For Quick Alerts
ALLOW NOTIFICATIONS  
For Daily Alerts

ಅತೀ ಬುದ್ಧಿವಂತ ಪ್ರಾಣಿಗಳಿವು!

|

ಮನುಷ್ಯನಿಗಿಂತ ಬುದ್ಧಿವಂತ ಮತ್ತೊಂದು ಜೀವಿ ಈ ಭೂಮಿಯಲ್ಲಿ ಇಲ್ಲ ಬಿಡಿ. ಬುದ್ಧಿವಂತಿಕೆ, ನಿಯತ್ತು, ವಂಚನೆ, ಕ್ರೌರ್ಯ ಈ ಎಲ್ಲಾ ಗುಣಗಳಿರುವ ಜೀವಿಯೆಂದರೆ ಮನುಷ್ಯ ಮಾತ್ರ! ಆದರೆ ಪ್ರಾಣಿಗಳು ತಮ್ಮದೇ ಆದ ಗುಣವನ್ನು ಹೊಂದಿರುತ್ತದೆ.

ಕ್ರೂರ ಪ್ರಾಣಿ, ಸಾಧು ಪ್ರಾಣ, ಸುಂದರವಾದ ಪ್ರಾಣಿ, ವಿಚಿತ್ರವಾದ ಪ್ರಾಣಿ ಎಂದು ಅವುಗಳನ್ನು ವರ್ಗೀಕರಿಸಬಹುದು. ಪ್ರಾಣಿಗಳಲ್ಲಿ ಅದರದೇ ಗುಣವಿದ್ದರೂ ಕೆಲವೊಂದು ಪ್ರಾಣಿಗಳು ನಮ್ಮ ಜೊತೆ ಒಡನಾಡುವಷ್ಟು ಬುದ್ಧಿವಂತಿಕೆಯನ್ನು ಹೊಂದಿರುತ್ತದೆ.

ಅಂತಹ ಬುದ್ಧಿವಂತ ಪ್ರಾಣಿಗಳ ಬಗ್ಗೆ ಚಿತ್ರ ಮಾಹಿತಿ ನೀಡಲಾಗಿದೆ ನೋಡಿ:

ಚಿಂಪಾಂಜಿ:

ಚಿಂಪಾಂಜಿ:

ಚಿಂಪಾಂಜಿಯ ಬುದ್ಧಿವಂತಿಕೆ ಸರಿಸುಮಾರು ಮನುಷ್ಯನ ಬುದ್ಧಿವಂತಿಕೆಗೆ ಹೋಲುತ್ತದೆ. ಮನುಷ್ಯನ ಜೊತೆ ಚಿಂಪಾಂಜಿ ಸ್ವಲ್ಪ ಸಮಯ ಇದ್ದರೆ ಸಾಕು, ಬೇಗನೆ ಅವನ ಸನ್ನೆ, ಭಾಷೆಗಳನ್ನು ಅರ್ಥೈಸಿಕೊಳ್ಳುತ್ತದೆ.

ಡಾಲ್ಫಿನ್:

ಡಾಲ್ಫಿನ್:

ಡಾಲ್ಫಿನ್ ಮನುಷ್ಯನನ್ನು ಬೇಗನೆ ಆಕರ್ಷಿಸುತ್ತದೆ. ಇದನ್ನು ಮನುಷ್ಯನ ಬೆಸ್ಟ್ ಫ್ರೆಂಡ್ ಎಂದು ಕರೆಯಲಾಗಿದೆ. ಡಾಲ್ಫಿನ್ ಗೆ ಏನಾದರೂ ಸಮಸ್ಯೆ ಉಂಟಾದರೆ ಬೇಗನೆ ಪರಿಹರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ಪೆಂಗ್ವಿನ್:

ಪೆಂಗ್ವಿನ್:

ಪೆಂಗ್ವಿನ್ ಸ್ವತಂತ್ರವಾಗಿ ಬದುಕುವ ಪ್ರಾಣಿ. ಕನ್ನಡಿಯಲ್ಲಿ ಇದರ ಪ್ರತಿಬಿಂಬ ನೋಡಿದರೆ ಅದು ತನ್ನದೇ ಪ್ರತಿಬಿಂಬ ಎಂದು ಗುರುತಿಸುವಂತಹ ಬುದ್ಧಿವಂತ ಜೀವಿ. ಪೆಂಗ್ವಿನ್ ತುಂಬಾ ನಿಯತ್ತಿನ ಜೀವಿ. ಮನುಷ್ಯ ಸುಲಭವಾಗಿ ಇದನ್ನು ಪಳಗಿಸಬಹುದು.

