For Quick Alerts
ALLOW NOTIFICATIONS  
For Daily Alerts

ಮಧುಮೇಹಕ್ಕೆ ಸವಾಲೊಡ್ಡಿದ ಸೆಲೆಬ್ರಿಟಿಗಳು!

By Super
|

ಕೆಲವೊಮ್ಮೆ ರೋಗಗಳು ಎಂತವರಿಗೂ ತಗುಲುತ್ತದೆ. ದೊಡ್ಡ ಸ್ಟಾರ್ ಆದರೂ ಮಧುಮೇಹ ಇನ್ನಿತರ ಕಾಯಿಲೆಗಳು ಬಂದುಬಿಡಬಹುದು. ಆರೋಗ್ಯಯುತ ಜೀವನ ಶೈಲಿ, ಪ್ರತಿದಿನ ಜಿಮ್, ಫಿಟ್ ಆಗಿರಲು ಮಾಡುವ ವ್ಯಾಯಾಮ ಇವುಗಳನ್ನು ಮಾಡಿಕೊಂಡು ಬಂದರೂ ವಂಶಪಾರಂಪರ್ಯ ಅಥವಾ ಇನ್ನಿತರ ಕಾರಣದಿಂದಾಗಿ ರೋಗಗಳು ಮುತ್ತಿಕೊಂಡುಬಿಡುತ್ತವೆ. ಕೆಲವೊಂದು ಕಾಯಿಲೆಗಳನ್ನು ನಿರ್ವಹಿಸುವ ವಿಧಾನ ತಿಳಿದಿದ್ದರೆ ವೈದ್ಯರ ಸಲಹೆಯಂತೆ ನಡೆದುಕೊಂಡರೆ ಪರಿಹಾರ ಸಾಧ್ಯ.

ಇತ್ತೀಚಿಗೆ ನಟ ಟಾಮ್ ಹನ್ಕ್ಸ್ ತನಗೆ ಮಧುಮೇಹ ಟೈಪ್ 2 ಇರುವುದಾಗಿ ಹೇಳಿಕೊಂಡಿದ್ದಾರೆ. ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದ ಸ್ಥಿತಿ. ತನ್ನ 36ನೇ ವಯಸ್ಸಿನಿಂದ ಅಧಿಕ ರಕ್ತದ ಒತ್ತಡವನ್ನು ಹೊಂದಿದವರು ಈಗ 57 ನೇ ವಯಸ್ಸಿಗೆ ಮದುಮೇಹದಿಂದ ಬಳಲುತ್ತಿದ್ದಾರೆ ಎಂದು ಕಾಂಟಾಕ್ಟ್ ಮ್ಯುಸಿಕ್.ಕಾಂ ತಿಳಿಸಿದೆ. ಇದನ್ನು ಪರಿಣಾಮಕಾರಿ ಆಹಾರ ಪದ್ದತಿಯಿಂದ ತಹಬಂದಿಯಲ್ಲಿ ಇಡಲು ಸಾಧ್ಯ ಎಂದು ಹೇಳಲಾಗುತ್ತದೆ.

ಹಂಕ್ಸ್ ಹೇಳುವ ಪ್ರಕಾರ ಅವರ ವೈದ್ಯರು ಇವರು ಹೈ ಸ್ಕೂಲ್ ಗೆ ಹೋಗುವಾಗ ಇದ್ದ ತೂಕವನ್ನು ಈಗ ಪಡೆಯಲು ಸಾಧ್ಯವಾದರೆ ಸಂಪೂರ್ಣವಾಗಿ ಆರೋಗ್ಯವಾಗಿರಲು ಸಾಧ್ಯ ಎನ್ನುತ್ತಾರಂತೆ.ಹಾಗಿದ್ದರೆ ನಾನು ಟೈಪ್ 2 ಮಧುಮೇಹ ಹೊಂದುವುದು ಅನಿವಾರ್ಯ ಎಂದು ಹಂಕ್ಸ್ ತಿಳಿಸುತ್ತಾರೆ!.

