬದಲಿಗೆ ಬದುಕಲು ಬೇಕಿರುವ ಒಂದು ಮುಖ್ಯ ಕಲೆ. ನಿಮ್ಮ ತಾಯಿ ಅಥವಾ ನಿಮ್ಮ ಅಡುಗೆ ಭಟ್ಟರು ನಿಮ್ಮೊಂದಿಗೆ ಎಂದೆಂದಿಗೂ ಇರುವುದಿಲ್ಲ. ಹೋಟೆಲ್ ನಲ್ಲಿ ಎಷ್ಟು ದಿನ ತಾನೇ ತಿನ್ನಲು ಸಾದ್ಯ? ನೀವು ಅಡುಗೆ ಪ್ರವೀಣರಾಗಬೇಕೆಂದೇನೂ ಇಲ್ಲ ಆದರೆ ತಿನ್ನಲು ಯೋಗ್ಯವೆನಿಸುವ ಮಟ್ಟಿಗೆ ಅಡುಗೆ ಕಲಿತರೂ ಸಾಕು.

8. ಕಸೂತಿ

8. ಕಸೂತಿ

ಬಹಳಷ್ಟು ಯುವತಿಯರಿಗೆ ಕಸೂತಿಯಲ್ಲಿ ಆಸಕ್ತಿ ಇದೆ ಆದರೆ ಅದರಲ್ಲೇ ಹೊಸತನ್ನೇನಾದರೂ ಮಾಡಬಾರದೇಕೆ? ಆ ಕಲೆಯನ್ನು ಕಲಿತರೆ ನಿಮ್ಮ ಬಟ್ಟೆಗಳಲ್ಲದೆ ನಿಮ್ಮ ಗೆಳೆಯರ ಬಟ್ಟೆಗಳ ಮೇಲೂ ನಿಮ್ಮ ಪ್ರಯೋಗ ನಡೆಸಬಹುದು

9. ಸ್ವಯಂ ಸೇವಕರಾಗಿ

9. ಸ್ವಯಂ ಸೇವಕರಾಗಿ

ನೀವು ಪ್ರಾಣಿ ಪ್ರಿಯರಾದರೆ ಸಮೀಪದ ಪ್ರಾಣಿ ದಯಾ ಸಂಗವನ್ನು ಸೇರಿ. ಅಥವಾ ನೀವು ಬಡವರ ಅಥವಾ ನಿರ್ಗತಿಕರ ಸೇವೆ ಮಾಡ ಬಯಸುವಿರಾದರೆ ಯಾವುದಾದರೂ NGO ಸೇರಬಹುದು.

10. ಸ್ನೇಹಿತರನ್ನು ಸಂಪಾದಿಸಿ

10. ಸ್ನೇಹಿತರನ್ನು ಸಂಪಾದಿಸಿ

ನಿಮ್ಮ ಸ್ನೇಹಿತರೊಡಗೂಡಿ ಪಿಕ್ನಿಕ್ ಗೋ ಅಥವಾ ನಿಮ್ಮದೇ ಹುಡುಗಿಯರ ಗ್ಯಾಂಗ್ ನೊಂದಿಗೆ ಸಿನೆಮಾಗೆ ಹೋಗುವುದರಲ್ಲಿರುವ ಮಜಾ ಮತ್ತ್ಯಾವುದರಲ್ಲಿದೆ? ಇದರಿಂದ ನೀವು ಅದ್ಬುತ ಆನಂದ ಹೊಂದುವುದಲ್ಲದೇ ನೀವು ಕಷ್ಟದಲ್ಲಿದ್ದಾಗ ನಿಮ್ಮ ಸ್ನೇಹಿತರು ನಿಮ್ಮ ಸಹಾಯಕ್ಕೆ ಧಾವಿಸುತ್ತಾರೆ.

English summary

10 Hobbies That Build Confidence To Teenage Girls ಹದಿಹರೆಯದ ಹುಡುಗಿಯರಿಗಾಗಿ ಹತ್ತು ಉತ್ತಮ ಹವ್ಯಾಸಗಳು

The best way to spend your free time is to utilize it in something that interests you. Develop a good hobby and watch time fly by. Listed here are some hobbies for teenage girls.
X
Desktop Bottom Promotion