ಗಿಣಿ:

ಗಿಣಿ:

ಮನೆಯಲ್ಲಿ ಗಿಣಿಯನ್ನು ತಂದು ಸಾಕಿದರೆನಿಧಾನಕ್ಕೆ ನಮ್ಮ ಹೆಸರನ್ನು ಹಿಡಿದು ಕೂಗುತ್ತದೆ, ಅಪರಿಚಿತರು ಬಂದರೆ ಕಿರುಚುತ್ತದೆ. ಇದಕ್ಕೆ ಸರಿಯಾಗಿ ಪರಿಣಿತಿ ಕೊಟ್ಟರೆ ಮನೆ ರಕ್ಷಣೆಯನ್ನು ಮಾಡುತ್ತದೆ.

ಆನೆ:

ಆನೆ:

ಆನೆಯ ಜ್ಞಾಪಕ ಶಕ್ತಿ ಅಪಾರವಾದದು. ಆನೆ ಭಾವನೆ ಜೀವಿಯಾಗಿದ್ದು , ಆನೆಯನ್ನು ಪಳಗಿಸಿದರೆ ನಾವು ಹೇಳುವಂತೆ ನಡೆದುಕೊಳ್ಳುವುದು.

ನಾಯಿ:

ನಾಯಿ:

ನಾಯಿಗೆ ಸರಿಯಾದ ರೀತಿಯಲ್ಲಿ ಟ್ರೈನಿಂಗ್ ಕೊಟ್ಟರೆ ಯಾವದೇ ಕಾವಲುಗಾರನ ಅಗತ್ಯ ಕಂಡು ಬರುವುದಿಲ್ಲ. ನಾಯಿ ಬೇಗನೆ ಮನುಷ್ಯನ ಜೊತೆ ಬೆರೆಯುತ್ತದೆ ಅಲ್ಲದೆ ನಾಯಿಯಷ್ಟು ನಿಯತ್ತಿನ ಜೀವಿ ಮತ್ತೊಂದಿಲ್ಲ.

ಇರುವೆ:

ಇರುವೆ:

ಇರುವೆಯ ಬುದ್ಧಿವಂತಿಕೆಯ ಬಗ್ಗೆ ಅನೇಕ ಕಥೆಗಳನ್ನು ಕೇಳಿರಬಹುದು. ಅವುಗಳು ಬಂದ ದಾರಿಯನ್ನು ನೆನೆಪಿಟ್ಟುಕೊಳ್ಳುತ್ತವೆ. ಒಂದರ ಹಿಂದೆ ಒಂದು ಶಿಸ್ತಿನಿಂದ ಸಾಗುತ್ತದೆ.

ಥಾಮಸ್ ಆಲ್ವಾ ಎಡಿಸನ್ :

ಥಾಮಸ್ ಆಲ್ವಾ ಎಡಿಸನ್ :

ಎಡಿಸನ್ ಗೆ ಕಿವುಡುತನ ವಿದ್ದರೂ ಅಂತಃಸ್ಫುರಣ ಸಾಮರ್ಥ್ಯವಿತ್ತು. ಇವತ್ತು ನಾವು ವಿದ್ಯುತ್ ಮತ್ತು ದೂರವಾಣಿ ಇಲ್ಲ ಅಂದರೆ ಬದುಕುವುದು ಕಷ್ಟ ಹಂತಕ್ಕೆ ಬಂದು ಬಿಟ್ಟಿದ್ದೇವೆ. ಬಲ್ಬ್ ಅಥವಾ ಮೊಬೈಲ್ ನಲ್ಲಿ ಈಗ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸುತ್ತಿರಬಹುದು. ಆದರೆ ವಿಶ್ವಕ್ಕೆ ಮೊಟ್ಟಮೊದಲು ಬಲ್ಬ್ ಮತ್ತು ದೂರವಾಣಿ ಸಾಧನಗಳನ್ನು ಪರಿಚಯಿಸಿದ ಕೀರ್ತಿ ಥಾಮಸ್ ಆಲ್ವಾ ಎಡಿಸನ್ ಗೆ ಸಲ್ಲುತ್ತದೆ.