ಕೇವಲ ಇವರು ಮಾತ್ರವಲ್ಲ ಇನ್ನೂ ಸಾಕಷ್ಟು ಸೆಲೆಬ್ರಿಟಿಗಳು ಮಧುಮೇಹದ ಕಾಯಿಲೆ ಅನುಭವಿಸುತ್ತಿದ್ದಾರೆ.ಅವರ ಬಗ್ಗೆ ತಿಳಿಯೋಣ ಬನ್ನಿ.

ಸೋನಂ ಕಪೂರ್

ಸೋನಂ ಕಪೂರ್

ಅನಿಲ್ ಕಪೂರ್ ಮಗಳು ತನ್ನ ಟೀನೇಜ್ ನ ದಿನಗಳಿಂದಲೇ ಮಧುಮೇಹದಿಂದ ಬಳಲಿದ್ದಾರೆ.ಸರಿಯಾದ ಆಹಾರದ ಪದ್ಧತಿ ಜೊತೆಗೆ ಇನ್ಸುಲಿನ್ ಮೂಲಕ ಆಕೆ ಅರೋಗ್ಯಯುತವಾಗಿರಲು ಪ್ರಯತ್ನಿಸಿದ್ದಾರೆ.ತನ್ನ ಬಿಡುವಿರದ ವೇಳಾಪಟ್ಟಿಯಲ್ಲಿ ಆಕೆಗೆ ಸಮಯದ ಅಭಾವವಿದ್ದರೂ ಅದನ್ನು ನಿರ್ವಹಿಸಲು ಕಲಿತುಕೊಂಡರು.ಮತ್ತು ಮಧುಮೇಹ ಸೋನಂ ಕಪೂರ್ ಗೆ ಬಾಲಿವುಡ್ ನಲ್ಲಿ ಯಶಸ್ವಿಯಾಗಲು ಯಾವುದೇ ಅಡ್ಡಿ ತರಲಿಲ್ಲ.

ಹ್ಯಾಲ್ ಬೆರ್ರಿ

ಹ್ಯಾಲ್ ಬೆರ್ರಿ

ಬಾಂಡ್ ಹುಡುಗಿಯಾದ ಹ್ಯಾಲ್ ಬೆರ್ರಿ ತನ್ನ 23 ನೇ ವಯಸ್ಸಿನಲ್ಲಿ ಟಿವಿ ಶೂಟಿಂಗ್ ಒಂದರಲ್ಲಿ ತಲೆಸುತ್ತಿ ಬಿದ್ದು ನಂತರ ಮಧುಮೇಹ ಇರುವುದಾಗಿ ತಿಳಿಸಲಾಯಿತು.ಆಕೆಯ ಮನೆಯಲ್ಲಿ ಬೇರೆಯಾರಿಗೂ ಮಧುಮೇಹದ ತೊಂದರೆ ಇರಲಿಲ್ಲ.ಅಂದಿನಿಂದ ಆಕೆ ಕಟ್ಟುನಿಟ್ಟಾದ ಆಹಾರ ಮತ್ತು ಪ್ರತಿದಿನ ಇನ್ಸುಲಿನ್ ತೆಗೆದುಕೊಳ್ಳುತ್ತಲೇ ಇದ್ದಾರೆ.ಈಗ ಆಕೆ ಜಂಕ್ ಫುಡ್ ಅಥವಾ ಸಿಹಿ ತಿನ್ನುವುದಿಲ್ಲ,ಕಡಿಮೆ ಕ್ಯಾಲೋರಿ ಇರುವ ಆಹಾರವನ್ನು ಬಳಸುತ್ತಾರೆ.

ಸಲ್ಮಾ ಹಯೆಕ್

ಸಲ್ಮಾ ಹಯೆಕ್

ಈ ನಟಿ ತಾನು ಗರ್ಭಿಣಿಯಾಗಿದ್ದಾಗ ಮಧುಮೇಹ ಅನುಭವಿಸಿದ್ದಾರೆ.ಅಮೇರಿಕನ್ ಬೇಬಿ ಮ್ಯಾಗಜಿನ್ ಗೆ ಮಾತನಾಡಿದ ಇವರು 'ತಾನು ಗರ್ಭಿಣಿಯಾದಾಗ ತನಗೆ ಮಧುಮೇಹ ಪ್ರಾರಂಭವಾಯಿತು.ಆದರೆ ಮೊದಲು ನನಗೆ ತಿಳಿಯಲೇ ಇಲ್ಲ.ಗರ್ಭಾವಸ್ಥೆಯಲ್ಲಿ ರಕ್ತದ ಸಕ್ಕರೆ ಅಂಶ ಮೇಲ್ಮಟ್ಟದಲ್ಲಿ ಇದ್ದರೆ ಈ ರೀತಿ ಆಗುತ್ತದಂತೆ.ಒಂಬತ್ತು ತಿಂಗಳವರೆಗೂ ತನಗೆ ವಾಕರಿಗೆ ಆಗುತ್ತಿತ್ತು' ಎಂದು ತಿಳಿಸಿದ್ದಾರೆ.

ವಾಸಿಂ ಅಕ್ರಮ್

ವಾಸಿಂ ಅಕ್ರಮ್

ವಾಸಿಂ ಅಕ್ರಮ್ 30 ನೇ ವಯಸ್ಸಿನಲ್ಲಿ ಮಧುಮೇಹ ಇರುವುದಾಗಿ ಖಚಿತಪಡಿಸಿಕೊಂಡರು.ಸ್ವಿಂಗ್ ಬೌಲರ್ ಆದ ಇವರಿಗೆ ಇದೊಂದು ಆಘಾತಕಾರಿ ವಿಷಯವಾಗಿತ್ತು.ಆದಾಗ್ಯೂ ತನ್ನ ಅನಾರೋಗ್ಯವನ್ನು ಎದುರಿಸಲು ಸರಿಯಾದ ಆಹಾರ ಪದ್ಧತಿ ಮತ್ತು ವ್ಯಾಯಾಮದ ಜೊತೆಗೆ ಪ್ರತಿದಿನ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರು.ಈ ರೋಗ ಆತ ಕ್ರಿಕೆಟ್ ನಲ್ಲಿ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲು ಮತ್ತು ಹೆಸರುವಾಸಿಯಾಗಲು ಯಾವುದೇ ಅಡ್ಡಿ ಮಾಡಲಿಲ್ಲ.

ಕಮಲ್ ಹಾಸನ್

ಕಮಲ್ ಹಾಸನ್

ಕಮಲ್ ಹಾಸನ್ ಮಧುಮೆಹ್ ಟೈಪ್ 1 ಹೊಂದಿದ್ದಾರೆ ಮತ್ತು ಭಾರತದ ಶೇಖಡಾ 5 ರಷ್ಟು ಜನ ಇತರ ರೀತಿಯ ಮಧುಮೇಹದಿಂದ ಬಳಲುತ್ತಿದ್ದಾರೆ.ಈ ರೋಗ ಅವರನ್ನು ಯಾವುದೇ ರೀತಿ ಅಡ್ಡಿ ತರಲಿಲ್ಲ ಮತ್ತು ಅವರು ಇದರ ಎಚ್ಚರಿಕೆಗಾಗಿ www.sugarbp.org. ಎಂಬ ವೆಬ್ ಸೈಟ್ ಪ್ರಾರಂಭಿಸಿದ್ದಾರೆ.

ಗೌರವ್ ಕಪೂರ್

ಗೌರವ್ ಕಪೂರ್

ಐಪಿಎಲ್ ಎಕ್ಸ್ಟ್ರಾ ಇನ್ನಿಂಗ್ಸ್ ಹೋಸ್ಟ್ ಗೌರವ್ ಕಪೂರ್ ತನ್ನ 21 ನೆ ವಯಸ್ಸಿನಲ್ಲಿಯೇ ಟೈಪ್ 1 ಮಧುಮೇಹ ಹೊಂದಿದ್ದರು.ಈ ಖಾಯಿಲೆಯಿಂದ ಹೊರಬರಲು ಆರೋಗ್ಯಯುತ ಜೀವನ ಶೈಲಿ ಪ್ರಾರಂಭಿಸಿದರು.ಪ್ರತಿದಿನ ಜಾಗ್ ಮಾಡುವುದರೊಂದಿಗೆ ಯೋಗ ಮತ್ತು ಆರೋಗ್ಯಯುತ ಆಹಾರ ಪದ್ಧತಿ ಅಳವಡಿಸಿಕೊಂಡಿದ್ದಾರೆ.ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡಿಕೊಳ್ಳಲು ಅಲ್ಕೋಹಾಲ್ ನಿಂದ ದೂರವಿರುತ್ತಾರೆ.