ಕಿವುಡರಾಗಿದ್ದರೂ ಸಂಗೀತ ಸಂಯೋಜಕರಾಗಿದ್ದ ವ್ಯಕ್ತಿಯ ಬಗ್ಗೆ ತಿಳಿಯಲು ಮುಂದೆ ನೋಡಿ

ಲೆಡ್ವಿಗ್ ವಾನ್ ಬೀಟೊವನ್:

ಲೆಡ್ವಿಗ್ ವಾನ್ ಬೀಟೊವನ್:

ಸಂಗೀತವನ್ನು ಕಲಿಯಲು ಮತ್ತು ಆಸ್ವಾದಿಸಲು ಭಾಷೆ ತಿಳಿಯಬೇಕಾಗಿಲ್ಲ, ಆದರೆ ಕಿವಿ ಕೇಳಿಸದಿದ್ದರೂ ಸಂಗೀತದ ಸವಿಯನ್ನು ಸವಿಯಬಹುದು ಅನ್ನುವುದಕ್ಕೆ ಉದಾಹರಣೆ ಲೆಡ್ವಿಗ್ ವಾನ್ ಬೀಟೊವನ್. ಇವರು ಜರ್ಮನ್ ನ ಪ್ರಸಿದ್ಧ ಸಂಗೀತ ಸಂಯೋಜಕರಾಗಿದ್ದರು.

ಮುಂದಿನ ಚಿತ್ರದಲ್ಲಿ ಕಿವುಡಿಯಾಗಿದ್ದರೂ ದೊಡ್ಡ ಸಾಧನೆ ಮಾಡಿದಂತಹ ಮಹಿಳೆಯ ಬಗ್ಗೆ ಹೇಳಲಾಗಿದೆ ನೋಡಿ.

ಹೇಲನ್ ಆಡಮ್ಸ್ ಕೆಲ್ಲರ್:

ಹೇಲನ್ ಆಡಮ್ಸ್ ಕೆಲ್ಲರ್:

ಹೇಲನ್ ಅಮೇರಿಕದ ಪ್ರಸಿದ್ಧ ಲೇಖಕಿ, ರಾಜಕೀಯವಾಗಿ ಕೂಡ ಸಕ್ರೀಯವಾಗಿ ಇದ್ದರು, ಉಪನ್ಯಾಸಕರು ಕೂಡ ಆಗಿದ್ದರು. ಇವರು ಹುಟ್ಟುವಾಗ ಕಿವುಡಿ ಮತ್ತು ಕುರುಡಿಯಾಗಿ ಜನಿಸಿದರು. ಆದರೆ ತಮ್ಮಲ್ಲಿರುವ ಕುಂದು ಕೊರತೆಗಳನ್ನು ಮೆಟ್ಟಿ ನಿಂತು ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನೇ ಬರೆದಳು.

ಹಾರೋಲ್ಡ್ ಮ್ಯಾಕ್ ಗ್ರೇತ್:

ಹಾರೋಲ್ಡ್ ಮ್ಯಾಕ್ ಗ್ರೇತ್:

ಇವರು ಕಿವುಡರಾಗಿದ್ದರೂ ಅಮೇರಿಕದ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಇವರು ಬರದಂತಹ ಕಾದಂಬರಿಗಳು ತುಂಬಾ ಜನಪ್ರಿಯತೆಯನ್ನು ಗಳಿಸಿದ್ದವು.

ಜೋನೈ ರೇ:

ಜೋನೈ ರೇ:

ಇವರು ಅಮೇರಿಕದ ಪ್ರಸಿದ್ಧ ಗೀತರಚನೆಕಾರರು, ಪಿಯನೋ ನುಡಿಸುವವರು ಮತ್ತು ಹಾಡುಗಾರರು ಆಗಿದ್ದರು.

English summary

Most Intelligent Animals | Animals | ಅತೀ ಬುದ್ಧಿವಂತ ಪ್ರಾಣಿಗಳು | ಪ್ರಾಣಿಗಳು

Human are to intelligent and smart. But this intelligence varies from one animal to the other. Here are some of the most intelligent animals of the world.
X
Desktop Bottom Promotion