ಡ್ರೂ ಕ್ಯಾರ್ರಿ

ಡ್ರೂ ಕ್ಯಾರ್ರಿ

ಅಧಿಕ ತೂಕದಿಂದ ಹಾಸ್ಯ ನಟನಾಗಿ ಜನಪ್ರಿಯವಾಗಿದ್ದ ಕ್ಯಾರ್ರಿ ಟೈಪ್ 2 ಮಧುಮೇಹ ಪಡೆದ ನಂತರ 80 ಪೌಂಡ್ ಅಷ್ಟು ತೂಕ ಕಳೆದುಕೊಂಡಿದ್ದಾರೆ.ಅವರು ಅಷ್ಟು ತೂಕ ಕಳೆದುಕೊಂಡಿರುವುದರಿಂದ ಈಗ ಪ್ರತಿದಿನ ಮಧುಮೇಹದ ಔಷಧಿ ತೆಗೆದುಕೊಳ್ಳುವುದರ ಅಗತ್ಯವೇ ಇಲ್ಲ ಎನ್ನುತ್ತಾರೆ.

ಜಾರ್ಜ್ ಲುಕಾಸ್

ಜಾರ್ಜ್ ಲುಕಾಸ್

ಸ್ಟಾರ್ ವಾರ್ ನಿರ್ದೇಶಕ ವಿಯೆಟ್ನಾಂ ವಾರ್ ನಂತರ ತನ್ನ ಕಾಲೇಜು ಪದವಿ ಪಡೆಯುವಾಗ ನಡೆಸಿದ ದೈಹಿಕ ಪರೀಕ್ಷೆಯಿಂದ ಟೈಪ್ 2 ಮಧುಮೇಹದಿಂದ ಬಳಲುತ್ತಿರುವುದು ಬಹಿರಂಗವಾಯಿತು.

ಬಿಲ್ಲೀ ಜೀನ್ ಕಿಂಗ್

ಬಿಲ್ಲೀ ಜೀನ್ ಕಿಂಗ್

ಉತ್ತಮ ಮಹಿಳಾ ಟೆನಿಸ್ ಆಟಗಾರ್ತಿ ಜೀನ್ ಕಿಂಗ್ 2006 ರಲ್ಲಿ ಮಧುಮೇಹ ಹೊಂದಿರುವುದಾಗಿ ತಿಳಿದುಬಂತು.ನಂತರ ಅವರು 35 ಪೌಂಡ್ ನಷ್ಟು ತೂಕ ಕಡಿಮೆ ಮಾಡಿಕೊಂಡರು ಮತ್ತು ಮಧುಮೇಹದ ಬಗ್ಗೆ ಎಚ್ಚರಿಕೆ ನೀಡುವಲ್ಲಿ ಪಾಲ್ಗೊಂಡರು.

ನಮಗೆಲ್ಲ ತಿಳಿದಿರುವಂತೆ ಮಧುಮೇಹ ನಿರ್ವಹಿಸಲು ಸಾಧ್ಯವಿರುವ ರೋಗ.ಆದರೆ ನಮಗೆ ಇದನ್ನು ನಿರ್ವಹಿಸುವ ಬಗೆ ತಿಳಿದಿರಬೇಕಷ್ಟೇ.

English summary

10 Celebrities Living With Diabetes

Diabetes is a major problem, but if you control the sugar level in the body, Diabetic patience can live the life as common as other people. Here are some other celebrities who’ve tackled the menace.
X
Desktop Bottom Promotion